Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದು ಮಳೆಗಾಲದ ಬ್ಯೂಟಿ ಟಿಪ್ಸ್! ಒಮ್ಮೆ ಪ್ರಯತ್ನಿಸಿ ನೋಡಿ...
ಬಿರುತಾಪದ ಬಿಸಿಲಿನ ದಿನಗಳು ಕಳೆದ ಬಳಿಕ ಎದುರಾಗುವ ಮಳೆಯ ಕಾರಣ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಯಾಗುತ್ತದೆ. ಗಾಳಿಯಲ್ಲಿ ತೇಲುವ ವಿವಿಧ ವೈರಸ್ಸುಗಳು, ಬ್ಯಾಕ್ಟೀರಿಯಾಗಳು ಹಲವು ರೀತಿಯ ರೋಗಗಳನ್ನು ತಂದೊಡ್ಡುವ ಜೊತೆಗೇ ತ್ವಚೆಗೂ ಅಪಾಯವನ್ನು ತಂದೊಡ್ಡುತ್ತವೆ.

ಆದ್ದರಿಂದ ಬಿಸಿಲಿನ ದಿನಗಳಂತೆಯೇ ಮಳೆಗಾಲದ ದಿನಗಳಲ್ಲಿಯೂ ತ್ವಚೆಯ ಆರೈಕೆ ಮಾಡುವುದು ಅಗತ್ಯವಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಗಾಳಿಯಲ್ಲಿ ಹೆಚ್ಚುವ ಆರ್ದ್ರತೆ ಎಣ್ಣೆಪಸೆಯನ್ನು ಹೆಚ್ಚಿಸುತ್ತದೆ. ಗಾಳಿ ಒಣಗಿರುವ ಕಾರಣ ಚರ್ಮ ಒಡೆಯುವುದು ಮತ್ತು ಉರಿಗೂ ಕಾರಣವಾಗುತ್ತದೆ. ಅಲ್ಲದೇ ಶಿಲೀಂಧ್ರದ ಸೋಂಕಿನ ಕಾಟವನ್ನೂ ಚರ್ಮ ಎದುರಿಸಬೇಕಾಗಬಹುದು. ಚುಮುಚುಮು ಚಳಿಗೆ-ನೈಸರ್ಗಿಕ ಬಾಡಿ ಸ್ಕ್ರಬ್
ಮಳೆಗಾಲದಲ್ಲಿ ಅತಿ ಅಗತ್ಯವಾಗಿ ಕೈಗೊಳ್ಳಬೇಕಾದ ಆರೈಕೆ ಎಂದರೆ ಸತ್ತ ಜೀವಕೋಶಗಳನ್ನು ನಿವಾರಿಸುವುದು. ಇತರ ಸಮಯದಲ್ಲಿ ಸತ್ತ ಜೀವಕೋಶಗಳು ಬಿಡಿಯಾಗಿ ಹಾರಿ ಹೋದರೆ ಮಳೆಗಾಲದಲ್ಲಿ ಇವು ಹೊರಚರ್ಮಕ್ಕೆ ತೆಳುವಾದ ಪದರದಂತೆ ಅಂಟಿಕೊಂಡಿರುತ್ತದೆ. ಇದನ್ನು ನಿವಾರಿಸುವುದೇ ಕಠಿಣ ಕಾರ್ಯ.
