Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
2013ರಲ್ಲಿ ಟ್ರೆಂಡ್ ನಲ್ಲಿರುವ ಲಿಪ್ ಸ್ಟಿಕ್ ಕಲರ್ಸ್
ನಾವು ನ್ಯೂ ಫ್ಯಾಷನ್ ಎಂದು ಮಾಡುತ್ತಿರುವ ಎಷ್ಟೋ ಸ್ಟೈಲ್ ಗಳು ಹಳೆ ಫ್ಯಾಷನ್ ಗಳಾಗಿವೆ. ಉದಾಹರಣೆಗೆ ಸ್ಲೀವ್ ಲೆಸ್ ಅಥವಾ ಮೆಗಾ ಸ್ಲೀವ್ ಬ್ಲೌಸ್ ಅಥವಾ ಡ್ರೆಸ್ ಆ ಫ್ಯಾಷನ್ ಹಳೆಯ ಫ್ಯಾಷನ್ ಗಳಾಗಿವೆ. ಮೇಕಪ್ ಗಳಲ್ಲೂ ಹಿಂದಿನ ಫ್ಯಾಷನ್ ೀಗ ನ್ಯೂ ಫ್ಯಾಷನ್ ಆಗಿವೆ. ಕಣ್ಣಿಗೆ ಗಾಢವಾಗಿ ಕಣ್ಣು ಕಪ್ಪು ಹಾಕುವುದು ರೆಟ್ರೋ ಸ್ಟೈಲ್ ಆಗಿತ್ತು . ಈಗ ಅವು ಮತ್ತೆ ಮರುಕಳಿಸಿದೆ.
ಲಿಪ್ ಸ್ಟಿಕ್ ಅಷ್ಟೇ ಕಳೆದ ವರ್ಷ ನೋಡಿದರೆ ಸ್ವಲ್ಪ ತೆಳು ಬಣ್ಣದ ಲಿಪ್ ಸ್ಟಿಕ್ ಫ್ಯಾಷನ್ ಆಗಿತ್ತು. ಅದರೆ ರೆಟ್ರೋ ಸ್ಟೈಲ್ ನ ಗಾಢ ಬಣ್ಣದ ಲಿಪ್ ಸ್ಟಿಕ್ ಫ್ಯಾಷನ್ ಮರುಕಳಿಸಿದೆ. ಆದರೆ ಗಾಢ ಬಣ್ಣದ ಲಿಪ್ ಸ್ಟಿಕ್ ಹಾಕುವವರು ತಮಗೆ ಸೂಕ್ತವಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲಾ ಬಣ್ಣದ ಲಿಪ್ ಸ್ಟಿಕ್ ಗಳು ಎಲ್ಲರ ಮುಖಕ್ಕೆ ಒಪ್ಪುವುದಿಲ್ಲ. ತೆಳು ಬಣ್ಣದ ಲಿಪ್ ಸ್ಟಿಕ್ ಆದರೆ ಎಲ್ಲಾ ರೀತಿಯ ಮೈ ಬಣ್ಣದವರಿಗೆ ಒಪ್ಪುತ್ತದೆ.
2013ರಲ್ಲಿ ಟ್ರೆಂಡ್ ನಲ್ಲಿರುವ ಲಿಪ್ ಸ್ಟಿಕ್ ಬಣ್ಣಗಳ ಬಗ್ಗೆ ಈ ಕೆಳಗೆ ಚಿತ್ರಮಾಹಿತಿ ನೀಡಲಾಗಿದೆ:

ನ್ಯೂಡ್ ಲಿಪ್ ಸ್ಟಿಕ್
ಈ ಲಿಪ್ ಸ್ಟಿಕ್ ಎಲ್ಲರಿಗೂ ಒಪ್ಪುತ್ತದೆ. ನ್ಯಾಚುರಲ್ ಲುಕ್ ಬೇಕೆಂದು ಬಯಸುವವರು ಈ ಬಣ್ಣದ ಲಿಪ್ ಸ್ಟಿಕ್ ಹಚ್ಚುವುದು ಒಳ್ಳೆಯದು.

