Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಣಕಾಲಿನ ಬಣ್ಣ ಗಾಢವಾಗಿದೆಯೇ? ಇನ್ನು ಚಿಂತೆ ಬಿಡಿ
ಸಾಮಾನ್ಯವಾಗಿ ನೀಳ ದಿರಿಸು ಧರಿಸುವವರಿಗೆ ಮೊಣಕಾಲ ಬಣ್ಣ ಗಾಢವಾಗಿರುವುದನ್ನು ಮರೆಮಾಚುವ ಅನಿವಾರ್ಯ ವಿಧಾನವಾಗಿದೆ. ಮೊಣಕಾಲವರೆಗಿನ ಸುಂದರ ಉಡುಪುಗಳನ್ನು ತೊಡಲು ಮನಸ್ಸು ಹಾತೊರೆಯುತ್ತಿದ್ದರೂ ಮೊಣಕಾಲ ಬಣ್ಣ ಇದಕ್ಕೆ ತಣ್ಣಿರೆರಚುತ್ತದೆ. ಇದಕ್ಕೆ ವಿವಿಧ ಕಾರಣಗಳಿವೆ. ಬಿಸಿಲಿಗೆ ಒಡ್ಡುವ ಮೂಲಕ, ತೀವ್ರವಾಗಿ ಒಣಗುವುದು, ಅನುವಂಶಿಕ ಕಾರಣಗಳು, ಧೂಳು, ಕೆಲವು ಔಷಧಿಗಳ ಅಡ್ಡಪರಿಣಾಮಗಳು ಮುಂತಾದ ಕಾರಣಗಳಿವೆ.
ಮೊಣಕಾಲ ಮೇಲೆ ಭಾರ ಇರಿಸಿ ಮಾಡುವ ಕೆಲಸಗಳೂ ಇನ್ನೊಂದು ಪ್ರಮುಖ ಕಾರಣವಾಗಿದೆ. (ಉದಾಹರಣೆಗೆ ಮೊಣಕಾಲೂರಿ ಮಾಡುವ ಪ್ರಾರ್ಥನೆ, ನೆಲ ಒರೆಸುವುದು ಇತ್ಯಾದಿ). ಭಾರ ಮತ್ತು ಘರ್ಷಣೆಯಿಂದ ಸತ್ತ ಜೀವಕೋಶಗಳು ಚರ್ಮಕ್ಕೆ ಅಂಟುತ್ತಲೇ ಹೋಗಿ ಈ ಭಾಗ ಒರಟಾಗುತ್ತದೆ ಹಾಗೂ ಗಾಢವರ್ಣ ಪಡೆಯುತ್ತದೆ.
ವಿಶೇಷವೆಂದರೆ ಮೊಣಕಾಲಿನ ಚಿಪ್ಪಿನ ಮೇಲಿರುವ (ಮಗು ಹುಟ್ಟಿದಾಗ ಈ ಚಿಪ್ಪು ಇರುವುದೇ ಇಲ್ಲ, ಕ್ರಮೇಣ ಬೆಳೆಯುತ್ತದೆ) ಚರ್ಮದಲ್ಲಿ ಎಣ್ಣೆಯ ಗ್ರಂಥಿಗಳೇ ಇಲ್ಲ. ಇದೇ ಕಾರಣಕ್ಕೆ ಈ ಚರ್ಮ ಅತಿ ಹೆಚ್ಚು ಒಣಗುತ್ತದೆ. ಸೂಕ್ತ ಆರೈಕೆ ಇಲ್ಲದಿದ್ದರೆ ಕ್ರಮೇಣ ಅತಿ ಹೆಚ್ಚು ಗಾಢವಾಗುತ್ತದೆ. ಆದರೆ ಈ ಬಣ್ಣವನ್ನು ಸೂಕ್ತ ವಿಧಾನಗಳಿಂದ ಸಹಜವರ್ಣದ ಅತಿ ಹತ್ತಿರಕ್ಕೆ ತರಬಹುದು. ಇದಕ್ಕೆ ದುಬಾರಿ ಚಿಕಿತ್ಸೆ ಬೇಕಾಗಿಲ್ಲ, ಮನೆಯಲ್ಲಿಯೇ ಸುಲಭವಾಗಿ ದೊರಕುವ ಸಾಮಾಗ್ರಿಗಳನ್ನೇ ಬಳಸಿ ಸೌಂದರ್ಯವನ್ನು ಹೊಂದಬಹುದು. ಕೆಲವೇ ದಿನಗಳಲ್ಲಿ ಗಿಡ್ಡ ಉಡುಪುಗಳನ್ನು ತೊಟ್ಟು ಆತ್ಮವಿಶ್ವಾಸವನ್ನು ಮೆರೆಯಲು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ, ನಿಮಗೆ ಸೂಕ್ತವೆನಿಸಿದ ಕ್ರಮವನ್ನು ಕೈಗೊಳ್ಳಬಹುದು....

