Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೊಂಪಾದ ಕೂದಲಿಗಾಗಿ 10 ಅತ್ಯುತ್ತಮವಾದ ಆಹಾರ

1. ಸಾಲಮೋನ್ ಮೀನು: ಸಾಲಾಮೋನ್ ಮೀನು ತಿಂದರೆ ಕೂದಲಿನ ಆರೋಗ್ಯ ಹೆಚ್ಚುವುದು. ಇದರಲ್ಲಿ ವಿಟಮಿನ್ ಬಿ12 ಮತ್ತು ಕಬ್ಬಿಣದಂಶ ಮತ್ತು ಒಮೆಗಾ 3 ಅಂಶವಿದ್ದು ಕೂದಲಿನ ಬುಡ ಒಣಗಿ ಕೂದಲು ಹಾಳಾಗುವ ಸಮಸ್ಯೆ ತಪ್ಪಿಸುತ್ತದೆ.
2. ಹಸಿರು ಸೊಪ್ಪು ಮತ್ತು ತರಕಾರಿಗಳು: ಪಾಲಾಕ್ ಸೊಪ್ಪು, ಬ್ರೊಕೋಲಿ, ನುಗ್ಗೆ ಕಾಯಿ ಸೊಪ್ಪು ಈ ರೀತಿಯ ಹಸಿರು ಸೊಪ್ಪುಗಳಲ್ಲಿ ಕಬ್ಬಿಣದಂಶ ಮತ್ತು ವಿಟಮಿನ್ ಎ ಇರುವುದರಿಂದ ಕೂದಲಿಗೆ ತುಂಬಾ ಒಳ್ಳೆಯದು.
3. ಬೀನ್ಸ್: ಬೀನ್ಸ್ ನಲ್ಲಿ ಕಬ್ಬಿಣದಂಶ, ಸತು, ಬಯೋಟಿನ್(biotin) ಅಂಶಗಳಿವೆ. ಬಯೋಟಿನ್ ಅಂಶ ಕಡಿಮೆಯಿದ್ದರೆ ಕೂದಲು ಕವಲೊಡೆಯುವ ಸಮಸ್ಯೆ ಕಂಡು ಬರುವುದು.
4. ನಟ್ಸ್: ವಾಲ್ ನಟ್ಸ್, ಗೋಡಂಬಿ, ಬಾದಾಮಿ ಇವುಗಳಲ್ಲಿ ವಿಟಮಿನ್ ಗಳು ಮತ್ತು ಖನಿಜಂಶಗಳು ಅಧಿಕವಾಗಿರುವುದರಿಂದ ಕೂದಲಿನ ಪೋಷಣೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
5&6. ಚಿಕನ್ ಮತ್ತು ಮೊಟ್ಟೆ: ಪೌಲ್ಟ್ರಿ ಆಹಾರಗಳ ಸೇವನೆ ಕೂಡ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರೊಟೀನ್‌ಗಳ ಕೊರತೆಯಿಂದ ಕೂದಲು ಬೆಳ್ಳಗಾಗುವುದು. ಚಿಕನ್ ಮತ್ತು ಮೊಟ್ಟೆಯಲ್ಲಿ ಅಧಿಕ ಪ್ರೊಟೀನ್ ಅಂಶಗಳಿವೆ.
7. ದವಸಧಾನ್ಯಗಳು: ದವಸಧಾನ್ಯಗಳನ್ನು ಆಹಾರ ಕ್ರಮದಲ್ಲಿ ಹೆಚ್ಚಾಗಿ ಸೇವಿಸುವುದರಿಂದ ಸತು, ಪ್ರೊಟೀನ್ ಅಂಶಗಳು, ವಿಟಮಿನ್ ಗಳು ದೇಹಕ್ಕೆ ಸೇರುತ್ತದೆ.
8. ಮೃದ್ವಂಗಿಗಳು: ಮೃದ್ವಂಗಿಗಳನ್ನು ಆಹಾರದಲ್ಲಿ ಬಳಸಿದರೆ ದೇಹದ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೂದಲಿನ ಪೋಷಣೆಗೆ ಅಗತ್ಯವಾದ ಪೋಷಕಾಂಶಗಳನ್ನು ದೊರಕಿಸಿ ಕೊಡುತ್ತದೆ.
7. ಹಾಲಿನ ಉತ್ಪನ್ನಗಳು: ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳ ಸೇವನೆ ಒಳ್ಳೆಯದು. ದಿನಕ್ಕೆ 2 ಲೋಟ ಹಾಲು ಕುಡಿಯುವ ಅಭ್ಯಾಸ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
10. ಕ್ಯಾರೆಟ್: ಕ್ಯಾರೆಟ್ ತಿನ್ನುವುದರಿಂದ ಕೂದಲು, ತ್ವಚೆ ಮತ್ತು ದೇಹದ ಆರೋಗ್ಯ ಹೆಚ್ಚಿಸಬಹುದಾಗಿದೆ.



Click it and Unblock the Notifications
