Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ನೈಸರ್ಗಿಕವಾಗಿ ತಲೆಹೊಟ್ಟು ನಿವಾರಿಸಿಕೊಳ್ಳಬೇಕೇ?
ಇಂದಿನ ದಿನಗಳಲ್ಲಿ ತಲೆಹೊಟ್ಟು ಬೆಳೆಯುತ್ತಿರುವ ದೊಡ್ಡ ಸಮಸ್ಯೆ. ನಾವೆಲ್ಲರೂ ಈಗಾಗಲೇ ಕೆಲವೊಂದು ರಾಸಾಯನಿಕ ಮತ್ತು ಶಾಂಪೂಗಳನ್ನು ಬಳಸಿ ಅದರ ನಿವಾರಣೆಗೆ ಪ್ರಯತ್ನಿಸಿದ್ದರೂ ಅದು ತಾತ್ಕಾಲಿಕ ಪರಿಹಾರ ಮಾತ್ರ. ತಲೆಬುರುಡೆಯಲ್ಲಿರುವ ತಲೆಹೊಟ್ಟನ್ನು ನಿವಾರಿಸಲು ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಆ್ಯಪಲ್ ಸಿಡರ್ ವಿನೇಗರ್:
ಆ್ಯಪಲ್ ಸಿಡರ್ ವಿನೇಗರ್ ನಲ್ಲಿರುವ ಆ್ಯಸಿಡ್ ಅಂಶವು ನಿಮ್ಮ ತಲೆಬುರುಡೆಯ ಪಿಎಚ್ ನ್ನು ಬದಲಾಯಿಸುತ್ತದೆ. ಇದರಿಂದ ತಲೆಹೊಟ್ಟು ಬೆಳೆಯುವುದಿಲ್ಲ ಮತ್ತು ತಲೆಹೊಟ್ಟು ಕಡಿಮೆಯಾಗುತ್ತದೆ.
ತ್ವಚೆಯನ್ನು ಪೋಷಿಸುವುದರ ಜೊತೆಗೆ ಅಂದವನ್ನೂ ಹೆಚ್ಚಿಸಿಕೊಳ್ಳಬೇಕೇ?

ಅಡುಗೆ ಸೋಡಾ:
ತಲೆಕೂದಲನ್ನು ಒದ್ದೆ ಮಾಡಿ ಮತ್ತು ಒಂದು ಹಿಡಿಯಷ್ಟು ಅಡುಗೆ ಸೋಡಾವನ್ನು ನಿಮ್ಮ ತಲೆಬುರುಡೆಗೆ ಹಚ್ಚಿ. ಶಾಂಪೂ ಬಳಸಬೇಡಿ. ಅಡುಗಡೆ ಸೋಡಾವು ತಲೆಹೊಟ್ಟು ನಿರ್ಮಿಸಬಲ್ಲ ಫಂಗಸ್ ನ್ನು ಕಡಿಮೆ ಮಾಡುತ್ತದೆ.
ತೆಂಗಿನ ಎಣ್ಣೆ:
ನಿಮ್ಮ ತಲೆಗೆ 3-5 ಚಮಚ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ ಮತ್ತು ರಾತ್ರಿ ಹಾಗೆ ಬಿಟ್ಟುಬಿಡಿ. ಮರುದಿನ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ಹದಿಹರೆಯದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ಪರಿಹಾರ!
ನಿಂಬೆ:
ಎರಡು ಚಮಚ ನಿಂಬೆ ಜ್ಯೂಸ್ ನ್ನು ನಿಮ್ಮ ತಲೆಗೆ ಹಚ್ಚಿ ಮಸಾಜ್ ಮಾಡಿ ಮತ್ತು ಇದರ ಬಳಿಕ ನೀರಿನಿಂದ ತೊಳೆಯಿರಿ. ಇದರ ಬಳಿಕ ಒಂದು ಕಪ್ ನೀರಿಗೆ ಒಂದು ಚಮಚ ನಿಂಬೆ ರಸ್ ಹಾಕಿ ಮತ್ತು ತಲೆಗೆ ಶಾಂಪೂ ಹಾಕಿ ತೊಳೆದ ಬಳಿಕ ಇದನ್ನು ಹಚ್ಚಿ. ನಿಂಬೆಯ ರಸವು ಕೂದಲಿನ ಬುಡಕ್ಕೆ ತಲುಪುವಂತೆ ಮಾಡಿ. ನಿಂಬೆಯಲ್ಲಿರುವ ಆ್ಯಸಿಡ್ ಅಂಶವು ತಲೆಬುರುಡೆಯ ಪಿಎಚ್ ನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
ಇಳಿ ವಯಸ್ಸಿನಲ್ಲಿ ಕೂದಲು ಉದುರುವಿಕೆಯ ಸಮಸ್ಯೆಯೇ?
ಬೆಳ್ಳುಳ್ಳಿ:
ಬೆಳ್ಳುಳ್ಳಿಯಲ್ಲಿರುವ ಫಂಗಲ್ ನಿರೋಧಕ ಗುಣಗಳು ಬ್ಯಾಕ್ಟೀರಿಯಾ ಉಂಟುಮಾಡುವ ತಲೆಹೊಟ್ಟನ್ನು ನಿವಾರಿಸಲು ಒಳ್ಳೆಯದು. ತಲೆಕೂದಲು ತೊಳೆಯುವ ಮೊದಲು ಜಜ್ಜಿದ ಬೆಳ್ಳುಳ್ಳಿ ಮತ್ತು ಜೇನಿನಿಂದ ತಲೆಬುರುಡೆಗೆ ಮಸಾಜ್ ಮಾಡಿ.



Click it and Unblock the Notifications
