Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಪುರುಷರ ತಲೆಹೊಟ್ಟು ನಿವಾರಣೆಗೆ ನಿಂಬೆ!
ಸಂಗಾತಿ ಜತೆಗೆ ಡೇಟ್ ಗೆ ಹೋಗುತ್ತೀರಿ. ಆಕೆ ಭುಜದ ಮೇಲೆ ಕೈಹಾಕಿದಾಗ ಭುಜದ ಮೇಲೆಲ್ಲಾ ತಲೆಹೊಟ್ಟು ಕಾಣಿಸಿಕೊಂಡರೆ ಆಗ ಆಗುವ ಮುಜುಗರ ಅಷ್ಟಿಷ್ಟಲ್ಲ. ಪುರುಷರ ಕೂದಲಿನಲ್ಲಿ ತಲೆಹೊಟ್ಟು ಇದ್ದರೆ ಕೆಲವು ಮಹಿಳೆಯರಿಗೆ ಹೇಸಿಗೆಯನಿಸುತ್ತದೆ. ನೆತ್ತಿ ಒಣಗುವುದು, ಬ್ಯಾಕ್ಟೀರಿಯಾ ಅಥವಾ ಫಂಗಲ್ ಸೋಂಕಿನಿಂದಾಗಿ ಹೀಗೆ ಆಗಬಹುದು. ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ ಮತ್ತು ಕೂದಲಿನ ಆರೈಕೆ ಬಗ್ಗೆ ಸರಿಯಾದ ಕಾಳಜಿ ವಹಿಸದಿದ್ದರೆ ಪುರುಷರಲ್ಲಿ ತಲೆಹೊಟ್ಟು ಕಾಣಿಸುತ್ತಲೇ ಇರುತ್ತದೆ. ಕೆಲವೊಂದು ಸಲ ಪುರುಷರಲ್ಲಿನ ತಲೆಹೊಟ್ಟು ಸಮಸ್ಯೆಗೆ ಶಾಂಪೂ ಬದಲಾವಣೆ, ನೀರಿನಲ್ಲಿನ ಸೋಂಕು, ತಲೆದಿಂಬಿನ ಮೂಲಕ ಸಂಗಾತಿಯ ತಲೆಹೊಟ್ಟು ಹರಡುವುದು ಇತ್ಯಾದಿ ಕಾರಣವಾಗಬಹುದು.
ಕೆಲವೊಂದು ಮನೆಮದ್ದುಗಳು ತಲೆಹೊಟ್ಟನ್ನು ನಿವಾರಣೆ, ಕಡಿಮೆ ಮಾಡಲು ಅಥವಾ ತಡೆಯಲು ನೆರವಾಗಬಹುದು. ಈ ಹೆಚ್ಚಿನ ಮದ್ದಿನಲ್ಲಿ ಲಿಂಬೆ ಹಣ್ಣಿನಲ್ಲಿರುವ ಸಿಟ್ರಸ್ ಆಮ್ಲವು ಒಳಗೊಂಡಿದ್ದು, ಇದು ತಲೆಹೊಟ್ಟು ನಿವಾರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇತರ ಕೆಲವು ವಸ್ತುಗಳೊಂದಿಗೆ ಲಿಂಬೆ ಹಣ್ಣಿನ ರಸವನ್ನು ಹಾಕಿ ಸ್ನಾನಕ್ಕೆ ಮೊದಲು ಅಥವಾ ಸ್ನಾನದ ಬಳಿಕ ಹಚ್ಚುವುದರಿಂದ ತಲೆಹೊಟ್ಟು ನಿವಾರಿಸಬಹುದು.
ಮನೆಮದ್ದಿನಲ್ಲಿ ಲಿಂಬೆ ರಸದೊಂದಿಗೆ ತೆಂಗಿನ ಎಣ್ಣೆ, ಆಲಿವ್ ತೈಲ, ಹಜೆಲ್ ಎಣ್ಣೆ, ಪೆಪ್ಪರ್ಮಿಂಟ್ ತೈಲ, ವಿನೇಗರ್, ಮೊಸರು, ಚಹಾದ ಸಾರಗಳು ಇತ್ಯಾದಿ ಬಳಸಬಹುದು. ಈ ಎಲ್ಲಾ ವಸ್ತುಗಳು ಪುರುಷರಲ್ಲಿ ತಲೆಹೊಟ್ಟು ನಿಯಂತ್ರಿಸಲು ನೆರವಾಗುತ್ತದೆ. ಇದೆಲ್ಲವೂ ಕೂದಲಿಗೆ ಮೊಶ್ಚಿರೈಸರ್ ಮತ್ತು ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ನೆತ್ತಿ ಮತ್ತು ಕೂದಲನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿ ಇಡುವುದರಿಂದ ತಲೆಹೊಟ್ಟನ್ನು ಒಂದು ಮಟ್ಟದವರೆಗೆ ನಿಯಂತ್ರಿಸಬಹುದು. ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ತಲೆಹೊಟ್ಟನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನೆತ್ತಿಯಿಂದ ತಲೆಹೊಟ್ಟನ್ನು ನಿವಾರಿಸಲು ಲಿಂಬೆ ರಸ ಹಾಕಿ ಮಾಡಬಹುದಾದ ಕೆಲವೊಂದು ಮನೆ ಮದ್ದುಗಳು

