Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ತೆಂಗಿನಹಾಲು-ಜೇನುತುಪ್ಪದ ಹೇರ್ ಕಂಡೀಷನರ್ ಬಳಸಿ ನೋಡಿ
ನಮ್ಮ ಹಿರಿಯರ ಸೌಂದರ್ಯ ನೋಡಿದರೆ ಒಮ್ಮೆ ಬೆರಗಾಗುವುದು ಇದೆ. ವಯಸ್ಸಾದರೂ ಅವರ ಸೌಂದರ್ಯ ಮಾತ್ರ ಹಾಗೇ ಉಳಿದುಕೊಂಡಿರುವುದು. ಹಿಂದಿನಿಂದಲೂ ನಮ್ಮ ಹಿರಿಯರು ನೈಸರ್ಗಿಕದತ್ತವಾಗಿರುವಂತಹ ಸೌಂದರ್ಯವರ್ಧಕಗಳನ್ನು ಬಳಸಿಕೊಂಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ನಮ್ಮ ತಾಯಿ ಅಥವಾ ಅಜ್ಜಿಯಾಗಿರಲಿ, ಅವರ ಸೌಂದರ್ಯದ ಗುಟ್ಟು ಅಡುಗೆ ಮನೆಯಲ್ಲೇ ಇದೆ. ಯಾಕೆಂದರೆ ಅವರು ಅಡುಗೆ ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಿದ್ದಾರೆ. ಇದನ್ನು ನೀವು ಪಾಲಿಸಬೇಕಿದ್ದರೆ ಈ ಲೇಖನವನ್ನು ಓದುತ್ತಾ ಸಾಗಿ....
ಕೂದಲಿನ ಆರೈಕೆಗೆ ಮನೆಮದ್ದುಗಳು
ಕೂದಲಿನ ಆರೈಕೆಗೆ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿರುವುದು. ಮನೆಮದ್ದುಗಳು ತುಂಬಾ ಅಗ್ಗ ಹಾಗೂ ಇದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ನಿಮ್ಮ ಚರ್ಮವು ಸೂಕ್ಷ್ಮವಾಗಿಲ್ಲದೆ ಇದ್ದರೆ ಈ ಮನೆಮದ್ದನ್ನು ಬಳಸಿದರೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗದು. ಮನೆಮದ್ದನ್ನು ಬಳಸುವ ಮೊದಲು ನೀವು ಇದನ್ನು ದೇಹದ ಯಾವುದೇ ಭಾಗಕ್ಕಾದರೂ ಹಚ್ಚಿಕೊಂಡು ಪರೀಕ್ಷೆ ಮಾಡಬಹುದು. ಇದರ ಬಳಿಕ ನೀವು ಇದನ್ನು ಬಳಸಬಹುದು.

ಕೂದಲಿಗೆ ತೆಂಗಿನಕಾಯಿ ಹಾಲು ಮತ್ತು ಜೇನುತುಪ್ಪ ಯಾಕೆ ಬಳಸಬೇಕು?
ತೆಂಗಿನಕಾಯಿ ಹಾಲು ಕೂದಲಿನ ಆರೈಕೆಯಲ್ಲಿ ವಿಶೇಷ ಪಾತ್ರ ವಹಿಸುವುದು. ಇದು ಕೂದಲನ್ನು ನಯ ಹಾಗೂ ಬಲಗೊಳಿಸುವುದು. ತೆಂಗಿನಕಾಯಿ ಹಾಲನ್ನು ನಮ್ಮ ಅಜ್ಜಿ ಹಾಗೂ ಮುತ್ತಜ್ಜಿಯರು ಕೂಡ ಬಳಸಿಕೊಂಡಿದ್ದಾರೆ. ಹಲವಾರು ವಿಧಗಳಿಂದ ಇದು ಕೂದಲಿಗೆ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ನೀವು ಹೇರ್ ಮಾಸ್ಕ್, ಕಂಡೀಷನರ್ ಅಥವಾ ಶಾಂಪೂವಿನಲ್ಲಿ ಬಳಸಬಹುದು.
