Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಬೆಂಗಳೂರಿನ ನೀರು, ಗಾಳಿ ಕೂದಲಿಗೆ ಯೋಗ್ಯವಲ್ಲ!
ಬೆಂಗಳೂರಿನಲ್ಲಿ ಇತ್ತೀಚೆಗೆ ಮಾಲಿನ್ಯ ಜಾಸ್ತಿಯಾಗುತ್ತಿದೆ. ವಾಯು ಮಾಲಿನ್ಯ, ಶಬ್ಧ ಮಾಲಿನ್ಯದ ಜೊತೆಗೆ ನೀರು ಮಾಲಿನ್ಯವೂ ಸೇರಿಕೊಂಡು ಜನರು ಕಂಗಾಲಾಗುವಂತೆ ಮಾಡಿದೆ. ಇದರಿಂದಾಗಿ ಈ ನಗರದ ಜನ ಬೇರೆ ಬೇರೆ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಇತ್ತೀಚೆಗೆ ಪ್ರಮುಖವಾದದ್ದು ಅಂದರೆ ಕೂದಲು ಉದುರುವಿಕೆ. ಅದರಲ್ಲೂ ಈ ಸಮಸ್ಯೆಗೆ ಮುಖ್ಯ ಕಾರಣ ಅಂದರೆ ಬೆಂಗಳೂರಿನ ನೀರು ಮತ್ತು ಗಾಳಿ.
ಬೆಂಗಳೂರಿನ ವಿದ್ಯಾರ್ಥಿನಿಯಾಗಿರುವ ಸೌಮ್ಯ ಕೂದಲು ಉದುರುವಿಕೆಯ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿಯಾದಳು. ಹೇರ್‌ಲೈನ್ ವೈದ್ಯರು ಈ ಸಮಯದಲ್ಲಿ ಮಾಡಿದ ಪರೀಕ್ಷೆಯಲ್ಲಿ ಗಮನಾರ್ಹವಾದ ವಿಷಯ ಬಹಿರಂಗವಾಯಿತು. ಸದ್ಯಕ್ಕಷ್ಟೇ 10ನೇ ತರಗತಿಯ ಪರೀಕ್ಷೆ ಮುಗಿಸಿದ್ದ ಸೌಮ್ಯ ಪರೀಕ್ಷೆಯ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದಳು. ಈ ಸ್ಟ್ರೆಸ್‌ನಿಂದಾಗಿ ಈಕೆಗೆ ಕೂದಲು ಉದುರುವಿಕೆ ಶುರುವಾಗಿತ್ತು.
ಇದೇ ಸಂದರ್ಭದಲ್ಲಿ ಉಳಿದ ರೋಗಿಗಳನ್ನು ತಪಾಸಣೆ ಮಾಡಿದ ವೈದ್ಯರಿಗೆ ನಿಜವಾಗಿಯೂ ಶಾಕ್ ಕಾದಿತ್ತು. ಅದೇನು ಎಂದು ನೋಡೋಣವೇ?

ಬೆಂಗಳೂರಿನವರ ಕೂದಲು ಉದುರಲು ಕಾರಣ
ತಪಾಸಣೆಗಾಗಿ ಬಂದಿದ್ದ ರೋಗಿಗಳ ಕೂದಲು ಬೆಂಗಳೂರಿನ ನೀರಿನ ಮಾಲಿನ್ಯ ಮತ್ತು ಇಲ್ಲಿನ ವಾಯು ಮಾಲಿನ್ಯದಿಂದ ಉದುರುತ್ತಿದೆ ಅಂತ ವೈದ್ಯರಿಗೆ ತಿಳಿಯಿತು.

