Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಈ 7 ಕೆಟ್ಟ ಅಭ್ಯಾಸಗಳಿಂದಾಗಿಯೇ ಕೂದಲು ಉದುರುವ ಸಮಸ್ಯೆ ಬರುವುದಂತೆ!
ಕೂದಲು ಉದುರುವ ಸಮಸ್ಯೆಯು ಇಂದಿನ ದಿನಗಳಲ್ಲಿ ಸಾಮಾನ್ಯವೆನ್ನುವಂತಾಗಿದೆ. ಇದು ಮಹಿಳೆಯರೇ ಆಗಲಿ, ಪುರುಷರೇ ಆಗಲಿ ಕೂದಲು ಉದುರುವಿಕೆ ಸಮಸ್ಯೆಯು ಇರುವುದು. ಅದರಲ್ಲೂ ಕಲುಷಿತ ನೀರು, ಆಹಾರ ಮತ್ತು ಒತ್ತಡದಿಂದಾಗಿ ಕೂದಲು ಉದುರುವಿಕೆ ಸಮಸ್ಯೆಯು ಬರುವುದು. ಇದಕ್ಕಾಗಿ ಕೆಲವೊಂದು ಪರಿಹಾರವನ್ನು ಕಂಡುಕೊಳ್ಳಬೇಕು. ಯಾಕೆಂದರೆ ಕೂದಲು ಉದುರುವಿಕೆ ಸಮಸ್ಯೆಯನ್ನು ಹಾಗೆ ಬಿಟ್ಟರೆ ಅದರಿಂದ ಮುಂದೆ ಬೊಕ್ಕ ತಲೆ ಕಾಡಬಹುದು.
ಕೆಲವೊಂದು ಸಲ ಈ ಮೇಲೆ ಸೂಚಿಸಿರುವಂತಹ ಅಂಶಗಳು ಇಲ್ಲದೆ ಇದ್ದರೂ ಕೂದಲು ಉದುರುವಿಕೆ ಸಮಸ್ಯೆ ಬರಬಹುದು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ. ರಾಸಾಯನಿಕಯುಕ್ತ ಕೂದಲಿನ ಉತ್ಪನ್ನ ಮತ್ತು ಔಷಧಿಗಳಿಂದಲೂ ಕೂದಲು ಉದುರಬಹುದು. ಕೆಲವೊಂದು ಹವ್ಯಾಸಗಳನ್ನು ಬದಲಾಯಿಸುವ ಕಾರಣದಿಂದಾಗಿ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಅಭ್ಯಾಸಗಳನ್ನು ನಿಯಂತ್ರಣ ಮಾಡಲು ನಿಮಗೆ ಹೆಚ್ಚಿನ ಶ್ರಮವು ಬೇಕಾಗಿಲ್ಲ. ಸುಲಭವಾಗಿ ಮಾಡಬಹುದು. ಕೂದಲು ಉದುರುವಿಕೆ ನಿವಾರಣೆ ಮಾಡಲು ನೀವು ತಡೆಹಿಡಿಯಬೇಕಾದ ಕೆಲವೊಂದು ಸಾಮಾನ್ಯ ಅಭ್ಯಾಸಗಳು.

ಬಿಗಿಯಾದ ಕೂದಲಿನ ವಿನ್ಯಾಸ
ನೀವು ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಿಕೊಳ್ಳುವಂತಹ ಅಭ್ಯಾಸ ಇಟ್ಟುಕೊಂಡಿದ್ದರೆ ಆಗ ನೀವು ಕೂದಲು ಉದುರುವಿಕೆ ಸಮಸ್ಯೆಗೆ ಒಳಗಾಗುವುದು ಖಚಿತ. ಬಿಗಿಯಾಗಿ ಕೂದಲು ಕಟ್ಟಿಕೊಳ್ಳುವ ಕಾರಣದಿಂದಾಗಿ ಕೂದಲಿನ ಕಿರುಚೀಲಗಳ ಮೇಲೆ ಒತ್ತಡ ಬೀಳುವುದು ಮತ್ತು ಅದರಿಂದ ಕೂದಲಿನ ಕಿರುಚೀಲಗಳಿಗೆ ಹಾನಿಯಾಗುವುದು. ಇದರಿಂದ ಕೂದಲಿನ ಕಿರುಚೀಲಗಳ ಮೇಲೆ ಶಾಶ್ವತವಾಗಿ ಹಾನಿಯಾಗಬಹುದು. ಇದರಿಂದ ಮತ್ತೆ ಕೂದಲು ಬೆಳೆಯಲು ಕಠಿಣವಾಗಬಹುದು ಅಥವಾ ಅಸಾಧ್ಯವಾಗಬಹುದು. ಕೂದಲು ಬಿಗಿಯಾಗಿ ಕಟ್ಟಿಕೊಂಡರೆ ಆಗ ತಲೆನೋವು ಕೂಡ ಬರಬಹುದು. ಕೂದಲನ್ನು ಸಡಿಲವಾಗಿ ಕಟ್ಟಿಕೊಳ್ಳಿ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ನಿವಾರಣೆ ಆಗುವುದು.

