Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆ ಆರೈಕೆಗೆ 4 ಅತ್ಯುತ್ತಮವಾದ ಎಣ್ಣೆ

ಒಣ ತ್ವಚೆ ಸಮಸ್ಯೆಯನ್ನು ಈ ಕೆಳಗಿನ ಎಣ್ಣೆಗಳಿಂದ ವಿಧಾನಗಳಿಂದ ಪರಿಹರಿಸಬಹುದು. ಪ್ರತಿಯೊಬ್ಬರಿಗೂ ತಮ್ಮದೇ ಆದ ತ್ವಚೆ ಸಮಸ್ಯೆ ಇರುತ್ತದೆ. ಆದ್ದರಿಂದ ಈ ಕೆಳಗಿನ ಎಣ್ಣೆಗಳಲ್ಲಿ ನಿಮ್ಮ ತ್ವಚೆಗೆ ಯಾವುದು ಸೂಕ್ತ ಅನಿಸುತ್ತದೆಯೊ ಅದನ್ನು ಬಳಸುವುದು ಒಳ್ಳೆಯದು.
ಟೀ ಗಿಡದ ಎಣ್ಣೆ: ಟೀ ಗಿಡದ ಎಣ್ಣೆ ತ್ವಚೆಗೆ ತುಂಬಾ ಒಳ್ಳೆಯದು. ಇದರಲ್ಲಿ ಅಕಾಲಿಕ ನೆರಿಗೆಯನ್ನು ತಡೆಗಟ್ಟುವ ಸಾಮರ್ಥ್ಯಯಿದೆ. ಆದರೆ ಈ ಎಣ್ಣೆ ಸ್ವಲ್ಪ ದುಬಾರಿಯಾದ ಎಣ್ಣೆಯಾಗಿದೆ. ಆದ್ದರಿಂದ ಟೀ ಎಣ್ಣೆಗೆ ಪರ್ಯಾಯವಾದ ಎಣ್ಣೆ ತಯಾರಿಸಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
1. ದೇಹಕ್ಕೆ ಹಚ್ಚುವ ಎಣ್ಣೆಗೆ ಟೀ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ಮೈಗೆ ಹಚ್ಚಬಹುದು.
2. ಈ ರೀತಿ ಮಾಡಲು ತೆಂಗಿನೆಣ್ಣೆ ಅಥವಾ ಆಲೀವ್ ಎಣ್ಣೆಯನ್ನು ಬಳಸಿಕೊಳ್ಳಬಹುದು.
3. ಆಲೀವ್ ಎಣ್ಣೆಯನ್ನು ಬಿಸಿ ಮಾಡುವಾಗ ಒಂದು ಬಟ್ಟಲಿಗೆ ಎಣ್ಣೆ ಹಾಕಿ ಅದರಲ್ಲಿ ಟೀ ಎಲೆಯನ್ನು ಮುಳುಗಿಸಿದ ಬಟ್ಟಲನ್ನು ಕುದಿಯುವ ನೀರಿನಲ್ಲಿ ಇಟ್ಟು ಎಣ್ಣೆಯನ್ನು ಕುದಿಸಬೇಕು.
ಗಂಧದ ಎಣ್ಣೆ: ಗಂಧದ ಎಣ್ಣೆ ಸುಲಭವಾಗಿ ದೊರೆಯುವುದಿಲ್ಲ. ಆದರೆ ಶುದ್ಧ ಗಂಧದ ಎಣ್ಣೆಗೆ ಬದಲಾಗಿ , ತ್ವಚೆ ಕಾಂತಿ ಹೆಚ್ಚಿಸುವ ಈ ರೆಸಿಪಿಯನ್ನು ಮಾಡಿ ಹಚ್ಚಿದರೆ ಗಂಧದ ಎಣ್ಣೆಯ ಪ್ರಯೋಜನವನ್ನು ಪಡೆಯಬಹುದು.
1. ಗಂಧದ ಪುಡಿಯನ್ನು ಕೊಂಡುಕೊಳ್ಳಬೇಕು. ನಂತರ ಇದರಿಂದ ಗಂಧದ ಎಣ್ಣೆಯನ್ನು ಮೈಕ್ರೋವೇವ್ ನಲ್ಲಿ ತಯಾರಿಸಬೇಕು. ಗ್ಯಾಸ್ ನಲ್ಲಿ ತಯಾರಿಸಲು ಹೊರಟರೆ ಎಣ್ಣೆ ತುಂಬಾ ಬಿಸಿಯಾಗಿ ಗಂಧ ತನ್ನ ಸುವಾಸನೆಯನ್ನು ಕಳೆದುಕೊಳ್ಳುತ್ತದೆ.
2. ಮೊದಲಿಗೆ ಮೈಕ್ರೋವೇವ್ ಅನ್ನು 250 ಡಿಗ್ರಿ ಉಷ್ಣತೆವರೆಗೆ ಬಿಸಿ ಮಾಡಿರಬೇಕು. ಈಗ ಮೈಗೆ ಹಚ್ಚಲು ಬಳಸುವ ಎಣ್ಣೆಗೆ (ತೆಂಗಿನೆಣ್ಣೆಯಾದರೂ ಆಗಬಹುದು) ಗಂಧದ ಪುಡಿ ಹಾಕಿ ಬೆರೆಸಿ2-3 ನಿಮಿಷ ಬಿಸಿ ಮಾಡಿದರೆ ಸಾಕು. ಈ ಎಣ್ಣೆಯನ್ನು ಡಬ್ಬಿಯಲ್ಲಿ ಹಾಕಿ ದಿನಾ ಮೈಗೆ ತಿಕ್ಕಿ ಸ್ನಾನ ಮಾಡಿದರೆ ಮೈ ಕಾಂತಿ ಹೆಚ್ಚುವುದು.



Click it and Unblock the Notifications