ಅಡುಗೆಸೋಡಾ ಮತ್ತು ಹಾಲು
ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ಅಡುಗೆ ಸೋಡಾ ಉತ್ತಮವಾಗಿದೆ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಬಣ್ಣವನ್ನು ತಿಳಿಗೊಳಿಸಲು ಸಕ್ಷಮವಾಗಿದೆ. ಇವೆರಡನ್ನು ಸಮಪ್ರಮಾಣದಲ್ಲಿ ಚೆನ್ನಾಗಿ ಕಲಸಿ ಚೆನ್ನಾಗಿ ತೊಳೆದು ಒರೆಸಿಕೊಂಡ ಮೊಣಕಾಲುಗಳ ಮೇಲೆ ದಪ್ಪನಾಗಿ ಹಾಕಿ ಒಣಗಲು ಬಿಡಿ. ಕೊಂಚ ಹೊತ್ತಿನ, ಅಂದರೆ ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಬಿಟ್ಟು ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಬಳಸಿ ತೊಳೆದುಕೊಳ್ಳಿ. ಇದು ಅಗ್ಗವೂ ಆಗಿದ್ದು ಸುರಕ್ಷಿತವೂ ಆಗಿದೆ.

ಲಿಂಬೆ ಮತ್ತು ಜೇನು
ಸತ್ತ ಜೀವಕೋಶಗಳನ್ನು ನಿವಾರಿಸಲು ಲಿಂಬೆರಸ ಉತ್ತಮವಾಗಿದೆ. ಚರ್ಮದ ಆರೈಕೆ ಮತ್ತು ಕೋಮಲತೆಗೆ ಜೇನು ಉತ್ತಮವಾಗಿದೆ. ಇವೆರಡೂ ಜೊತೆಗೂಡಿದರೆ ಚರ್ಮದ ಒರಟುತನ ನಿವಾರಿಸಲು ಮತ್ತು ಕೋಮಲತೆ ಮತ್ತು ಸಹಜವರ್ಣ ಪಡೆಯಲು ನೆರವಾಗುತ್ತದೆ. ಸಮಪ್ರಮಾಣದಲ್ಲಿ ಲಿಂಬೆ ಮತ್ತು ಜೇನನ್ನು ಬೆರೆಸಿ ದಪ್ಪನಾಗಿ ಹಾಕಿ ಒಣಗಲು ಬಿಡಿ. ಕೊಂಚ ಹೊತ್ತಿನ, ಅಂದರೆ ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಬಳಸಿ ತೊಳೆದುಕೊಳ್ಳಿ

ಸೌತೆಕಾಯಿ
ಸೌತೆಕಾಯಿಯ ತೇವಕಾರಕ ಗುಣ ಮೊಣಕಾಲಿನ ಒರಟು ಚರ್ಮವನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುತ್ತದೆ. ಅಲ್ಲದೆ ಚರ್ಮಕ್ಕೆ ತಂಪು ನೀಡುವ ಜೊತೆಗೇ ಸಹಜವರ್ಣ ಪಡೆಯಲೂ ನೆರವಾಗುತ್ತದೆ.

ಕಡ್ಲೆಹಿಟ್ಟು ಮತ್ತು ಹಾಲು
ಕಡ್ಲೆಹಿಟ್ಟಿನ ಗುಣಗಳು ಚರ್ಮದ ಕೋಮಲತೆ ಮತ್ತು ಸಹಜವರ್ಣ ಪಡೆಯಲು ಪೂರಕವಾಗಿವೆ. ಸಮಪ್ರಮಾಣದಲ್ಲಿ ಇವೆರಡನ್ನೂ ಬೆರೆಸಿ ಮೊಣಕಾಲುಗಳ ಚರ್ಮಕ್ಕೆ ದಪ್ಪನಾಗಿ ಹಚ್ಚಿ ಕೊಂಚ ಕಾಲ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಶಿರ್ಕಾ ಮತ್ತು ಮೊಸರು
ಮೊಸರು ಚರ್ಮಕ್ಕೆ ಉತ್ತಮ ಪ್ರಮಾಣದ ಆರ್ದ್ರತೆ ನೀಡುತ್ತದೆ ಹಾಗೂ ಶಿರ್ಕಾ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಇವೆರಡನ್ನೂ ಬೆರೆಸಿ ತಕ್ಷಣವೇ ಮೊಣಕಾಲ ಮೇಲೆ ದಪ್ಪನಾಗಿ ಹರಡಿ. ಕೊಂಚವೇ ಹೊತ್ತು, ಅಂದರೆ ಹತ್ತು ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಶಿರ್ಕಾ ಉರಿ ಎನಿಸಿದರೆ ಬೇಗನೇ ತೊಳೆದುಕೊಳ್ಳಿ.



Click it and Unblock the Notifications