ಕಣ್ಣಿನ ಹುಬ್ಬುಗಳ ಅಂದ-ಚೆಂದ ಹೆಚ್ಚಿಸಲು ಸರಳ ಮನೆಮದ್ದುಗಳು

Posted By: Hemanth Amin
Subscribe to Boldsky

ಫ್ಯಾಷನ್ ಲೋಕವೇ ಹಾಗೆ. ಹೀಗಿರುವಂತಹ ಟ್ರೆಂಡ್, ಫ್ಯಾಷನ್ ಒಂದು ಗಂಟೆ ಬಳಿಕ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಈ ಲೋಕದಲ್ಲಿರುವಂತಹ ಸಾವಿರಾರು ಮಂದಿ ಹೊಸ ಹೊಸ ಫ್ಯಾಷನ್ ಗಳನ್ನು ಹುಡುಕುತ್ತಾ ಇರುತ್ತಾರೆ. ಹೀಗೆ ಕೆಲವು ವರ್ಷಗಳ ಮೊದಲು ಕಣ್ಣಿನ ಹುಬ್ಬನ್ನು ತುಂಬಾ ತೆಳುವಾಗಿಸಿಕೊಳ್ಳುವಂತಹ ಟ್ರೆಂಡ್ ಆರಂಭವಾಗಿತ್ತು.

ಪ್ರತೀ ಫ್ಯಾಷನ್ ನಂತೆ ಇದು ಕೂಡ ಕೆಲವು ಸಮಯದಲ್ಲೇ ಕಳೆದುಹೋಯಿತು. ಮತ್ತೆ ದಪ್ಪು ಹುಬ್ಬಿನ ಫ್ಯಾಷನ್ ಕಾಣಲು ಆರಂಭವಾಯಿತು. ಇದರಿಂದ ತೆಳು ಹುಬ್ಬು ಮಾಡಿಕೊಂಡಿದ್ದವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಮತ್ತೆ ದಪ್ಪಗಿನ ಹುಬ್ಬು ಬೆಳೆಸುವುದು ಸ್ವಲ್ಪ ಕಷ್ಟಕರವಾಗಿತ್ತು. ಆದರೆ ನಿಮಗೆ ದಪ್ಪಗಿನ ಕಣ್ಣಿನ ಹುಬ್ಬು ಬೇಕೆನ್ನುವ ಆಸೆಯಿದ್ದರೆ ನೀವು ಖಂಡಿತವಾಗಿಯೂ ಬೋಲ್ಡ್ ಸ್ಕೈಯ ಈ ಲೇಖನ ಓದಲೇ ಬೇಕು.

ಕಣ್ಣಿನ ಹುಬ್ಬುಗಳನ್ನು ಸುಂದರವಾಗಿರಿಸಲು ಸಲಹೆಗಳು

ಈ ಮನೆಮದ್ದುಗಳು ತೆಳು ಹುಬ್ಬನ್ನು ದಪ್ಪಗೆ ಮಾಡುವುದು. ಈ ಮನೆಮದ್ದುಗಳಲ್ಲಿ ವಿಟಮಿನ್ ಗಳು, ಪೋಷಕಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಕಣ್ಣಿನ ಹುಬ್ಬಿನ ಬೆಳವಣಿಗೆಗೆ ಸಹಕಾರಿ. ಇದು ಕೂದಲಿನ ಕೋಶಗಳಿಗೆ ಪೋಷಣೆ ನೀಡಿ ಹುಬ್ಬುಗಳ ಸಂಪೂರ್ಣ ಆರೈಕೆ ಮಾಡುವುದು. ಕಣ್ಣಿನ ಹುಬ್ಬುಗಳನ್ನು ದಪ್ಪ ಮಾಡುವಂತಹ ಪೆನ್ಸಿಲ್ ಗಳಿಗೆ ತಿಲಾಂಜಲಿ ಇಡಲು ಈ ಮನೆಮದ್ದುಗಳನ್ನು ದೈನಂದಿನ ಸೌಂದರ್ಯವರ್ಧಕಗಳಲ್ಲಿ ಬಳಸಿಕೊಳ್ಳಿ. ನಿಮಗೆ ಸುಂದರ ಹಾಗೂ ದಪ್ಪಗಿನ ಹುಬ್ಬು ನೀಡುವಂತಹ ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳಿ....

ಹರಳೆಣ್ಣೆ

ಹರಳೆಣ್ಣೆ

*ಹರಳೆಣ್ಣೆಯಲ್ಲಿ ಕ್ಯೂ ಟಿಪ್ ನ್ನು ಮುಳುಗಿಸಿ

*ಈ ನೈಸರ್ಗಿಕ ಎಣ್ಣೆಯನ್ನು ನಿಮ್ಮ ಕಣ್ಣುಗಳ ಹುಬ್ಬಿನ ಸುತ್ತಲು ಹಚ್ಚಿ.

*40-45 ನಿಮಿಷ ಕಾಲ ಹಾಗೆ ಬಿಡಿ.

*ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ.

*ದಿನದಲ್ಲಿ ಒಂದು ಸಲ ಬಳಸಿದರೆ ಹುಬ್ಬಿನ ಕೂದಲು ಬೆಳೆಯುವುದು.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

* 1/2 ಚಮಚ ಮೆಂತೆ ಕಾಳುಗಳನ್ನು ಹುಡಿ ಮಾಡಿ 2 ಚಮಚ ನೀರು ಹಾಕಿ ಅದರ ಪೇಸ್ಟ್ ಮಾಡಿಕೊಳ್ಳಿ.

*ಈ ಪೇಸ್ಟ್ ನ್ನು ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ.

*40-45 ನಿಮಿಷ ಕಾಲ ಹಾಗೆ ಬಿಡಿ.

