Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಇನ್ನು ಹಣ್ಣಿನ ಸಿಪ್ಪೆಯನ್ನು ತ್ಯಾಜ್ಯಕ್ಕೆ ಎಸೆಯಬೇಡಿ..!
ಸಾಮಾನ್ಯವಾಗಿ ನಾವೆಲ್ಲಾ ಹಣ್ಣುಗಳನ್ನು ಆರಿಸುವಾಗ ಸಿಪ್ಪೆಗಳ ಬಣ್ಣವನ್ನು ನೋಡಿಯೇ ಆರಿಸುತ್ತೇವೆ. ಆದರೆ ಹಣ್ಣು ತಿನ್ನುವಾಗ ಸಿಪ್ಪೆಯನ್ನು ತ್ಯಾಜ್ಯವಾಗಿಸುತ್ತೇವೆ. ಆದರೆ ಆಶ್ಚರ್ಯವೆಂದರೆ ನಿಸರ್ಗ ಹಣ್ಣಿನ ತಿರುಳಿನಲ್ಲಿ ಯಾವ ಉತ್ತಮ ಗುಣಗಳನ್ನು ಅಳವಡಿಸಿತ್ತೋ, ಸಿಪ್ಪೆಯಲ್ಲಿಯೂ ಬೇರೆ ಗುಣಗಳನ್ನು ಅಳವಡಿಸಿದೆ. ಕೆಲವು ಹಣ್ಣುಗಳ ಸಿಪ್ಪೆಗಳಂತೂ ಚರ್ಮದ ಆರೈಕೆಯ ವಿಷಯ ಬಂದಾಗ ಅದ್ಭುತವನ್ನೇ ಸಾಧಿಸುತ್ತವೆ.
ಚರ್ಮಕ್ಕೆ ಕಾಂತಿ ಮತ್ತು ಆರೈಕೆ ನೀಡುವ ಈ ಹಣ್ಣಿನ ಸಿಪ್ಪೆಗಳು ಪುಕ್ಕಟೆಯಾಗಿಯೇ ಸಿಗುತ್ತವೆ. ಏಕೆಂದರೆ ಬೆಲೆ ಕೊಟ್ಟ ಹಣ್ಣಿನ ತಿರುಳು ನೀವು ತಿಂದು ಆಗಿದೆಯೆಲ್ಲ! ಚರ್ಮಕ್ಕೆ ಅಗತ್ಯವಿರುವ ಆರ್ದತೆ ನೀಡುವ ಮೂಲಕ ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ಮೃದುವಾಗುತ್ತದೆ. ಕೆಲವು ಹಣ್ಣುಗಳ ಸಿಪ್ಪೆಯ ಒಳಭಾಗದಿಂದ ಮುಖವನ್ನು ಉಜ್ಜಿಕೊಳ್ಳುವುದು ಉತ್ತಮವಾದ ವಿಧಾನವಾಗಿದೆ. ಈ ಹಣ್ಣುಗಳ ಸಿಪ್ಪೆ ಬಿಸಾಡಿದರೆ ಆರೋಗ್ಯಕ್ಕೆ ನಷ್ಟ!
ಚರ್ಮದ ಆರೈಕೆಗೆ ಅತ್ಯುತ್ತಮವಾದ ಸಿಪ್ಪೆಗಳಲ್ಲಿ ಕಿತ್ತಳೆಯ ಸಿಪ್ಪೆ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕಲೆರಹಿತ ಮತ್ತು ಏರುಪೇರಿಲ್ಲದ ಚರ್ಮ ಹೊಂದಲು ನೆರವಾಗುತ್ತದೆ. ದಾಳಿಬೆಯ ಸಿಪ್ಪೆಯೂ ಚರ್ಮ ಮತ್ತು ಕೂದಲಿಗೆ ಉತ್ತಮವಾಗಿದೆ. ಇದು ಮೊಡವೆಗಳನ್ನು ನಿವಾರಿಸಿ ಮತ್ತೊಮ್ಮೆ ಬರದಂತೆ ತಡೆಯುತ್ತದೆ. ಅಲ್ಲದೇ ನೈಸರ್ಗಿಕ ಸನ್ ಸ್ಕ್ರೀನ್ ಪರದೆಯಂತೆಯೂ ಕಾರ್ಯನಿರ್ವಹಿಸುತ್ತದೆ. ಇಂದು ಚರ್ಮ ಮತ್ತು ಕೂದಲಿಗೆ ಉತ್ತಮವಾದ ಕೆಲವು ಹಣ್ಣುಗಳ ಸಿಪ್ಪೆಯ ಬಗ್ಗೆ ಮಾಹಿತಿ ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ.

