ಅಷ್ಟಕ್ಕೂ ಕೂದಲುದುರುವ ಸಮಸ್ಯೆಗೆ ಕಾರಣಗಳೇನು?

By manu

ತನಗೆ ಮುಪ್ಪು ಬರದಂತೆ ಕೇಳಿಕೊಂಡು ಒಬ್ಬ ಘನಘೋರ ತಪಸ್ಸು ಮಾಡಿದನಂತೆ. ಹಲವು ವರ್ಷಗಳ ಬಳಿಕ ಪ್ರತ್ಯಕ್ಷನಾದ ದೇವರು ಏನು ಬೇಕೆಂದು ಕೇಳಿದಾಗ ಈತ ತನ್ನ ಕೂದಲು ಎಂದಿಗೂ ನೆರೆಯಕೂಡದು ಎಂಬ ವರ ಬೇಡಿದನಂತೆ. ನಕ್ಕ ಭಗವಂತ ತಥಾಸ್ತು ಎಂದು ಮಾಯವಾದ. ಸಂತಸದಿಂದ ಹಿಂದೆ ಬಂದ ಈಗ ತನಗೆಂದೂ ಮುಪ್ಪು ಬಾರದು ಎಂದು ಸುಖವಾಗಿದ್ದ. ಆದರೆ ವಯಸ್ಸಾದಂತೆ ಮುಪ್ಪೂ ಆವರಿಸತೊಡಗಿತು, ಕೂದಲು ಮಾತ್ರ ನೆರೆಯಲಿಲ್ಲ, ಬದಲಿಗೆ ಉದುರತೊಡಗಿತು! ತಪ್ಪಾದ ವರ ಕೇಳಿದ್ದಕ್ಕೆ ತನ್ನನ್ನು ತಾನೇ ಹಣಿಯತೊಡಗಿದನಂತೆ. ನಗುಬರಿಸುವ ಈ ಕಥೆ ಇಂದು ವಾಸ್ತವವಾಗಿದೆ. ಕೂದಲುದುರುವ ಸಮಸ್ಯೆಗೆ ಧೂಮಪಾನ ಕೂಡ ಮೂಲ ಕಾರಣ!

ಜನರಲ್ಲಿ ಮುಪ್ಪು ಬರುವ ಮುನ್ನವೇ ಕೂದಲು ಉದುರತೊಡಗಿದೆ. ಇದಕ್ಕೆ ಕಾರಣವನ್ನು ಕೇಳಿದರೆ ಯಾರಿಂದಲೂ ಸ್ಪಷ್ಟವಾಗಿ ಇದಕ್ಕೆ ಉತ್ತರ ಸಿಗುವುದಿಲ್ಲ, ಏಕೆಂದರೆ ಕೂದಲು ಉದುರುವುದಕ್ಕೆ ಅನುವಂಶಿಕವಾದ ಕಾರಣಗಳೇ ಹೆಚ್ಚು. ಅನುವಂಶಿಕವಾದ ಕಾರಣಗಳ ಹೊರತಾಗಿ ಒಂದು ವೇಳೆ ನಮ್ಮ ಅರೈಕೆಯಲ್ಲಿ ಕೊರತೆಯಿದ್ದರೆ ಆ ಕಾರಣದಿಂದಾಗುವ ಕೂದಲುದುರುವಿಕೆಯನ್ನು ನಾವು ಖಂಡಿತಾ ನಿಯಂತ್ರಿಸಬಹುದು. ಕೂದಲುದುರುವಿಕೆ ಏಕಾಗುತ್ತದೆ ಎಂದು ತಿಳಿಯುವ ಮುನ್ನ ಕೂದಲುಗಳ ರಚನೆ ಅರಿಯುವುದು ಮುಖ್ಯ. ನಮ್ಮ ದೇಹದ ಹೊರಭಾಗದ ಅಂಗಗಳು, ಅಂದರೆ ಚರ್ಮ, ಕೂದಲು ಮತ್ತು ಉಗುರು ಸತತವಾಗಿ ಬೆಳೆಯುತ್ತಲೇ ಇರುತ್ತವೆ.