*ಬಳಿಕ ಉಗುರುಬೆಚ್ಚಗಿನ ನೀರು ಮತ್ತು ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ.

* ವಾರದಲ್ಲಿ 3-4 ಸಲ ಇದನ್ನು ಬಳಸಿದರೆ ಫಲಿತಾಂಶ ಖಚಿತ.

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ

*ವಿಟಮಿನ್ ಇ ಕ್ಯಾಪ್ಸೂಲ್ ನಿಂದ ಎಣ್ಣೆ ಹೊರತೆಗೆಯಿರಿ.

* ಇದನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ.

*ರಾತ್ರಿಯಿಡಿ ಹಾಗೆ ಬಿಡಿ.

*ಬೆಳಗ್ಗೆ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಪರಿಣಾಮಕಾರಿ ಫಲಿತಾಂಶಕ್ಕಾಗಿ ದಿನನಿತ್ಯ ಇದನ್ನು ಬಳಸಿ.

ಅಲೋವೆರಾ ಲೋಳೆ

ಅಲೋವೆರಾ ಲೋಳೆ

*ಹುಬ್ಬುಗಳಿಗೆ ತಾಜಾ ಅಲೋವೆರಾದ ಲೋಳೆ ಹಚ್ಚಿಕೊಳ್ಳಿ.

*ರಾತ್ರಿಯಿಡಿ ಹಾಗೆ ಬಿಡಿ.

*ಬೆಳಗ್ಗೆ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಉತ್ತಮ ಫಲಿತಾಂಶಕ್ಕಾಗಿ ದಿನಿನಿತ್ಯ ಹೀಗೆ ಮಾಡಿ.

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿ

* ಪೆಟ್ರೋಲಿಯಂ ಜೆಲ್ಲಿಯನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ.

*15-20 ನಿಮಿಷ ಕಾಲ ಹಾಗೆ ಬಿಡಿ.

*ಲಘು ಕ್ಲೆನ್ಸರ್ ಮತ್ತು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

* ವೇಗದ ಫಲಿತಾಂಶ ಪಡೆಯಲು ವಾರದಲ್ಲಿ 2-3 ದಿನ ಇದನ್ನು ಬಳಸಿ.

ಹಾಲು

ಹಾಲು

*ಹಸಿ ಹಾಲಿನಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ.

*ಇದನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ.

*20-25 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಪರಿಣಾಮಕಾರಿ ಫಲಿತಾಂಶಕ್ಕಾಗಿ ದಿನದಲ್ಲಿ 2-3 ಸಲ ಹೀಗೆ ಮಾಡಿ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

*ಹುಬ್ಬುಗಳಿಗೆ ತೆಂಗಿನ ಎಣ್ಣೆಯನ್ನು ಸರಿಯಾಗಿ ಮಸಾಜ್ ಮಾಡಿ.

*ಒಂದು ಗಂಟೆ ಕಾಲ ಹುಬ್ಬುಗಳಲ್ಲಿ ಎಣ್ಣೆಯು ಹಾಗೆ ಇರಲಿ.

*ಲಘು ಕ್ಲೆನ್ಸರ್ ಮತ್ತು ನೀರು ಬಳಸಿ ತೊಳೆಯಿರಿ.

* ಹುಬ್ಬುಗಳು ದಪ್ಪಗೆ ಬೆಳೆಯಲು ದಿನದಲ್ಲಿ ಎರಡು ಸಲ ಇದನ್ನು ಬಳಸಿ.

ಈರುಳ್ಳಿ ರಸ

ಈರುಳ್ಳಿ ರಸ

*ಒಂದು ಈರುಳ್ಳಿ ರಸ ತೆಗೆಯಿರಿ.

*ಈ ರಸದಲ್ಲಿ ಕ್ಯೂ ಟಿಪ್ ಮುಳುಗಿಸಿ

* ಹುಬ್ಬುಗಳಿಗೆ ಸರಿಯಾಗಿ ಈ ರಸ ಹಚ್ಚಿಕೊಳ್ಳಿ.

*20 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರು ಮತ್ತು ಕ್ಲೆನ್ಸರ್ ಬಳಸಿ ತೊಳೆಯಿರಿ.

*ಹುಬ್ಬಿನ ಕೂದಲು ಬೇಗನೆ ಬೆಳೆಯಬೇಕು ಎಂದಾದರೆ ವಾರದಲ್ಲಿ 4-5 ಸಲ ಇದನ್ನು ಬಳಸಲು ಮರೆಯಬೇಡಿ.

 ಆಲಿವ್ ತೈಲ

ಆಲಿವ್ ತೈಲ

*ಹುಬ್ಬುಗಳಿಗೆ ಆಲಿವ್ ತೈಲದಿಂದ ಮಸಾಜ್ ಮಾಡಿ.

*40-45 ನಿಮಿಷ ಕಾಲ ಹಾಗೆ ಬಿಡಿ.

*ಮೇಕಪ್ ರಿಮೂವರ್ ಬಳಸಿ ಎಣ್ಣೆ ತೆಗೆಯಿರಿ.

*ಉಗುರುಬೆಚ್ಚಗಿನ ನೀರಿನಿಂದ ಹುಬ್ಬುಗಳನ್ನು ತೊಳೆಯಿರಿ.

*ನಿಮಗೆ ಬೇಕಿರುವ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಳ್ಳಿ.

English summary

Remedies You Can Use To Grow Back Your Eyebrows

A few years ago, thin eyebrows were in trend and a majority of women over-plucked their brows at that time. But this beauty trend couldn’t stand the test of time and very soon thick and fuller brows came back into fashion. If you are someone who has over-plucked arches and wish to grow them back, then today’s post is perfect for you. As today at Boldsky, we’ve curated a list of effective remedies that can help you plump up thin eyebrows.