ಮಾಲಿನ್ಯ
ನೀರಿನ ಮಾಲಿನ್ಯ, ಕೆಟ್ಟ ಗಾಳಿಯ ಜೊತೆಗೆ ಜನರ ಜೀವನ ಶೈಲಿ ಕೂಡಾ ಕೂದಲುದುರುವಿಕೆಗೆ ಕಾರಣ ಅನ್ನೋದು ಹೇರ್‌ಲೈನ್‌ನ ಬಾನಿ ಮಂಚಾಂಡ ಅವರ ಹೇಳಿಕೆ. ಈ ಎಲ್ಲಾ ಕಾರಣಗಳಿಂದಾಗಿ ಇತ್ತೀಚೆಗೆ 20ರಿಂದ 30ವರ್ಷದ ಒಳಗಿನ ಯುವ ಜನರಲ್ಲಿ ಕೂದಲುದುರುವಿಕೆ ಒಂದು ಮುಖ್ಯ ಖಾಯಿಲೆಯಾಗಿದೆ. ಇತ್ತೀಚೆಗೆ ಈ ವಯಸ್ಸಿನವರೇ ಹೆಚ್ಚಾಗಿ ಕೂದಲಿಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಚಿಕಿತ್ಸೆ ತೆಗೆದುಕೊಳ್ಳುತ್ತಿರುವವರ ವಯಸ್ಸಿನ ಮಿತಿ ಕಡಿಮೆಯಾಗುತ್ತಿದೆ ಅನ್ನೋದು ಹೇರ್‌ಲೈನ್‌ನ ಟ್ರೈಕಾಲಜಿಸ್ಟ್‌ಗಳ ಅಭಿಪ್ರಾಯ.

ಹಾರ್ಮೋನ್ ನ ಬದಲಾವಣೆ
ನನ್ನ ಎಲ್ಲಾ ಕ್ಲಿನಿಕ್‌ಗಳಲ್ಲೂ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಹೆಚ್ಚಾಗಿ ಚಿಕಿತ್ಸೆಗೆ ಬರುತ್ತಾರೆ. ಹಾರ್ಮೋನಿನ ಬದಲಾವಣೆ ಮತ್ತು ಸ್ಟ್ರೆಸ್ 15 ವರ್ಷ ವಯಸ್ಸಿನ ಹುಡುಗಿಯರಲ್ಲೂ ಕೂದಲುದುರುವಿಕೆ ಹೆಚ್ಚಾಗುವಂತೆ ಮಾಡುತ್ತಿದೆ. ಇದರ ಜೊತೆಗೆ ಇತ್ತೀಚೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಬೇರೆ ಬೇರೆ ಊರಿಗೆ ಪ್ರಯಾಣ ಮಾಡುವುದರಿಂದಾನೂ ಕೂದಲುದುರುವಿಕೆ ಹೆಚ್ಚಾಗುತ್ತಿದೆ ಅಂತ ಬಾನಿ ಮಂಚಾಂಡ, ಹೇರ್‌ಲೈನ್ ಹೇರ್ ರಿಸರ್ಚ್ ಮತ್ತು ಟ್ರೀಟ್‌ಮೆಂಟ್‌ನ ನಿರ್ದೇಶಕಿ ಹೇಳುತ್ತಾರೆ.

ಹೇರ್‌ಲೈನ್ ರಿಸರ್ಚ್ ಮತ್ತು ಟ್ರೀಟ್‌ಮೆಂಟ್ ಸೆಂಟರ್ನ ಸಂಶೋಧನೆ
ಕಳೆದ 8 ತಿಂಗಳಿಂದ ಬೆಂಗಳೂರಿನ ಹೇರ್‌ಲೈನ್ ರಿಸರ್ಚ್ ಮತ್ತು ಟ್ರೀಟ್‌ಮೆಂಟ್ ಸೆಂಟರ್ ಕೂದಲುದುರುವಿಕೆಯ ಬಗ್ಗೆ ಸಂಶೋಧನೆ ನಡೆಸಿದೆ. ಇದರ ಪ್ರಕಾರ ಕೂದಲ ಕಸಿಗಾಗಿ (ಹೇರ್ ಟ್ರಾನ್ಸ್‌ಪ್ಲಾಂಟ್) ಬರುವ 50 ಪ್ರತಿಶತಕ್ಕಿಂತಾನೂ ಹೆಚ್ಚಿನ ಜನ 20ರಿಂದ 30 ವರ್ಷ ವಯಸ್ಸಿನವರು. ಈ ವಯಸ್ಸಿನವರಲ್ಲಿ ಹೆಚ್ಚಾಗಿ ಕೂದಲುದುರುವಿಕೆ ಕಂಡು ಬಂದ ಕಾರಣ ನಾವು ಈ ಬಗ್ಗೆ ಸಂಶೋಧನೆ ಮಾಡಿದೆವು. ಚಿಕಿತ್ಸೆಗಾಗಿ ಬಂದವರ ರಕ್ತ ಪರೀಕ್ಷೆ, ವಯಸ್ಸು, ಬಿಪಿ, ಜೀವನಶೈಲಿ ಸೇರಿದಂತೆ ಅವರಿಗೆ ಅನುವಂಶಿಕವಾಗಿ ಏನಾದರೂ ಸಮಸ್ಯೆ ಇದೆಯೇ ಅನ್ನುವ ಪರೀಕ್ಷೆಯನ್ನೂ ಮಾಡಲಾಯಿತು ಅಂತ ಬಾನಿ ಮಂಚಾಂಡ ಅವರು ತಿಳಿಸಿದರು.

