For Quick Alerts
ALLOW NOTIFICATIONS  
For Daily Alerts

ತ್ವಚೆಯ ಮೊಡವೆ ನಿವಾರಣೆಗೆ ಬರೀ ಏಳೇ ದಿನಗಳು ಸಾಕು!

By Arshad
|

ಹದಿಹರೆಯದಲ್ಲಿ ಮೊಡವೆಗಳ ಕಾಟದಿಂದ ತಪ್ಪಿಸಿಕೊಂಡವರೇ ಇಲ್ಲ. ಇದು ನೋವಿನಿಂದ ಕೂಡಿದ್ದು ಸೌಂದರ್ಯವನ್ನು ಕುಂದಿಸುವ ಜೊತೆಗೇ ಮೊಡವೆ ಒಡೆದು ಮಾಗಿದ ಬಳಿಕ ಶಾಶ್ವತವಾದ ಕಪ್ಪು ಕಲೆಯನ್ನೂ ಉಳಿಸಿಹೋಗುತ್ತದೆ. ಕಲವು ಮೊಡವೆಗಳಂತೂ ಬಟಾಣಿ ಗಾತ್ರದಷ್ಟು ದೊಡ್ಡದಾಗಿದ್ದು ಒಡೆಯುವ ವೇಳೆ ಚರ್ಮವನ್ನು ಸೀಳುವುದರಿಂದ ಮಾಗಿದ ಬಳಿಕ ಒಂದು ಗೆರೆಯನ್ನೂ ಮೂಡಿಸುತ್ತದೆ.

ಮೊಡವೆಯಾಗಿದ್ದಾಗ ಬೇಗನೇ ಒಣಗಲು ರಾಸಾಯನಿಕ ಆಧಾರಿತ ಮುಲಾಮು ಅಥವಾ ಬೇರೆ ಔಷಧಿಯನ್ನು ಹಚ್ಚಿಕೊಂಡಿದ್ದಿದ್ದರೆ ಮೊಡವೆ ಮಾಗಿದ ಬಳಿಕ ಉಳಿಯುವ ಕಪ್ಪು ಕಲೆ ಬಹಳಷ್ಟು ದಟ್ಟವಾಗಿರುತ್ತದೆ. ಶುಭಸುದ್ದಿಯೆಂದರೆ ಈ ಕಲೆಗಳನ್ನೂ ಈಗ ಸುಲಭವಾಗಿ ಮನೆಯಲ್ಲಿ ಲಭ್ಯವಿರುವ ಎಣ್ಣೆಗಳಿಂದಲೇ ನಿವಾರಿಸಬಹುದು. ಹದಿಹರೆಯದಲ್ಲಿ ಕಾಡುವ ಮೊಡವೆಗೆ ಅದ್ಭುತ ಜ್ಯೂಸ್

