Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹರೆಯದ ತ್ವಚೆಗೆ ಮುಪ್ಪಡರದಿರಲಿ: 6 ಸಲಹೆ

ವಯಸ್ಸಿನ ಛಾಯೆಯನ್ನು ತಡೆಯುವ ಆಹಾರಗಳನ್ನು ನೋಡೋಣ:
* ನಿಂಬೆ: ವಿಟಮಿನ್ ಸಿ ಹೇರಳವಿರುವ ನಿಂಬೆಯನ್ನು ಮೀರಿಸಲು ಯಾವುದರಿಂದಲೂ ಸಾಧ್ಯವಿಲ್ಲ. ನಿಂಬೆ ಒಳಗಿನಿಂದ ದೇಹವನ್ನು ಶುದ್ಧವಿರಿಸಿ ಬೊಜ್ಜು ಮತ್ತು ಕ್ಯಾಲೊರಿಯನ್ನು ಕರಗಿಸುತ್ತದೆ. ಇದು ತ್ವಚೆಯಲ್ಲಿನ ವಿಷಕಾರಿ ಅಂಶ ತೊಲಗಿಸಿ ತ್ವಚೆ ಶುಭ್ರವಾಗಿ ಗೋಚರಿಸುವಂತೆ ಮಾಡುತ್ತದೆ. ಬಿಸಿ ನೀರಿಗೆ ಕೆಲವು ಹನಿ ನಿಂಬೆರಸ ಬೆರೆಸಿ ದಿನಕ್ಕೊಂದು ಬಾರಿ ಕುಡಿದರೆ ಆರೋಗ್ಯವನ್ನು ಕಾಪಾಡುವುದರೊಂದಿಗೆ ವಯಸ್ಸನ್ನೂ ಮರೆಮಾಚುವಂತೆ ಮಾಡುತ್ತದೆ.
* ಕ್ಯಾರೆಟ್, ಸೌತೆ, ಹಸಿರು ತರಕಾರಿ: ಹೃದಯ, ಶ್ವಾಸಕೋಶ ಮತ್ತು ಜೀರ್ಣಕ್ರಿಯೆ ತೊಂದರೆಯುಳ್ಳವರಿಗೆ ಹಸಿರು ಪರಿಣಾಮಕಾರಿ ಟಾನಿಕ್. ವಿಟಮಿನ್ ಹೆಚ್ಚಿರುವ ಕ್ಯಾರೆಟ್ ಮತ್ತು ಸೌತೆಕಾಯಿ ಸೇವನೆಯಿಂದ ಕ್ರಮೇಣ ತ್ವಚೆ ಶುದ್ಧವಾಗುವುದು ನಿಮಗೇ ಗೋಚರಿಸುತ್ತದೆ. ಕ್ಯಾರೆಟ್ ಕಣ್ಣುಗಳಿಗೆ ಚೈತನ್ಯವಮ್ಮೂ ನೀಡುತ್ತದೆ.
* ದ್ರಾಕ್ಷಿ, ಸೇಬು, ಹಣ್ಣು: ವಯಸ್ಸಾದಂತೆ ಮುಖದ ಮೇಲೆ ರಾಚುವ ಸುಕ್ಕುಗಳನ್ನು ತಡೆಯಲು ದ್ರಾಕ್ಷಿ ತುಂಬಾ ಪರಿಣಾಮಕಾರಿ. ಸೇಬು ಕೂಡ ವಯಸ್ಸಿನ ಸಂಬಂಧಿ ಕಾಯಿಲೆಗಳನ್ನು ದೂರವಿರಿಸಿ ತ್ವಚೆ ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.
* ಬಾದಾಮಿ, ಸೂರ್ಯಕಾಂತಿ ಬೀಜ: ಒಣಬೀಜಗಳು ಮತ್ತು ಡ್ರೈ ಫ್ರೂಟ್ಸ್ ತ್ವಚೆಗೆ ಅವಶ್ಯಕವಿರುವ ಎಣ್ಣೆಯಂಶವನ್ನು ನೀಡುತ್ತದೆ. ಇವುಗಳಲ್ಲಿನ ವಿಟಮಿನ್ ಇ ತ್ವಚೆಗೆ ಕಾಂತಿ ನೀಡುವುದರೊಂದಿಗೆ ದೇಹವನ್ನೂ ಹಗುರಗೊಳಿಸುತ್ತದೆ.
* ಗ್ರೀನ್ ಟೀ: ಗ್ರೀನ್ ಟೀ ಸೇವನೆ ದೇಹಕ್ಕೆ ಶಕ್ತಿ ನೀಡಿ ರಿಲ್ಯಾಕ್ಸ್ ಮಾಡುವುದಷ್ಟೆ ಅಲ್ಲ, ದೇಹದಲ್ಲಿ ಅನವಶ್ಯಕ ತುಂಬಿಕೊಂಡ ಕೆಟ್ಟ ಬೊಜ್ಜನ್ನೂ ಕರಗಿಸುತ್ತದೆ. ಆರೋಗ್ಯಕರವಾಗಿರಲು ಮತ್ತು ಬೇಗ ವಯಸ್ಸಾಗದಂತೆ ಕಾಣಲು ಗ್ರೀನ್ ಟೀ ಹೆಚ್ಚು ಸಹಕಾರಿ.
* ನೀರು: ವೈದ್ಯರು, ಆಯುರ್ವೇದ, ಎಲ್ಲರೂ ಶಿಫಾರಸ್ಸು ಮಾಡುವ ಅಂಶವೆಂದರೆ ನೀರು ಸೇವನೆ. ನೀರು ಹೆಚ್ಚು ಕುಡಿದಷ್ಡೂ ದೇಹಕ್ಕೆ ಉಪಯುಕ್ತ. ನೀರು ದೇಹವನ್ನು ಒಳಗಿನಿಂದ, ಹೊರಗಿನಿಂದ, ಎಲ್ಲ ರೀತಿಯಿಂದಲೂ ಪೋಷಣೆ ನೀಡುತ್ತದೆ. ದಿನಕ್ಕೆ ಕನಿಷ್ಠ 6 ರಿಂದ 8 ಲೋಟ ನೀರನ್ನಾದರೂ ಸೇವಿಸಬೇಕು.
ಸೂಚನೆ: ಬೇಯಿಸಿದ, ಹುರಿದ ಆಹಾರಕ್ಕಿಂತ ಹಸಿಯಾದ ಪದಾರ್ಥಗಳೇ ಆರೋಗ್ಯಕ್ಕೆ ಪೂರಕ. ತರಕಾರಿಗಳನ್ನು ಬೇಯಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳೂ ನಾಶಗೊಳ್ಳುತ್ತವೆ ಎಂಬುದು ನಂಬಿಕೆ. ಆದ್ದರಿಂದ ನಿಮ್ಮ ಡಯಟ್ ನಲ್ಲಿ ಈ ಮೇಲಿನ ಆಹಾರಗಳಿದ್ದರೆ ನಿಮ್ಮ ಆರೋಗ್ಯದ ಗುಣಮಟ್ಟ ಹೆಚ್ಚುವುದರೊಂದಿಗೆ ತ್ವಚೆಯೂ ಹೊಳೆಯುತ್ತದೆ.



Click it and Unblock the Notifications
