Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ನಿರ್ಜೀವ ತ್ವಚೆಗೆ ನವಚೈತನ್ಯ ತುಂಬುವುದು ಹೇಗೆ?

ನಿರ್ಜೀವ ತ್ವಚೆಗೆ ನವಚೈತನ್ಯ ತುಂಬುವುದು ಹೇಗೆ?
* ಬಿಸಿ ನೀರಿನೊಂದಿಗೆ ಎಣ್ಣೆ ಮಸಾಜ್: ಉಗುರು ಬಿಸಿ ನೀರಿನೊಂದಿಗೆ ಯಾವುದಾದರೂ ಹೂವಿನ ಎಣ್ಣೆಯನ್ನು ಬೆರೆಸಿ ಮಸಾಜ್ ಮಾಡಿಕೊಂಡರೆ ಮುಖಕ್ಕೆ ತಕ್ಷಣವೇ ಹೊಳಪು ನೀಡುತ್ತದೆ. ಅಷ್ಟೇ ಅಲ್ಲ, ನಿಮ್ಮ ಮನಸ್ಸನ್ನೂ ತಕ್ಷಣವೇ ರಿಲ್ಯಾಕ್ಸ್ ಗೊಳಿಸುತ್ತದೆ.
* ಕೇಸರಿ ಮತ್ತು ತೆಂಗಿನ ಹಾಲು: ಕೇಸರಿ ಅತಿ ಪ್ರಾಚೀನ ಕಾಲದ ಸೌಂದರ್ಯವರ್ಧಕ. ತೆಂಗಿನ ಹಾಲಿಗೆ ಸ್ವಲ್ಪ ಕೇಸರಿ ಬೆರೆಸಿ 5 ನಿಮಿಷ ಕಾಯಿಸಿ ತಣ್ಣಗಾಗಿ ಸ್ವಲ್ಪ ಗಟ್ಟಿಯಾದ ನಂತರ ಹಚ್ಚಿಕೊಳ್ಳಬಹುದು.
* ಸೌತೆಕಾಯಿ, ಕಲ್ಲಂಗಡಿ ಮತ್ತು ಕೆನೆ: ಕೆಲವು ಬಾರಿ ಉಷ್ಣಾಂಶ ತ್ವಚೆಯಲ್ಲಿ ಉಂಟಾಗಿ ಮುಖ ನಿರ್ಜೀವದಂತೆ ಕಾಣುತ್ತದೆ. ಆದ್ದರಿಂದ ತ್ವಚೆಯಿಂದ ಉಷ್ಣಾಂಶದ ಅಂಶವನ್ನು ತೆಗೆಯಲು ಸೌತೆಕಾಯಿ, ಕಲ್ಲಂಗಡಿ ಮತ್ತು ಕೆನೆಯನ್ನು ಬೆರೆಸಿ ಹಚ್ಚಿಕೊಂಡು 10 ನಿಮಿಷ ಬಿಟ್ಟು ತೊಳೆದುಕೊಳ್ಳಬಹುದು.
* ಬಾಳೆಹಣ್ಣು, ಜೇನಿನ ಪ್ಯಾಕ್: ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಿದೆ. ಇದು ತ್ವಚೆಯಲ್ಲಿ ನೀರಿನಂಶ ಹೆಚ್ಚಿಸುತ್ತದೆ. ಬಾಳೆಹಣ್ಣನ್ನು ಎರಡು ಚಮಚ ಜೇನಿನೊಂದಿಗೆ ಬೆರೆಸಿ ಬಳಲಿದ ಮುಖಕ್ಕೆ ಹಚ್ಚಿಕೊಂಡರೆ ಚೈತನ್ಯ ತುಂಬುತ್ತದೆ.
* ಆಲೂಗಡ್ಡೆ, ನಿಂಬೆ ಮತ್ತು ಮೊಸರು: ಒಂದು ಚಮಚ ಆಲೂಗಡ್ಡೆ ರಸಕ್ಕೆ ನಿಂಬೆರಸ ಹಿಂಡಿ ಒಂದು ಚಮಚ ಮೊಸರನ್ನು ಬೆರೆಸಿ ಹಚ್ಚಿಕೊಂಡರೆ ತ್ವಚೆ ತಾಜಾ ಆಗಿರುತ್ತದೆ ಮತ್ತು ಬೆಳ್ಳಗಾಗುತ್ತದೆ.



Click it and Unblock the Notifications
