ಮಸಾಜ್ ನ ಎಣ್ಣೆ ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಮಸಾಜ್ ಎಲ್ಲರಿಗೂ ಪ್ರಿಯವೇ. ದೇಹವನ್ನು ಮಸಾಜ್ ಮಾಡುವ ಎಣ್ಣೆಯನ್ನು ನೀವು ಆರಿಸಲು ಹೋದರೆ ನಿರಾಶರಾಗಿ ಮರಳುವ ಸಂದರ್ಭವೇ ಹೆಚ್ಚು. ಯಾಕೆಂದರೆ ಮಸಾಜ್ ತೈಲಗಳಲ್ಲಿ ಸಾಕಷ್ಟು ವಿಧಗಳಿದ್ದು, ಇವು ನಿಮ್ಮಲ್ಲಿ ಗೊಂದಲವನ್ನು ಮೂಡಿಸಬಹುದು. ಈ ಎಣ್ಣೆಗಳ ವಿವರಗಳನ್ನು ಪರಿಶೀಲಿಸಿದಾಗ ಇದು ಕಾಯಿಯಿಂದ ತಯಾರಿಸಿದ್ದೋ, ಬೀಜದಿಂದಲೋ ಎಂಬುದು ಗೊತ್ತಾಗುತ್ತದೆ. ಆಲಿವ್ ಎಣ್ಣೆಯನ್ನೂ ಮಸಾಜ್ ಗೆ ಬಳಸುತ್ತಾರೆ.

ಪ್ರಾಣಿಜನ್ಯ ತೈಲಗಳ ಬಳಕೆಯೂ ಇದ್ದು, ಮಸಾಜ್‌ ಗಾಗಿ ಎಮುವಿನಿಂದ ಪಡೆದ ತೈಲವೂ ಲಭ್ಯವಿದೆ. ಈ ತೈಲಗಳ ಜತೆ ಯಾವುದಾದರೂ ಕ್ರೀಮು, ಘನ ಅಥವಾ ದ್ರವ ರೂಪದ ಔಷಧೀ ಗುಣವಿರುವ ಉತ್ಪನ್ನಗಳು ಬೇಕಾ ಎಂದೂ ಅಂಗಡಿಯವನು ಕೇಳಬಹುದಾಗಿದ್ದು, ನಿಮ್ಮನ್ನು ಮತ್ತಷ್ಟು ಗೊಂದಲಕ್ಕೀಡು ಮಾಡುತ್ತದೆ. ಜತೆಗೆ ಪರಿಮಳ ಯುಕ್ತವಾದ, ಅಥವಾ ಪರಿಮಳ ರಹಿತವಾದ ಉತ್ಪನ್ನಗಳೂ ಮಾರುಕಟ್ಟೆಯಲ್ಲಿವೆ.

How to Choose a Massage Oil

ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು? ಅಷ್ಟು ಸುಲಭವಲ್ಲ, ಯಾವುದೋ ಒಂದನ್ನು ತಂದು ಮೈಗೆ ಉಜ್ಜಿಕೊಂಡರಾಯ್ತು ಅಂದುಕೊಂಡರೆ ಮಸಾಜ್‌ನ ಅಷ್ಟೂ ಖುಷಿಗಳನ್ನು ಪಡೆಯುವುದಕ್ಕೆ ಸಾದ್ಯವಿಲ್ಲ. ಅಂತಿಮವಾಗಿ ಯಾವ ವಾತಾವರಣ ಇದೆ, ನಿಮ್ಮ ಆರೋಗ್ಯ ಮತ್ತು ದೇಹದ ಪ್ರಕೃತಿ ಹೇಗಿದೆ? ಮತ್ತು ನೀವು ಮಸಾಜ್ ಮಾಡಿಸಿಕೊಳ್ಳುತ್ತಿರುವುದರ ಉದ್ದೇಶವೇನು ಎಂಬುದರ ಮೇಲೆ ತೈಲದ ಆಯ್ಕೆ ನಿಂತಿದೆ.

