Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರ ಮುಖ ಮತ್ತು ತ್ವಚೆಯ ಆರೈಕೆ
ತ್ವಚೆ ಸುಂದರವಾಗಿರಬೇಕೆಂದು ಮಹಿಳೆಯರಷ್ಟೇ ಅಲ್ಲ ಪುರುಷರೂ ಬಯಸುತ್ತಾರೆ. ಪುರುಷರು ಶೇವ್ ಮಾಡುವುದರಿಂದ ಮುಖ ಗಡಸಾಗಿರುತ್ತದೆ. ಮತ್ತೆ ಕೆಲವರು ತ್ವಚೆಗೆ ಹೆಚ್ಚಿನ ಆರೈಕೆ ಮಾಡದೆ ಅದು ತನ್ನ ಹೊಳಪನ್ನು ಕಳೆದುಕೊಂಡಿರುತ್ತದೆ. ತ್ವಚೆ ಹೊಳಪಿನಿಂದ ಕೂಡಿದ್ದರೆ ಮುಖ ಆಕರ್ಷಕವಾಗಿ ಕಾಣುವುದು. ಈ ರೀತಿ ಆಕರ್ಷಕವಾಗಿ ಕಾಣಬಯಸುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ಶೇವ್ ಮಾಡಿದ ನಂತರ ಮುಖಕ್ಕೆ ಜೇನು ಹಚ್ಚಿ 10 ನಿಮಿಷದ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.
2. ಓಟ್ ಮೀಲ್ಸ್ ಅನ್ನು ಮಿಕ್ಸಿಯಲ್ಲಿ ಅರೆದು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಸ್ಕ್ರಬ್ ಮಾಡಬೇಕು. ಈ ರೀತಿ ವಾರಕ್ಕೊಮ್ಮೆ ಮಾಡಿದರೆ ಮಾಡಿದರೆ ಮುಖ ಹೊಳಪನ್ನು ಪಡೆಯುತ್ತದೆ.
3. ಮುಖದಲ್ಲಿ ರಂಧ್ರಗಳಿದ್ದರೆ ಎರಡು ಮೊಟ್ಟೆಯ ಬಿಳಿ ಹಾಕಿ ಅದಕ್ಕೆ ಒಂದು ಚಮಚ ನಿಂಬೆ ರಸ ಹಾಕಿ ಮಿಶ್ರ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ವಾರಕ್ಕೆ ಎರಡು ಮಾಡಿ ಮಾಡಿದರೆ ತ್ವಚೆ ಮೃದು ಮತ್ತು ಸುಂದರವಾಗಿ ಕಾಣುವುದು.
4. ಬೆವರು ವಾಸನೆಯನ್ನು ಹೋಗಲಾಡಿಸಲು ಸ್ನಾನ ಮಾಡುವ ನೀರಿಗೆ ಸೈಡರ್ ವಿನಿಗರ್ ಹಾಕಬೇಕು.
5. ಒಣ ತ್ವಚೆ ಉಂಟಾಗಿದ್ದರೆ ಬೆಣ್ಣೆ ಹಣ್ಣನ್ನು ಪೇಸ್ಟ್ ರೀತಿ ಮಾಡಿ ಅದನ್ನು ಮೈಗೆ ಹಚ್ಚಿ 1/2 ಗಂಟೆಯ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆದರೆ ತ್ವಚೆ ಮೃದುವಾಗುವುದು.
6. ಕಾಲು ಬೆವರಿ ಶೂ ವಾಸನೆ ಬರದಿರಲು ಸಾಕ್ಸ್ ಅಥವಾ ಶೂಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ನಂತರ ಹಾಕಿದರೆ ಶೂ ವಾಸನೆ ಬರುವುದಿಲ್ಲ.



Click it and Unblock the Notifications