ಚರ್ಮದ ಹೊರಪದರದ ಜೀವಕೋಶಗಳು ಸತ್ತು ಹೊಸಜೀವಕೋಶಗಳು ಹುಟ್ಟುತ್ತವೆ. ಉಗುರುಗಳು ಉದ್ದವಾಗುತ್ತಾ ಹೋಗುತ್ತವೆ. ಅಂತೆಯೇ ಕೂದಲುಗಳು ಉದುರಿ ಆ ಸ್ಥಳದಲ್ಲಿ ಹೊಸ ಕೂದಲು ಹುಟ್ಟುತ್ತದೆ. ಅನುವಂಶಿಕ ಕಾರಣಗಳಲ್ಲಿ, ವಿಶೇಷವಾಗಿ ಪುರುಷರಲ್ಲಿ, ಉದುರಿದ ಈ ಕೂದಲ ಸ್ಥಳದಲ್ಲಿ ಅತ್ಯಂತ ಸೂಕ್ಷ್ಮವಾದ ಪಾರದರ್ಶಕ ಮತ್ತು ತೀರಾ ಚಿಕ್ಕದಾದ ಕೂದಲು ಹುಟ್ಟುತ್ತದೆ. ಇದೇ ಪುರುಷರ ಬೊಕ್ಕತಲೆಗೆ ಕಾರಣ. ಇನ್ನುಳಿದವರಲ್ಲಿ ಆ ಸ್ಥಳದಲ್ಲಿ ಆರೋಗ್ಯಕರ ಕಪ್ಪು ಕೂದಲು ಹುಟ್ಟಬೇಕು. ಪುರುಷರ ಕೂದಲುದುರುವ ಸಮಸ್ಯೆಗೆ ಫಲಪ್ರದ ಮನೆಮದ್ದು

ಸಂಶೋಧನೆಯ ಪ್ರಕಾರ ಪ್ರತಿದಿನ ನೂರು ಕೂದಲುಗಳಾದರೂ ಉದುರಿ ಹೊಸ ಕೂದಲುಗಳು ಹುಟ್ಟುತ್ತವೆ. ಒಂದು ವೇಳೆ ನೂರರ ಬದಲು ಇನ್ನೂರು ಉದುರಿದರೆ? ಇದಕ್ಕೆ ನಮ್ಮ ಆರೈಕೆಯ ಅಥವಾ ಇತರ ಕೊರತೆಗಳು ಕಾರಣವಾಗಿದ್ದು ಆ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಅಮೂಲ್ಯವಾದ ಮಾಹಿತಿಯನ್ನು ನೀಡಲಾಗಿದೆ. ಆಹಾರದಲ್ಲಿ ನಿಯಂತ್ರಣ, ಎಣ್ಣೆಯ ಸೇವನೆಯಲ್ಲಿ ಕಡಿಮೆ ಮಾಡುವುದು, ಒತ್ತಡರಹಿತ ಜೀವನಕ್ಕೆ ಒತ್ತು ಮೊದಲಾದ ಕ್ರಮಗಳು ಫಲಪ್ರದವಾಗಿವೆ. ಕೂದಲು ಉದುರುವುದರಲ್ಲಿ ಮೂರು ವಿಧಗಳಿವೆ: 1) ಕೂದಲ ಪ್ರಮಾಣ ಕಡಿಮೆಯಾಗುವುದು (ತೆಳ್ಳಗಾಗುವುದು), 2) ಇರುವ ಕೂದಲು ಅನಾರೋಗ್ಯಕರವಾಗಿರುವುದು 3) ಶಾಶ್ವತವಾಗಿ ಉದುರಿ ಹೋಗುವುದು...

ವಿಟಮಿನ್‌ಗಳ ಕೊರತೆ

ವಿಟಮಿನ್‌ಗಳ ಕೊರತೆ

ಕೂದಲುಗಳ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಪೋಷಕಾಂಶವೆಂದರೆ ವಿಟಮಿನ್ B12 ಮತ್ತು ಕಬ್ಬಿಣ. ಈ ಪೋಷಕಾಂಶಗಳ ಕೊರತೆಯಿಂದ ಕೂದಲ ಬುಡ ಸಡಿಲವಾಗಿ ಕೂದಲು ಸುಲಭವಾಗಿ ಉದುರುತ್ತದೆ. ಕೆಲವೊಮ್ಮೆ ಎಷ್ಟು ಸಡಿಲವಿರುತ್ತದೆ ಎಂದರೆ ಬೀಸುವ ಗಾಳಿಗೂ ನಾಲ್ಕಾರು ಕೂದಲುಗಳು ಬುಡಕಳಚಿ ಹೊರಬರುತ್ತವೆ. ಮುಂದಿನ ಸ್ನಾನ ಅಥವಾ ಬಾಚಿಕೊಳ್ಳುವ ವೇಳೆ ಪ್ರಕಟಗೊಂಡು ಆತಂಕ ಹೆಚ್ಚಿಸುತ್ತವೆ.

ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಮಾನಸಿಕ ಒತ್ತಡದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಾಧೆಗೊಳ್ಳುವ ಸಹಿತ ಚರ್ಮ ಮತ್ತು ಕೂದಲುಗಳೂ ಬಾಧೆಗೊಳಗಾಗುತ್ತವೆ. ಚರ್ಮದಲ್ಲಿ ಶೀಘ್ರವಾಗಿ ನೆರಿಗೆ ಮೂಡಿದರೆ ಕೂದಲುದುರುವಿಕೆ ಇದರ ಪಾರ್ಶ್ವ ಪರಿಣಾಮವಾಗಿದೆ. ಒತ್ತಡದಿಂದ ಹೊರಬರುವುದು ಮತ್ತು ಸಂತೋಷಕರ ಜೀವನ ನಡೆಸುವುದು ಈ ಬಗೆಯ ಕೂದಲುದುರುವಿಕೆಯನ್ನು ನಿಲ್ಲಿಸಲು ಪೂರಕವಾಗಿದೆ.

ಸಿಕ್ಕು ಬಿಡಿಸಲು ಒತ್ತಡ ಹೇರುವುದು

ಸಿಕ್ಕು ಬಿಡಿಸಲು ಒತ್ತಡ ಹೇರುವುದು

ನಿತ್ಯವೂ ಕೂದಲನ್ನು ಬಾಚಿಕೊಳ್ಳುತ್ತಿದ್ದರೆ ಸಿಕ್ಕಾಗುವ ಸಾಧ್ಯತೆ ಕಡಿಮೆ. ಆದರೂ ಬೀಸುವ ಗಾಳಿ ಮತ್ತು ನಿತ್ಯದ ಚಟುವಟಿಕೆಗಳ ಕಾರಣ ಕೂದಲುಗಳು ಒಂದಕ್ಕೊಂದು ತಿರುಚಿಕೊಂಡು ಸಿಕ್ಕು ಸಿಕ್ಕಾಗುತ್ತಲೇ ಇರುತ್ತವೆ. ಸಮಯವಿಲ್ಲದ ಧಾವಂತದಲ್ಲಿ ಹೆಚ್ಚಿನವರು ಬಾಚಣೆಗೆಯನ್ನು ಬಳಸಿ ಬಲವಂತವಾಗಿ ಈ ಸಿಕ್ಕನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಾರೆ. ಈ ಪ್ರಯತ್ನದಲ್ಲಿ ಕೂದಲ ಬುಡಕ್ಕೆ ಹೆಚ್ಚಿನ ಒತ್ತಡ ಬಿದ್ದು ಕೊಂಚವೇ ಸಡಿಲವಾಗಿದ್ದ ಕೂದಲುಗಳು ಸುಲಭವಾಗಿ ಕಳಚಿಕೊಂಡು ಹೊರ ಬರುತ್ತವೆ. ಆದ್ದರಿಂದ ಕೂದಲು ನೆನೆದಿದ್ದಾಗ ಬಾಚದೇ ಒಣಗಿದ ಬಳಿಕ ಎಣ್ಣೆ ಹಚ್ಚಿ ಸಿಕ್ಕು ಬಿಡಿಸುವುದು ಉತ್ತಮ.

ಕೂದಲ ಬಣ್ಣದ ವಿಪರೀತ ಬಳಕೆ

ಕೂದಲ ಬಣ್ಣದ ವಿಪರೀತ ಬಳಕೆ

ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಕ್ರಿಯೆಯನ್ನು ಅತಿ ಹೆಚ್ಚಾಗಿ ಅನುಸರಿಸಿದರೆ ಅದರಲ್ಲಿರುವ ಹಾನಿಕಾರಕ ರಾಸಾಯನಿಕಗಳ ಪ್ರಭಾವದಿಂದ ಕೂದಲು ಕಪ್ಪಾದಂತೆ ಅನ್ನಿಸಿದರೂ ವಾಸ್ತವವಾಗಿ ಕೂದಲು ಶಿಥಿಲವಾಗುತ್ತಾ ಹೋಗುತ್ತದೆ. ಬಳಿಕ ಸುಲಭವಾಗಿ ತುಂಡಾಗುತ್ತದೆ ಮತ್ತು ತೀರಾ ಒಣಗಿ ಹೋಗುತ್ತದೆ. ಇದು ಭಾರೀ ಪ್ರಮಾಣದಲ್ಲಿ ಕೂದಲು ಉದುರಲು ಕಾರಣವಾಗುತ್ತದೆ. ಆದ್ದರಿಂದ ಆರೋಗ್ಯಕರವಾದ ನೈಸರ್ಗಿಕ ಬಣ್ಣಗಳನ್ನು ಬಳಸುವುದು ಜಾಣತನ. ಮದರಂಗಿ ನಿಸರ್ಗ ನೀಡಿದ ಒಂದು ಅತ್ಯುತ್ತಮವಾದ ಬಣ್ಣವಾಗಿದೆ.

