Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಮೃತದಂತಹ ಮದ್ದಿರುವಾಗ ಮೊಡವೆಗೆ ಅಂಜುವುದೇಕೆ?
ಮುದ್ದಾದ ಮುಖವಿದ್ದರು, ಎದೆಯ ಮೇಲೆ ಇರುವ ಅಥವಾ ಸ್ತನ ಭಾಗದ ಮೇಲೆ ಇರುವ ಮೊಡವೆಗಳು ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯನ್ನು ಇಡುತ್ತವೆ. ಇವುಗಳನ್ನು ಮುಚ್ಚಲು ಯಾವಾಗಲು ನೆಕ್ ಟಾಪ್‍ಗಳನ್ನು ಅಥವಾ ಸುಂದರವಾದ ದಿರಿಸುಗಳನ್ನು ಧರಿಸುವುದು ಅಷ್ಟೇನು ಸೂಕ್ತವಾಗುವುದಿಲ್ಲ. ಅಥವಾ ದುಬಾರಿಯಾದ ಕನ್ಸೀಲರ್ ಮತ್ತು ಕ್ರೀಮ್‌ಗಳನ್ನು ಬಳಸಿ ಅದನ್ನು ಎಷ್ಟು ದಿನ ಅಂತ ಮುಚ್ಚಿಡುವಿರಿ?
ಈ ತ್ವಚೆಯ ಸಮಸ್ಯೆಗಳು, ವಿಶೇಷವಾಗಿ ತಾರುಣ್ಯದಲ್ಲಿ ಇರುವವರನ್ನು ಬಹುವಾಗಿ ಕಾಡುತ್ತದೆ. ಒಮ್ಮೊಮ್ಮೆ ಜೀವನದ ಇತರ ಅವಧಿಯಲ್ಲೂ ಸಹ ಕಾಡಬಹುದು. ಅದು ಪುನಃ ಮರುಕಳಿಸದಂತೆ ನಿವಾರಿಸುವುದು ಒಳ್ಳೆಯದು. ಮೊಡವೆಗಳು ಕೆಲವೊಮ್ಮೆ ಜೀವನ ಪೂರ್ತಿ ಇರುವಂತಹ ಕಲೆಗಳನ್ನು ಉಳಿಸಿ ಹೋಗುತ್ತವೆ. ಅದನ್ನು ನಿವಾರಿಸುವುದು ತೀರಾ ಕಷ್ಟ.
ವಿಶೇಷವಾಗಿ PCOS (ಪಾಲಿಸ್ಟಿಕ್ ಓವರಿ ಸಿಂಡ್ರೋಮ್) ನಿಂದ ಬಳಲುವವರು ಅಥವಾ ತೀವ್ರತರನಾದ ಹಾರ್ಮೋನುಗಳ ಅಸಮತೋಲನದಿಂದ ನರಳುವವರು ಈ ಬಗೆಯ ಮೊಡವೆಗಳಿಗೆ ತುತ್ತಾಗುತ್ತಾರೆ. ಪ್ರತಿಯೊಬ್ಬರ ದೇಹದಲ್ಲಿ ಎದೆಯ ಭಾಗದ ಮೇಲೆ ಇರುವ ತ್ವಚೆಯು ಅತ್ಯಂತ ಸೂಕ್ಷ್ಮವಾಗಿರುತ್ತದೆ ಮತ್ತು ಇದು ತೀರಾ ತೆಳುವಾಗಿರುತ್ತದೆ. ಆದ್ದರಿಂದ ಇದನ್ನು ತುಂಬಾ ಜಾಗರೂಕತೆಯಿಂದ ನಿರ್ವಹಿಸಬೇಕು. ಮುಖಕ್ಕೆ ಹಾಕುವ ಕ್ರೀಮ್‌ಗಳು ಮತ್ತು ಆಯಿಂಟ್‍ಮೆಂಟ್‍ಗಳು ಈ ಭಾಗದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳನ್ನು ನಿವಾರಿಸುವುದು ವಿರಳ. ತ್ವಚೆಯ ಅಂದ ಕೆಡಿಸುವ ಮೊಡವೆಗೆ ಅರಿಶಿನದ ಲೇಪನ
ಕನ್ಸೀಲರ್‌ಗಳ ಜೊತೆಗೆ ವೈದ್ಯರು ಶಿಫಾರಸು ಮಾಡಿರುವ ಕ್ರೀಮ್‌ಗಳನ್ನು ಬಳಸುವ ಮೂಲಕ ಇದನ್ನು ನಿವಾರಿಸಿಕೊಳ್ಳಬಹುದು. ಇದು ಸ್ವಲ್ಪ ದುಬಾರಿ, ಆದರೆ ನಿಮ್ಮ ಎದೆಯ ಭಾಗವನ್ನು ಶಾಶ್ವತವಾಗಿ ಅಂದಗೆಡಿಸಿಕೊಳ್ಳುವುದರ ಬದಲಿಗೆ ಇದನ್ನು ಬಳಸುವುದು ಒಳ್ಳೆಯದು ಎಂಬುದು ಎಲ್ಲರ ಅನಿಸಿಕೆ. ಹಾಗೆಂದು ಈ ದುಬಾರಿ ಔಷಧಿಗಳೇ, ನಿಮ್ಮ ಪಾಲಿಗೆ ಉಳಿದಿರುವ ಏಕೈಕ ಅಪದ್ಭಾಂದವನಲ್ಲ.
ಅದರ ಬದಲಿಗೆ ಮನೆಯಲ್ಲಿಯೇ ದೊರೆಯುವ ಕೆಲವೊಂದು ಮನೆ ಮದ್ದುಗಳನ್ನು ನೀವು ಬಳಸಿಕೊಂಡು ಈ ಸೌಂದರ್ಯ ಕಂಟಕಗಳನ್ನು ನಿವಾರಿಸಿಕೊಳ್ಳಬಹುದು. ಇದಕ್ಕೂ ಮೇಲೆ ಈ ಮೊಡವೆಗಳು ನಿಮ್ಮ ಎದೆಯ ಭಾಗವನ್ನು ಬಿಟ್ಟು ಜಗ್ಗಲಿಲ್ಲವಾದಲ್ಲಿ, ಚರ್ಮ ರೋಗ ತಜ್ಞರನ್ನು ಕಾಣಲು ಹಿಂದೇಟು ಹಾಕಬೇಡಿ...

