Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆಯ ಸುಡು ಬಿಸಿಲಿಗೆ ತ್ವಚೆಯ ಕಾಳಜಿ ವಹಿಸುವುದು ಹೇಗೆ?
ಬೇಸಿಗೆಯಲ್ಲಿ ನಾವು ಮಾಡುವ ಕೆಲವೊಂದು ತ್ವಚೆಯ ತಪ್ಪುಗಳನ್ನು ಮೊದಲೆ ನಿಯಂತ್ರಿಸಬಹುದು. ಒಂದು ವೇಳೆ ನೀವು ಬಿಸಿಲಿನ ಹವಾಮಾನದಲ್ಲಿ ಇದ್ದರೆ, ಖಂಡಿತ ನಿಮ್ಮ ತ್ವಚೆಗೆ ಹಾನಿಯಾಗುವುದು ಸಹಜ. ಒಂದು ವೇಳೆ ನಿಮ್ಮ ಪ್ರದೇಶವು ಆರ್ದ್ರತೆಯಿಂದ ಕೂಡಿರುವ ಪ್ರದೇಶವಾಗಿದ್ದಲ್ಲಿ, ನೀವು ಬೇಸಿಗೆಯಲ್ಲಿ ಬೆವರದೆ ಇರಲು ಸಾಧ್ಯವಿಲ್ಲ. ನೀವು ಎಲ್ಲಿ ಇರುತ್ತೀರಿ ಎಂದು ಆಲೋಚಿಸದೆ, ನಿಮ್ಮ ತ್ವಚೆಯ ಕುರಿತು ಈ ಬೇಸಿಗೆಯ ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಿ. ಆದರೆ ನೀವು ಕೆಲಸ ಕಾರ್ಯಗಳ ಒತ್ತಡದಲ್ಲಿದ್ದರೆ, ಈ ಕುರಿತು ಗಮನ ನೀಡಲು ನಿಮ್ಮ ಬಳಿ ಸಮಯಾವಕಾಶದ ಕೊರತೆ ಕಾಡುತ್ತದೆ.
ಇದೇ ಸಮಯದಲ್ಲಿ ನಿಮ್ಮ ತ್ವಚೆಯು ಪ್ರತಿ ಬಾರಿ ಯುವಿ ಕಿರಣಗಳಿಗೆ ಒಡ್ಡಿಕೊಂಡಾಗಲೆಲ್ಲ ಅದಕ್ಕೆ ಹಾನಿಯುಂಟಾಗುತ್ತಲೆ ಸಾಗುತ್ತದೆ. ಇದೇ ಸಮಯದಲ್ಲಿ ನಿಮ್ಮ ತ್ವಚೆ ಬೆವರುವುದನ್ನು ನಿವಾರಿಸಲು ಕ್ರಮ ಕೈಗೊಳ್ಳಿ. ಇದರಿಂದ ಮೊಡವೆ ಮುಂತಾದ ತ್ವಚೆಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಬನ್ನಿ ಯಾವ ತಪ್ಪುಗಳು ನೀವು ಮಾಡುತ್ತೀರಾ, ಅದರಿಂದ ಉಂಟಾಗುವ ಸಮಸ್ಯೆಗಳ ಕುರಿತು ನಾವು ಇಂದು ನಿಮಗೆ ತಿಳಿಸುತ್ತೇವೆ. ತ್ವಚೆಯ ಅಂದವನ್ನು ಹೆಚ್ಚಿಸುವ ಅತ್ಯದ್ಭುತ ಫೇಸ್ ಮಾಸ್ಕ್‌ಗಳು

ಗುಳ್ಳೆಗಳು
