For Quick Alerts
ALLOW NOTIFICATIONS  
For Daily Alerts

ಗೌರವರ್ಣದ ತ್ವಚೆಗಾಗಿ ಗ್ರೀನ್ ಟೀ- ಜೇನಿನ ಫೇಸ್‌ಪ್ಯಾಕ್

By Super
|

ಕೆಲ ವರ್ಷಗಳ ಹಿಂದೆ ಟೀ ಎಂದರೆ ಅತಿ ನುಣ್ಣಗಿನ ಡಸ್ಟ್ ಟೀ ಒಂದೇ ಆಗಿತ್ತು. ದಿನಗಳೆದಂತೆ ವಿವಿಧ ಬಗೆಯ ಟೀಪುಡಿಗಳು ನಮ್ಮ ಅಡುಗೆಮನೆಗಳಿಗೆ ಅಡಿಯಿಟ್ಟವು. ಆದರೆ ಈ ಟೀಪುಡಿಗಳ ಬಳಕೆ ಟೀ ಮಾಡಿ ಕುಡಿಯಲು ಸೀಮಿತವಾಗಿತ್ತು. ಆದರೆ ಇಂದು ಸುಮಾರು ನೂರು ಬಗೆಯ ಟೀಪುಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಟೀ ಆಯ್ಕೆಯಲ್ಲಿ ಪೈಪೋಟಿ ನೀಡುವ ಹಸಿರು ಟೀ ಶೀಘ್ರ ಸಮಯದಲ್ಲಿಯೇ ಮನೆಮಾತಾಗಿದೆ. ಕೇವಲ ಕುಡಿಯಲು ಮಾತ್ರವಲ್ಲ, ಸೌಂದರ್ಯ ವೃದ್ಧಿಗೂ ಹಸಿರು ಟೀ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಏಕಾಗಿ ಈ ಹಸಿರು ಟೀ (ಗ್ರೀನ್ ಟೀ) ಇಷ್ಟೊಂದು ಜನಪ್ರಿಯತೆ ಪಡೆದುಕೊಳ್ಳಲು ಸಾಧ್ಯವಾಯಿತು? ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಇದಕ್ಕೆ ಉತ್ತರ ಹಸಿರು ಟೀಯಲ್ಲಿನ ಪೋಷಕಾಂಶಗಳಲ್ಲಿ ಅಡಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸ್ವತಂತ್ರವಾಗಿ ಓಡಾಡುತ್ತಾ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಯಂತ್ರಿಸಿ ಕ್ಯಾನ್ಸರ್‌ನಿಂದ ದೇಹವನ್ನು ಮುಕ್ತಿಗೊಳಿಸುತ್ತದೆ. ಜೊತೆಗೇ ಮುಪ್ಪಿಗೆ ಕಾರಣವಾಗುವ ಸಡಿಲವಾದ ಚರ್ಮ, ನೆರಿಗೆ ಮೊದಲಾದವುಗಳು ಮೂಡುವುದನ್ನು ನಿಧಾನಗೊಳಿಸಿ ಮುಪ್ಪನ್ನು ಮುಂದೂಡುತ್ತದೆ. ತ್ವಚೆಯ ಸೌಂದರ್ಯಕ್ಕೆ ದುಬಾರಿ ಬೆಲೆಯ ಫೇಸ್‌ಪ್ಯಾಕ್‍ಗಳೇಕೆ?

ಹಸಿರು ಟೀ ಯಿಂದ ಅರೋಗ್ಯದ ಜೊತೆಗೇ ಸೌಂದರ್ಯವೂ ವೃದ್ಧಿಗೊಳ್ಳುತ್ತದೆ. ಹಸಿರು ಟೀ ಉಪಯೋಗಿಸಿದ ಹಲವು ಸೌಂದರ್ಯ ಪ್ರಸಾಧನಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಬಲುದುಬಾರಿಯಾದ ಈ ಪ್ರಸಾಧನಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದಂತೆ ಮನೆಯಲ್ಲಿಯೂ ಇವನ್ನು ತಯಾರಿಸಿಕೊಳ್ಳಬಹುದು. ವಿವಿಧ ಬಗೆಯ ಚರ್ಮಕ್ಕಾಗಿ ವಿವಿಧ ಬಗೆಯ ಹಸಿರು ಟೀ ಬಳಸಿದ ಮುಖದ ಲೇಪನ (face pack) ತಯಾರಿಸಿಕೊಳ್ಳುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಹಸಿರು ಚಹಾ ಮತ್ತು ಜೇನಿನ ಮುಖಲೇಪ

ಹಸಿರು ಚಹಾ ಮತ್ತು ಜೇನಿನ ಮುಖಲೇಪ

ಬಿಸಿನೀರಿನಲ್ಲಿ ಎರಡು ಅಥವಾ ಮೂರು ಹಸಿರು ಚಹಾ ಇರುವ ಚೀಲಗಳನ್ನು ಕೊಂಚಕಾಲ ಮುಳುಗಿಸಿ. ಬಳಿಕ ಈ ಚೀಲಗಳನ್ನು ಕತ್ತರಿಸಿ ಒಳಗಿನ ಟೀಪುಡಿಯನ್ನು ಒಂದು ಬೋಗುಣಿಯಲ್ಲಿ ಹಾಕಿ ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇನ್ನು ಈ ಲೇಪವನ್ನು ಮುಖ ಮತ್ತು ಗಂಟಲಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನಿಯ ನೀರಿನಿಂದ ತೊಳೆದುಕೊಳ್ಳಿ. ನಂತರ ಸೋಪು ಉಪಯೋಗಿಸಬೇಡಿ. ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ.