ತೆಂಗಿನಹಾಲಿನೊಂದಿಗೆ ಜೇನುತುಪ್ಪ ಕೂಡ ತುಂಬಾ ಪರಿಣಾಮಕಾರಿಯಾಗಿರಲಿದೆ. ಇದು ಕೂದಲಿಗೆ ಹಲವಾರು ಲಾಭಗಳನ್ನು ನೀಡುವುದು. ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣ ಹೊಂದಿರುವ ಜೇನುತುಪ್ಪವು ತಲೆಬುರುಡೆಯ ಸೋಂಕು ತಡೆಯುವುದು. ತಲೆಹೊಟ್ಟು, ಕೂದಲು ಉದುರುವಿಕೆ, ಇಸಬು ಮತ್ತು ಸೋರಿಯಾಸಿಸ್ ಗೆ ಇದು ತುಂಬಾ ಪರಿಣಾಮಕಾರಿ.
ಕೂದಲಿಗೆ ತೆಂಗಿನಹಾಲು ಮತ್ತು ಜೇನುತುಪ್ಪವನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಲು ಮುಂದೆ ಓದಿಕೊಳ್ಳಿ.
ತೆಂಗಿನಹಾಲು ಮತ್ತು ಜೇನುತುಪ್ಪದಿಂದ ಮಾಡುವ ಕಂಡೀಷನರ್
ಮನೆಯಲ್ಲೇ ಕೂದಲಿಗೆ ಕಂಡೀಷನರ್ ತಯಾರಿಸುವುದು ಅಷ್ಟು ಕಷ್ಟದ ವಿಚಾರವಲ್ಲ. ಅಡುಗೆ ಮನೆಯಲ್ಲಿ ಸಿಗುವಂತಹ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಮನೆಯಲ್ಲೇ ಕೂದಲಿನ ಕಂಡೀಷನರ್ ಅಥವಾ ಪ್ಯಾಕ್ ತಯಾರಿಸಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು
- 4 ಚಮಚ ತೆಂಗಿನಹಾಲು(ತಾಜಾವಾಗಿ ತೆಗೆಯಿರಿ)
- 2 ಚಮಚ ಜೇನುತುಪ್ಪ
- 1 ಶಾವರ್ ಕ್ಯಾಪ್
ತಯಾರಿಸುವ ವಿಧಾನ
ಒಂದು ಸಣ್ಣ ಪಿಂಗಾಣಿಗೆ ತೆಂಗಿನಹಾಲು ಹಾಕಿ.
ಇದಕ್ಕೆ ಈಗ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
ಕೆಲವು ನಿಮಿಷ ಕಾಲ ಇದು ಹಾಗೆ ಇರಲಿ. ಈಗ ಇದು ಬಳಸಲು ತಯಾರಾಗಿದೆ.
ಬಳಸುವ ವಿಧಾನ
*ಕಂಡೀಷನರ್ ಬಳಸುವ ಮೊದಲು ನೀವು ಕೂದಲನ್ನು ಶಾಂಪೂವಿನಿಂದ ತೊಳೆಯಬಾರದು ಅಥವಾ ಎಣ್ಣೆ ಹಚ್ಚಿರಬಾರದು.
*ಹೇರ್ ಬ್ರಷ್ ತೆಗೆದುಕೊಂಡು ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಮೊದಲು ತಲೆಬುರುಡೆಗೆ ಇದರಿಂದ ನಿಧಾನವಾಗಿ ಮಸಾಜ್ ಮಾಡಿ ಮತ್ತು ಬಳಿಕ ಕಂಡೀಷನರ್ ನ್ನು ಕೂದಲಿಗೆ ಹಚ್ಚಿಕೊಳ್ಳಿ.
*ಬುಡದಿಂದ ತುದಿಯ ತನಕ ಸರಿಯಾಗಿ ಹಚ್ಚಿಕೊಳ್ಳಿ.
*ಕೂದಲನ್ನು ಶಾಂಪೂ ಹಾಕಿಕೊಂಡು ತೊಳೆಯುವ ಮೊದಲು ಕಂಡೀಷನರ್ ಹಾಕಿದ ಬಳಿಕ ಒಂದರಿಂದ ಒಂದುವರೆ ಗಂಟೆ ಕಾಲ ಇದು ಹಾಗೆ ಇರಲಿ.
*ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.
ಹೇಗೆ ಕೆಲಸ ಮಾಡುವುದು?
ಜೇನುತುಪ್ಪವು ಕೂದಲಿನಲ್ಲಿ ಮೊಶ್ಚಿರೈಸರ್ ಉಳಿಯುವಂತೆ ಮಾಡುವುದು ಮತ್ತು ಇದರಿಂದ ಕೂದಲು ಆರೋಗ್ಯಕಾರಿ ಮತ್ತು ಕಾಂತಿಯುತವಾಗಿರುವುದು. ತೆಂಗಿನಹಾಲಿನೊಂದಿಗೆ ಜೇನುತುಪ್ಪ ಬೆರೆಸಿಕೊಂಡಾಗ ಎಲ್ಲಾ ಪೋಷಕಾಂಶಗಳು ಕೂದಲಿನಲ್ಲೇ ನಿಂತು ಕೂದಲಿನ ಬೆಳವಣಿಗೆಗೆ ನೆರವಾಗುವುದು.
ಕೂದಲಿನ ಆರೈಕೆ ವೇಳೆ ನೆನಪಿಟ್ಟುಕೊಳ್ಳಬೇಕಾದ ಸಲಹೆಗಳು
• ವಾರದಲ್ಲಿ ಎರಡು ಸಲ ಶಾಂಪೂ ಬಳಸಿ.
• ಕಂಡೀಷನರ್ ಬಳಸುವಾಗ ನೀವು ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಹಾಕಿಕೊಂಡು ಕೂದಲು ಮತ್ತು ತಲೆಬುರುಡೆಗೆ ಮಸಾಜ್ ಮಾಡಿ. ಕೂದಲಿನ ಬುಡಕ್ಕೆ ಕಂಡೀಷನರ್ ಸರಿಯಾಗಿ ಹಚ್ಚಿಕೊಳ್ಳಿ.
• ಕಂಡೀಷನರ್ ನ್ನು ತೊಳೆಯುವಾಗ ನೀವು ಸಂಪೂರ್ಣವಾಗಿ ಅದನ್ನು ತೊಳೆಯಿರಿ ಮತ್ತು ಕೂದಲಿನಲ್ಲಿ ಇದು ಉಳಿಯದಂತೆ ನೋಡಿಕೊಳ್ಳಿ.
• ಕೂದಲನ್ನು ಒಣಗಿಸುವಾಗ ಒಣಗಿರುವ ಟವೆಲ್ ನಿಂದ ಸರಿಯಾಗಿ ಕೂದಲು ಒರೆಸಿಕೊಳ್ಳಿ. ಕೂದಲು ಒಣಗಿದ ಬಳಿಕ ಗಟ್ಟಿಯಾಗಿ ಕಟ್ಟಿಕೊಳ್ಳಿ. ಒದ್ದೆ ಕೂದಲು ಬಿಗಿದುಕೊಂಡರೆ ತುಂಡಾಗುವುದು.
ಕೂದಲಿಗೆ ಮನೆಯಲ್ಲೇ ಕಂಡೀಷನರ್ ತಯಾರಿಸಿಕೊಳ್ಳುವುದು ಹೇಗೆ ಮತ್ತು ಅದನ್ನು ಬಳಸಿಕೊಳ್ಳುವುದು ಹೇಗೆ ಎಂದು ನಿಮಗೆ ಎಲ್ಲಾ ರೀತಿಯ ಮಾಹಿತಿಯು ಸಿಕ್ಕಿದೆ. ಇದನ್ನು ನೀವು ವಾರಾಂತ್ಯದಲ್ಲಿ ಪರೀಕ್ಷೆ ಮಾಡಿ ನೋಡಿ. ಆರೋಗ್ಯಕರ ಹಾಗೂ ಕಾಂತಿಯುತ ಕೂದಲು ಪ್ರತಿಯೊಬ್ಬರ ಸೌಂದರ್ಯಕ್ಕೂ ಅತೀ ಅಗತ್ಯವಾಗಿರುವುದು.



Click it and Unblock the Notifications











