Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಕಪ್ಪು ಕಲೆ, ಮೊಡವೆ, ಡ್ರೈ ಸ್ಕಿನ್ ಹೀಗೆ ಎಲ್ಲಾ ತ್ವಚೆ ಸಮಸ್ಯೆಗೆ ಕಡಲೆ ಹಿಟ್ಟಿನ ಪವರ್‌ಫುಲ್ ಫೇಸ್‌ಪ್ಯಾಕ್
ನಮ್ಮ ಅಜ್ಜಿ, ಮುತ್ತಜ್ಜಿಯವರು ನಮ್ಮಂತೆ ಫೇಶಿಯಲ್, ಕ್ರೀಮ್ ಬಳಸುತ್ತಿರಲಿಲ್ಲ, ಅವರ ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಬಳಸಿ ತಮ್ಮ ಸೌಂದರ್ಯ ಕಾಪಾಡುತ್ತಿದ್ದರು.
ಅದನ್ನುಈಗಲೂ ಫಾಲೋ ಮಾಡುವವರು ಇದ್ದಾರೆ, ಹೀಗೆ ಫಾಲೋ ಮಾಡುವವರು ಅದರ ಪ್ರಯೋಜನಗಳನ್ನು ಕಂಡು ಕೊಂಡಿದ್ದಾರೆ. ಅಂಥ ಸೌಂದರ್ಯವರ್ಧಕಗಳಲ್ಲೊಂದು ಕಡಲೆಹಿಟ್ಟು.
ಕಡಲೆ ಹಿಟ್ಟು ಮುಖದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸುತ್ತದೆ, ಎಣ್ಣೆಯಂಶ ಹೋಗಲಾಡಿಸುತ್ತದೆ, ಎಕ್ಸ್‌ಫೋಲೆಟ್ ಮಾಡಲು ಇದನ್ನು ಬಳಸಬಹುದು. ಕಡಲೆಹಿಟ್ಟು ಬಳಸುವುದರಿಂದ ಮುಖದ ಕಾಂತಿ ಹೆಚ್ಚಾಗುವುದು.

ಅದಲ್ಲದೆ ಕೆಲವರ ಮುಖದಲ್ಲಿ ಬೇಡ ಕೂದಲಿರುತ್ತದೆ, ಆ ಕೂದಲನ್ನು ಕೂಡ ಹೋಗಲಾಡಿಸಲು ಇದು ತುಂಬಾನೇ ಸಹಕಾರಿ.
ನಾವಿಲ್ಲಿ ನಿಮಗೆ ಕಡಲೆಹಿಟ್ಟಿನ ಫೇಸ್‌ಪ್ಯಾಕ್ ರೆಸಿಪಿ ನೀಡಿದ್ದೇವೆ, ಇದನ್ನು ಬಳಸಿ ನಿಮ್ಮ ಸೌಂದರ್ಯ ವೃದ್ಧಿಸಬಹುದು ನೋಡಿ:
ಮುಖದಲ್ಲಿ ಕಪ್ಪು ಕಲೆಗಳಿದ್ದರೆ
ಒಂದು ಚಮಚ ಲೋಳೆಸರ, ಒಂದು ಚಮಚ ಕಡಲೆಹಿಟ್ಟು ಮಿಶ್ರ ಮಾಡಿ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಹೀಗೆ ಪ್ರತಿದಿನ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ಕಪ್ಪುಕಲೆಗಳು ಮಾಯವಾಗುವುದು.
ಮೊಡವೆ ಸಮಸ್ಯೆ ಇದೆಯೇ?
ಎರಡು ಚಮಚ ಕಡಲೆಹಿಟ್ಟು, ಅದಕ್ಕೆ ಸ್ವಲ್ಪ ಅರಿಶಿಣಪುಡಿ, ಸ್ವಲ್ಪ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟ ಮೇಲೆ ಮುಖ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡಿ, ಮೊಡವೆ ಕಡಿಮೆಯಾಗುವುದು.
ಮುಖ ತುಂಬಾ ಎಣ್ಣೆ-ಎಣ್ಣೆಯಾಗುವುದೇ?
ಎರಡು ಚಮಚ ಮುಲ್ತಾನಿ ಮಿಟಿ, 1 ಚಮಚ ಕಡಲೆ ಹಿಟ್ಟು, ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ಮುಖ ತೊಳೆಯಿರಿ.
ಈ ರೀತಿ ವಾರದಲ್ಲಿ 2-3 ಬಾರಿ ಮಾಡಿದರೆ ಜಿಡ್ಡಿನಂಶ ಕಡಿಮೆಯಾಗುವುದು.
ಮುಖದಲ್ಲಿ ನೆರಿಗೆ ತಡೆಗಟ್ಟಲು
2 ಚಮಚ ಕಡಲೆಹಿಟ್ಟು, ಒಂದು ಟೊಮೆಟೊ ಹಣ್ಣಿನ ರಸದ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ನಂತರ ಮುಖ ತೊಳೆಯಿರಿ.
30 ವರ್ಷದ ಬಳಿಕ ಈ ರೀತಿ ಮಾಡಿದರೆ ಮುಖದ ನೆರಿಗೆ ತಡೆಗಟ್ಟಬಹುದು.
ಮುಖ ತುಂಬಾ ಡ್ರೈಯಾಗಿದ್ದರೆ
ಹಣ್ಣಾದ ಬಾಳೆಹಣ್ಣು ತೆಗೆದು ಕಿವುಚಿ ಅದಕ್ಕೆ ಕಡಲೆಹಿಟ್ಟು, ಸ್ವಲ್ಪ ಹಾಲು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ.
ಮುಖದ ರಂಧ್ರ ಮರೆಮಾಚಲು
ಒಂದು ಮೊಟ್ಟೆಯ ಬಿಳಿಗೆ , ಅರ್ಧ ಚಮಚ ಜೇನು, 1 ಚಮಚ ಕಡಲೆ ಹಿಟ್ಟು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಿರಿ.
ಹೀಗೆ ವಾರದಲ್ಲಿ ಎರಡು ಬಾರಿ ಮಾಡಿ.
ಬ್ಲ್ಯಾಕ್ ಹೆಡ್ಸ್‌ಗೆ
ಒಂದು ಚಿಕ್ಕ ತುಂಡು ಪಪ್ಪಾಯಿ ಹಣ್ಣು, 1 ಚಮಚ ಕಡಲೆ ಹಿಟ್ಟು , ಸ್ವಲ್ಪ ರೋಸ್ ವಾಟರ್ ತೆಗೆದು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಒಂದು ಬಾರಿ ಮಾಡಿದರೆ ಸಾಕು ಬ್ಲ್ಯಾಕ್ ಹೆಡ್ಸ್ ಇರಲ್ಲ.
ಸ್ಕಿನ್ ಪಿಗ್ಮೆಂಟೇಷನ್
ಒಂದು ಮೊಟ್ಟೆಯ ಬಿಳಿಗೆ ಒಂದು ಚಮಚ ಕಡಲೆಹಿಟ್ಟು, ಅರ್ಧ ಚಮಚ ಜೇನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಿರಿ.
ಈ ರೀತಿ ವಾರದಲ್ಲಿ 3-4 ಬಾರಿ ಮಾಡಿದರೆ ಪಿಗ್ಮೆಂಟೇಷನ್ ಕಡಿಮೆಯಾಗುವುದು.



Click it and Unblock the Notifications
