Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುಡುಗಿಯರ ತ್ವಚೆ ಆರೈಕೆಗೆ ಚಳಿಗಾಲದ ಟಿಪ್ಸ್
ಮಹಿಳೆಯ ಜೀವನದಲ್ಲಿ ಹದಿಹರೆಯ ಎನ್ನುವುದು ತುಂಬಾ ಸುಂದರ, ಪ್ರಕಾಶಮಾನ ಮತ್ತು ಬೆರಗುಗೊಳಿಸುವ ಸಮಯ. ಹುಡುಗಿಯ ಜೀವನದಲ್ಲಿ ಹದಿಯರವೆನ್ನುವುದು ಹಲವಾರು ಹೊಸ ಅನುಭವಕ್ಕೆ ಕಾರಣವಾಗುತ್ತದೆ. ಹದಿಹರೆಯದಲ್ಲಿ ಆಗುವಂತಹ ಕೆಲವೊಂದು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಇದಕ್ಕೆ ಕಾರಣವಾಗಬಹುದು. ಬದಲಾವಣಿಗಳ ಪರಿಣಾಮ ಅದರಲ್ಲೂ ಹಾರ್ಮೋನು ಬದಲಾವಣೆಗಳು ಹುಡುಗಿಯ ತ್ವಚೆಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಹುಡುಗಿಯರು ತಮ್ಮ ತ್ವಚೆಯ ಆರೈಕೆಗೆ ಮೊದಲ ಆದ್ಯತೆ ನೀಡುತ್ತಾರೆ. ಮೊದಲ ಮುಟ್ಟಾಗುವಿಕೆ ಹುಡುಗಿಯಲ್ಲಿ ಹಲವಾರು ರೀತಿಯ ಹಾರ್ಮೋನು ಬದಲಾವಣೆಗಳೊಂದಿಗೆ ತ್ವಚೆಯಲ್ಲೂ ಬದಲಾವಣೆಗಳಾಗುತ್ತದೆ. ಈ ಸಮಯದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಮೊದಲ ಮುಟ್ಟಿನ ಬಳಿಕ ಹುಡುಗಿಯರು ತಮ್ಮ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು.
ಚಳಿಗಾಲದಲ್ಲಿ ಹವಾಮಾನ ಬದಲಾವಣೆಯಿಂದಾಗಿ ನಿಮ್ಮ ತ್ವಚೆಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಹವಾಮಾನದಿಂದಾಗಿ ತ್ವಚೆಯು ಬದಲಾಗುತ್ತದೆ. ಚಳಿಗಾಲದ ಋತುವಿನಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳುವುದು ತುಂಬಾ ಮುಖ್ಯ. ಚಳಿಗಾಲದಲ್ಲಿ ಸುಂದರ, ಮೊಡವೆಮುಕ್ತ, ಮೃದು ಮತ್ತು ಕಡಿಮೆ ಒಣಗಿದ ತ್ವಚೆ ಕಡೆ ಗಮನಹರಿಸಿ. ಚಳಿಗಾಲದ ತ್ವಚೆಯ ಆರೈಕೆ ಮಾಡಿ ಮತ್ತು ನಿಮ್ಮ ತ್ವಚೆಯಲ್ಲಿ ಬದಲಾವಣೆ ನೋಡಿ. ಹದಿಹರೆಯದ ಹುಡುಗಿಯರು ಮಾಡಬಹುದಾದ ತ್ವಚೆಯ ಸುಲಭ ಹಾಗೂ ಪರಿಣಾಮಕಾರಿ ಆರೈಕೆ ಬಗ್ಗೆ ಇಲ್ಲಿ ಕೆಲವೊಂದು ಸರಳ ಟಿಪ್ಸ್ ಗಳಿವೆ.

ಶುಚಿಗೊಳಿಸುವುದು
ಹದಿಹರೆಯದ ಹುಡುಗಿಯರಲ್ಲಿ ತ್ವಚೆಯ ಆರೈಕೆಯನ್ನು ಪರಿಗಣಿಸಿದಾಗ ಶುಚಿಗೊಳಿಸುವುದು ತುಂಬಾ ಮುಖ್ಯವೆಂದು ನೀವು ಗಮನಿಸಬೇಕು. ಮೊದಲ ಮುಟ್ಟಿನ ಬಳಿಕ ಹಾರ್ಮೋನು ಬದಲಾವಣಿಯಿಂದಾಗಿ ಹದಿಹರೆಯದ ಹುಡುಗಿಯರಲ್ಲಿ ಚರ್ಮದ ರಂಧ್ರಗಳು ಬದಲಾಗಬಹುದು. ಇದು ಶುಚಿಗೊಳಿಸುವ ಅಗತ್ಯತೆಯನ್ನು ಹೆಚ್ಚಿಸುತ್ತದೆ.
ಸೌಂದರ್ಯ ಉತ್ಪನ್ನಗಳು
ಒಳ್ಳೆಯ ಗುಣಮಟ್ಟದ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಿದ್ದೀರಾ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ. ಚಳಿಗಾಲದಲ್ಲಿ ತ್ವಚೆಯು ಒಣಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಇದರಿಂದ ತ್ವಚೆಗೆ ತೇವಾಂಶ ನೀಡುವಂತಹ ಕೆಲವೊಂದು ಮೊಶ್ಚಿರೈಸರ್ ಗಳನ್ನು ಬಳಸಿ.