ಬೇಸಿಗೆಯಲ್ಲಿ ನಮಗೆ ಕಾಣಿಸಿಕೊಳ್ಳುವ ತ್ವಚೆಯ ಸಮಸ್ಯೆಗಳಲ್ಲಿ ಇದು ಒಂದು. ಒಂದು ವೇಳೆ ನೀವು ವರ್ಕ್‌ಔಟ್ ಮಾಡುತ್ತಿದ್ದಲ್ಲಿ, ಸರಿಯಾಗಿ ಗಾಳಿಯಾಡುವ ಬಟ್ಟೆಗಳನ್ನು ವ್ಯಾಯಾಮ ಮಾಡುವ ಸಮಯದಲ್ಲಿ ಹಾಕಿಕೊಳ್ಳಿ. ವರ್ಕ್‌ಔಟ್ ಮಾಡಿದ ಮೇಲೆ ಈ ಬೆವರಿನಿಂದ ಕೂಡಿದ ಬಟ್ಟೆಗಳನ್ನು ತಪ್ಪದೆ ಬದಲಿಸಿ. ಇದರಿಂದ ಗುಳ್ಳೆಗಳು ಬರುವುದು ತಡೆಯುತ್ತದೆ. ಬೇಸಿಗೆಯಲ್ಲಿ ನೀವು ಬೆವರುವುದನ್ನು ತಡೆಯಲು ಸಾಧ್ಯವಾಗದಿದ್ದರೆ, ತ್ವಚೆಯಲ್ಲಿ ಗುಳ್ಳೆಗಳು ಬರುತ್ತವೆ. ಬೇಸಿಗೆಯಲ್ಲೂ ನಳನಳಿಸುವ ಸೌಂದರ್ಯಕ್ಕಾಗಿ ಅದ್ಭುತ ಸಲಹೆಗಳು
ಉತ್ಪನ್ನಗಳನ್ನು ಆರಿಸಿಕೊಳ್ಳುವುದು
ವಿಶೇಷವಾಗಿ ಬೇಸಿಗೆಯಲ್ಲಿ ತಪ್ಪಾದ ಉತ್ಪನ್ನಗಳನ್ನು ಆರಿಸಿಕೊಳ್ಳುವುದನ್ನು ತಡೆಯಿರಿ. ಒಣ ತ್ವಚೆ ಇರುವವರು ಆಲ್ಕೋಹಾಲ್ ಇರುವ ಉತ್ಪನ್ನಗಳನ್ನು ಬಳಸಲು ಹೋಗಬೇಡಿ. ಒಂದು ವೇಳೆ ನಿಮಗೆ ಮೊಡವೆಗಳಿದ್ದಲ್ಲಿ, ಮೊಯಿಶ್ಚರೈಸರ್‌ಗಳನ್ನು ಬಳಸಬೇಡಿ.
ಸನ್ ಬರ್ನ್
ಬೇಸಿಗೆಯಲ್ಲಿ ಪ್ರತಿಯೊಬ್ಬರಿಗು "ಸನ್ ಬರ್ನ್" ಕಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ತ್ವಚೆಗೆ ಸನ್ ಸ್ಕ್ರೀನ್ ಲೋಷನ್ ಬಳಸಿ. ಇದರಿಂದ ತ್ವಚೆಗೆ ಬಿಸಿಲಿನಿಂದ ರಕ್ಷಣೆ ದೊರೆಯುತ್ತದೆ. ಅಪ್ಸರೆಯಂತಹ ಸೌಂದರ್ಯಕ್ಕಾಗಿ ಹೆಸರುಬೇಳೆಯೆಂಬ ಸಿದ್ಧೌಷಧ
ಮೊಡವೆ
ಮೊಡವೆಗಳು ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ತ್ವಚೆಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಬಿಸಿಲಿನ ತಿಂಗಳುಗಳಲ್ಲಿ ತ್ವಚೆಯು ಬ್ಯಾಕ್ಟೀರಿಯಾಗಳ ಉತ್ಪತಿಗೆ ಬೇಕಾಗುವ ರಂಗವಾಗಿ ಪರಿಣಮಿಸುತ್ತದೆ. ಮೊಡವೆಗಳನ್ನು ನಿವಾರಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಮರೆಯಬೇಡಿ.



Click it and Unblock the Notifications