ಕ್ಯಾರೆಟ್
ಕ್ಯಾರಟ್‍ಗಳಲ್ಲಿ ಬೀಟಾ ಕೆರೊಟಿನ್ ಇರುತ್ತದೆ. ಇದು ಮೊಡವೆಗಳನ್ನು ನಿವಾರಿಸಲು ಅತ್ಯಂತ ಸಮರ್ಥವಾದ ಮನೆ ಮದ್ದಾಗಿರುತ್ತದೆ. ಈ ವಿಟಮಿನ್ ಎದೆಯ ಭಾಗದಲ್ಲಿ ಹಾಳಾದ ಕೋಶಗಳನ್ನು ಮತ್ತೆ ಪುನರ್ನಿರ್ಮಿಸುತ್ತದೆ. ಕ್ಯಾರಟನ್ನು ರುಬ್ಬಿಕೊಂಡು ಅದರ ರಸವನ್ನು ಮೊಡವೆಗಳ ಮೇಲೆ ಲೇಪಿಸುವ ಮೂಲಕ ಇದರ ಪ್ರಯೋಜನವನ್ನು ಪಡೆಯಬಹುದು.

ಜೇನು ತುಪ್ಪ
ಸ್ವಾಭಾವಿಕವಾಗಿ ದೊರೆಯುವ ಮನೆ ಮದ್ದುಗಳನ್ನು ಬಳಸುವಾಗ ಜೇನು ತುಪ್ಪವನ್ನು ಮರೆತರೆ ಹೇಗೆ? ಜೇನು ತುಪ್ಪದಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಅಂಶಗಳು ಮೊಡವೆಗಳಿಂದ ಉಂಟಾಗುವ ಇನ್‍ಫೆಕ್ಷನ್ ಅನ್ನು ತಡೆಯುತ್ತವೆ. ಒಮ್ಮೆ ಜೇನು ತುಪ್ಪವನ್ನು ಮೊಡವೆಗಳ ಮೇಲೆ ಲೇಪಿಸುವುದರಿಂದ, ಮರುದಿನ ಮೊಡವೆಗಳ ಗಾತ್ರ ಕಡಿಮೆಯಾಗಿರುವುದನ್ನು ನೀವು ಗಮನಿಸಬಹುದು.

ಜೊಜೊಬಾ ಎಣ್ಣೆ
ತ್ವಚೆಗೆ ಅಗತ್ಯವಾದ ತೇವಾಂಶವನ್ನು ತಪ್ಪದೆ ಒದಗಿಸಬೇಕು. ಹಾಗೆಂದು ಭಯಾನಕವಾದ ರಾಸಾಯನಿಕಗಳ ಜೊತೆಗೆ ಬರುವ ಮೊಯಿಶ್ವರೈಸರ್‌ಗಳನ್ನು ಬಳಸುವುದರಿಂದ ತ್ವಚೆಯಲ್ಲಿ ಮೂಡಿರುವ ಮೊಡವೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮೊಡವೆಗಳ ಮೇಲೆ ಜಜೊಬ ಎಣ್ಣೆಯನ್ನು ಬಳಸುವ ಮೂಲಕ ಸ್ವಾಭಾವಿಕವಾಗಿ ನಿಮ್ಮ ತ್ವಚೆಗೆ ಮೊಯಿಶ್ಚರನ್ನು ಒದಗಿಸಬಹುದು. ಇವುಗಳು ಮೊಡವೆಗಳು ಉಂಟಾಗುವುದನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತವೆ.

ಲಿಂಬೆರಸ
ಲಿಂಬೆರಸದಲ್ಲಿ ಆಸಿಡಿಕ್ ಗುಣಗಳು ಇರುವುದು ತಿಳಿದಿರುವ ವಿಚಾರವೇ, ಇದರಲ್ಲಿರುವ ಸಂಕೋಚಕ ಗುಣವು ಮೊಡವೆಗಳನ್ನು ದೂರ ಮಾಡುತ್ತದೆ. ಜೊತೆಗೆ ಇವು ನಿಮ್ಮ ತ್ವಚೆಯಲ್ಲಿರುವ ಧೂಳು ಮತ್ತು ಜಿಡ್ಡಿನಂಶವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತದೆ.

ಮೊಟ್ಟೆಯ ಬಿಳಿ ಭಾಗ
ಮೊಟ್ಟೆಯ ಬಿಳಿ ಭಾಗಗಳು ಮೊಡವೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ನೆರವಾಗುತ್ತವೆ. ಬೆಂದ ಮೊಟ್ಟೆಯನ್ನು ರುಬ್ಬಿಕೊಂಡು, ಅದನ್ನು ಮೊಡವೆಗಳು ಇರುವ ಭಾಗಕ್ಕೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು, ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯುವ ಮೂಲಕ ಮೊಡವೆಗಳು ಹೆಚ್ಚಾಗುವುದನ್ನು ತಡೆಯಬಹುದು ಮತ್ತು ಇರುವ ಮೊಡವೆಗಳನ್ನು ನಿವಾರಿಸಿಕೊಳ್ಳಬಹುದು.



Click it and Unblock the Notifications