1. ತೆಂಗಿನ ಎಣ್ಣೆ
ಪರೋಕ್ಷವಾಗಿ ಬಿಸಿ ನೀಡಿ ತೆಂಗಿನ ಎಣ್ಣೆ ಬಿಸಿ ಮಾಡಿ ಮತ್ತು ಅದನ್ನು ಹೊರತೆಗೆಯಿರಿ. ಇದಕ್ಕೆ ಎರಡು ಟೇಬಲ್ ಸ್ಪೂನ್ ತಾಜಾ ನಿಂಬೆ ರಸ ಬೆರಸಿ ನೆತ್ತಿಯ ಮೇಲೆ ಮಸಾಜ್ ಮಾಡಿ. 15 ನಿಮಿಷ ಹಾಗೆ ಬಿಟ್ಟು ಬಳಿಕ ಶಾಂಪೂ ಹಾಕಿ ತೊಳೆಯಿರಿ. ತಲೆಹೊಟ್ಟನ್ನು ನಿಧಾನವಾಗಿ ಆದರೆ ಪರಿಣಾಮಕಾರಿಯಾಗಿ ನಿವಾರಿಸಲು ವಾರದಲ್ಲಿ 2-4 ಸಲ ಹೀಗೆ ಮಾಡಿ.

2. ಹಜೆಲ್ ತೈಲ
ಒಂದು ಟೇಬಲ್ ಸ್ಪೂನ್ ಹಜೆಲ್ ತೈಲ ಮತ್ತು ಒಂದು ಟೇಬಲ್ ಸ್ಪೂನ್ ನಿಂಬೆ ರಸ ಬೆರಸಿ ಅದಕ್ಕೆ ಪರೋಕ್ಷ ಶಾಖ ನೀಡಿ ಮತ್ತು ಬಿಸಿಯಾಗಿರುವಾಗಲೇ ಅದನ್ನು ನೆತ್ತಿಗೆ ಹಾಕಿ ನಿಧಾನವಾಗಿ ಮಸಾಜ್ ಮಾಡಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ನಿಂಬೆ ಹಣ್ಣಿನ ತುಂಡುಗಳನ್ನು ನೆತ್ತಿಗೆ ನೇರವಾಗಿ ತಿಕ್ಕಿದರೂ ತಲೆಹೊಟ್ಟು ನಿವಾರಿಸಬಹುದು.

3. ವಿನೇಗರ್
4 ಟೇಬಲ್ ಸ್ಪೂನ್ ಸೈಡರ್ ವಿನೇಗರ್ ಮತ್ತು ಎರಡು ಟೇಬಲ್ ಸ್ಪೂನ್ ನಿಂಬೆ ರಸವು ತಲೆಹೊಟ್ಟಿಗೆ ಅತ್ಯಂತ ಪರಿಣಾಮಕಾರಿ ಮನೆಮದ್ದು. ಇದನ್ನು ಬಿಸಿ ಮಾಡಬೇಕಾಗಿಲ್ಲ. ಇದೆರಡನ್ನು ಮಿಶ್ರಣ ಮಾಡಿ ಹತ್ತಿ ತುಂಡುಗಳಿಂದ ನೆತ್ತಿಗೆ ಹಚ್ಚಿ. ನಿಯಮಿತವಾಗಿ ಹಚ್ಚುವುದರಿಂದ ತಲೆಹೊಟ್ಟು ನಿವಾರಿಸಬಹುದು.

