Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ತ್ವಚೆಗೆ ತಾರುಣ್ಯ ತುಂಬುತ್ತೆ ಎಳನೀರು

ಆದರೆ ಎಳನೀರಿಗೆ ಸರಿಸಾಟಿಯಾಗಿ ನಿಲ್ಲಲು ತಂಪು ಪಾನಿಯಗಳಿಗೆ ಸಾಧ್ಯವಿಲ್ಲ. ನೈಸರ್ಗಿಕವಾಗಿ ಸಿಗುವ ಎಳನೀರಿನಲ್ಲಿ ವಿಟಮಿನ್, ಖನಿಜಾಂಶ, ಕಾರ್ಬೋಹೈಡ್ರೇಟ್, ಎಂಜೈಮ್ಸ್, ಸೈಟೊನ್ಯೂಟ್ರಿಯೆಂಟ್ಸ್ ಹೀಗೆ ಇದರಲ್ಲಿರುವ ಅಂಶಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನುಸೇವಿಸಿದರೆ ಯಾವುದೆ ಅಡ್ಡಪರಿಣಾಮವಿಲ್ಲ. ಆದ್ದರಿಂದ ಕಾಯಿಲೆ ಬಂದಾಗ ಇದನ್ನು ಕುಡಿದರೆ ದೇಹಕ್ಕೆ ಚೈತ್ಯನ್ಯ ಬರುತ್ತದೆ.
ತ್ವಚೆ ಪೋಷಣೆಯಲ್ಲಿ ಕೂಡ ಎಳೆನೀರು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿ ಎಣ್ಣೆ ತ್ವಚೆಯವರಿಗೆ ಎಳನೀರು ತುಂಬಾ ಒಳ್ಳೆಯದು.
ತ್ವಚೆ ಪೋಷಣೆಗೆ ಎಳನೀರು:
1. ಇದರಲ್ಲಿರುವ ಸೈಟೊಕಿನ್ಸ್ ಮುಖವನ್ನು ತಾಜಾ ಮತ್ತು ಯೌವನದಿಂದ ಕಾಣುವಂತೆ ಮಾಡುತ್ತದೆ. ಎಳೆನೀರನ್ನು ನಿಂಬೆರಸದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ತ್ವಚೆ ಒಣಗುವುದನ್ನು ತಡೆಗಟ್ಟಬಹುದು.
2. ದಿನವೂ ಎಳನೀರು ಕುಡಿಯುವುದರಿಂದ ದೇಹದಲ್ಲಿ ರಕ್ತ ಸಂಚಲನಕ್ಕೆ ಸಹಾಯ ಮಾಡುತ್ತದೆ. ಇದನ್ನು ಕುಡಿಯುವುದರಿಂದ ಮುಖದಲ್ಲಿ ಇರುವ ಒತ್ತಡ ಮತ್ತು ದಣಿವು ಮಾಯವಾಗುತ್ತದೆ.
3. ಎಳನೀರು ಮುಖದಲ್ಲಿನ ಕಲೆಯನ್ನು ಹೋಗಲಾಡಿಸುತ್ತದೆ. ಎಳೆನೀರಿನಿಂದ ಮುಖ ತೊಳೆದು ಹಾಗೆ ಒಣಗಲು ಬಿಡಿ. ಈ ರೀತಿ 2-3 ಸಲ ಮಾಡಿ ನಂತರ ತಣ್ಣಿರಿನಿಂದ ಮುಖ ತೊಳೆಯಬೇಕು. ಈ ರೀತಿ ಮುಖಕ್ಕೆ ದಿನದಲ್ಲಿ 2-3 ಬಾರಿ ಹಾಕಿಕೊಂಡರೆ ಮೊಡವೆ ಕಲೆಗಳು ಮುಖದಲ್ಲಿ ಉಳಿಯುವುದಿಲ್ಲ.
4. ಮುಲ್ತಾನಿಮಿಟಿಗೆ ಎಳನೀರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖ ಹೆಚ್ಚು ಹೊಳಪನ್ನು ಹೊಂದುತ್ತದೆ.
5. ಎಳನೀರನ್ನು ಸ್ನಾನ ಮಾಡುವ ನೀರಿನೊಂದಿಗೆ ಬೆರೆಸಿದರೆ ಫಂಗಸ್ ಸೋಂಕು ಉಂಟಾಗುವುದಿಲ್ಲ.
6. ಎಳನೀರನ್ನು ಬಾಡಿಲೋಷನ್ ಜೊತೆ ಮಿಶ್ರ ಮಾಡಿ ಹಚ್ಚಿದರೆ ತ್ವಚೆ ಫೋಷಣೆಯನ್ನು ಮಾಡುತ್ತದೆ.



Click it and Unblock the Notifications