ಏತಕ್ಕಾಗಿ ಕೂದಲುದುರುವಿಕೆ?
ಕಡಿಮೆ ಪ್ರಮಾಣದ ನಿದ್ದೆ ಮತ್ತು ವ್ಯಾಯಾಮದಿಂದಾಗಿ ಕೂದಲುದುರುವಿಕೆ ಕಂಡು ಬರುತ್ತದೆ ಅಂತಾರೆ ವೈದ್ಯರು. ಇನ್ನು ಚಿಕಿತ್ಸೆಗಾಗಿ ಬಂದ ಕೆಲವು ಜನರ ಬ್ಲಡ್ ಸ್ಯಾಂಪಲ್‌ಗಳನ್ನು ಶೇಖರಿಸಿ ಅದರ ಮೇಲೆನೂ ಪರಿಶೀಲನೆ ನಡೆಸಲಾಯಿತು. ಗ್ಲೈಸೆಮಿಕ್ ಇಂಡೆಕ್ಸ್‌ನ ತೊಂದರೆಯಿಂದಾಗಿ ಕೂದಲುದುರುವಿಕೆ ಕಂಡು ಬರುತ್ತದೆ. ಲಿವರ್‌ನ ತೊಂದರೆಯಿಂದಾಗಿನೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನು ರಕ್ತದಲ್ಲಿ ಸತುವಿನ ಅಂಶ ಹೆಚ್ಚಾದರೆ ಕೂಡಾ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತರ್ಜಲ ಅಥವಾ ಕಲಾಯಿ ಹಾಕಿದ ಪಾತ್ರೆಗಳಲ್ಲಿ ಸತುವಿನ ಅಂಶ ಜಾಸ್ತಿ ಇರುತ್ತೆ ಅಂತಾರೆ ವೈದ್ಯರು.

ಆರ್‌ಟಿ ನಗರದಲ್ಲಿ ಸತುವಿನ ಅಂಶ ಹೆಚ್ಚು
ಹೇರ್‌ಲೈನ್ ನಡೆಸಿದ ಸಂಶೋಧನೆಯ ಪ್ರಕಾರ ಆರ್ ಟಿ ನಗರ ಮತ್ತು ಸುತ್ತಮುತ್ತಲಿನ ಏರಿಯಾಗಳಲ್ಲಿನ ಜನರ ರಕ್ತದಲ್ಲಿ ಸತುವಿನ ಅಂಶ ಹೆಚ್ಚಾಗಿದೆ. ಇದು ನೀರಿನಿಂದ ಮತ್ತು ಪಾತ್ರೆಗಳ ಕಲಾಯಿಯಿಂದ ಬಂದಿರುವುದು ಅಂತ ತಜ್ಞರ ಹೇಳಿಕೆ.