ಆಯ್ಕೆಯ ಕೆಲವು ಹಂತಗಳು:

1. ಮೊದಲು ನಿಮಗೆ ಯಾವ ರೀತಿಯ ಮಸಾಜ್ ಬೇಕೆಂಬುದನ್ನು ನಿರ್ಧರಿಸಿಕೊಳ್ಳಿ. ಆಲಿವ್ ಎಣ್ಣೆ, ಭಾರವಾದ ತೈಲಗಳ ಮಸಾಜ್ ಬೇಕೋ ಅಥವಾ ಕಡಿಮೆ ಘರ್ಷಣೆಯ, ಉತ್ತಮ ಕಾರ್ಯ ನಿರ್ವಹಿಸುವ ಮಸಾಜ್‌ ಬೇಕೋ ಎಂದು ಮೊದಲೇ ತೀರ್ಮಾನಿಸಿ. ಹೆಚ್ಚು ಘರ್ಷಣೆಯ ತೈಲಗಳು ಬೇಗ ಜಾರುತ್ತವೆ, ಮತ್ತು ಚರ್ಮವೂ ಇದನ್ನು ಬೇಗ ಹೀರಿಕೊಳ್ಳುವುದಿಲ್ಲ. ದ್ರಾಕ್ಷಿ ಬೀಜದ ಎಣ್ಣೆಯಂಥ ಹಗುರವಾದ ಎಣ್ಣೆಗಳು ಅಥವಾ ಬೇರಾವುದೇ ಕ್ರೀಮುಗಳನ್ನು ಚರ್ಮ ಬಹುಬೇಗನೇ ಹೀರಿಕೊಳ್ಳುತ್ತದೆ. ಆದರೆ ಇವುಗಳ ಅಂಗಾಂಶ ಕಡಿಮೆ ಕಡಿಮೆ ಇರುತ್ತದೆ. ಇವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. ಹೆಚ್ಚು ಒತ್ತಡ ಹಾಕದೇ ಈ ಎಣ್ಣೆ ಜಾರಿಹೋಗುವುದನ್ನು ತಡೆಯಲು ನೀವು ಪ್ರಯತ್ನಿಸುವುದರಿಂದ ಬೇಗನೇ ಚರ್ಮ ಇದನ್ನು ಹೀರಿಕೊಳ್ಳುತ್ತದೆ.

2. ಮಸಾಜ್ ಮಾಡಿಸಿಕೊಳ್ಳುವ ಸಮಯ ಮತ್ತು ಸ್ಥಳವನ್ನು ಮೊದಲೇ ನಿರ್ಧರಿಸಿ. ಬಟ್ಟೆ ಧರಿಸಿ ಹೊರಗಡೆ ಸುತ್ತಾಡುವ ಸಂಭವವಿದ್ದರೆ, ಬೇಗನೇ ಚರ್ಮ ಹೀರಿಕೊಳ್ಳುವಂತ ತೈಲದಿಂದ ಮಸಾಜ್ ಮಾಡಿಸಿಕೊಳ್ಳಿ. ದಪ್ಪವಾದ ಎಣ್ಣೆಗಳು ಬಹುಬೇಗ ಚರ್ಮದ ಆಳಕ್ಕಿಳಿಯಲಾರವು. ಹಾಗಾಗಿ ತೆಳ್ಳಗಿನ ತೈಲದಿಂದ ಮಸಾಜ್‌ ಮಾಡಿಸಿಕೊಳ್ಳಿ. ಇಲ್ಲವಾದರೆ ತೈಲವೆಲ್ಲಾ ಬಟ್ಟೆಯೇ ಹೀರಿಕೊಳ್ಳುತ್ತದೆ. ಇದರಂದ ಬಟ್ಟೆಯೂ ಹಾಳು, ತೈಲವೂ ನಷ್ಟವಾಗುತ್ತದೆ. ಸ್ನಾನದ ವೇಳೆ ಮಸಾಜ್ ಮಾಡಿಸಿಕೊಳ್ಳುವುದಾದರೆ ಯಾವ ತೈಲವಾದರೂ ಸರಿ. ನಿಮಗೆ ದಪ್ಪವಾದ ತೈಲದ ಮಸಾಜ್ ಪ್ರಿಯವಾಗಿದ್ದಾದರೆ, ದಿನಾಂತ್ಯದ ವೇಳೆಯಲ್ಲಿ,ಇನ್ನು ಹೊರಗಡೆಯ ಸುತ್ತಾಟ ಇಲ್ಲವೆಂದಾದ ವೇಳೆಯಲ್ಲಿ ಮಾಡಿಕೊಳ್ಳಿ.

