Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಾಜೂಕಿನಂಥ ತ್ವಚೆ ಪಡೆಯಲು ನಾಲ್ಕು ಸಲಹೆ

ನಾಜೂಕಿನಂತಹ ತ್ವಚೆ ಪಡೆಯಲು ಇಲ್ಲಿದೆ ನಾಲ್ಕು ಸುಲಭ ಮಾರ್ಗ.
1. ಮುಲ್ತಾನಿ ಮಿಟ್ಟಿ: ತ್ವಚೆಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಟಾಕ್ಸಿನ್ ಗಳನ್ನು ಹೀರಿಕೊಂಡು ತಾಜಾ ತ್ವಚೆಯನ್ನು ಒದಗಿಸುತ್ತದೆ. 1 ಗಂಟೆ ಮೊಸರಿನೊಂದಿಗೆ ಮುಲ್ತಾನಿ ಮಿಟ್ಟಿ ಕಲೆಸಿ ಅದಕ್ಕೆ ಪುದೀನಾ ಎಲೆ ಸೇರಿಸಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಡಬೇಕು. ಬೆಚ್ಚಗಿನ ನೀರಿನಲ್ಲಿ ಅದ್ದಿದ ಟವಲ್ ನಿಂದ ಮುಖವನನ್ನು ಒರೆಸಿಕೊಳ್ಳಬೇಕು. ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು. ನಂತರ ತ್ವಚೆಯಲ್ಲಿ ತಾಜಾತನ ಮೂಡಿದ್ದನ್ನು ನೀವೇ ಕಾಣಬಹುದು. ಮೊಡವೆಗಳಿದ್ದರೆ ಬೇವಿನ ಎಲೆಯನ್ನೂ ಬೆರೆಸಿಕೊಳ್ಳಬಹುದು.
2. ಟೊಮೊಟೊ: ಟೊಮೊಟೊದಲ್ಲಿರುವ ಹುಳಿಯಾದ ಅಂಶ ತ್ವಚೆತ ರಂಧ್ರಗಳನ್ನು ಸರಿಪಡಿಸಿ ಬ್ಲಾಕ್ ಹೆಡ್ ಗಳನ್ನು ತೊಲಗಿಸಲು ಸಹಾಯ ಮಾಡುತ್ತದೆ. ಟೊಮೊಟೊವನ್ನು ಕತ್ತರಿಸಿ ಮುಖಕ್ಕೆ ಮಸಾಜ್ ಮಾಡಿದರೆ ಬ್ಲಾಕ್ ಹೆಡ್ ಗಳು ಕಡಿಮೆಗೊಳ್ಳುತ್ತವೆ. ಅಷ್ಟೇ ಅಲ್ಲ ಇದನ್ನು ಹಾಲಿನ ಕೆನೆಯೊಂದಿಗೆ ಬೆರೆಸಿ 10 ನಿಮಿಷ ಮುಖಕ್ಕೆ ಹಚ್ಚಿದರೆ ಬಿಸಿಲಿನಿಂದ ಕಪ್ಪಗಾಗಿರುವ ತ್ವಚೆಗೂ ಕಾಂತಿ ಮರಳಿಸುತ್ತದೆ.
;3. ಮೊಸರು: ಟೊಮೊಟೊದಂತೆಯೇ ಮೊಸರಿನಲ್ಲಿರುವ ಹುಳಿ ಅಂಶ ತ್ವಚೆಯನ್ನು ಶುಭ್ರಗೊಳಿಸುವಲ್ಲಿ ಹೆಚ್ಚು ಸಹಕಾರಿ. ಮೊಸರಿನೊಂದಿಗೆ ಕೊತ್ತಂಬರಿ ಸೊಪ್ಪಿನ ಪೇಸ್ಟನ್ನು ಮತ್ತು ಓಟ್ ಪೌಡರನ್ನು ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದುಕೊಂಡರೆ ತ್ವಚೆಯಲ್ಲಿನ ನಿರ್ಜೀವ ಕಣಗಳನ್ನು ಹೋಗಲಾಡಿಸುತ್ತದೆ.
;4.ನಿಂಬೆ ಮತ್ತು ಕಿತ್ತಳೆ ಸಿಪ್ಪೆ: ಇವುಗಳಲ್ಲಿನ ಸಿಟ್ರಸ್ ಅಂಶ ತ್ವಚೆಯ ಕಾಂತಿಗೆ ಹೆಚ್ಚು ಉಪಯುಕ್ತ. ಸ್ಕ್ರಬ್ ನಂತೆ ಕೆಲಸ ನಿರ್ವಹಿಸುವ ಈ ಸಿಪ್ಪೆಗಳನ್ನು ಬೇಕಾದಾಗ ಬಳಸಿಕೊಳ್ಳಬಹುದು. ಈ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಬೇಕೆಂದಾಗ ಹಾಲು ಮತ್ತು ಸ್ವಲ್ಪ ಓಟ್ ಪೌಡರ್ ನೊಂದಿಗೆ ಬೆರೆಸಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಬೇಕು. ಇದು ಸೌಂದರ್ಯಕ್ಕಷ್ಟೇ ಅಲ್ಲ ಔಷಧೀಯ ಗುಣಗಳೂ ಇದರಲ್ಲಿರುವ ಕಾರಣ ಇದರ ಬಳಕೆಯಿಂದ ದ್ವಿಗುಣ ಲಾಭ ಪಡೆಯಬಹುದು.



Click it and Unblock the Notifications
