Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಪ್ಪಾಯಿ ಹಣ್ಣಿನ 'ಹೇರ್ ಪ್ಯಾಕ್' ಪಕ್ಕಾ ನೈಸರ್ಗಿಕ ಚಿಕಿತ್ಸೆ...
ಪಪ್ಪಾಯಿ ಹಣ್ಣಿನಲ್ಲಿ ನಿಮ್ಮ ಚರ್ಮ ಹಾಗೂ ತಲೆಗೂದಲುಗಳಿಗೆ ಹೆಚ್ಚು ಉಪಯೋಗವಾಗುವ ಹಲವಾರು ಅಂಶಗಳಿವೆ. ಆದ್ದರಿಂದಲೇ ಈ ಹಣ್ಣು ಹಲವಾರು ಸೌಂದರ್ಯವರ್ಧಕಗಳು, ಸೌಂದರ್ಯ ಮತ್ತು ತಲೆಗೂದಲ ರಕ್ಷಣೆಯ ಉತ್ಪನ್ನಗಳಿಗೆ ಬಳಸಲಾಗುತ್ತಿದೆ....
ಆಯಾಯ ಹವಾಮಾನಕ್ಕೆ ಅನುಗುಣವಾಗಿ ಹಣ್ಣುಗಳು ಬೆಳೆಯುತ್ತಾ ಇರುತ್ತದೆ. ಕೆಲವು ಹಣ್ಣುಗಳು ಮಳೆಗಾಲದಲ್ಲಿ ಲಭ್ಯವಾದರೆ ಇನ್ನು ಕೆಲವು ಬೇಸಿಗೆ ಹಾಗೂ ಚಳಿಗಾಲದಲ್ಲಿ ಲಭ್ಯವಾಗುತ್ತದೆ. ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವೇ ಆಗಿದೆ. ಅದೇ ಹಣ್ಣುಗಳನ್ನು ಈಗೀಗ ಸೌಂದರ್ಯವರ್ಧಕಗಳಲ್ಲೂ ಬಳಸಲಾಗುತ್ತಿದೆ. ಇಂತಹ ಕೆಲವೊಂದು ಹಣ್ಣುಗಳಲ್ಲಿ ಪಪ್ಪಾಯ ಕೂಡ ಒಂದಾಗಿದೆ.

ಪಪ್ಪಾಯ ಹಣ್ಣಿನಲ್ಲಿ ತ್ವಚೆಗೆ ನೆರವಾಗುವಂತಹ ಹಲವಾರು ಅಂಶಗಳು ಇವೆ. ಪಪ್ಪಾಯ ಹಣ್ಣು ಮಾತ್ರವಲ್ಲದ ಇದರ ಇತರ ಕೆಲವೊಂದು ಭಾಗಗಳು ಕೂಡ ತ್ವಚೆ, ಕೂದಲು ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪಪೈನ್ ಎನ್ನುವ ಕಿಣ್ವವು ಪ್ರೋಟೀನ್ ನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಈ ಕಾರಣದಿಂದಾಗಿ ಕೆಲವೊಂದು ಜೂಯಿಂಗ್ ಗಮ್ ಹಾಗೂ ಜೀರ್ಣಕ್ರಿಯೆಯ ಮದ್ದುಗಳಲ್ಲಿ ಇದನ್ನು ಬಳಸಲಾಗುತ್ತದೆ. ಊಹೆಗೂ ನಿಲುಕದ ಪಪ್ಪಾಯಿಯ ಪವರ್‌ಗೆ ಬೆರಗಾಗಲೇಬೇಕು!
