Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ರಾತ್ರಿ ಮಲಗುವ ಮುಂಚೆ ತ್ವಚೆಗೆ ಕ್ರೀಮ್ ಹಚ್ಚಿ, ವ್ಯತ್ಯಾಸ ನೋಡಿ!
ನಮ್ಮಲ್ಲಿ ಬಹುತೇಕ ಮಂದಿ ಕ್ರೀಮ್ ಹಚ್ಚಿಕೊಳ್ಳದೆ ಮಲಗಲು ಹೋಗುತ್ತೇವೆ. ಇದಕ್ಕೆ ಕಾರಣ ಇವರಿಗೆ ರಾತ್ರಿ ಕ್ರೀಮ್ ಹಚ್ಚಿಕೊಳ್ಳುವುದರಿಂದ ದೊರೆಯುವ ಲಾಭಗಳ ವಿಚಾರ ತಿಳಿದಿರುವುದಿಲ್ಲ. ನೀವು ನಿಮ್ಮ ತ್ವಚೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲವಾದರೆ ಪರವಾಗಿಲ್ಲ, ಆದರೆ ನಿಮ್ಮ ಸೌಂದರ್ಯ ಚೆನ್ನಾಗಿರಬೇಕು ಎಂದು ನೀವು ಬಯಸಿದಲ್ಲಿ ರಾತ್ರಿ ಕ್ರೀಮ್ ಹಚ್ಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಏಕೆಂದರೆ ಹಗಲಿಗೆ ಹೋಲಿಸಿದರೆ ರಾತ್ರಿ ಹಚ್ಚಿಕೊಂಡ ಕ್ರೀಮನ್ನು ತ್ವಚೆಯು ಯಾವುದೇ ಶ್ರಮವಿಲ್ಲದೆ ಹೀರಿಕೊಳ್ಳುತ್ತದೆ.
ಜೊತೆಗೆ ರಾತ್ರಿ ಹೊತ್ತು ತ್ವಚೆಯು ತನ್ನಲ್ಲಿರುವ ನ್ಯೂನತೆಗಳನ್ನು ತಾನೇ ಗುಣಪಡಿಸಿಕೊಳ್ಳುತ್ತದೆ. ರಾತ್ರಿ ಹಚ್ಚಿಕೊಳ್ಳುವ ಕ್ರೀಮ್‌ಗಳಲ್ಲಿ ಅಂದರೆ ನೈಟ್ ಕ್ರೀಮ್‌ಗಳಲ್ಲಿ ಹಲವು ಬಗೆಗಳಿವೆ. ಒಂದು ಒಳ್ಳೆಯ ನೈಟ್ ಕ್ರೀಮ್ ನಿಮ್ಮ ಮುಖದಲ್ಲಿ ಶೇಖರಣೆಯಾಗಿರುವ ಧೂಳನ್ನು ಸಹ ತೊಲಗಿಸಬಲ್ಲದು.

ಇದು ನಿಮ್ಮ ಮುಖದಲ್ಲಿರುವ ಚರ್ಮದ ಕೋಶಗಳನ್ನು ನವೀಕರಿಸುತ್ತದೆ ಮತ್ತು ಹೆಚ್ಚಿನ ಹಾನಿಯಾಗಿಸುವಿಕೆಯನ್ನು ತಪ್ಪಿಸುತ್ತದೆ. ಹಾಗಾಗಿ ನಿಮ್ಮ ತ್ವಚೆಗೆ ಪೋಷಣೆಯನ್ನು ಒದಗಿಸಲು ತಪ್ಪದೆ ನೈಟ್ ಕ್ರೀಮನ್ನು ಪ್ರತಿನಿತ್ಯ ಬಳಸಿ. ಆದರೆ ಯಾವುದೇ ಕಾರಣಕ್ಕು ಒಂದು ಒಳ್ಳೆಯ ನೈಟ್ ಕ್ರೀಮ್ ಖರೀದಿಸಲು ಮಾತ್ರ ಮರೆಯಬೇಡಿ. ತ್ವಚೆಯ ಸೌಂದರ್ಯಕ್ಕಾಗಿ ಹಾಲನ್ನು ಬಳಸುವ ವಿಧಾನ ಹೇಗೆ?
ಏಕೆಂದರೆ ಮಾರುಕಟ್ಟೆಯಲ್ಲಿರುವ ಎಲ್ಲಾ ಕ್ರಿಮ್‍ಗಳು ಉತ್ತಮವಾಗಿ ಕೆಲಸವನ್ನು ನಿಭಾಯಿಸುವುದಿಲ್ಲ. ಯಾವುದೇ ಸುವಾಸನೆಯನ್ನು ಹೊಂದಿರದ ಕ್ರೀಮನ್ನು ಆಯ್ಕೆ ಮಾಡಿಕೊಳ್ಳಿ. ಅದು ಸರಿಯಾಗಿ ತ್ವಚೆಯ ಮೇಲೆ ಲೇಪಿಸಿಕೊಳ್ಳಲು ಸುಲಭವಾಗಿರಬೇಕು ಎಂಬುದನ್ನು ಗಮನಿಸಿ. ಈ ಕ್ರೀಮನ್ನು ಮುಖಕ್ಕೆ ಲೇಪಿಸಿಕೊಳ್ಳುವ ಮುನ್ನ ಮುಖವನ್ನು ತಪ್ಪದೆ ತೊಳೆದುಕೊಳ್ಳುವ ಅಭ್ಯಾಸವಿರಿಸಿಕೊಳ್ಳಿ. ಕ್ರೀಮನ್ನು ಮುಖದ ಕೆಳಭಾಗದಿಂದ ಆರಂಭಿಸಿ, ಮೇಲ್ಭಾಗಕ್ಕೆ ವೃತ್ತಾಕಾರವಾಗಿ ಲೇಪಿಸುತ್ತ ಹೋಗಿ. ಆದರೆ ಒಂದು ವಿಚಾರ ನೆನಪಿಡಿ, ಕಣ್ಣಿನ ಸುತ್ತ ಕ್ರೀಮ್ ಹಚ್ಚಬೇಡಿ.