3.ಮಸಾಜ್ ಮಾಡಿಸಿಕೊಳ್ಳುವುದಕ್ಕೂ ಪೂರ್ವದಲ್ಲಿ ಅದು ತೀರಾ ಖಾಸಗಿಯಾಗಿರುವಂತೆ ನೋಡಿಕೊಳ್ಳಿ. ನಿಮಗೆ ಪರಿಮಳಯುಕ್ತ ಮಸಾಜ್‌ ಮಾಡಿಸಿಕೊಳ್ಳುವ ಆಸೆ ಇದ್ದಿರಬಹುದು. ಆದರೆ ನಿಮ್ಮ ಅರೋಮಾ ಥೆರಪಿಯ ಈ ಆಸೆ ಮತ್ಯಾರಿಗೋ ತೊಂದರೆ ಕೊಡಬಾರದಲ್ಲಾ, ಹಾಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ. ಲ್ಯಾವೆಂಡರ‍್ ನಂತಹ ಲಗುವಾದ ಸುವಾಸನೆಯನ್ನು ಸಹಿಸಿಕೊಂಡರೂ, ಕೆಲವರಿಗೆ ಅದು ಕಿರಿಕಿರಿ ಉಂಟು ಮಾಡಬಹುದು. ಎಷ್ಟೋ ಜನರಿಗೆ ವಾಸನೆಗಳನ್ನು ಸಹಿಸಿಕೊಳ್ಳುವುದಕ್ಕೆ ಆಗುವದಿಲ್ಲ. ಇನ್ನು ಕೆಲವರಿಗೆ ವಾಸನೆಗಳೆಂದರೆ ಅಲರ್ಜಿ ಇರುತ್ತದೆ. ಇಂಥವರ ನಡುವೆ ನೀವು ಪರಿಮಳದ ಮಸಾಜ್ ಮಾಡಿಸಿಕೊಂಡು ನಡೆದಾಡಿದರೆ ಅವರಿಗೂ ಕಿರಿಕಿರಿಯಾಗುತ್ತದೆ. ಹಾಗಾಗಿ ಮಸಾಜ್‌ ಮಾಡಿಸಿಕೊಳ್ಳುವಾಗ ವೃತ್ತಿಪರ ತೈಲವನ್ನು ಆರಿಸಿಕೊಳ್ಳಿ. ಇದರಿಂದ ಬರೆಯವರಿಗೆ ಕಿರಿಕಿರಿಯಾಗುವುದು ತಪ್ಪುತ್ತದೆ. ಅಷ್ಟಕ್ಕೂ ಪರಿಮಳದ ಮಸಾಜ್ ಮಾಡಿಸಿಕೊಳ್ಳುವ ಇಚ್ಛೆ ನಿಮ್ಮನ್ನು ಪ್ರಭಲವಾಗಿ ಕಾಡುತ್ತಿದ್ದರೆ, ನೀವೊಬ್ಬರೇ ಮನೆಯಲ್ಲಿದ್ದಾಗ ಮಸಾಜ್ ಮಾಡಿಕೊಳ್ಳಬಹುದು.

4. ಎಲ್ಲಾ ತೈಲಗಳು ಎಲ್ಲರಿಗೂ ಒಗ್ಗಲಾರದು. ಕೆಲವರ ಚರ್ಮ ಇದನ್ನು ಪ್ರತಿರೋಧಿಸಬಹುದು. ಹಾಗಾಗಿ ಮಸಾಜ್ ತೈಲ ಕೊಳ್ಳುವುದಕ್ಕೂ ಮುನ್ನ ಅದರ ಅಲರ್ಜಿ ಗುಣಗಳ ಬಗ್ಗೆ ತಿಳಿದುಕೊಳ್ಳಿ. ಕೆಲವರಿಗೆ ಸುಗಂಧದ ಅಲರ್ಜಿ ಇರುತ್ತದೆ. ಇನ್ನು ಕೆಲವರಿಗೆ ಕಾಯಿ, ಅಥವಾ ಬೀಜಗಳಿಂದ ತಯಾರಿಸಿದ ತೈಲಗಳು ಅಲರ್ಜಿಯಾಗಿರುತ್ತದೆ. ಹೀಗಿರುವಾಗ ಅವುಗಳನ್ನು ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಬಾದಾಮಿ ಮತ್ತು ಕ್ಯಾಮೋಮೈಲ್ ತೈಲಗಳು ಅಲರ್ಜಿಕಾರಕಗಳು ಎಂದು ಗೊತ್ತಾದಾಗ ಅವುಗಳನ್ನು ಬಳಸಿದರೆ ದುಷ್ಪರಿಣಾಮಗಳೇ ಜಾಸ್ತಿ. ನೀವೊಮ್ಮೆ ಬಳಸಿದ ತೈಲ ಯಾವುದೇ ತರದ ಅಲರ್ಜಿಯನ್ನು ಉಂಟು ಮಾಡಿದ್ದರೆ, ಅದರ ವಿವರಗಳುಳ್ಳ ಚೀಟಿಯನ್ನು ನೋಡಿ, ಅದರ ಪ್ರಮಾಣವನ್ನು ನೆನಪಿಟ್ಟುಕೊಳ್ಳಿ. ಮುಂದೆ ಮತ್ತೆ ಅದೇ ಪ್ರಮಾಣದ ತೈಲ ಕೊಳ್ಳುವುದರಿಂದ ಬಚಾವಾಗಹುದು.

