Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತ್ವಚೆ ಸೌಂದರ್ಯದ ರಕ್ಷಕ-ಕಸ್ತೂರಿ ಅರಿಶಿಣ
ಮುಖದಲ್ಲಿ ಮೊಡವೆ, ಅಲರ್ಜಿ ಉಂಟಾಗಿದೆಯೆಂದು ಹೇಳಿದಾಗ ಮನೆಯಲ್ಲಿ ಅಜ್ಜಿಯಿದ್ದರೆ ಅವರು "ಅರಿಶಿಣ ಹಚ್ಚು, ಕಡಿಮೆಯಾಗುವುದು " ಎಂದು ಹೇಳುವುದು ಸಹಜ. ತ್ವಚೆ ರಕ್ಷಣೆಯಲ್ಲಿ ಅರಿಶಿಣದ ಪಾತ್ರವನ್ನು ನಮ್ಮ ಹಿರಿಯರು ಬಹು ಕಾಲದ ಹಿಂದೆಯೇ ಅರಿತು ಕೊಂಡಿದ್ದಾರೆ. ಸಾರಿಗೆ ಬಳಸುವ ಅರಿಶಿಣಕ್ಕಿಂತ ಕಸ್ತೂರಿ ಅರಿಶಿಣ ಸೌಂದರ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕಸ್ತೂರಿ ಅರಿಶಿಣ ಸಾಮಾನ್ಯವಾಗಿ ಎಲ್ಲರ ತ್ವಚೆಗೆ ಹೊಂದುತ್ತದೆ. ಸಾಮಾನ್ಯ ಅರಿಶಿಣ ಹಚ್ಚಿದರೆ ಕೆಲವರಿಗೆ ಅಲರ್ಜಿ ಉಂಟಾಗುವುದು, ಆದರೆ ಈ ಅರಿಶಿಣದಿಂದ ಅಲರ್ಜಿ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ, ಅಲ್ಲದೆ ಇದನ್ನು ಹಚ್ಚಿ ತೊಳೆದರೆ ಮುಖದಲ್ಲಿ ಅರಿಶಿಣ ಬಣ್ಣ ಕಾಣುವುದಿಲ್ಲ. ಪ್ರತೀದಿನ ಕಸ್ತೂರಿ ಅರಿಶಿಣ ಹಚ್ಚಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

1. ಮುಖದ ಬಿಳುಪು ಹೆಚ್ಚುವುದು
ಕಸ್ತೂರಿ ಅರಿಶಿಣ ಹಚ್ಚುತ್ತಾ ಬಂದರೆ ಮುಖದ ಬಿಳುಪು ಹೆಚ್ಚಿ, ತ್ವಚೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಮುಖಕಾಂತಿ ಹೆಚ್ಚಿಸುವ ಈ ಅರಿಶಿಣದ ಗುಣ ಯಾವ ಕ್ರೀಮ್ ನಲ್ಲೂ ಇಲ್ಲ.
2. ಸನ್ ಟ್ಯಾನ್ ತೆಗೆಯಲು ಸಹಕಾರಿ
ಬಿಸಿಲಿಗೆ ಹೋದರೆ ಸಾಕು ಸನ್ ಟ್ಯಾನ್ ಉಂಟಾಗುತ್ತದೆ. ಕಸ್ತೂರಿ ಅರಿಶಿಣ ಹಚ್ಚುವವರಿಗೆ ಸನ್ ಟ್ಯಾನ್ ನ ಸಮಸ್ಯೆ ಕಾಡುವುದಿಲ್ಲ. ಅರಿಶಿಣವನ್ನು ಇಡೀ ಮೈಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮೈಕಾಂತಿ ಕೂಡ ಹಚ್ಚುವುದು.
3. ಮೊಡವೆ
ಮೊಡವೆಯನ್ನು ಹೋಗಲಾಡಿಸುವ ಸಾಮರ್ಥ್ಯ ಈ ಅರಿಶಿಣಕ್ಕೆ ಇದೆ. ಹದಿಹರೆಯದವರು ಇದನ್ನು ಹಚ್ಚುವುದರಿಂದ ಮೊಡವೆ ಬರುವುದನ್ನು ತಡೆಗಟ್ಟಬಹುದು.
4. ತ್ವಚೆ ಅಲರ್ಜಿಗೆ
ಅರಿಶಿಣ ಪುಡಿಯನ್ನು ತೆಂಗಿನೆಣ್ಣೆ ಮಿಶ್ರ ಮಾಡಿ ಹಚ್ಚಿದರೆ ತ್ವಚೆ ತುರಿಕೆ, ದೇಹದ ದುರ್ವಾಸೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
5. ಮುಖದಲ್ಲಿರುವ ಕೂದಲನ್ನು ಹೋಗಲಾಡಿಸಲು
ಹೆಣ್ಣು ಮಕ್ಕಳ ಮುಖದಲ್ಲಿ ಕೂದಲಿದ್ದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಇದನ್ನು ಹಚ್ಚುವುದರಿಂದ ಮುಖದಲ್ಲಿರುವ ಕೂದಲನ್ನು ಸ್ವಾಭಾವಿಕವಾಗಿ ಹೋಗಲಾಡಿಸಬಹುದು.



Click it and Unblock the Notifications
