Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನಿಮ್ಮ ಕೂದಲಿಗೆ ಸೂಕ್ತವಾದ ಬಾಚಣಿಕೆ ಯಾವುದು?
ಹೆಚ್ಚಿನವರು ತಮ್ಮ ಕೂದಲಿಗೆ ಸೂಕ್ತವಾದ ಬಾಚಣಿಕೆ ಯಾವುದೆಂದು ನೋಡುವುದಿಲ್ಲ. ಕೂದಲಿನ ಆರೈಕೆಗೆ ಬಾಚಣಿಕೆ ಕೂಡ ಪ್ರಮುಖವಾದ ಅಂಶ. ಸೂಕ್ತವಾದ ಬಾಚಣಿಕೆ ಬಳಸದಿದ್ದರೆ ಕೂದಲು ಬಾಚಣಿಯಲ್ಲಿ ಹೆಚ್ಚು ಬರುತ್ತದೆ.
ಗುಂಗುರು ಕೂದಲಿನವರು ನೇರ ಕೂದಲಿನವರು ಬಾಚುವಂತಹ ಬಾಚಣಿಕೆಯಿಂದ ಬಾಚಿದರೆ ಕೂದಲು ಮತ್ತಷ್ಟು ಸುರುಳಿ ಸುತ್ತಿ, ಕಿತ್ತು ಬರುವುದು. ನಿಮ್ಮ ಕೂದಲಿಗೆ ಸೂಕ್ತವಾದ ಬಾಚಣಿಕೆ ಯಾವುದು ನೋಡೋಣ ಬನ್ನಿ:

ಸಲಹೆ: ಬಾಚಣಿಕೆಯನ್ನು ಕೊಳ್ಳುವಾಗ ಗುಣಮಟ್ಟದ ಬಾಚಣಿಕೆಯನ್ನು ಕೊಳ್ಳಿ.
ನೇರ ಕೂದಲು
ನೇರವಾದ ಕೂದಲಿರುವವರು ಮೊದಲು ದಪ್ಪ ಹಲ್ಲುಗಳಿರುವ ಬಾಚಣಿಕೆಯಿಂದ ಬಾಚಿ ನಂತರ ಚಿಕ್ಕ ಹಲ್ಲುಗಳಿರುವ ಬಾಚಣಿಕೆಯಿಂದ ಬಾಚಬೇಕು. ಗುಂಗುರು ಮಾಡಲು ಬಾಚಣಿಕೆಯನ್ನು ಬಳಸಬಹುದು. ಕೂದಲನ್ನು ಮುಂದೆಕ್ಕೆ ಹಾಕಿ ಬಾಚಿ, ಹಿಂದೆ ಹಾಕಿ ಬಾಚಿದರೆ ಕೂದಲು ಸ್ವಲ್ಪ ತೆಳ್ಳಗೆ ಕಾಣುವುದು.
ಗುಂಗುರು ಕೂದಲು
ಗುಂಗುರು ಕೂದಲು ಬೇಗನೆ ಸಿಕ್ಕಾಗುವುದರಿಂದ ಆದಷ್ಟು ಇದು ಸಿಕ್ಕಾಗದಂತೆ ಬಾಚಬೇಕು. ಗುಂಗುರು ಕೂದಲು ಇರುವವರು ದೊಡ್ಡ ಹಲ್ಲಿನ ಬಾಚಣಿಕೆಯನ್ನು ಮಾತ್ರ ಬಳಸಬೇಕು. ಇತರ ಬಾಚಣಿಕೆಗಳು ಕೂದಲನ್ನು ಕಿತ್ತು ಬರುವಂತೆ ಮಾಡುತ್ತವೆ.
ತೆಳುವಾದ ಸುರುಳಿ ಕೂದಲು
ಈ ಕೂದಲು ಸಂಪೂರ್ಣ ಗುಂಗುರು ಕೂದಲಿನಂತೆ ಇರುವುದಿಲ್ಲ. ಆದರೆ ಸ್ವಲ್ಪ ಸುರುಳಿಯಾಗಿದ್ದು, ತೆಳುವಾಗಿರುತ್ತದೆ. ಇಂತಹ ಕೂದಲನ್ನು ಬಾಚಲು ಚಿಕ್ಕ ಹಲ್ಲಿನ, ಚಿಕ್ಕ ಹಣಿಗೆಯನ್ನು ಬಳಸಿ.
ತೆಳುವಾದ ಕೂದಲು
ಕೂದಲು ತುಂಬಾ ಉದುರುತ್ತಿದ್ದು, ತೆಳುವಾಗಿದ್ದರೆ ತಲೆ ಬಾಚಲು ಭಯಪಡುತ್ತಾರೆ. ಆದರೆ ತಲೆ ಬಾಚುವುದರಿಂದ ಆ ಭಾಗದಲ್ಲಿ ರಕ್ತ ಸಂಚಾರ ಹೆಚ್ಚಿ ಕೂದಲಿನ ಆರೋಗ್ಯ ಹೆಚ್ಚಾಗುವುದು. ತೆಳು ಕೂದಲಿರುವವರು ಮೃದುವಾದ ಬಾಚಣಿಕೆ ಬಳಸಿ ಬಾಚಬೇಕು. ಹೇರ್ ಡ್ರೈಯರ್ ಬಳಸಬಾರದು.



Click it and Unblock the Notifications
