Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಅಂದ ಹೆಚ್ಚಿಸಲು ಆರ್ಯುವೇದದಲ್ಲಿದೆ ಸಪ್ತ ಮಾರ್ಗ
ಹಿಂದಿನ ಕಾಲದಲ್ಲಿ ಕಾಯಿಲೆಗಳನ್ನು ಗುಣಪಡಿಸಲು ಉಪಯೋಗಿಸುತ್ತಿದ್ದ ಆರ್ಯುವೇದ ಔಷಧಿಗಳು ಆಲೋಪತಿ ಬಂದ ಮೇಲೂ ತನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಕಾರಣವಿಷ್ಟೆ ಈ ಮದ್ದುಗಳಿಂದ ಯಾವುದೇ ಅಡ್ಡಪರಿಣಾಮವಿಲ್ಲ ಮತ್ತು ಕಾಯಿಲೆ, ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುವುದು. ಆರ್ಯುವೇದದ 7 ಬ್ಯೂಟಿ ಸೀಕ್ರೆಟ್ ಇಲ್ಲಿದೆ
ಸೌಂದರ್ಯ ಹೆಚ್ಚಿಸಲು ಅಥವಾ ಸೌಂದರ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ನಾವು ಆರ್ಯುವೇದಗಳಿಂದ ಪರಿಹಾರ ಕಂಡುಕೊಳ್ಳಬಹುದು. ತ್ವಚೆ ಸಮಸ್ಯೆ ನಿವಾರಿಸಲು ಹೆಚ್ಚಿನವರು ಆರ್ಯುವೇದ ಪದ್ಧತಿ ಅನುಸರಿಸಲು ಇಷ್ಟಪಡುತ್ತವೆ. ಪುರಾತನ ಸೌಂದರ್ಯ ಪದ್ಧತಿ, ಇಂದಿಗೂ ನಂ.1..
ಇಲ್ಲಿದೆ ನೋಡಿ ತ್ವಚೆ ರಕ್ಷಣೆಗೆ ಕೆಲ ಸರಳ ಉಪಾಯ:

ಅಕಾಲಿಕ ನೆರಿಗೆ ತಪ್ಪಿಸಲು
ದಿನಾವೂ ಹರಳಣ್ಣೆಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಮುಖ ತೊಳೆದರೆ ಮುಖದಲ್ಲಿ ಯೌವನದ ಕಳೆ ತುಂಬಾ ಕಾಲದವರೆಗೆ ಇರುತ್ತದೆ. ಅಕಾಲಿಕ ನೆರಿಗೆ ಸಮಸ್ಯೆ ಉಂಟಾಗುವುದಿಲ್ಲ.

ಕಲೆರಹಿತ ತ್ವಚೆ
ಕಲೆರಹಿತ ತ್ವಚೆಗಾಗಿ ದಿನಾ ಹಾಲಿನಲ್ಲಿ ಹತ್ತಿಯನ್ನು ಮುಳುಗಿಸಿ ಅದರಿಂದ ಮುಖವನ್ನು ಕ್ಲೆನ್ಸ್ ಮಾಡಬೇಕು.ಈ ರೀತಿ ಮಾಡಿದರೆ ಕಲೆ ರಹಿತ ತ್ವಚೆ ನಿಮ್ಮದಾಗುವುದು.

ಮಾಯಿಶ್ಚರೈಸರ್
ಮೊಟ್ಟೆಯ ಬಿಳಿ, ನಿಂಬೆ ಮತ್ತು ಕಿತ್ತಳೆ ರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

ಸ್ಕಿನ್ ಕಂಡೀಷನರ್
2 ಚಮಚ ಕೆನೆಗೆ 1/2 ಚಮಚ ಜೇನು ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಡಬೇಕು. ನಂತರ ಟವಲ್ ನೆನೆಸಿ ಅದರಿಂದ ಮುಖವನ್ನು ಉಜ್ಜಬೇಕು.

ಕಪ್ಪು ಚುಕ್ಕಿಗಳು
ಹಸಿ ಆಲೂಗೆಡ್ಡೆ ದಿನವೂ ಮುಖಕ್ಕೆ 10 ನಿಮಿಷ ಉಜ್ಜಿದರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.

ಮೃದುವಾದ ತ್ವಚೆ
ದಿನಾವೂ 10 ನಿಮಿಷ ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚುತ್ತಿದ್ದರೆ ತ್ವಚೆ ಮೃದುವಾಗುತ್ತದೆ.

ಮುಖದಲ್ಲಿರುವ ಬೇಡದ ಕೂದಲನ್ನು ಹೋಗಲಾಡಿಸಲು
ಸಾಸಿವೆ ಎಣ್ಣೆ, ಅರಿಶಿಣ ಮತ್ತು ಗೋಧಿ ಹಿಟ್ಟು ಈ ವಸ್ತುಗಳನ್ನು ಮಿಶ್ರ ಮಾಡಿ ಮುಖಕ್ಕೆ ತಿಕ್ಕಿದರೆ ಬೇಡದ ಕೂದಲನ್ನು ಹೋಗಲಾಡಿಸಬಹುದು.



Click it and Unblock the Notifications