Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾತ್ರಿ ಮಲಗುವ ಮುನ್ನ ತ್ವಚೆಯ ಆರೈಕೆ ಹೀಗಿರಲಿ
ಸೌಂದರ್ಯ ರಕ್ಷಣೆಗೆ ಹಗಲಿಗಿಂತಲೂ ರಾತ್ರಿಯೇ ಹೆಚ್ಚು ಪ್ರಶಸ್ತವಾದ ಸಮಯ. ಏಕೆಂದರೆ ಹಗಲಿನ ಹೊತ್ತಿನಲ್ಲಿ ನಮ್ಮ ದೇಹ ಹಲವಾರು ಧಾಳಿಗಳಿಗೆ ಗುರಿಯಾಗುತ್ತದೆ. ಬಿಸಿಲು, ಗಾಳಿಯಲ್ಲಿನ ಧೂಳು, ಹೊಗೆ, ಮರಳ ಕಣಗಳು, ವಿವಿಧ ಕ್ರಿಮಿಗಳು, ಬ್ಯಾಕ್ಟೀರಿಯಾಗಳು ಮೊದಲಾದವುಗಳನ್ನು ನಮ್ಮ ಚರ್ಮ ಸಹಿಸಬೇಕಾಗುತ್ತದೆ. ಆದರೆ ಈ ಧಾಳಿಯನ್ನು ಎದುರಿಸಲು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಸಕ್ಷಮವಾಗಿರುವುದರಿಂದ ನಾವೇನೂ ನಿತ್ಯವೂ ಕಾಯಿಲೆ ಬೀಳುವುದಿಲ್ಲ.
ಆದರೆ ಈ ಧಾಳಿಯಿಂದ ನಮ್ಮ ಚರ್ಮ ಮಾತ್ರ ಕೊಂಚವಾದರೂ ಘಾಸಿಗೊಂಡಿರುತ್ತದೆ. ಇದನ್ನು ಸರಿಪಡಿಸಲು ರಾತ್ರಿ ನಿದ್ದೆಯ ಸಮಯ ಅತ್ಯಂತ ಪ್ರಶಸ್ತವಾಗಿದ್ದು ದೇಹದ ಹಲವು ಅನೈಚ್ಛಿಕ ಕಾರ್ಯಗಳೊಂಗಿದೇ ಚರ್ಮ ಪುನಃಶ್ಚೇತನಗೊಳ್ಳುವ ಕಾರ್ಯವೂ ಜರುಗುತ್ತದೆ. ಫೇರ್ ನೆಸ್ ಕ್ರೀಮ್ ನಿಜಕ್ಕೂ ಅಂದ ಹೆಚ್ಚಿಸುತ್ತದೆಯೆ?
ಆದ್ದರಿಂದಲೇ ಮಲಗುವ ಮುನ್ನ ಸ್ನಾನ ಮಾಡುವುದು ಉತ್ತಮ ಎಂದು ಆಯುರ್ವೇದ ತಿಳಿಸುತ್ತದೆ. ಇದರಿಂದ ಚರ್ಮದ ಮೇಲಿದ್ದ ಕಲ್ಮಶ ಮತ್ತು ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಕೊಳೆ ಸಾಕಷ್ಟು ನಿವಾರಣೆಯಾಗುತ್ತದೆ. ಆದರೆ ಹಗಲಿನಂತೆ ರಾತ್ರಿಯೂ ಯಾವುದಾದರೂ ಪ್ರಸಾಧನವನ್ನು ಹಚ್ಚಿಕೊಂಡು ಮಲಗಿದರೆ ಅಥವಾ ಹಗಲಿನಲ್ಲಿ ಹಚ್ಚಿದ್ದ ಪ್ರಸಾಧನವನ್ನು ಆಯಾಸದ ನೆಪದಿಂದ ತೆಗೆಯದೇ ಹಾಗೇ ಮಲಗಿದರೆ ರಾತ್ರಿ ಚರ್ಮದ ಪುನಃಶ್ಚೇತನದ ಕಾರ್ಯ ಪೂರ್ಣವಾಗಿ ಆಗುವುದಿಲ್ಲ. ಅಲ್ಲದೇ ಇದರ ಪರಿಣಾಮ ವ್ಯತಿರಿಕ್ತವಾಗಿಯೂ ಆಗಬಹುದು. ಮಲಗುವ ಮುನ್ನ ತ್ವಚೆಯ ಮೇಕಪ್ ಅನ್ನು ತೆಗೆಯಲು ಮರೆಯದಿರಿ!
ರಾತ್ರಿ ಮಲಗುವ ಮುನ್ನ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಗಾಳಿಗೆ ತೆರೆದುಕೊಂಡಿದ್ದ ಅಂಗಗಳನ್ನೆಲ್ಲಾ ಸ್ವಚ್ಛವಾಗಿ ತೊಳೆದು ಒಣಗಿದ ಬಳಿಕ ಮಲಗುವುದು ಉತ್ತಮ. ಇದಕ್ಕೂ ಹೊರತಾಗಿ ತ್ವಚೆಯ ಕಾಂತಿಯುಕ್ತ ಚರ್ಮಕ್ಕಾಗಿ ಏನು ಮಾಡಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ತೋರಿಸಿಕೊಡಲಿದೆ:

ಮೇಕಪ್ ನಿವಾರಣೆ
ಒಂದು ವೇಳೆ ನಿಮ್ಮ ಕಾರ್ಯದಲ್ಲಿ ಮೇಕಪ್ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದರೆ ಮನೆಗೆ ಹಿಂದಿರುಗಿದ ಬಳಿಕ ಎಷ್ಟೇ ಆಯಾಸವಾಗಿರಲಿ ಅಥವಾ ಎಷ್ಟೇ ಕೆಲಸದ ಒತ್ತಡವಿರಲಿ, ಮೇಕಪ್ ತೆಗೆಯದೇ ಸರ್ವಥಾ ಮಲಗಬೇಡಿ. ಮುಖ ತೊಳೆದುಕೊಳ್ಳುವ ಮುನ್ನ ಮೇಕಪ್ ನಿವಾರಿಸುವುದು ಅನಿವಾರ್ಯ. ಇದಕ್ಕಾಗಿ ವ್ಯಾಸೆಲಿನ್, ಗುಲಾಬಿ ನೀರು ಅಥವಾ ಮೇಕಪ್ ರಿಮೂವರ್ ದ್ರಾವಣಗಳನ್ನು ಬಳಸಬಹುದು. ಬಳಿಕ ಕೈ ಕಾಲು ಮುಖಗಳನ್ನು ಸ್ವಚ್ಛವಾಗಿ ತೊಳೆದುಕೊಂಡ ಬಳಿಕವೇ ಊಟ ಮಾಡಿ ಮಲಗುವುದು ಉತ್ತಮ ಹಾಗೂ ಆರೋಗ್ಯಕರ.

ಚರ್ಮಕ್ಕೆ ಆರ್ದ್ರತೆ ನೀಡುವ ಕ್ರೀಮ್ ಹಚ್ಚಿ
ಚರ್ಮಕ್ಕೆ ಅತಿ ಅಗತ್ಯವಾಗಿರುವ ಆರ್ದ್ರತೆಯನ್ನು ವಾತಾವರಣದಿಂದಲೇ ಪಡೆಯುತ್ತದೆ. ಆದರೆ ಇಡಿಯ ದಿನ ಹೊರಗಿದ್ದು ಬಿಸಿಲಿಗೆ ಹೆಚ್ಚು ಹೊತ್ತು ಒಡ್ಡಿದ್ದರೆ ಚರ್ಮದಿಂದ ಆಗಾಧಪ್ರಮಾಣದಲ್ಲಿ ಆರ್ದತೆ ನಷ್ಟವಾಗಿರುತ್ತದೆ. ರಾತ್ರಿ ಚರ್ಮ ಹೀರಿಕೊಳ್ಳಬಹುದಾದ ಪ್ರಮಾಣ ಈ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಲ್ಪವಾಗಿರುವ ಕಾರಣ ಆರ್ದ್ರತೆ ನೀಡುವ ಕ್ರೀಮ್ ಹಚ್ಚಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ. ನಿಮಗೆ ಸೂಕ್ತವೆನಿಸಿದ ಆರ್ದ್ರತೆ ನೀಡುವ ಕ್ರೀಮ್ (moisturiser) ಹಚ್ಚಿ ಮಲಗಿ.