ಕಾಸ್ಮೆಟಿಕ್ ಗಳನ್ನು ಕಡೆಗಣಿಸಿ
ನಿಯಮಿತವಾಗಿ ಕಾಸ್ಮೆಟಿಕ್ ಬಳಸುವುದನ್ನು ಕಡೆಗಣಿಸುವುದು ತುಂಬಾ ಒಳ್ಳೆಯದು. ಯಾಕೆಂದರೆ ಇದು ನಿಮ್ಮ ತ್ವಚೆಯ ಮೇಲೆ ಮೊಡವೆಗಳಿಗೆ ಕಾರಣವಾಗಬಹುದು. ಒರಟು ರಾಸಾಯನಿಕಗಳನ್ನು ಬಳಸಬೇಡಿ. ಹದಿಹರೆಯದ ಹುಡುಗಿಯರು ತ್ವಚೆಯ ಆರೈಕೆ ವೇಳೆ ಈ ಒಂದು ಅಂಶವನ್ನು ಮುಖ್ಯವಾಗಿ ಗಮನಿಸಿ.
ಎಕ್ಸ್ಫಾಲಿಯೇಶನ್
ಎಕ್ಸ್ಫಾಲಿಯೇಶನ್ ನಿಮ್ಮ ತ್ವಚೆಯ ಸತ್ತ ಜೀವಕೋಶಗಳನ್ನು ತೆಗೆದು ತಾಜಾ ಮತ್ತು ಮೃದುವಾಗಿಸುತ್ತದೆ. ಹದಿಹರೆಯದ ಹುಡುಗಿಯರಲ್ಲಿ ಮೊದಲ ಸಲ ಮುಟ್ಟಾದಾಗ ತ್ವಚೆಯಲ್ಲಿ ಮೊಡವೆಗಳು ಕಾಣಿಸಿಕೊಳ್ಳಬಹುದು. ತ್ವಚೆಯಲ್ಲಿ ಮೊಡವೆಗಳಿದ್ದರೆ ನೀವು ಎಕ್ಸ್ಫಾಲಿಯೇಶನ್ ಹೆಚ್ಚಾಗಿ ಮಾಡಬೇಡಿ.
ಮೊಶ್ಚಿರೈಸರ್ ಬಳಸಿ
ಚಳಿಗಾಲದಲ್ಲಿ ತ್ವಚೆ ಒಣಗುವುದು ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಸ್ನಾನದ ಬಳಿಕ ತ್ವಚೆ ಒದ್ದೆಯಾಗಿರುವಾಗಲೇ ನೀವು ಮೊಶ್ಚಿರೈಸರ್ ಬಳಸಿ. ಚಳಿಗಾಲದಲ್ಲಿ ಹದಿಹರೆಯದ ಹುಡುಗಿಯಲ್ಲಿ ತ್ವಚೆಯ ಆರೈಕೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.
ಚಳಿಗಾಲದ ಉಡುಪುಗಳು
ಚಳಿಗಾಲದ ಉಡುಪುಗಳನ್ನು ಆಯ್ಕೆ ಮಾಡಿ. ಇದು ನಿಮ್ಮ ಹೊಸ ಶೈಲಿಯನ್ನು ತೋರಿಸುವುದು ಮಾತ್ರವಲ್ಲದೆ, ತ್ವಚೆಯನ್ನು ಶೀತಗಾಳಿಯಿಂದ ರಕ್ಷಿಸುತ್ತದೆ. ನಿಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಉಡುಪುಗಳನ್ನು ಧರಿಸಿ. ಶೀತಗಾಳಿಗೆ ಹೆಚ್ಚಿನ ಕಾಲ ಮೈಯೊಡ್ಡುವುದರಿಂದ ನಿಮ್ಮ ತ್ವಚೆಯು ಒಣಗಬಹುದು.
ಒಣಗಿದ ತುಟಿಗಳ ಚಿಕಿತ್ಸೆ
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಮತ್ತೊಂದು ಸಮಸ್ಯೆಯೆಂದರೆ ತುಟಿಗಳು ಒಣಗುವುದು. ಚಳಿಗಾಲದಲ್ಲಿ ತುಟಿಗಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ತುಟಿಯ ಮೃದುವಾದ ಚರ್ಮವು ಶೀತಗಾಳಿಗೆ ಬೇಗನೆ ಸಮಸ್ಯೆಗೀಡಾಗುತ್ತದೆ. ಲಿಪ್ ಬಾಮ್ ಬಳಸಿ ತುಟಿ ಒಡೆಯುವುದನ್ನು ರಕ್ಷಿಸಿ.
ತೇವಾಂಶದಿಂದ ಇರಿ
ನಿಮ್ಮ ತ್ವಚೆಯು ತೇವಾಂಶದಿಂದ ಇರಲು ಚಳಿಗಾಲದಲ್ಲಿ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದರಿಂದ ನಿಮ್ಮ ತ್ವಚೆಯು ನೈಸರ್ಗಿಕವಾಗಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಇದು ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡುತ್ತದೆ. ಹದಿಹರೆಯದ ಹುಡುಗಿಯರು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರೆ ಸುಲಭವಾಗಿ ತ್ವಚೆಯ ಆರೈಕೆ ಮಾಡಬಹುದು.



Click it and Unblock the Notifications