Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹರೆಯದಲ್ಲಿ ಮುಪ್ಪಾಗಿಸುವ ನೆರೆ ಕೂದಲಿಗೆ ಸುಲಭ ಪರಿಹಾರ

ಅಕಾಲಿಕ ನೆರೆ ಕೂದಲು ಬರಲು ಕಾರಣ:
ಕೂದಲಿನ ಬುಡದಲ್ಲಿ ಮೆಲಾನಿನ್ ಉತ್ಪತ್ತಿಯಾಗುತ್ತದೆ. ಕೂದಲಿನ ಬಣ್ಣದಲ್ಲಿ ವ್ಯತ್ಯಾಸ ಉಂಟಾಗಲು ಮೆಲಾಲಿನ್ ಕಾರಣ. ಇದರ ಉತ್ಪತ್ತಿ ಕಡಿಮೆಯಾದಂತೆ ಕೂದಲು ಬಿಳಿ ಬಣ್ಣವನ್ನು ಹೊಂದುವುದು.
ನೈಸರ್ಗಿಕ ಡೈ ಬಳಕೆ ಸೂಕ್ತ:
ರಾಸಾಯನಿಕಗಳನ್ನು ಬಳಸಿ ತಯಾರಿಸಿರುವ ಹೇರ್ ಡೈ ಬಳಸುವುದಕ್ಕಿಂತ ನೈಸರ್ಗಿಕ ಡೈ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ರಾಸಾಯನಿಕಗಳನ್ನು ಬಳಸಿ ತಯಾರಿಸದ ಹೇರ್ ಡೈ ಬಳಸಿದರೆ ತಲೆಬುಡದಲ್ಲಿ ತುರಿಕೆ, ಕೂದಲು ಕವಲೊಡೆಯುವುದು, ಹೊಟ್ಟಿನ ಸಮಸ್ಯೆ ಉಂಟಾಗುತ್ತದೆ.
ನೈಸರ್ಗಿಕ ಡೈ ಬಳಸುವ ವಿಧಾನ:
1. ಮೆಹಂದಿ ಎಲೆಯನ್ನು ಸೌತೆಕಾಯಿ ಜೊತೆ ಅರೆದು ತಲೆಗೆ ಹಚ್ಚಿದರೆ ನೆರೆ ಕೂದಲು ಮಾಯವಾಗುವುದು. ಇದರಿಂದ ಕೂದಲು ಮತ್ತಷ್ಟು ಆರೋಗ್ಯಕರವಾಗಿ ಬೆಳೆಯುತ್ತದೆ.
2. ಟೀ ಜೊತೆ ಮೆಹಂದಿ ಎಲೆಯನ್ನು ಹಾಕಿ ಕುದಿಸಿ ಅದು ಆರಿದ ನಂತರ ಆ ಮಿಶ್ರಣವನ್ನು ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಈ ರೀತಿ ಮಾಡುವಾಗ ಅಂಗಡಿಗಳಲ್ಲಿ ದೊರೆಯುವ ಮೆಹಂದಿ ಪುಡಿಗಿಂತ ಮನೆಯಲ್ಲಿಯೆ ದೊರೆಯುವ ಮೆಹಂದಿ ಎಲೆಯನ್ನು ಬಳಸುವುದು ಸೂಕ್ತ.
3. ಹರ್ಬಲ್ ಬ್ಯುಟಿ ಸಲೂನ್ ಗಳಲ್ಲಿ ಸಿಗುವ ಹೇರ್ ಡೈ ಕೂಡ ಹಚ್ಚಿ ಕೊಳ್ಳಬಹುದು. ಈ ಡೈ ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ಬಳಿಕ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು ಕಪ್ಪಾಗುವುದರ ಜೊತೆಗೆ ತುಂಬಾ ಕಾಲದವರೆಗೆ ಹೊಳಪನ್ನು ಹೊಂದಿರುತ್ತದೆ.
4. ಮಕ್ಕಳಲ್ಲಿ ಅಕಾಲಿಕ ನೆರೆಯನ್ನು ತಡೆಗಟ್ಟಲು ಹಾಗಲಕಾಯಿ, ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಬೀಟ್ ರೂಟ್ ರಸ, ಟೀ ಮತ್ತು ಮೆಹಂದಿ ಬೆರೆಸಿ ಹಚ್ಚಿದರೆ ಕೂದಲು ಕಪ್ಪಾಗುವುದರ ಜೊತೆಗೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ.



Click it and Unblock the Notifications