ಇದನ್ನು ನಿವಾರಿಸಿದಾಗ ಮಾತ್ರ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಚರ್ಮದ ತೈಲಗಳು ಮತ್ತು ಬೆವರು ಹೊರಬರಲು ಸಾಧ್ಯವಾಗುತ್ತದೆ. ಇದರಿಂದ ರಕ್ತಸಂಚಾರ ಸುಗಮಗೊಂಡು ಚರ್ಮ ಕಾಂತಿಯುಕ್ತ ಮತ್ತು ತಾಜಾತನದಿಂದ ಕೂಡಿರುತ್ತದೆ. ಬ್ಯೂಟಿ ಟಿಪ್ಸ್: ಲಿಂಬೆ ಹಣ್ಣಿನ ಬಾಡಿ ಸ್ಕ್ರಬ್, ನೀವೂ ಪ್ರಯತ್ನಿಸಿ
ಈ ಸತ್ತ ಜೀವಕೋಶಗಳನ್ನು ನಿವಾರಿಸಲು ಕೆಲವು ಲೇಪಗಳಿದ್ದು ಇವು ಗಟ್ಟಿಯಾಗಿ ಅಂಟಿಕೊಂಡಿದ್ದ ಪದರವನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ. ಬನ್ನಿ ಇಂತಹ ಸುಲಭವಾದ ಕೆಲವು ವಿಧಾನಗಳನ್ನು ನೋಡೋಣ:
ಕಂದು ಸಕ್ಕರೆ ಮುಖಲೇಪ
*ಸಮಪ್ರಮಾಣದಲ್ಲಿ ಕಂದು ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ನಯವಾದ ಲೇಪನ ತಯಾರಿಸಿ. ನಿಮಗೆ ಎಷ್ಟು ಅಗತ್ಯ ಎನಿಸುತ್ತದೆಯೋ ಆ ಪ್ರಕಾರ ಬೆರೆಸಿ.
*ಈ ಲೇಪನವನ್ನು ಮುಖದ ಸಹಿತ ಇಡಿಯ ಶರೀರಕ್ಕೆ ತೆಳುವಾಗಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ಸ್ನಾನ ಮಾಡಿ. ಇದರಿಂದ ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮ ಕೋಮಲ ಮತ್ತು ಕಾಂತಿಯುಕ್ತವಾಗುತ್ತದೆ.
ಬಾಳೆಹಣ್ಣಿನ ಮುಖಲೇಪ
ಸತ್ತ ಜೀವಕೋಶಗಳನ್ನು ನಿವಾರಿಸುವ ಜೊತೆಗೇ ಆರ್ದ್ರತೆಯನ್ನು ಹೀರಿಕೊಳ್ಳುವಂತೆ ಮಾಡುವ ಗುಣ ಬಾಳೆಹಣ್ಣಿನಲ್ಲಿದೆ. ಚರ್ಮದ ಸೂಕ್ಷ್ಮ ರಂಧ್ರಗಳನ್ನು ಅಗಲವಾಗಿ ತೆರೆದು ಕಲ್ಮಶಗಳು ಹೊರಬರಲು ನೆರವಾಗುತ್ತದೆ.
ಯಾವಾಗ ಬೇಕಾದರೂ ಸುಲಭವಾಗಿ ದೊರಕುವ ಈ ಹಣ್ಣನ್ನು ಬಳಸಿ ಮಳೆಗಾಲದಲ್ಲಿಯೂ ಚರ್ಮದ ಆರೈಕೆ ಪಡೆಯಬಹುದು. ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!
ಮಾಡುವ ವಿಧಾನ
*ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ.
*ಇದಕ್ಕೆ ನಾಲ್ಕು ಚಿಕ್ಕಚಮಚ ಸಕ್ಕರೆ ಹಾಕಿ ಚೆನ್ನಾಗಿ ಬೆರೆಸಿ
*ಕೆಲವು ಹನಿ ವನಿಲ್ಲಾ ಎಸೆನ್ಸ್ ರಸವನ್ನು ಬೆರೆಸಿ.
*ಈ ಮುಖಲೇಪವನ್ನು ನಯವಾದ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಮುಖ ಮತ್ತು ದೇಹದ ಇತರ ಭಾಗಗಳಿಗೆ ತೆಳುವಾಗಿ ಹಚ್ಚು.
*ಕೊಂಚ ಹೊತ್ತಿನ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
*ಪರ್ಯಾಯವಾಗಿ ಒಂದು ಬಾಳೆಹಣ್ಣಿನ ತಿರುಳಿಗೆ ಒಂದು ಲಿಂಬೆಯ ರಸ ಸೇರಿಸಿ ಚೆನ್ನಾಗಿ ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಬಹುದು.
*ಕೊಂಚ ಹೊತ್ತಿನ ಬಳಿಕ, ಅಂದರೆ ಈ ಲೇಪ ಒಣಗಿದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸಮಯದ ಆಭಾವವಿದ್ದಾಗ ಈ ವಿಧಾನ ಹೆಚ್ಚು ಸೂಕ್ತವಾಗಿದೆ.



Click it and Unblock the Notifications