4. ಮೊಸರು ಮತ್ತು ಜೇನುತುಪ್ಪ
ಮೊಸರು, ನಿಂಬೆರಸ ಮತ್ತು ಜೇನುತಪ್ಪವನ್ನು ಸರಿಯಾಗಿ ಮಿಶ್ರಣ ಮಾಡಬೇಕು. ಇದು ತಲೆಹೊಟ್ಟು ನಿವಾರಣೆಗೆ ಒಳ್ಳೆಯ ಮದ್ದು. ಮೂರನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿ 20 ನಿಮಿಷ ಬಿಡಬೇಕು. ವಾರದಲ್ಲಿ 2-3 ದಿನ ಹೀಗೆ ಮಾಡಿ.

5. ಚಹಾ
ತಲೆಹೊಟ್ಟು ನಿವಾರಣೆಗೆ ಚಹಾ ಒಳ್ಳೆಯ ವಿಧಾನ. ಅರ್ಧ ಕಪ್ ನೀರಿಗೆ ಎರಡು ಟೇಬಲ್ ಸ್ಪೂನ್ ಚಹಾ ಹುಡಿ ಹಾಕಿ ದಪ್ಪ ಚಹಾ ಮಾಡಿ. ಇದನ್ನು ಸರಿಯಾಗಿ ಸೋಸಿದ ಬಳಿಕ ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ನಿಂಬೆ ರಸ ಬೆರೆಸಿ. ಬಿಸಿಯಾಗಿರುವಾಗಲೇ ಹತ್ತಿ ತುಂಡಿನಿಂದ ನೆತ್ತಿಗೆ ಹಚ್ಚಿ ಮತ್ತು 15 ನಿಮಿಷ ಹಾಗೆ ಬಿಡಿ. ಇದರ ಬಳಿಕ ನಳ್ಳಿ ನೀರಿನಲ್ಲಿ ಕೂದಲು ತೊಳೆಯಿರಿ.

6. ಬಿಸಿ ಎಣ್ಣೆ ಚಿಕಿತ್ಸೆ
ಒಂದು ಟೇಬಲ್ ಸ್ಪೂನ್ ಹರಳೆಣ್ಣೆ, ಎರಡು ಟೇಬಲ್ ಸ್ಪೂನ್ ತೆಂಗಿನ ಎಣ್ಣೆ ಮತ್ತು ಒಂದು ಟೇಬಲ್ ಸ್ಪೂನ್ ನಿಂಬೆ ರಸವನ್ನು ಬೆರೆಸಿ ಬಿಸಿ ಮಾಡಿ ನೆತ್ತಿಗೆ ಹಚ್ಚಿ ಮಸಾಜ್ ಮಾಡಬೇಕು. ಇದರ ಬಳಿಕ ಬಿಸಿ ನೀರಿನ ತೇವಾಂಶವುಳ್ಳ ಟವೆಲ್ ನ್ನು 20 ನಿಮಿಷ ಇಟ್ಟರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

7. ಹೆನ್ನಾ ಚಿಕಿತ್ಸೆ
ನಾಲ್ಕು ಟೇಬಲ್ ಸ್ಪೂನ್ ನಿಂಬೆ ರಸ ಮತ್ತು ಕಾಫಿ, ಎರಡು ಹಸಿ ಮೊಟ್ಟೆ, ಒಂದು ಟೇಬಲ್ ಸ್ಪೂನ್ ಮೆಂತ್ಯೆ ಬೀಜದ ಹುಡಿ ಮತ್ತು ಸಾಕಷ್ಟು ಚಹಾ ಸಾರದೊಂದಿಗೆ ಹೆನ್ನಾ ಹುಡಿಯನ್ನು ಮಿಶ್ರಣ ಮಾಡಿ ದಪ್ಪ ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ ಮತ್ತು ಒಂದು ಗಂಟೆ ಬಳಿಕ ತೊಳೆಯಿರಿ.



Click it and Unblock the Notifications