ಕಡು ಕೆಂಪು
ಈ ಕಡು ಕೆಂಪು ಬಣ್ಣದ ಲಿಪ್ ಸ್ಟಿಕ್ ಎಲ್ಲರಿಗೆ ಅಷ್ಟೊಂದು ಚೆಂದ ಕಾಣುವುದಿಲ್ಲ. ಈ ಬಣ್ಣದ ಲಿಪ್ ಸ್ಟಿಕ್ ಹಾಕುವುದಾದರೆ ಮೈ ಬಣ್ಣ ಬೆಳ್ಳಗಿರಬೇಕಾಗುತ್ತದೆ, ಡ್ರೆಸ್ಸಿಂಗ್ ಕೂಡ ತುಂಬಾ ಮಾಡರ್ನ್ ಆಗಿ ಡ್ರೆಸ್ ಮಾಡಿರಬೇಕು. ಇಲ್ಲದಿದ್ದರೆ ಈ ರೀತಿ ಲಿಪ್ ಸ್ಟಿಕ್ ಹಾಕಿದರೆ ಆಕರ್ಷಕವಾಗಿ ಕಾಣುವುದಿಲ್ಲ.

ವೈನ್ ರೆಡ್
ಈ ಲಿಪ್ ಸ್ಟಿಕ್ ತುಂಬಾ ಗಾಢ ಬಣ್ಣದಲ್ಲಿರುತ್ತದೆ. ಶೈನಿ ಕೆಂಪು ಬಣ್ಣದ ಲಿಪ್ ಸ್ಟಿಕ್ ಹಾಕಬೇಕೆಂದು ಬಯಸುವುದಾದರೆ ಈ ಲಿಪ್ ಸ್ಟಿಕ್ ಹಾಕಬಹುದು.

ಲೈಟ್ ಪಿಂಕ್
ಸಾಂಪ್ರದಾಯಕವಾಗಿ ಡ್ರೆಸ್ ಮಾಡುವುದಾದರೆ ಲೈಟ್ ಪಿಂಕ್ ಬಣ್ಣದ ಲಿಪ್ ಸ್ಟಿಕ್ ಹಚ್ಚಿದರೆ ಆಕರ್ಷಕವಾಗಿ ಕಾಣುವಿರಿ. ಇದು ಫಾರ್ಮಲ್ ಡ್ರೆಸ್ ಗೂ ಒಪ್ಪುತ್ತದೆ.

ಗ್ಲೋಸಿ ರೆಡ್
ಇದು ತುಂಬಾ ಸ್ಟೈಲಿಷ್ ಆದ ಲಿಪ್ ಸ್ಟಿಕ್ ಬಣ್ಣವಾಗಿದೆ. ಕಪ್ಪು ಬಣ್ಣದ ಮಾಡರ್ನ್ ಡ್ರೆಸ್ ಗೆ ಈ ಬಣ್ಣ ಚೆನ್ನಾಗಿ ಒಪ್ಪುತ್ತದೆ.

ಪ್ಲಮ್
ಈ ಬಣ್ಣ ಕೂಡ ಈಗ ಟ್ರೆಂಡ್ ನಲ್ಲಿದ್ದು ನೋಡಲು ಶೈನಿಯಾಗಿದ್ದು ಸೆಕ್ಸಿ ಲುಕ್ ನೀಡುತ್ತದೆ.

ಗಬಲ್ ಗಮ್ ಲಿಪ್ ಸ್ಟಿಕ್
ಇದು ತುಂಬಾ ಲೈಟ್ ಕಲರ್ ಲಿಪ್ ಸ್ಟಿಕ್ ಆಗಿದ್ದು ಎಲ್ಲಾ ಡ್ರೆಸ್ ಗೂ ಚೆನ್ನಾಗಿ ಒಪ್ಪುತ್ತದೆ ಹಾಗೂ ಸರಳ ಸುಂದರಿಯಾಗಿ ಕಾಣುವಿರಿ.

ಚೆರ್ರಿ ರೆಡ್
ಚೆರ್ರಿ ರೆಡ್ ಕೂಡ ನ್ಯೂ ಟ್ರೆಂಡ್ ಆಗಿದ್ದು ಇದು ಫ್ಯಾಷನಬಲ್ ಡ್ರೆಸ್ ಧರಿಸಿದಾಗ ಮಾತ್ರ ಹಾಕಲು ಸೂಕ್ತ. ಸರಳವಾದ ಡ್ರೆಸ್ ಗೆ ನ್ಯೂಡ್ ಬಣ್ಣದ ಲಿಪ್ ಸ್ಟಿಕ್ , ಪಿಂಕ್ ಲಿಪ್ ಸ್ಟಿಕ್ ಚೆನ್ನಾಗಿ ಒಪ್ಪುತ್ತವೆ.



Click it and Unblock the Notifications