ಒತ್ತಡ ಮತ್ತು ಕೂದಲು ಉದುರುವಿಕೆ
ಕೂದಲುದುರುವಿಕೆಗೆ ಮುಖ್ಯ ಕಾರಣ ಸ್ಟ್ರೆಸ್. ಅಧಿಕ ಒತ್ತಡದಿಂದಾಗಿ ದೇಹದಲ್ಲಿ ಕಾರ್ಟಿಸೋನ್ ಅನ್ನುವ ಹಾರ್ಮೋನ್ ಉತ್ಪತ್ತಿಯಾಗುತ್ತೆ. ಇದು ಕೂದಲ ಬೆಳವಣಿಗೆಯನ್ನು ತಡೆಹಿಡಿಯುತ್ತದೆ. ಇದರಿಂದ ಕೂದಲ ಬೆಳವಣಿಗೆ ಕಡಿಮೆಯಾಗುತ್ತದೆ. ವ್ಯಾಯಾಮದಿಂದಾಗಿ ಈ ಕಾರ್ಟಿಸೋನ್‌ನ ಅಂಶ ಕಡಿಮೆಯಾಗುತ್ತೆ. ಜೊತೆಗೆ ವ್ಯಾಯಾಮ ಮಾಡುವುದರಿಂದ ಸೆರೊಟೊನಿನ್ ಅನ್ನುವ ಹಾರ್ಮೋನಿನ ಅಂಶ ದೇಹದಲ್ಲಿ ಹೆಚ್ಚಾಗುತ್ತದೆ. ಇದರಿಂದ ಕೂದಲಿನ ಬೆಳವಣಿಗೆಯ ಜೊತೆಗೆ ಅನೇಕ ಉಪಯೋಗಗಳನ್ನು ಪಡೆಯಬಹುದು.

ಕೊಬ್ಬಿನಂಶ ಹೆಚ್ಚಾದರೆ
ರಕ್ತದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾಗುವುದು ಮತ್ತು ಸಕ್ಕರೆ ಅಂಶ ಹೆಚ್ಚಾಗುವುದರಿಂದಾನೂ ಕೂದಲು ಉದುರುವ ಸಾಧ್ಯತೆ ಇದೆ. ಹೆಚ್ಚಾದ ಸಕ್ಕರೆ ಅಂಶ ಮತ್ತು ಕೊಬ್ಬಿನ ಅಂಶದಿಂದ ಡಿಹೈಡ್ರೋಸ್ಟೆರಾನ್ ಅನ್ನುವ ಹಾರ್ಮೋನ್ ಉತ್ಪತ್ತಿಯಾಗುತ್ತೆ. ವ್ಯಾಯಾಮ ಈ ಹಾರ್ಮೋನನ್ನು ಕಂಟ್ರೋಲ್ ಮಾಡುತ್ತೆ.

ಕೂದಲಿನಲ್ಲಿರುವ ಎಣ್ಣೆಯಂಶ
ನೆತ್ತಿಯಲ್ಲಿ ಹೆಚ್ಚಿನಂಶದ ಎಣ್ಣೆ
ಕೂದಲಿನಲ್ಲಿ ಎಣ್ಣೆಯ ಅಂಶ ಇರುವುದು ಸಾಮಾನ್ಯ.. ಇದರ ಜೊತೆಗೆ ಮತ್ತೆ ಮತ್ತೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ನೆತ್ತಿಯಲ್ಲಿ ಇನ್‌ಫೆಕ್ಷನ್ ಆಗುವ ಸಾಧ್ಯತೆಗಳಿವೆ. ಇದರಿಂದಾನೂ ಕೂದಲು ಉದುರುವ ಸಾಧ್ಯತೆಗಳಿವೆ ಅಂತಾರೆ ವೈದ್ಯರು. ಆದ್ದರಿಂದ ಕೂದಲಿಗೆ ಎಣ್ಣೆ ಹಚ್ಚಿ ಅರ್ಧ ಗಂಟೆಯ ಕಾಲ ಬಿಡಬೇಕು. ಅರ್ಧ ಗಂಟೆಯ ನಂತರ ಮೈಲ್ಡ್ ಶ್ಯಾಂಪೂನಿಂದ ಹೇರ್‌ವಾಷ್ ಮಾಡಬೇಕು ಅನ್ನುವುದು ವೈದ್ಯರ ಅಭಿಪ್ರಾಯ.

ತುಂಬಾ ನಿದ್ದೆ ಕೆಡಬೇಡಿ
ಜೊತೆಗೆ ದಿನಕ್ಕೆ ಪ್ರತಿಯೊಬ್ಬರಿಗೂ ಏಳು ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆ ಇದೆ. ಇದರಿಂದಾನೂ ಕೂದಲಿನ ಸಮಸ್ಯೆಗಳನ್ನು ತಡೆಗಟ್ಟಬಹುದು.



Click it and Unblock the Notifications