ಕಿತ್ತಳೆ ಸಿಪ್ಪೆ
ಕಿತ್ತಳೆ ಸಿಪ್ಪೆಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಎ ಇವೆ. ಇವು ಚರ್ಮ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿವೆ. ಚರ್ಮದ ಬಣ್ಣವನ್ನು ನೈಜವರ್ಣಕ್ಕೆ ತರಲು ಮತ್ತು ಸಹಜಕಾಂತಿ ಪಡೆಯಲು ವಿಟಮಿನ್ ಸಿ ಉಪಯುಕ್ತವಾಗಿದೆ. ಇನ್ನೊಂದೆಡೆ ವಿಟಮಿನ್ ಎ ಚರ್ಮಕ್ಕೆ ಸೆಳೆತ ನೀಡುವ ಮೂಲಕ ನೆರಿಗೆಗಳಾಗಂತೆ ತಡೆಯುತ್ತದೆ ಹಾಗೂ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ಕಲ್ಮಶಗಳನ್ನು ನಿವಾರಿಸಿ ಮೊಡವೆಗಳಾಗದಂತೆ ತಡೆಯುತ್ತದೆ ಹಾಗೂ ಫ್ರೀ ರ್‍ಯಾಡಿಕಲ್ ಕಣಗಳ ಹಾವಳಿಯನ್ನೂ ಎದುರಿಸಿ ಹಾನಿಯಿಂದ ರಕ್ಷಿಸುತ್ತದೆ. ಕಿತ್ತಳೆ ಸಿಪ್ಪೆಯಿಂದ ಹೆಚ್ಚಿಸಿ ಮುಖದ ಬಿಳುಪು

ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯಲ್ಲಿಯೂ ಆಂಟಿಆಕ್ಸಿಡೆಂಟುಗಳಿದ್ದು ಇದು ಕಲ್ಮಶಗಳನ್ನು ಹೊರದೂಡದೇ ಇರುವ ತೊಂದರೆಯನ್ನು (oxidative stress) ನಿವಾರಿಸುತ್ತದೆ ಮತ್ತು ಸೂರ್ಯನ ಪ್ರಖರ ಮತ್ತು ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಚಮತ್ಕಾರಿಕ ಪ್ರಯೋಜನ ಅರಿಯಿರಿ!

ದಾಳಿಂಬೆ ಸಿಪ್ಪೆ
ದಾಳಿಂಬೆ ಸಿಪ್ಪೆಯಲ್ಲಿಯೂ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ಚರ್ಮಕ್ಕೆ ಸೆಳೆತ ಮತ್ತು ಪೋಷಣೆಯನ್ನು ನೀಡುತ್ತದೆ. ಇದು ನೆರಿಗೆಗಳು ಮೂಡದಂತೆ ತಡೆಯುತ್ತದೆ. ಅಲ್ಲದೇ ಚರ್ಮ ಸಹಜವರ್ಣ ಪಡೆಯಲು ಸಹಾಯ ಮಾಡುವ ಜೊತೆಗೇ ವೃದ್ದಾಪ್ಯದ ಚಿಹ್ನೆಗಳನ್ನು ಮೂಡದಂತೆ ತಡೆಯುತ್ತದೆ. ತಿಪ್ಪೆಗೆ ಎಸೆಯೋ ದಾಳಿಂಬೆ ಸಿಪ್ಪೆಯಲ್ಲಿದೆ ಸೌಂದರ್ಯ ರಹಸ್ಯ

