Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲನ್ನು ಸಮೃದ್ಧಿಗೊಳಿಸುವ ಹಳ್ಳಿಗಾಡಿನ ಶಾಂಪೂ!
ಕೂದಲ ಉದುರುವಿಕೆ ಒಂದು ಸಾಮಾನ್ಯ ಕ್ರಿಯೆಯಾಗಿದೆ. ಪ್ರತಿದಿನ ನಾವು ಕೆಲವು ಕೂದಲುಗಳನ್ನು ಕಳೆದುಕೊಂಡರೂ ಆ ಸ್ಥಾನದಲ್ಲಿ ಹೊಸ ಕೂದಲು ಹುಟ್ಟುವುದರಿಂದ ಕೂದಲು ಸೊಂಪಾಗಿಯೇ ಇರುತ್ತದೆ. ಒಂದು ವೇಳೆ ಹೊಸ ಕೂದಲು ಹುಟ್ಟದೇ ಇದ್ದಲ್ಲಿ ಮಾತ್ರ ಬಕ್ಕತಲೆಗೆ ಆಹ್ವಾನ ನೀಡಿದಂತಾಗುತ್ತದೆ. ಆದರೆ ಸಾಮಾನ್ಯ ಸಂಖ್ಯೆಗಿಂತಲೂ ಹೆಚ್ಚಿನ ಕೂದಲುಗಳು ಉದುರಿದರೆ ಮಾತ್ರ ಇದಕ್ಕೆ ಹಲವು ಕಾರಣಗಳಿರಬಹುದು.
ಊಟದಲ್ಲಿ ಅತಿಹೆಚ್ಚು ಉಪ್ಪು, ಗಡಸು ನೀರಿನಿಂದ ಸ್ನಾನ ಮಾಡಿಕೊಳ್ಳುವುದು, ಪ್ರಬಲ ರಾಸಾಯನಿಕಗಳಿರುವ ಶಾಂಪೂ ಬಳಸುವುದು, ಪ್ರಬಲ ಸೋಪು ಉಪಯೋಗಿಸುವುದು, ತಪ್ಪಾ ಆಯ್ಕೆಯ ಎಣ್ಣೆ, ಸೌಂದರ್ಯ ಪ್ರಸಾಧನಗಳು, ಅನಾರೋಗ್ಯಕರ ಆಹಾರ ವಿಧಾನ ಮೊದಲಾದವು ಕೂದಲು ಉದುರುವುದನ್ನು ಹೆಚ್ಚಿಸಬಹುದು. ಮನೆಯಲ್ಲಿಯೇ ತಯಾರಿಸಿದ ಶಾಂಪೂಗಳು ಸುರಕ್ಷಿತವಾಗಿದ್ದು ಕೂದಲು ಉದುರುವುದನ್ನು ನಿಲ್ಲಿಸಿ ಹೊಸಕೂದಲು ಹುಟ್ಟಲು ನೆರವಾಗುತ್ತದೆ. ಪರಿಣಾಮವಾಗಿ ಕೂದಲು ದಟ್ಟವಾಗತೊಡಗುತ್ತದೆ. ಸೊಂಪಾದ ಕೂದಲಿಗಾಗಿ ತಯಾರಿಸಿ- ನೈಸರ್ಗಿಕ ಹೇರ್ ಮಾಸ್ಕ್
ಉದಾಹರಣೆಗೆ ಲೋಳೆಸರದ ಶಾಂಪೂ ಬಳಕೆಯಿಂದ ಕೂದಲು ಉದುರುವುದು ನಿಲ್ಲುವುದು ಮಾತ್ರವಲ್ಲದೇ ಕೂದಲಿಗೆ ಹೊಳಪು ಸಹಾ ನೀಡುತ್ತದೆ. ಸೀಗೇಕಾಯಿ ಸಹಾ ಉತ್ತಮ ಆಯ್ಕೆಯಾಗಿದ್ದು ತಲೆಹೊಟ್ಟನ್ನು ನಿವಾರಿಸಲು ನೆರವಾಗುತ್ತದೆ. ಹಲವು ತಲೆಸ್ನಾನದ ಸೋಪುಗಳೂ ಕೂದಲ ಉದುರುವಿಕೆಯನ್ನು ನಿಲ್ಲಿಸುತ್ತವೆ. ಕೆಳಗಿನ ಸ್ಲೈಡ್ ಶೋ ಮೂಲಕ ಕೆಲವು ಉಪಯುಕ್ತ ವಿಧಾನಗಳನ್ನು ಸೂಚಿಸಲಾಗಿದೆ. ಸಾಸಿವೆ ಎಣ್ಣೆ: ಅಡುಗೆಗೂ ಸೈ, ಕೂದಲಿನ ಸಮಸ್ಯೆಗೂ ಜೈ!