ಹೆರಿಗೆಯ ಅವಧಿಯಲ್ಲಿ

ಹೆರಿಗೆಯ ಅವಧಿಯಲ್ಲಿ

ಗರ್ಭಾವಸ್ಥೆಯ ಮೂರನೆಯ ತಿಂಗಳಿನಿಂದ ಕೂದಲು ಉದುರುವುದು ಸಾಮಾನ್ಯವಾಗುತ್ತದೆ. ಏಕೆಂದರೆ ಗರ್ಭಿಣಿಯ ದೇಹದಲ್ಲಿ ಸ್ರವಿಸುವ ಹಲವು ಹಾರ್ಮೋನುಗಳು ದೇಹದ ಮೇಲೆ ಹಲವು ಪರಿಣಾಮಗಳನ್ನು ಉಂಟುಮಾಡುವಂತೆಯೇ ಕೂದಲ ಮೇಲೂ ಪರಿಣಾಮ ಬೀರುತ್ತದೆ. ಆದರೆ ಹೆರಿಗೆಯ ಬಳಿಕ ಬಾಣಂತನದ ಅವಧಿಯಲ್ಲಿ ನಿಂತು ಮುಂದಿನ ತಿಂಗಳುಗಳಲ್ಲಿ ಹೊಸ ಕೂದಲು ಹುಟ್ಟಲು ಸಾಧ್ಯವಾಗುತ್ತದೆ.

ಬಿಸಿಗಾಳಿಯ ಅತಿಹೆಚ್ಚಿನ ಬಳಕೆ

ಬಿಸಿಗಾಳಿಯ ಅತಿಹೆಚ್ಚಿನ ಬಳಕೆ

ಯುವಜನತೆಯ ಅಚ್ಚುಮೆಚ್ಚಿನ ಹೇರ್ ಡ್ರೈಯರ್ ಅಥವಾ ಬಿಸಿಗಾಳಿಯ ಬಳಕೆಯಿಂದ ಕೂದಲನ್ನು ತಮಗೆ ಹೇಗೆ ಬೇಕೋ ಹಾಗೇ ಅಲಂಕರಿಸಿಕೊಳ್ಳಬಹುದೇ ವಿನಃ ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಸತತವಾಗಿ ಬಿಸಿಗೆ ಕೂದಲನ್ನು ಒಡ್ಡುವ ಮೂಲಕ ಕೂದಲು ಆರ್ದ್ರತೆಯನ್ನು ಕಳೆದುಕೊಂಡು ತೀರಾ ಒಣಗುತ್ತದೆ. ಒಣಗಿದ ಕೂದಲು ಸುಲಭವಾಗಿ ತುಂಡಾಗುವಂತಿರುತ್ತದೆ. ತುಂಡಾದ ಕೂದಲು ಉದುರಲು ಹೆಚ್ಚು ಶ್ರಮಬೇಕಾಗಿಲ್ಲ. ಆದ್ದರಿಂದ ಡ್ರೈಯರ್ ಮತ್ತು ಇತರ ಕೇಶಶೃಂಗಾರ ಸಾಧನೆಗಳ ಬಳಕೆಯನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುವುದು ಸೂಕ್ತ.

ಔಷಧಿಗಳ ಅಡ್ಡಪರಿಣಾಮಗಳು

ಔಷಧಿಗಳ ಅಡ್ಡಪರಿಣಾಮಗಳು

ಯಾವುದೇ ಔಷಧಿಯಲ್ಲಿ ಕೊಂಚವಾದರೂ ಅಡ್ಡಪರಿಣಾಮಗಳು ಇದ್ದೇ ಇರುತ್ತವೆ. ಹಲವು ಔಷಧಿಗಳ ಅಡ್ಡ ಪರಿಣಾಮಗಳು ಕೂದಲುದುರುವಿಕೆಯನ್ನು ಪ್ರಚೋದಿಸುತ್ತವೆ. ಈ ಬಗ್ಗೆ ನಿಮ್ಮ ವೈದ್ಯರೇ ಸೂಕ್ತ ಸಲಹೆ ನೀಡಬಲ್ಲರು. ವೈದ್ಯರ ಸಲಹೆಯಿಲ್ಲದೇ ಯಾವುದೇ ಕ್ರಮ ಕೈಗೊಳ್ಳಬೇಡಿ. ಈ ಮೇಲಿನ ಹೊರತಾಗಿ ಕೂದಲ ಆರೈಕೆಗೆ ನಿಮ್ಮ ಬಳಿ ಬೇರೆ ಯಾವುದೇ ಸಲಹೆಯಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಮುಖ್ಯ ಪುಟದ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.

Story first published: Friday, October 16, 2015, 13:38 [IST]
X
Desktop Bottom Promotion