Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆಯಲ್ಲೂ ನಳನಳಿಸುವ ಸೌಂದರ್ಯಕ್ಕಾಗಿ ಅದ್ಭುತ ಸಲಹೆಗಳು
ಬೇಸಿಗೆಯಲ್ಲಿ ಸೌಂದರ್ಯಕ್ಕಾಗಿ ಉಪಯುಕ್ತ ಸಲಹೆಗಳು ಯಾವುದಾದರು ಇವೆಯಾ? ಹೌದು, ಈ ಋತುವಿನಲ್ಲಿ ಬಹುತೇಕ ಮಂದಿ ಬೀಚಿನಲ್ಲಿ ಕಾಲ ಕಳೆಯಲು ಬಯಸುತ್ತಾರೆ. ಅಥವಾ ಈಜುಕೊಳದಲ್ಲಿ ಕಾಲ ಕಳೆಯಲು ಬಯಸುತ್ತಾರೆ. ಒಂದು ವೇಳೆ ನೀವು ಚಾರಣ ಪ್ರಿಯರಾಗಿದ್ದಲ್ಲಿ. ಬೇಸಿಗೆಯು ನಿಮಗೆ ಹೇಳಿ ಮಾಡಿಸಿದ ಕಾಲವಾಗಿರುತ್ತದೆ.
ಆದರೆ ಬಿಸಿಯಾದ ಹವಾಮಾನವು ನಿಮ್ಮ ತ್ವಚೆ ಮತ್ತು ಕೂದಲಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರ ಜೊತೆಗೆ ನಿಮಗೆ ಬೆವರು ಸಹ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಯಾವಾಗ ನೀವು ಬೆವರು ಮತ್ತು ಬಿಸಿಲಿಗೆ ಮೈ ಒಡ್ಡುತ್ತೀರೋ, ಆಗ ಭಾರೀ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಇವೆರಡು ನಿಮ್ಮ ತ್ವಚೆಯನ್ನು ಹಾಳು ಮಾಡುತ್ತವೆ.
ಇದರ ಜೊತೆಗೆ ನಿಮ್ಮನ್ನು ನೀವು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯ. ಅದರಲ್ಲೂ ಈಗ ಆರ್ದ್ರತೆ ಹೆಚ್ಚಾಗಿರುತ್ತದೆ. ಬೆವರು ತೀರಾ ಬರುತ್ತ ಇರುತ್ತದೆ. ಆದರೆ ಇಂತಹ ಸಮಸ್ಯೆಗಳಿಂದ ಪಾರಾಗಲು ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಬನ್ನಿ ಬೇಸಿಗೆಯನ್ನು ಎದುರಿಸಲು ಸಜ್ಜಾಗಿ. ಬೇಸಿಗೆಗಾಗಿ ಕೆಲವೊಂದು ಸೌಂದರ್ಯದ ಸಲಹೆಗಳು ನಿಮ್ಮ ಉಗುರಿನ ಅಂದವನ್ನು ಕಾಯ್ದುಕೊಳ್ಳುವುದು ಹೇಗೆ?
ಟಾಲ್ಕಂ ಪೌಡರ್ ಬಳಸಿ

ನಿಮ್ಮ ಕೂದಲನ್ನು ಒಣಗಿಸಿಕೊಳ್ಳುವ ಮೊದಲು, ನಿಮ್ಮ ಕುತ್ತಿಗೆಗೆ ಡಿಯೋಡರೆಂಟ್ ಪೌಡರ್ ಹಾಕಿ. ಇದು ನೀವು ಬೆವರುವುದನ್ನು ತಡೆಯುತ್ತದೆ. ನಿಮ್ಮ ಕೂದಲು ಒಣಗಿದ ನಂತರವು ಸಹ. ಏಕೆಂದರೆ ಬೇಸಿಗೆಯಲ್ಲಿ ನೀವು ಅತಿಯಾಗಿ ಬೆವರುತ್ತೀರಿ.
ಬೇಬಿ ಪೌಡರ್
ಬೀಚ್‌ನಿಂದ ಬಂದ ಮೇಲೆ ಮೊದಲು ನೀವು ಮಾಡಬೇಕಾದ ಕೆಲಸ ನಿಮ್ಮ ಮೈಗೆ ಸ್ವಲ್ಪ ಬೇಬಿ ಪೌಡರನ್ನು ಚಿಮುಕಿಸಿಕೊಳ್ಳಿ. ಆಮೇಲೆ ನಿಮ್ಮ ಮೈಮೇಲೆ ಇರುವ ಮರಳನ್ನು ಕೊಡವಿಕೊಳ್ಳಿ. ಪೌಡರ್ ತೇವಾಂಶವನ್ನು ಹೀರಿಕೊಳ್ಳುತ್ತದೆ, ಆಗ ಮರಳನ್ನು ಸುಲಭವಾಗಿ ಕೊಡವಿಕೊಳ್ಳಬಹುದು.
ಸನ್ ಬರ್ನ್
ಇದು ಸಹ ಬೇಸಿಗೆಯಲ್ಲಿ ನಿಮ್ಮ ಸೌಂದರ್ಯವನ್ನು ಕಾಪಾಡುತ್ತದೆ. ಸನ್ ಬರ್ನ್‌ಗೆ ಚಿಕಿತ್ಸೆ ನೀಡುವಾಗ ಅಲೋವಿರಾ ನಿಮಗೆ ಹೆಚ್ಚಿನ ಉಪಯೋಗವನ್ನು ನೀಡುತ್ತದೆ. ಅಲೋವಿರಾ ಜೆಲ್ ಅನ್ನು ನಿಮ್ಮ ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು. ಸನ್‌ಬರ್ನ್‌ಗೆ ಇದು ತಣ್ಣಗೆ ಉಪಚರಿಸುತ್ತದೆ.
ಡ್ರೈ ಶಾಂಪೂ
ಡ್ರೈ ಶಾಂಪೂವನ್ನು ಬಳಸಲು ರಾತ್ರಿಯ ಸಮಯಗಳು ಹೇಳಿ ಮಾಡಿಸಿದ ವೇಳೆಯಾಗಿರುತ್ತದೆ. ಇದು ನಿಮ್ಮ ಕೂದಲಿನ ಬುಡಗಳು ಹೀರಿಕೊಳ್ಳಲು ಕಾಲಾವಕಾಶ ನೀಡುತ್ತದೆ. ಇದು ಬೇಸಿಗೆಯಲ್ಲಿ ನಿಮ್ಮ ಉಪಯೋಗಕ್ಕೆ ಬರುವ ಸಲಹೆಯಾಗಿದೆ.
ಬೆವರಿನ ಕಲೆಗಳು
ಒಂದು ವೇಳೆ ನಿಮ್ಮ ಬಟ್ಟೆಗಳಲ್ಲಿ ಬೆವರಿನ ಕಲೆಗಳು ಕಂಡು ಬಂದಲ್ಲಿ, ಸುಮ್ಮನೆ ಅದರ ಮೇಲೆ ನಿಂಬೆರಸವನ್ನು ಚಿಮುಕಿಸಿ. ನಿಂಬೆಯಲ್ಲಿರುವ ಆಮ್ಲೀಯ ಗುಣಗಳು, ಬೆವರಿನ ಕಲೆಗಳನ್ನು ಹೋಗಲಾಡಿಸುತ್ತವೆ. ಹೀಗೆ ಮಾಡಿದ ಮೇಲೆ ಬಟ್ಟೆಗಳನ್ನು ಒಗೆಯುವುದನ್ನು ಮರೆಯಬೇಡಿ.



Click it and Unblock the Notifications