ಈ ಕಲೆಗಳ ಮೇಲೆ ಕೆಳಗೆ ವಿವರಿಸಿದ ಯಾವುದಾದರೊಂದು ಎಣ್ಣೆಯನ್ನು ಸತತವಾಗಿ ಏಳು ದಿನಗಳ ಕಾಲ ಕಲೆಯ ಮೇಲೆ ನಯವಾಗಿ ಮಸಾಜ್ ಮಾಡಿ ಹಚ್ಚಬೇಕು. ಆಲಿವ್, ಕೊಬ್ಬರಿ, ಸಾಸಿವೆ ಎಣ್ಣೆಗಳು ಉತ್ತಮ ಪರಿಣಾಮವನ್ನು ನೀಡುತ್ತವೆ. ಸಾಮಾನ್ಯವಾಗಿ ಕೆಲವರಿಗೆ ಎಣ್ಣೆ ಹಚ್ಚಿ ಸುಮಾರು ಮೂರು ನಿಮಿಷದಲ್ಲಿಯೇ ಕೊಂಚ ಕಚಗುಳಿ ಅಥವಾ ಅತಿಚಿಕ್ಕದಾಗಿ ತುರಿಸಿದಂತೆ ಭಾವನೆಯಾಗುತ್ತದೆ. ಇದು ನಿಮ್ಮ ಕಲೆ ಶೀಘ್ರವಾಗಿ ಮಾಯವಾಗುವುದರ ಮುನ್ಸೂಚನೆಯಾಗಿದೆ. ಮೊಡವೆಗೆ ನೈಸರ್ಗಿಕವಾದ ಚಿಕಿತ್ಸೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಮೊಡವೆಗಳ ಕಲೆಗಳಿಗೆ ಹಚ್ಚಲು ಬಾದಾಮಿ ಎಣ್ಣೆ ಉತ್ತಮವಾಗಿದೆ. ಇದರಲ್ಲಿರುವ ವಿಟಮಿನ್ ಇ ಐದೇ ದಿನಗಳಲ್ಲಿ ಮೊಡವೆ ಹಾಗೂ ಅದರಿಂದ ಮೂಡುವ ಕಲೆಯನ್ನು ಹೋಗಲಾಡಿಸುವಲ್ಲಿ ಸಫಲವಾಗುತ್ತದೆ. ರಾತ್ರಿ ಮಲಗುವ ಮುನ್ನ ನಯವಾದ ಮಸಾಜ್ ಮೂಲಕ ಕೊಂಚ ಎಣ್ಣೆಯನ್ನು ಹಚ್ಚಿ ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೂದಲಿಗೆ ಹೇಗೆ ಕೊಬ್ಬರಿ ಎಣ್ಣೆ ಅತ್ಯುತ್ತಮವೋ ಅಂತೆಯೇ ಚರ್ಮಕ್ಕೂ ಉತ್ತಮವಾಗಿದೆ. ರಾತ್ರಿ ಮಲಗುವ ಮುನ್ನ ಒಂದು ದೊಡ್ಡಚಮಚ ಕೊಬ್ಬರಿಎಣ್ಣೆಯನ್ನು ಬಿಸಿಮಾಡಿ ನಿಧಾನವಾಗಿ ತ್ವಚೆಗೆ ತಟ್ಟುತ್ತಾ ಹಚ್ಚಿರಿ. ಕೊಂಚ ಹೊತ್ತು ಒಣಗಲು ಬಿಟ್ಟು ಮತ್ತೆ ತಟ್ಟುತ್ತಾ ಹಚ್ಚಿರಿ ಇದೇ ರೀತಿ ನಾಲ್ಕಾರು ಬಾರಿ ಮಾಡಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಮಲ್ಲಿಗೆ ಎಣ್ಣೆ

ಮಲ್ಲಿಗೆ ಎಣ್ಣೆ

ಸುವಾಸನೆಗಾಗಿ ಉಪಯೋಗಿಸಲಾಗುವ ಮಲ್ಲಿಗೆಹೂವಿನ ಎಣ್ಣೆ ಚರ್ಮದ ಆರೈಕೆಗೂ ಉತ್ತಮವಾಗಿದೆ. ರಾತ್ರಿ ಮಲಗುವ ಮುನ್ನ ಮಲ್ಲಿಗೆ ಎಣ್ಣೆಯ ಕೆಲವು ಹನಿಗಳನ್ನು ಮುಖದಮೇಲೆ ನಯವಾಗಿ ಮಸಾಜ್ ಮಾಡಿ ಒಣಗಿದ ಬಳಿಕ ಮಲಗಿ ಬೆಳಿಗ್ಗೆದ್ದು ತಣ್ಣೀರಿನಿಂದ ಮುಖ ತೊಳೆದುಕೊಳ್ಳುವ ಮೂಲಕ ಮೊಡವೆ ಹಾಗೂ ಅದರಿಂದ ಮೂಡುವ ಕಲೆ ಮಾಯವಾಗುವುದರ ಜೊತೆಗೇ ಚರ್ಮದ ಸಹಜಕಾಂತಿಯೂ ಹೆಚ್ಚುತ್ತದೆ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಒಂದು ದೊಡ್ಡಚಮಚ ಲ್ಯಾವೆಂಡರ್ ಎಣ್ಣೆಗೆ ಒಂದು ತೊಟ್ಟು ಲಿಂಬೆರಸದ ಪ್ರಮಾಣವನ್ನು ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ಕಲೆಗಳಿರುವಲ್ಲಿ ನಯವಾದ ಮಸಾಜ್ ಮೂಲಕ ಹಚ್ಚಿ. ಏಳು ದಿನಗಳಲ್ಲಿಯೇ ಕಲೆ ಮಾಯವಾಗುತ್ತದೆ. ಪ್ರತಿದಿನ ಹೊಸದಾಗಿ ಲಿಂಬೆರಸವನ್ನು ಮಿಶ್ರಣ ಮಾಡಬೇಕು.