ಹಸಿರು ಚಹಾ, ಓಟ್ಸ್ ಮತ್ತು ಹಾಲಿನ ಮುಖಲೇಪ

ಹಸಿರು ಚಹಾ, ಓಟ್ಸ್ ಮತ್ತು ಹಾಲಿನ ಮುಖಲೇಪ

ಒಂದು ಚಮಚ ಹಸಿರು ಚಹಾ, ಮೂರು ದೊಡ್ಡ ಚಮಚ ಹಾಲು ಮತ್ತು ಒಂದು ದೊಡ್ಡಚಮಚ ಓಟ್ಸ್ ಸೇರಿಸಿ ಚೆನ್ನಾಗಿ ಅರೆಯಿರಿ. ಈ ಲೇಪನವನ್ನು ಮುಖದ ಮೇಲೆ ಸಮನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖದ ಕಾಂತಿ ಬೆಳಗಿ ನಿಮಗೆ ಹೊಸ ರೂಪವನ್ನು ನೀಡಿರುವುದನ್ನು ಕಂಡು ದಂಗಾಗುತ್ತೀರಿ.

ಹಸಿರು ಚಹಾ, ಸೌತೆಕಾಯಿಯ ಮುಖಲೇಪ

ಹಸಿರು ಚಹಾ, ಸೌತೆಕಾಯಿಯ ಮುಖಲೇಪ

ಎರಡು ಚೀಲ ಹಸಿರು ಚಹಾವನ್ನು ಬಿಸಿನೀರಿಗೆ ಹಾಕಿ ಕೊಂಚಕಾಲ ಬಿಡಿ. ಬಳಿಕ ಟೀಪುಡಿಯನ್ನು ಹೊರತೆಗೆದು ಒಂದು ದೊಡ್ಡಚಮಚ ಸೌತೆಕಾಯಿಯನ್ನು ಜಜ್ಜಿ ಹಿಂಡಿದ ರಸವನ್ನು ಸೇರಿಸಿ ಚೆನ್ನಾಗಿ ಕಲಕಿ. ಈ ಲೇಪನವನ್ನು ಮುಖದ ಮೇಲೆ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.

ಹಸಿರು ಚಹಾ, ಜೇನು ಮತ್ತು ಸಕ್ಕರೆಯ ಮುಖಲೇಪ

ಹಸಿರು ಚಹಾ, ಜೇನು ಮತ್ತು ಸಕ್ಕರೆಯ ಮುಖಲೇಪ

ಒಂದು ದೊಡ್ಡಚಮಚ ಹಸಿರು ಚಹಾ, ಒಂದು ದೊಡ್ಡಚಮಚ ಜೇನು ಮತ್ತು ಒಂದು ದೊಡ್ಡಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮದ ಮೇಲಿದ್ದ ನಿರ್ಜೀವ ಜೀವಕೋಶಗಳು ತೊಳೆದು ಹೋಗಿ ಚರ್ಮ ಕಾಂತಿಯುತವಾಗುತ್ತದೆ ಹಾಗೂ ಗೌರವರ್ಣ ಪಡೆಯುತ್ತದೆ.

ಹಸಿರು ಚಹಾ ಮತ್ತು ಬೇವಿನ ಎಲೆಯ ಮುಖಲೇಪ

ಹಸಿರು ಚಹಾ ಮತ್ತು ಬೇವಿನ ಎಲೆಯ ಮುಖಲೇಪ

ಒಂದು ಕಪ್ ಕುದಿಯುವ ನೀರಿನಲ್ಲಿ ಒಂದು ಚೀಲ ಹಸಿರು ಚಹಾ ಮತ್ತು ಸುಮಾರು ಆರು ಕರಿಬೇಬಿನ ಎಲೆಗಳನ್ನು ಹಾಕಿ ಕುದಿಸಿ. ನೀರು ಆವಿಯಾಗಿ ಸ್ವಲ್ಪವೇ ನೀರು ಇರುವಂತಿದ್ದಾಗ ಇಳಿಸಿ ಚೆನ್ನಾಗಿ ಅರೆಯಿರಿ. ಈ ಲೇಪನ ತಣ್ಣಗಾದ ಬಳಿಕ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮ ಹೊಸಕಾಂತಿಯನ್ನು ಮತ್ತು ತಾಜಾತನವನ್ನು ಪಡೆಯುತ್ತದೆ.

English summary

Face Mask Recipes With Green Tea And Honey

Looking good and attractive has been a basic urge for everyone. Both men and women often share similar sentiments in this regard. Due to the increasing demands of beauty treatments, the number of beauty salons and beauty parlors is also increasing at a fast pace. you are serious about becoming your own beautician, then you should not ignore knowing about some of the most popular face masks and scrubs that are made with green tea, honey, and other homemade ingredients:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X