ಕೆಟ್ಟ ಆಹಾರ ಕ್ರಮ
ಎಲ್ಲಾ ರೀತಿಯ ಪೋಷಕಾಂಶಗಳನ್ನು ಸೇವನೆ ಮಾಡುವುದು ದೇಹಕ್ಕೆ ಮಾತ್ರವಲ್ಲದೆ, ಕೂದಲಿಗೂ ಅದರಿಂದ ತುಂಬಾ ನೆರವಾಗುವುದು. ಸಮತೋಲಿತ ಆಹಾರ ಸೇವನೆ ಮಾಡಿದರೆ ಅದರಿಂದ ಕೂದಲಿನ ಆರೋಗ್ಯವು ಉತ್ತಮವಾಗಿರುವುದು. ಪದೇ ಪದೇ ಆಹಾರ ಕ್ರಮದಲ್ಲಿ ಬದಲಾವಣೆ ಆಗುತ್ತಲಿದ್ದರೆ ಆಗ ಕೂದಲು ಉದುರುವಿಕೆ ಸಮಸ್ಯೆ ಆಗಬಹುದು. ಕೂದಲಿನ ಬೆಳವಣಿಗೆಗೆ ಬೇಕಾಗುವಂತಹ ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತಹ ಸಮತೋಲಿತ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಿ. ಎಲ್ಲಾ ಪೋಷಕಾಂಶಗಳು ಇರುವ ಆಹಾರ ಸೇವನೆ ಮಾಡಿದರೆ ಆಗ ನಿಮಗೆ ಕೂದಲು ಉದುರುವ ಸಮಸ್ಯೆಯು ಕಡಿಮೆ ಆಗುವುದು. ಇದರೊಂದಿಗೆ ಕೂದಲಿನ ಗುಣಮಟ್ಟವನ್ನು ಸುಧಾರಣೆ ಮಾಡುವುದು.

ಕಬ್ಬಿನಾಂಶ ಕಡಿಮೆ ಸೇವನೆ ಮಾಡುವುದು
ಕಬ್ಬಿನಾಂಶ ಕೊರತೆ ಮತ್ತು ಕೂದಲು ಉದುರುವಿಕೆ ಒಂದಕ್ಕೊಂದು ಸಂಬಂಧ ಹೊಂದಿದೆ. ಕಬ್ಬಿನಾಂಶದ ಕೊರತೆಯಿಂದಾಗಿ ರಕ್ತದಲ್ಲಿ ಹಿಮೊಗ್ಲೋಬಿನ್ ಉತ್ಪತ್ತಿಯು ಕಡಿಮೆಯಾಗುವುದು. ಹಿಮೊಗ್ಲೋಬಿನ್ ರಕ್ತದಲ್ಲಿ ಆಮ್ಲಜನಕ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದಾಗಿ ನಮ್ಮ ದೇಹದಲ್ಲಿ ಅಂಗಾಂಶಗಳು ಬೆಳೆಯುವುದು ಮತ್ತು ಸರಿಪಡಿಸುವುದು. ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಕೋಶಗಳ ಉತ್ತೇಜಿಸಲು ಕಬ್ಬಿನಾಂಶವು ಪ್ರಮುಖ ಪಾತ್ರ ವಹಿಸುವುದು. ಇದಕ್ಕಾಗಿ ನೀವು ಹೆಚ್ಚು ಬಸಳೆ, ಬ್ರಾಕೋಲಿ ಮತ್ತಿತರ ತರಕಾರಿ ಸೇವನೆ ಮಾಡಬೇಕು. ಇದರಿಂದ ಕೂದಲಿನ ಬೆಳವಣಿಗೆ ಆಗುವುದು.

ಅತಿಯಾಗಿ ವಿನ್ಯಾಸ ಮಾಡುವುದು
ಕೂದಲನ್ನು ಒಂದಲ್ಲಾ ಒಂದು ರೀತಿಯಲ್ಲಿ ವಿನ್ಯಾಸ ಮಾಡಿಕೊಳ್ಳಬೇಕು ಎಂದು ಪ್ರತಿಯೊಬ್ಬರು ಬಯಸುವರು. ಕೆಲವರು ಕೂದಲಿಗೆ ವಿವಿಧ ರೀತಿಯ ಬಣ್ಣವನ್ನು ಹಚ್ಚಿಕೊಳ್ಳಬಹುದು. ಇನ್ನು ಕೆಲವರು ಕೂದಲನ್ನು ನೇರ ಅಥವಾ ಗುಂಗುರು ಮಾಡಿಕೊಳ್ಳಬಹುದು. ಆದರೆ ಪದೇ ಪದೇ ಕೂದಲಿನ ವಿನ್ಯಾಸದಲ್ಲಿ ಬದಲಾವಣೆ ಮಾಡುವುದು ಕೂದಲು ಮತ್ತು ಕೂದಲಿನ ಕಿರುಚೀಲಗಳಿಗೆ ಹಾನಿ ಉಂಟು ಮಾಡುವುದು. ಬಿಸಿ ಮತ್ತು ಕೂದಲಿನ ಸ್ಪ್ರೇ ಬಳಸುವ ಕಾರಣದಿಂದಾಗಿ ಕೂದಲಿನ ಗುಣಮಟ್ಟ ಮತ್ತು ಪ್ರಮಾಣವು ಕಳಪೆಯಾಗುವುದು. ಕೂದಲಿಗೆ ಬಣ್ಣ ಮತ್ತು ಬಿಸಿ ಮಾಡುವುದನ್ನು ಆದಷ್ಟು ಮಟ್ಟಿಗೆ ತಪ್ಪಿಸಿ. ನಿಮಗೆ ಈಗಾಗಲೇ ಕೂದಲು ಉದುರುವಿಕೆ ಸಮಸ್ಯೆಯಿದ್ದರೆ ಆಗ ನೀವು ಕೂದಲಿಗೆ ಬಣ್ಣ ಹಚ್ಚುವುದು ಅಥವಾ ಬಿಸಿ ಮಾಡುವುದನ್ನು ತಕ್ಷಣವೇ ನಿಲ್ಲಿಸಿಬಿಡಿ. ಕೂದಲಿಗೆ ಹಾನಿ ಉಂಟು ಮಾಡುವ ಯಾವುದೇ ಉತ್ಪನ್ನಗಳನ್ನು ನೀವು ಬಳಸಬೇಡಿ.