ಪುದಿನಾ ಎಣ್ಣೆ

ಪುದಿನಾ ಎಣ್ಣೆ

ಪುದಿನಾ ಎಣ್ಣೆ ಸೂಕ್ಷ್ಮ ಚರ್ಮದವರಿಗೆ ತಕ್ಕುದಲ್ಲ. ಕೊಂಚ ಗಡುಸಾದ ಮತ್ತು ಎಣ್ಣೆಚರ್ಮದವರಿಗೆ ಉತ್ತಮವಾಗಿದೆ. ಬೆರಳ ತುದಿಗಳಿಂದ ಪುದಿನಾ ಎಣ್ಣೆಯನ್ನು ಅದ್ದಿ ನಿಧಾವಾಗಿ ಒತ್ತಿ ಮಸಾಜ್ ಮಾಡಿ. ಇದು ಕೊಂಚ ಉರಿ ತರಿಸಬಹುದು, ಹಾಗಾಗಿ ಬೆರಳಿಗೆ ಹಚ್ಚುವ ಪ್ರಮಾಣವನ್ನು ನಿಯಂತ್ರಿಸಿ. ಸುಮಾರು ಅರ್ಧ ಅಥವಾ ಒಂದು ಘಂಟೆ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಕೊಂಚ ಕಮಟುವಾಸನೆಯನ್ನು ಹೊಂದಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದು ಚರ್ಮಕ್ಕೆಉತ್ತಮವಾದ ಪೋಷಣೆಯನ್ನು ನೀಡುತ್ತದೆ. ಈ ಎಣ್ಣೆಯನ್ನು ಸಹಾ ಬೆರಳ ತುದಿಗೆ ಕೊಂಚವಾಗಿಯೇ ಹಚ್ಚಿ ನಯವಾಗಿ ಮಸಾಜ್ ಮಾಡಿ, ಒಂದು ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಎಣ್ಣೆ ಸಹಾ ಕೊಂಚ ಉರಿ ತರಿಸಬಹುದು, ಬಿಸಿಯ ಅನುಭವವೂ ಆಗಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಇದು ಎಲ್ಲಾ ತರಹದ ಚರ್ಮದ ಬಗೆಗಳಿಗೆ ಒಗ್ಗುವ ಒಂದು ಶ್ರೇಷ್ಠ ಎಣ್ಣೆಯಾಗಿದೆ. ಇದಕ್ಕಾಗಿ ಒಂದು ಹತ್ತಿಯ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಅದ್ದಿ ಕಲೆಯ ಮೇಲೆ ನಯವಾಗಿ ಒರೆಸಿ ಒಣಗಲು ಬಿಡಿ. ನಂತ ಪುನಃ ಹಚ್ಚಿ ಒಣಗಲು ಬಿಡಿ. ಸುಮಾರು ಮೂರು ನಾಲ್ಕು ಬಾರಿ ಹಚ್ಚಿ ಒಂದು ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ವಿಧಾನ ಅನುಸರಿಸುವುದರಿಂದ ಏಳೇ ದಿನದಲ್ಲಿ ಕಲೆ ಮಾಯವಾಗುತ್ತದೆ.

English summary

Natural Oils To Make Pimple and Scars Disappear In 7 Days

None of us welcome pimples with a smile on our face. Not only are these pimples a pain in the neck, they are also troublesome when it leaves behind a nasty looking scar. The scar is generally formed when you pop a zit open. However, if you have been using chemical treated creams to get rid of pimples, the zit takes about three days to dry leaving behind a dark spot or a scar.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more