Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಣ್ಣಿನ ಸುತ್ತಲಿನ ಕಪ್ಪು ಕಲೆಗಳಿಗೆ ಇಲ್ಲಿದೆ ಶಾಶ್ವತ ಪರಿಹಾರ..!
ಕಣ್ಣಿನ ಕೆಳಗಿನ ಕಪ್ಪು ಕಲೆಗಳು ಪುರುಷ- ಮಹಿಳೆಯರು ಸೇರಿದಂತೆ ಎಲ್ಲರಿಗೂ ಇರುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳು ಇದೇ ಕಾರಣಕ್ಕೆ ಬರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಗೆಜೆಟ್‌ಗಳ ಅತಿಯಾದ ಬಳಕೆ, ನಮ್ಮ ಜೀವನ ಶೈಲಿಯು ಇದಕ್ಕೆ ಕಾರಣವಿರಬಹುದು.
ಹೌದು, ಈ ಡಾರ್ಕ್ ಸರ್ಕಲ್‌ನಿಂದ ಮುಕ್ತಿ ಪಡೆಯಲು ಜನ ನಾನ ತರಹದ ಕ್ರೀಮ್ ಬಳಸುತ್ತಾರೆ, ಚಿಕಿತ್ಸೆಯ ಮೊರೆ ಹೊಗುತ್ತಾರೆ. ಆದ್ರೆ ಏನು ಪ್ರಯೋಜನ ಆಗೋದಿಲ್ಲ. ನಾವು ನಿಮಗೆ ಇವತ್ತು ಸಿಂಪಲ್ ಟಿಪ್ಸ್ ಹೇಳಿಕೊಡ್ತೀವಿ. ಈ ಹೋಮ್ ರೆಮಿಡಿಗಳನ್ನು ಬಳಸಿದ್ರೆ ಖಂಡಿತ ನೀವು ಡಾರ್ಕ್ ಸರ್ಕಲ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೀರಿ.

1. ಆಲೂಗಡ್ಡೆ
ಆಲೂಗಡ್ಡೆಯಲ್ಲಿ ಅಧಿಕ ಪ್ರಮಾಣದ ಪೋಷಕಾಂಶ ಹಾಗೂ ಬ್ಲಿಚಿಂಗ್ ಮಾಡುವ ವಿಶೇಷ ಗುಣಗಳಿದೆ. ಇದು ನಿಮ್ಮ ಕಣ್ಣಿನ ಕೆಳಭಾಗವನ್ನು ಪೋಷಿಸಿ ಕಪ್ಪು ಕಲೆಗಳನ್ನು ಕಡಿಮೆ ಗೊಳಿಸುತ್ತದೆ. ಅಲೂಗಡ್ಡೆಯನ್ನು ಸಣ್ಣಗೆ ವೃತ್ತಾಕಾರದಲ್ಲಿ ಹೆಚ್ಚಿ ಎರಡು ಕಣ್ಣಿನ ಕೆಳಗಡೆ ಹದಿನೈದು ನಿಮಿಷಗಳ ಕಾಲ ಇಟ್ಟುಕೊಳ್ಳಿ. ಅಥವಾ ಅಲೂಗಡ್ಡೆ ಜ್ಯೂಸ್ ತಯಾರಿಸಿ ಅದನ್ನು ಕಾಟನ್‌ಲ್ಲಿ ಅದ್ದಿ ಕಣ್ಣಿನ ಪೂರ್ಣ ಭಾಗವನ್ನು ಆವರಿಸುವಂತೆ ಇಟ್ಟುಕೊಳ್ಳಿ.
2. ಟೊಮೆಟೊ ಹಾಗೂ ಲಿಂಬೆ ಹಣ್ಣು ಬಳಸಿ
ಟೊಮೆಟೊ ಹಾಗೂ ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದೆ. ಇದು ಚರ್ಮವನ್ನು ಬಿಗಿಗೊಳಿಸಿ ಹೊಳೆಯುವಂತೆ ಮಾಡುತ್ತದೆ. ಈ ಎರಡರ ಜ್ಯೂಸ್ ಅನ್ನು ಸೇರಿಸಿ ಹಚ್ಚುವುದರಿಂದ ಡಾರ್ಕ್ ಸರ್ಕಲ್ ಕಡಿಮೆಯಾಗುವುದು ಮಾತ್ರವಲ್ಲದೇ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಟೊಮೆಟೊ ಹಾಗೂ ಲಿಂಬೆ ಹಣ್ಣಿನ ಜ್ಯೂಸ್ ಅನ್ನು ಮಿಶ್ರಣ ಮಾಡಿ ಕಣ್ಣಿನ ಕಪ್ಪುಕಲೆ ಇರುವ ಭಾಗಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಇಟ್ಟು ಆ ನಂತರ ತೊಳೆಯಿರಿ.
3. ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ ಅಂಶವಿದೆ. ಇದು ಹಾನಿಗೊಳಗಾದ ಚರ್ಮದ ಕೋಶಗಳನ್ನು ಪರಿಣಾಮಕಾರಿಯಾಗಿ ಸರಿಪಡಿಸುತ್ತದೆ. ತೆಂಗಿನ ಎಣ್ಣೆಯು ಉರಿಯೂತದ ವಿರೋಧಿಯಾಗಿದ್ದು, ಕಣ್ಣುಗಳ ಕೆಳಗಿರುವ ಯಾವುದೇ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4. ಗ್ರೀನ್ ಟೀ
ಗ್ರೀನ್ ಟೀ ಕಣ್ಣಿನ ಸುತ್ತಲಿನ ಕಪ್ಪು ಕಲೆಗಳಿಗೆ ಪರಿಣಾಮಕಾರಿ ಮನೆಮದ್ದು ಅಂತಾನೇ ಹೇಳಬಹುದು. ಕಣ್ಣಿನ ಕಪ್ಪು ಕಲೆಗಳಿಗೆ ಮುಖ್ಯ ಕಾರಣ ಅಂಗಾಂಶಗಳಲ್ಲಿ ಹೆಚ್ಚುವರಿ ದ್ರವ ಸಂಗ್ರಹಣೆಯಾಗಿರುವುದು. ಹಸಿರು ಚಹಾದಲ್ಲಿರುವ ಕೆಫೀನ್ ಈ ದ್ರವವನ್ನು ಹರಿಸುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಪರಿಣಾಮಕಾರಿಯಾಗಿ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒದ್ದೆಯಾದ ಗ್ರೀನ್ ಟೀ ಬ್ಯಾಗ್ ಅನ್ನು ಹದಿನೈದು ನಿಮಿಷಗಳ ಕಾಲ ನಿಮ್ಮ ಕಣ್ಣಿನ ಮೇಲೆ ಇರಿಸಿ. ಕೇವಲ ಒಂದೇ ಬಳಕೆಯಲ್ಲಿ ಉತ್ತಮ ಫಲಿತಾಂಶ ಕಾಣಬಹುದು.
5. ಬಾದಾಮಿ
ಬಾದಾಮಿ ಕಪ್ಪು ಕಲೆಗಳ ನಿವಾರಣೆಗೆ ಪರಿಣಾಮಕಾರಿ ಔಷಧಿಯಾಗಿದೆ. ಇದು ಕಪ್ಪು ಕಲೆಗಳನ್ನು ತೆಗೆದು ಹಾಕಿ ಹೊಳೆಯುವ ಬಣ್ಣವನ್ನು ಪಡೆಯಲು ಸಹಾಯಕಾರಿಯಾಗಿದೆ. ಬಾದಾಮಿಯಲ್ಲಿ ವಿಟಮಿನ್ ಇ, ವಿಟಮಿನ್ ಕೆ ಅಂಶ ಅಧಿಕಾವಾಗಿದ್ದು, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಪ್ರತಿದಿನ ರಾತ್ರಿ ಬಾದಾಮಿ ಎಣ್ಣೆಯನ್ನು ಹಚ್ಚಿ ಕಣ್ಣಿನ ಸುತ್ತ ಮಸಾಜ್ ಮಾಡುವುದರಿಂದ ಕಪ್ಪು ಕಲೆಯನ್ನು ತೊಲಗಿಸಬಹುದು.
6. ಗುಲಾಬಿ ನೀರು (ರೋಸ್ ವಾಟರ್)
ರೋಸ್ ವಾಟರ್‌ನಲ್ಲಿ ಚರ್ಮದ ಹೈಡ್ರೇಟಿಂಗ್ ಗುಣ ಲಕ್ಷಣಗಳನ್ನು ಹೊಂದಿದೆ. ಇದು ಶುಷ್ಕ ಮತ್ತು ಹಾನಿಗೊಳಗಾದ ಚರ್ಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಡಾರ್ಕ್ ಸರ್ಕಲ್‌ಗೆ ಪರಿಣಾಮಕಾರಿಯಾದ ಪರಿಹಾರವಾಗಿದೆ. ರಾತ್ರಿ ಮಲಗುವ ಮೊದಲು ಹತ್ತಿಯನ್ನು ರೋಸ್ ವಾಟರ್‌ನಲ್ಲಿ ಅದ್ದಿ ಕಣ್ಣಿನ ಮೇಲ್ಭಾಗದಲ್ಲಿ ಹಾಕಿರಿ. ಹತ್ತು ನಿಮಿಷದ ನಂತರ ತೊಳೆಯಿರಿ.
7. ಹಸಿ ಹಾಲು
ಹಸಿ ಹಾಲು ಡಾರ್ಕ್ ಸರ್ಕಲ್ ತೊಲಗಿಸಲು ಪರಿಣಾಮಕಾರಿ ಔಷಧಿಯಾಗಿದೆ. ಹಸಿ ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡಲು ಸಹಕರಿಸುತ್ತದೆ. ನಿತ್ಯವು ಹಸಿ ಹಾಲಿನಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ ಕಣ್ಣಿನ ಸುತ್ತ ಹತ್ತುನಿಮಿಷಗಳ ಕಾಲ ಇಡಿ. ಖಂಡಿತ ಎರಡು ವಾರಗಳ ನಂತರ ಉತ್ತಮ ಫಲಿತಾಂಶ ಪಡೆಯುತ್ತೀರಿ.
ಈ ವಿಧಾನಗಳನ್ನು ನಿತ್ಯ ಅನುಸರಿಸೋದ್ರಿಂದ ನೀವು ಡಾರ್ಕ್ ಸರ್ಕಲ್ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಪಡೆಯಬಹುದು.



Click it and Unblock the Notifications