ನೈಟ್ ಕ್ರೀಮ್‌ಗಳ ಪ್ರಯೋಜನ
ನೈಟ್ ಕ್ರೀಮ್‍ಗಳನ್ನು ಬಳಸುವುದರಿಂದ ನಮ್ಮ ಮುಖಕ್ಕೆ ಅಗತ್ಯವಾದ ಮೊಯಿಶ್ಚರೈಸ್ ದೊರೆಯುತ್ತದೆ. ಇದು ನಿಮ್ಮ ಮುಖವನ್ನು ಒಣಗುವಿಕೆಯಿಂದ ತಡೆಯುತ್ತದೆ. ಇದು ಹೊರಗಿನಿಂದ ನಿಮ್ಮ ತ್ವಚೆ ಒಣಗುವುದನ್ನು ತಡೆಯುತ್ತದೆ. ಒಂದು ಒಳ್ಳೆಯ ಕ್ರೀಮ್ ನಿಮ್ಮ ಮುಖಕ್ಕೆ ಆಹ್ಲಾದಕತೆಯನ್ನು ಒದಗಿಸುತ್ತದೆ. ನಿಮ್ಮ ತ್ವಚೆಯ ಬಣ್ಣವನ್ನು ಸಹ ಇದು ಅಂದಗೊಳಿಸಬಲ್ಲದು ಹಾಗು ಮೃದುಗೊಳಿಸಬಲ್ಲದು. ನೈಟ್ ಕ್ರೀಮ್‌ಗಳು ತಮ್ಮ ಪ್ರಭಾವವನ್ನು ಬೇಗ ತೋರಿಸುತ್ತವೆ. ವಧುವಿನ ಕಾ೦ತಿಯುಕ್ತ ತ್ವಚೆಗಾಗಿ ಅತ್ಯುತ್ತಮ ನೈಸರ್ಗಿಕ ಫೇಸ್‌ಪ್ಯಾಕ್
ಇದೆಲ್ಲದರ ಜೊತೆಗೆ ಒಂದು ಒಳ್ಳೆಯ ನೈಟ್ ಕ್ರೀಮ್ ನಿಮ್ಮ ಮುಖದಲ್ಲಿರುವ ಕೊಲ್ಲಾಜೆನ್‍ಗಳನ್ನು ಉದ್ದೀಪನಗೊಳಿಸುತ್ತದೆ. ಈ ಕ್ರೀಮ್‌ಗಳನ್ನು ನಿಮ್ಮ ಮುಖಕ್ಕೆ ಲೇಪಿಸುವುದರಿಂದ ನಿಮ್ಮ ಮುಖಕ್ಕೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಆದ್ದರಿಂದ ಈ ಕ್ರೀಮ್‌ಗಳ ಬಳಕೆಯನ್ನು ನಾವು ಉದಾಸೀನ ಮಾಡಬಾರದು. ಇದರ ಜೊತೆಗೆ ಇವು ನಿಮ್ಮ ಮುಖದಲ್ಲಿರುವ ಗೆರೆಗಳನ್ನು ಸಹ ನಿವಾರಿಸುತ್ತದೆ.
ಇದರ ಜೊತೆಗೆ ಈ ಕ್ರೀಮ್‌ಗಳು ನಿಮ್ಮ ಮುಖದಲ್ಲಿರುವ ತ್ವಚೆಗೆ ಬಿಗಿತವನ್ನು ನೀಡುತ್ತವೆ. ಹೀಗಾಗಿ ನಿಮ್ಮ ತ್ವಚೆ ಇಳಿ ಬೀಳುವುದು ತಪ್ಪುತ್ತದೆ. ಆದ್ದರಿಂದ ಸುಲಭವಾಗಿ ಸಿಗುವ ಈ ಕ್ರೀಮ್‌ಗಳನ್ನು ಪ್ರತಿನಿತ್ಯ ಬಳಸಿ. ಕೆಲವು ತಿಂಗಳುಗಳ ನಂತರ ಇದರ ಪ್ರಯೋಜನವನ್ನು ನೀವೇ ಕಂಡು ದಂಗಾಗುವಿರಿ. ಇನ್ನೇಕೆ ತಡ ಇಂದು ರಾತ್ರಿಯಿಂದಲೆ ಈ ಕ್ರೀಮ್‌ಗಳನ್ನು ಬಳಸುವುದನ್ನು ಆರಂಭಿಸಿ.



Click it and Unblock the Notifications