5. ತೈಲ ಆರಿಸಿಕೊಳ್ಳುವಾಗ ಅದರೊಳಗಿನ ಔಷಧೀಯ ಗುಣಗಳತ್ತಲೂ ನಿಮ್ಮ ಗಮನ ಹರಿಸಿ. ಕೆಲವು ಮಸಾಜ್ ತೈಲಗಳು ಉತ್ತಮ ಔಷಧೀಯ ಗುಣಗಳನ್ನೂ ಹೊಂದಿದ್ದು, ಕರ್ಪೂರ, ಪೆಪ್ಪರ್ ಮುಂತಾದವುಗಳನ್ನು ಒಳಗೊಂಡಿರುತ್ತವೆ. ಇವು ಉರಿಯೂತವನ್ನು, ನೋವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿರುತ್ತವೆ. ಕೆಲವರಿಗೆ ಪ್ರಾಣಿಜನ್ಯ ತೈಲ ಚರ್ಮದ ಕೆಲವು ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಆಟ ಆಡುವಾಗ ಆದ ಗಾಯ ಅಥವಾ ನೋವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರೆ, ಸಾಮಾನ್ಯ ತೈಲಕ್ಕಿಂತ ಔಷಧೀಯ ಗುಣಗಳುಳ್ಳ ತೈಲವೇ ಹೆಚ್ಚು ಪರಿಣಾಮಕಾರಿ. ನೀವು ಸೂಕ್ಷ್ಮ ಚರ್ಮದವರಾಗಿದ್ದರೆ, ಅಥವಾ ತೈಲಗಳ ಅಲರ್ಜಿಯನ್ನು ಹೊಂದಿದವರಾಗಿದ್ದರೆ, ಸಾಧಾರಣ ತೈಲವನ್ನೇ ಬಳಸುವುದು ಒಳ್ಳೆಯದು. ಇದರ ಪರಿಣಾಮ ನೀವು ಮಸಾಜ್ ಮಾಡಿಸಿಕೊಳ್ಳುವ ತಂತ್ರದ ಮೇಲೂ ಇದೆ.

ಒಂದಿಷ್ಟು ಸಲಹೆಗಳು:

ವೃತ್ತಿಪರ ಮಸಾಜ್ ಚಿಕಿತ್ಸಕರ ಬಳಿ ಹೋಗುವುದರಿಂದ ನೀವು ಪದೇ ಪದೇ ತೈಲವನ್ನು ಖರೀದಿಸುವ ತಲೆನೋವಿನಿಂದ ಬಚಾವಾಗಬಹುದು. ಯಾಕೆಂದರೆ ಅವರು ಸಗಟಿನಲ್ಲಿ ತೈಲಗಳನ್ನು ಖರೀದಿಸಿ, ಸಂಗ್ರಹಿಸಿಟ್ಟುಕೊಳ್ಳುತ್ತಾರಾದ್ದರಿಂದ ಕಡಿಮೆ ಬೆಲೆಯಲ್ಲಿ ಅವರಿಗೆ ಲಭ್ಯವಾಗುತ್ತದೆ. ನೀವು ಇವರ ಬಳಯೇ ತೈಲಗಳನ್ನು ಆಯ್ದುಕೊಂಡರೆ, ನಿಮ್ಮ ಹಣವೂ ಉಳಿಯುತ್ತದೆ. ಅವುಗಳ ಬಳಸುವ ವಿಧಾನ ಹಾಗೂ ಉತ್ತಮ ಫಲಿತಾಂಶಗಳನ್ನು ಪಡೆಯುವ ಬಗ್ಗೆ ಸಾಕಷ್ಟು ಸಲಹೆಗಲೂ ಸಿಗುತ್ತವೆ.

X
Desktop Bottom Promotion