Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಕಾಲಿಕ ನೆರಿಗೆ ತಡೆಗಟ್ಟಲು 6 ಸೂಪರ್ ಟಿಪ್ಸ್
ಅಕಾಲಿಕ ನೆರೆಗೂದಲಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ನೂರಕ್ಕೆ 80ರಷ್ಟು ಜನರಲ್ಲಿ ಕಂಡು ಬರುತ್ತಿದೆ. ಕೆಲವರಿಗಂತೂ ಬಾಲ್ಯದಲ್ಲಿಯೇ ಕೂದಲು ಬೆಳ್ಳಗಾಗುವುದು. ಕೆಮಿಕಲ್ ಇರುವ ಶ್ಯಾಂಪೂಗಳ ಬಳಕೆ, ಪೋಷಕಾಂಶದ ಕೊರತೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು ಈ ಎಲ್ಲಾ ಕಾರಣಗಳಿಂದ ಕೂದಲು ಬೆಳ್ಳಗಾಗುವುದು.
ಚಿಕ್ಕ ಪ್ರಾಯದಲ್ಲಿ ಕೂದಲು ಬೆಳ್ಳಗಾದರೆ ಮುಜುಗರ ಉಂಟಾಗುವುದು. ಹಾಗಂತ ಅದನ್ನು ಮರೆ ಮಾಚಲು ಕೂದಲಿಗೆ ಡೈ ಮಾಡುವುದು ಅಥವಾ ಬಣ್ಣ ಹಚ್ಚುವುದು ಈ ರೀತಿಯ ತಪ್ಪುಗಳನ್ನು ಮಾತ್ರ ಮಾಡಬೇಡಿ. ಏಕೆಂದರೆ ಈ ರೀತಿಯೆಲ್ಲಾ ಮಾಡಿದರೆ ಕೂದಲು ಮತ್ತಷ್ಟು ಬೆಳ್ಳಗಾಗುವುದು.
ಅಕಾಲಿಕ ನೆರಿಗೆಯನ್ನು ತಡೆಗಟ್ಟಿ, ಕೂದಲನ್ನು ಕಪ್ಪಗಾಗಿಸಲು ಈ ಕೆಳಗಿನ ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು:

ಮದರಂಗಿಯಿಂದ ಹೇರ್ ಪ್ಯಾಕ್
ಟೀ ಡಿಕಾಷನ್ ಗೆ ಮೆಹಂದಿ ಪುಡಿಯನ್ನು ಹಾಕಿ ಕಲೆಸಿ, ಅದಕ್ಕೆ ಸ್ವಲ್ಪ ರಸ ಹಿಂಡಿ 2-3 ಗಂಟೆಗಳ ಕಾಲ ಇಡಿ( ಒಂದು ರಾತ್ರಿ ಇಟ್ಟರೆ ಮತ್ತಷ್ಟು ಒಳ್ಳೆಯದು). ನಂತರ ಈ ಮೆಹಂದಿಯನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ತಲೆ ತೊಳೆಯಿರಿ. ತಲೆಯನ್ನು ಒಣಗಿಸಿದ ಬಳಿಕ ತಲೆಗೆ ಎಣ್ಣೆ ಹಚ್ಚಿ. ಈ ರೀತಿ ಮಾಡಿದರೆ ಕೂದಲು ಕಪ್ಪಾಗಿ ಕಾಣುವುದು.

ಬ್ಲ್ಯಾಕ್ ಟೀ
ಬ್ಲ್ಯಾಕ್ ಟೀ ಮಾಡಿ ಅದನ್ನು ಕೂದಲಿಗೆ ಹಚ್ಚಿ 1-2 ಗಂಟೆ ಇಟ್ಟು ನಂತರ ತೊಳೆಯಿರಿ. ಇದನ್ನು ಹಚ್ಚಿ ತಲೆ ತೊಳೆಯುವಾಗ ಶ್ಯಾಂಪೂ ಬಳಸಬೇಡಿ. ಈ ರೀತಿ ಮಾಡಿದರೆ ಕೂದಲು ಕಪ್ಪಗಾಗುವುದು, ಇತರ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ಕರಿಬೇವಿನ ಎಲೆ
ಕರಿಬೇವನ್ನು ಸಾರಿಗೆ ಹಾಕಿ ತಿನ್ನಿ. ಕರಿಬೇವನ್ನು ಎಣ್ಣೆಗೆ ಹಾಕಿ ಕಾಯಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುತ್ತಾ ಬಂದರೆ ಕೂದಲಿನ ಬುಡ ಸ್ಟ್ರಾಂಗ್ ಆಗುವುದು, ಅಕಾಲಿಕ ನೆರಿಗೆ ಕೂಡ ಉಂಟಾಗುವುದಿಲ್ಲ.

ಹೇರ್ ಆಯಿಲ್
ತೆಂಗಿನೆಣ್ಣೆಗೆ ಕರಿಬೇವಿನ ಎಲೆ ಮತ್ತು ನೆಲ್ಲಿಕಾಯಿ ಹಾಕಿ ಕುದಿಸಿ, ಅದರಿಂದ ಎಣ್ಣೆ ತಯಾರಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುತ್ತಾ ಬನ್ನಿ. ಈ ರೀತಿ ಮಾಡುತ್ತಾ ಬಂದರೆ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ದೊಡ್ಡ ಕೀರೆ ಸೊಪ್ಪು(ಅರಿವೆ ಸೊಪ್ಪು)
ಅರಿವೆ ಸೊಪ್ಪನ್ನು ಕೊಡಗಿನಲ್ಲಿ ಕೀರೆ ಸೊಪ್ಪು ಎಂದು ಕರೆಯುತ್ತಾರೆ. ಕೆಂಪು ಕೀರೆಯ ಸೊಪ್ಪು ಅಕಾಲಿಕ ನೆರಿಗೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಇದರ ರಸವನ್ನು ಹಿಂಡಿ ತಲೆಗೆ ಹಚ್ಚಿದರೆ ಒಳ್ಳೆಯದು.

ಆಮ್ಲ ಹೇರ್ ಪ್ಯಾಕ್(ನೆಲ್ಲಿಕಾಯಿಯ ಪುಡಿ)
ನೆಲ್ಲಿ ಕಾಯಿಯ ಪುಡಿಯ ಹೇರ್ ಪ್ಯಾಕ್ ದೊರೆಯುತ್ತದೆ. ನೆಲ್ಲಿಕಾಯಿ ಪುಡಿಯನ್ನು ಮೊಸರಿಗೆ ಹಾಕಿ ಕಲೆಸಿ ಕೂದಲಿಗೆ ಹಚ್ಚಿದರೆ ಅಕಾಲಿಕ ನೆರಿಗೆ ಬರುವುದನ್ನು ತಡೆಗಟ್ಟಬಹುದು.



Click it and Unblock the Notifications
