Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕಾಲಿಕ ಮುಪ್ಪು ತರುವ 3 ಆಹಾರಗಳು

ಸೌಂದರ್ಯದ ಬಗ್ಗೆ ಕಾಳಜಿ ಇರುವವರು ಈ ಕೆಳಗಿನ ಆಹಾರಗಳಿಂದ ದೂರವಿದ್ದರೆ ತ್ವಚೆಯ ತಾರುಣ್ಯದ ಕಳೆಯನ್ನು ಬೇಗನೆ ಕಳೆದುಕೊಳ್ಳುವುದಿಲ್ಲ.
1. ಸಕ್ಕರೆ: ಸಿ ಮತ್ತು ಹಾರ್ಬೋಹೈಡ್ರೇಟ್ ಆಹಾರಗಳನ್ನು ತಿಂದರೆ ದೇಹ ಅಷ್ಟೆ ಅಲ್ಲ ತ್ವಚೆ ಕೂಡ ತನ್ನ ಸೌಂದರ್ಯವನ್ನು ಕಳೆದುಕೊಳ್ಳ ತೊಡಗುತ್ತದೆ. ಇದು ತ್ವಚೆಯಲ್ಲಿರುವ ಕೊಲೆಜಿನ್ ಮತ್ತು ಇಲಾಸ್ಟಿನ್ ರಿಪೇರಿಗೆ ಅಡಚಣೆ ಉಂಟು ಮಾಡುವುದರಿಂದ ಮುಖದ ಕಾಂತಿ ಕಡಿಮೆಯಾಗುವುದು, ಇದರಿಂದ ಬೇಗನೆ ವಯಸ್ಸಾದಂತೆ ಕಾಣುವುದು.
2. ಅಧಿಕ ಕೊಬ್ಬಿನಂಶ: ಅಧಿಕ ಕೊಬ್ಬಿನಂಶವಿರುವ ಆಹಾರಗಳಿಂದ ದೂರವಾದರೆ ಆಕರ್ಷಕ ಮೈಕಟ್ಟು ಪಡೆಯಬಹುದು. ಕೊಬ್ಬಿನಂಶ ದೇಹದಲ್ಲಿ ಬೊಜ್ಜನ್ನು ಹೆಚ್ಚಿಸುತ್ತದೆ. ಇದರಿಂದ ಬೇಗನೆ ವಯಸ್ಸಾದವರಂತೆ ಕಾಣಿಸುವಿರಿ. ಕೊಬ್ಬಿನಂಶದಲ್ಲಿ ಒಮೆಗಾ 3 ಇರುವ ಕೊಬ್ಬಿನಂಶ ಆರೋಗ್ಯಕ್ಕೆ ಒಳ್ಳೆಯದು.
3. ಮದ್ಯ ಮತ್ತು ಧೂಮಪಾನ: ಮದ್ಯ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ತ್ವಚೆ ಒಣ ಮತ್ತು ಬಿಗಿಯಾಗುವುದು. ಧೂಮಪಾನದಿಂದ ತುಟಿಗಳು ಕಪ್ಪಾಗಿ ಮುಖದಲ್ಲಿ ಬೇಗನೆ ನೆರಿಗೆ ಬೀಳಲಾರಂಭಿಸುತ್ತದೆ.
ಆದ್ದರಿಂದ ತ್ವಚೆ ತಾರುಣ್ಯ ಕಾಂತಿಯಿಂದ ಹೊಳೆಯಬೇಕಾದರೆ ದಿನನಿತ್ಯ ವ್ಯಾಯಾಮ ಮತ್ತು ಉತ್ತಮವಾದ ಆಹಾರಕ್ರಮ ಪಾಲಿಸಬೇಕು.



Click it and Unblock the Notifications