ಆಲುಗಡ್ಡೆ ಸಿಪ್ಪೆ
ವಾಸ್ತವವಾಗಿ ತರಕಾರಿಯಾಗಿರುವ ಆಲುಗಡ್ಡೆ ಚರ್ಮಕ್ಕೆ ಉತ್ತಮವಾದ ಪೋಷಣೆ ನೀಡುವ ಕಾರಣದಿಂದ ಈ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡಿದೆ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ವರ್ಣವನ್ನು ಬಿಳಿಚಿಸಲು ನೆರವಾಗುತ್ತದೆ. ವಿಶೇಷವಾಗಿ ಕಣ್ಣುಗಳ ಕೆಳಗೆ ಊದಿಕೊಂಡಂತಾಗುವ ಸ್ಥಿತಿಯನ್ನು ನಿವಾರಿಸುತ್ತದೆ. ಆಲೂಗಡ್ಡೆಯ ಮಾಯಾ ಜಾದೂಗೆ ಬೆರಗಾಗಲೇಬೇಕು!

ಲಿಂಬೆಯ ಸಿಪ್ಪೆ
ಲಿಂಬೆಯ ಸಿಪ್ಪೆಯಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಇವು ಚರ್ಮದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತವೆ. ಹಣ್ಣಿನ ತಿರುಳಿನಲ್ಲಿರುವ ಸಿಟ್ರಿಕ್ ಆಮ್ಲ ಸಿಪ್ಪೆಯಲ್ಲಿಯೂ ಇರುವುದರಿಂದ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುವ ಜೊತೆಗೇ ಚರ್ಮದ ಆರೋಗ್ಯಕರವಾಗಿರಲು ನೆರವಾಗುತ್ತದೆ. ಲಿಂಬೆಯ ಸೌಂದರ್ಯವರ್ಧಕ ಗುಣಗಳಿಗೆ ಬೆರಗಾಗಲೇಬೇಕು

ಸೇಬಿನ ಸಿಪ್ಪೆ
ಸೇಬಿನ ಸಿಪ್ಪೆಯಲ್ಲಿಯೂ ಪಾಲಿಫಿನಾಲ್ ಗಳೆಂಬ ಪೋಷಕಾಂಶಗಳು ಕ್ಯಾನ್ಸರ್ ಗೆ ಕಾರಣವಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ತಡೆದು ಚರ್ಮದಲ್ಲಿ ಹೊಸ ಜೀವಕೋಶಗಳು ಹುಟ್ಟಲು ನೆರವಾಗುತ್ತದೆ. ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ

ಪಪ್ಪಾಯಿ ಸಿಪ್ಪೆ
ಪಪ್ಪಾಯಿ ಸಿಪ್ಪೆಯಲ್ಲಿ ಆಲ್ಫಾ ಹೈಡ್ರಾಕ್ಸಿ ಎಂಬ ರಾಸಾಯನಿಕವಿದ್ದು ಇದು ಚರ್ಮಕ್ಕೆ ಆರ್ದ್ರತೆ ನೀಡುವ ಜೊತೆಗೆ ಚರ್ಮದ ಬಣ್ಣವನ್ನು ತಿಳಿಗೊಳಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ಅಲ್ಲದೇ ಚರ್ಮದ ಮೇಲೆ ಇರುವ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಕಾಂತಿಯುತ ತ್ವಚೆಗಾಗಿ ಈ ಪಪ್ಪಾಯಿ ಫೇಸ್ ಮಾಸ್ಕ್



Click it and Unblock the Notifications