ಸೀಗೆಪುಡಿ
ಸೀಗೆಪುಡಿಯನ್ನು ನೇರವಾಗಿ ಅಥವಾ ಸೌಮ್ಯ ಶಾಂಪೂವಿನೊಂದಿಗೆ ಮಿಶ್ರಣ ಮಾಡಿ ಉಪಯೋಗಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಒಂದು ವೇಳೆ ತಲೆಹೊಟ್ಟಿದ್ದರೆ ಸೀಗೆಪುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಕೂದಲ ಬುಡಕ್ಕೆ ದಪ್ಪನಾಗಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಅಂಟುವಾಳ ಕಾಯಿ ಉಪಯೋಗಿಸಿ
ಅಂಟುವಾಳ ಅಥವಾ (Soap Nut, reetha) ಎಂದು ಕರೆಯಲ್ಪಡುವ ಕಾಯಿಗಳು ಒಣಗಿದ ಪುಡಿಯ ರೂಪದಲ್ಲಿ ಅಥವ ಕಾಯಿಯ ರೂಪದಲ್ಲಿ ದೊರಕುತ್ತದೆ. ಬಳಸಬಹುದು. ಪುಡಿಯಾಗಿದ್ದರೆ ನೀರಿನಲ್ಲಿ ನೆನೆಸಿ ಈಗತಾನೇ ಒದ್ದೆಯಾಗಿಸಿದ ಕೂದಲಿಗೆ ಹಚ್ಚಿ ಕೊಂಚ ಕಾಲ ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಕಾಯಿಯಾಗಿದ್ದರೆ ಪುಡಿಮಾಡಿ ಕೊಂಚಕಾಲ ನೆನೆಸಿಟ್ಟು ಬಳಿಕ ಕೂದಲಿಗೆ ಹಚ್ಚಿ ಕೊಂಚ ಕಾಲ ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. . ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ.

ಲೋಳೆಸರದ ದ್ರವ
ಈಗತಾನೇ ಕೊಯ್ದ ಲೋಳೆಸರದ ಕೋಡೊಂದನ್ನು ನೇರವಾಗಿ ಅದರ ದ್ರವ ಕೂದಲ ಬುಡಕ್ಕೆ ತಲುಪುವಂತೆ ನಯವಾಗಿ ಉಚ್ಚಿ. ಕೋಡನ್ನು ಒತ್ತಿ ದ್ರವ ಒಸರುವಂತೆ ಮಾಡಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ದಿನಂಪ್ರತಿ ಉಪಯೋಗಿಸಿದರೆ ಒಂದೇ ವಾರದಲ್ಲಿ ಪರಿಣಾಮ ಕಂಡುಬರುತ್ತದೆ.

ನೆಲ್ಲಿಕಾಯಿ
ಒಂದು ಅಥವಾ ಎರದು ನೆಲ್ಲಿಕಾಯಿಗಳ ಬೀಜ ತೆಗೆದು ನುಣ್ಣಗೆ ಅರೆಯಿರಿ. ಇದಕ್ಕೆ ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಇದರಲ್ಲಿರುವ ಪ್ರೋಟೀನು ಮತ್ತು ವಿಟಮಿನ್ ಸಿ ಕೂದಲು ಉದುರುವುದನ್ನು ತಡೆಯುತ್ತವೆ. ಜೊತೆಗೇ ಪರಿಮಳದಿಂದಲೂ ಕೂಡಿರುತ್ತದೆ.

ಅಡುಗೆ ಸೋಡಾ
ಮೂರು ದೊಡ್ಡಚಮಚ ಅಡುಗೆ ಸೋಡಾ ವನ್ನು ಕೊಂಚ ನೀರಿನೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ದ್ರವವನ್ನು ಈಗತಾನೇ ತೊಳೆದ ಕೂದಲಿಗೆ ಹಚ್ಚಿ ಕೊಂಚಕಾಲದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದೇ ವಾರದಲ್ಲಿ ಇದರ ಪರಿಣಾಮವನ್ನು ಪಡೆಯಬಹುದು.



Click it and Unblock the Notifications