ಬಿಸಿ ನೀರಿನ ಸ್ನಾನ
ಹೆಚ್ಚಿನ ಜನರು ಬಿಸಿ ನೀರಿನ ಸ್ನಾನವನ್ನು ಇಷ್ಟಪಡುವರು ಮತ್ತು ದೀರ್ಘಕಾಲ ಕಾಲ ಶಾವರ್ ಅಡಿಯಲ್ಲೇ ಇರುವರು. ಆದರೆ ಬಿಸಿ ನೀರಿನ ಸ್ನಾನದಿಂದ ಕೂದಲಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯಾ? ಬಿಸಿಯಿಂದಾಗಿ ತಲೆಬುರುಡೆಯು ನಿರ್ಜಲೀಕರಣವಾಗುವುದು ಮತ್ತು ಕೂದಲು ಒಣ ಹಾಗೂ ಒಡೆಯುವಂತೆ ಮಾಡುವುದು. ಇದರಿಂದ ಕೂದಲಿಗೆ ಮತ್ತಷ್ಟು ಹಾನಿ ಆಗುವುದು ಮತ್ತು ಕೂದಲು ಉದುರುವ ಸಮಸ್ಯೆ ಬರುವುದು.

ಒತ್ತಡ
ಆಧುನಿಕ ಯುಗದಲ್ಲಿ ಈ ಒಂದು ಪದವು ತುಂಬಾ ಸಾಮಾನ್ಯವಾಗಿರುವುದು. ಯಾಕೆಂದರೆ ನಮ್ಮ ಇಂದಿನ ಲೋಕವೇ ಆ ರೀತಿಯಾಗಿದೆ. ಒತ್ತಡವಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಯುವುದೇ ಇಲ್ಲ. ಒತ್ತಡವು ಕೂದಲಿಗೆ ಹಾನಿ ಉಂಟು ಮಾಡುವುದು. ಕೆಲಸ ಹಾಗೂ ಇತರ ಕೆಲವು ಒತ್ತಡಗಳು ಕೂದಲಿನ ಮೇಲೆ ನೇರ ಪರಿಣಾಮ ಬೀರುವುದು. ಒತ್ತಡವು ಅತಿಯಾದರೆ ಆಗ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುವುದು. ನೀವು ತುಂಬಾ ಶಾಂತ ಹಾಗೂ ಆರಾಮವಾಗಿ ಇರಬೇಕು. ಧ್ಯಾನ, ಯೋಗ, ಕ್ರೀಡೆ ಮತ್ತು ವ್ಯಾಯಾಮದಂತಹ ಕೆಲವೊಂದು ವಿಧಾನಗಳಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು.

ಒದ್ದೆ ಕೂದಲು ಬಾಚಿಕೊಳ್ಳುವುದು
ಕೂದಲನ್ನು ತೊಳೆದುಕೊಂಡ ಬಳಿಕ ನೀವು ಕುದಲು ಒರೆಸಿಕೊಂಡರೂ ನೀರು ಹಾಗೆ ಇರುವುದು. ಒದ್ದೆ ಕೂದಲನ್ನು ನೀವು ಬಾಚಿಕೊಂಡಾಗ ಕೂದಲು ತುಂಡಾಗುವಂತಹ ಸಮಸ್ಯೆಯು ಕಾಣಿಸಿಕೊಳ್ಳೂವುದು. ಇದರಿಂದಾಗಿ ಕೂದಲಿನ ಕಿರುಚೀಲಗಳು ದುರ್ಬಲವಾಗಬಹುದು ಮತ್ತು ಬಾಚಣಿಗೆಯು ಒದ್ದೆ ಕೂದಲಿನ ಮೇಲೆ ಹಾಕುವ ಒತ್ತಡವು ಕೂದಲು ಉದುರುವಿಕೆಗೆ ಕಾರಣವಾಗಬಹುದು.



Click it and Unblock the Notifications