ಪಪ್ಪಾಯವನ್ನು ನಿಯಮಿತವಾಗಿ ತಿನ್ನುವುದರಿಂದ ಮತ್ತು ಪಪ್ಪಾಯವನ್ನು ಪ್ರಮುಖ ಅಂಶವಾಗಿ ಬಳಸಿರುವ ಕೂದಲಿನ ಆರೈಕೆಯ ಉತ್ಪನ್ನಗಳನ್ನು ಬಳಸುವುದರಿಂದ ಕೂದಲನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳಬಹುದು. ಪಪ್ಪಾಯಿಯು ಕೂದಲಿಗೆ ಪೋಷಕಾಂಶವನ್ನು ನೀಡಿ ಹೆಚ್ಚಿನ ಕೂದಲು ಬೆಳೆಯುವಂತೆ ಮಾಡುತ್ತದೆ... ಹಾಗಾದರೆ ಇನ್ನು ಬಳಸುವುದು ಹೇಗೆ ಎಂಬ ಪ್ರಶ್ನೆಯೇ? ಮುಂದೆ ಓದಿ...
ಕೂದಲಿಗೆ ಪಪ್ಪಾಯ ಬಳಕೆ ಹೇಗೆ
ಪಪ್ಪಾಯ ಹೇರ್ ಮಾಸ್ಕ್ ಕೂದಲನ್ನು ಬಲಿಷ್ಠ, ದಪ್ಪ ಹಾಗೂ ಕಾಂತಿಯುತವಾಗಿ ಮಾಡುತ್ತದೆ. ಪಪ್ಪಾಯದ ಹೇರ್ ಮಾಸ್ಕ್ ಮಾಡುವ ವಿಧಾನ ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
*ಹಣ್ಣದ ಪಪ್ಪಾಯ ತುಂಡು ಮಾಡಿರುವುದು ಒಂದು ಕಪ್
*ಹಣ್ಣಾದ ಬಾಳೆಹಣ್ಣು ಒಂದು ಕಪ್ಪು ತುಂಡು ಮಾಡಿರುವುದು
*ಕಾಕಂಬಿ ಒಂದು ಚಮಚ
*ತೆಂಗಿನ ಎಣ್ಣೆ ಒಂದು ಚಮಚ
*ಮೊಸರು ಒಂದು ಕಪ್ ಬೆಳಿಗ್ಗೆ ಎದ್ದಾಕ್ಷಣ ಪಪ್ಪಾಯಿ+ಲಿಂಬೆಯ ಜ್ಯೂಸ್ ಕುಡಿಯಿರಿ!
ಮಾಡುವ ವಿಧಾನ
• ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿಕೊಂಡು ರುಬ್ಬಿಕೊಳ್ಳಿ. ಯಾವುದೇ ತುಂಡು ಮಿಕ್ಸಿಯಲ್ಲಿ ಉಳಿಯದಂತೆ ನೋಡಿಕೊಳ್ಳಿ.
• ಈ ಪೇಸ್ಟ್ ಅನ್ನು ಒಣ ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ.
• ಪೇಸ್ಟ್ ಹಚ್ಚಿಕೊಂಡ ಬಳಿಕ ಪ್ಲಾಸ್ಟಿಕ್ ಅಥವಾ ಶವರ್ ಕ್ಯಾಪ್ ಹಾಕಿಕೊಳ್ಳಿ.
• ಅರ್ಧ ಗಂಟೆ ಕಾಲ ಹಾಗೆ ಬಿಟ್ಟುಬಿಡಿ.
• ಈಗ ಶವರ್ ಕ್ಯಾಪ್ ಸುತ್ತಲೂ ಒಂದು ಟವೆಲ್ ಅನ್ನು ಸರಿಯಾಗಿ ಕಟ್ಟಿಕೊಂಡು ಉಷ್ಣತೆ ಹೆಚ್ಚಾಗುವಂತೆ ನೋಡಿಕೊಳ್ಳಿ.
• ಅರ್ಧ ಗಂಟೆ ಕಾಲ ಹಾಗೆ ಬಿಟ್ಟುಬಿಡಿ.
• ನಿಯಮಿತವಾಗಿ ಕೂದಲು ತೊಳೆಯುವಂತೆ ಕೂದಲು ತೊಳೆಯಿರಿ.
• ಕಂಡೀಷನರ್ ಅನ್ನು ಬಳಸಬಹುದಾಗಿದೆ. ಇದರಿಂದ ಕೂದಲು ಮತ್ತಷ್ಟು ರೇಷ್ಮೆಯಂತೆ ಆಗಬಹುದು. ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!



Click it and Unblock the Notifications