ಕಣ್ಣಿನ ಕ್ರೀಮ್
ಕಿವಿಗೆ ಸಮೀಪವಿರುವ ಕಣ್ಣಿನ ಅಂಚುಗಳಲ್ಲಿ ಚರ್ಮದ ಕೊಂಚ ಸೆಳೆತ ಕೊಂಚ ಹೆಚ್ಚಾಗಿರುತ್ತದೆ. ಆದ್ದರಿಂದ ನೆರಿಗೆ ಮೂಡುವ ಸ್ಥಳಗಳಲ್ಲಿ ಈ ಅಂಚುಗಳು ಪ್ರಮುಖವಾಗಿವೆ. ಇದನ್ನು ತಡೆಯಲು ಪ್ರತಿ ರಾತ್ರಿ ಮಲಗುವ ಮುನ್ನ ಉತ್ತಮ ಗುಣಮಟ್ಟದ ಐ ಕ್ರೀಮ್ ಹಚ್ಚಿ ನಯವಾಗಿ ಮಸಾಜ್ ಮಾಡಿ ಮಲಗುವುದರಿಂದ ಈ ತೊಂದರೆಯಂದ ತಪ್ಪಿಸಿಕೊಳ್ಳಬಹುದು.

ವೃದ್ಧಾಪ್ಯ ದೂರಾಗಿಸುವ ಕ್ರೀಮ್
ಸಾಮಾನ್ಯವಾಗಿ ನಡುವಯಸ್ಸು ದಾಟುತ್ತಿರುವ ಮಹಿಳೆಯರಿಗೆ ತಮ್ಮ ಮುಖದಲ್ಲಿ ನೆರಿಗೆ ಮೂಡುವ ಪ್ರಕ್ರಿಯೆಯನ್ನು ತಡವಾಗಿಸಲು ಮಾರುಕಟ್ಟೆಯಲ್ಲಿ ಈಗ ಬಂದಿರುವ ವೃದ್ದಾಪ್ಯ ದೂರಾಗಿಸುವ ಕ್ರೀಮ್ (anti-ageing cream) ಒಂದು ವರದಾನವಾಗಿದೆ. ಸಾಕಷ್ಟು ದುಬಾರಿಯಾಗಿರುವ ಈ ಪ್ರಸಾದನವನ್ನು ಬಳಸಲು ರಾತ್ರಿಯ ಸಮಯವೇ ಪ್ರಶಸ್ತವಾಗಿದೆ. ಇದಕ್ಕಾಗಿ ಮಲಗುವ ಮುನ್ನ ಸ್ವಚ್ಛವಾಗಿ ಮುಖವನ್ನು ತೊಳೆದುಕೊಂಡು ಸ್ವಚ್ಛಬಟ್ಟೆಯಿಂದ ಒರೆಸಿಕೊಂಡ ಬಳಿಕ ಚಿಕ್ಕ ವೃತ್ತಾಕಾರದಲ್ಲಿ ಬೆರಳುಗಳಿಂದ ಮಸಾಜ್ ಮಾಡುತ್ತ ಇಡಿಯ ಮುಖಕ್ಕೆ (ತುಟಿಗಳನ್ನು ಬಿಟ್ಟು) ಈ ಕ್ರೀಮ್ ಹಚ್ಚಿ. ಒಂದು ವೇಳೆ ತಮ್ಮಲ್ಲಿ ಉಪಯುಕ್ತವಾದ ಸಲಹೆಗಳಿದ್ದರೆ ಖಂಡಿತಾ ನಮ್ಮೊಂದಿಗೆ ಹಂಚಿಕೊಳ್ಳಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಸ್ಥಳವನ್ನು ಬಳಸಿ.



Click it and Unblock the Notifications