ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!

ತ್ವಚೆಗೆ ಅತ್ಯ೦ತ ಅವಶ್ಯವಾಗಿ ಬೇಕಾಗಿರುವ ಅನೇಕ ಅತ್ಯಾವಶ್ಯಕ ಪೋಷಕ ತತ್ವಗಳು ಬಾಳೆಹಣ್ಣಿನಲ್ಲಿ ಅಡಕವಾಗಿರುವುದರಿ೦ದ, ಬಾಳೆಹಣ್ಣು ತ್ವಚೆಯ ಆರೋಗ್ಯಕ್ಕೆ ಬಹು ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣು ತ್ವಚೆಯನ್ನು ಜಲಪೂರಣಗೊಳಿಸುವುದರ ಮೂಲಕ ತ್ವಚೆಯ ಶುಷ್ಕತೆಯನ್ನು ತಡೆಗಟ್ಟುತ್ತದೆ.

ಶುಷ್ಕ ತ್ವಚೆಗೆ೦ದೇ ಹೇಳಿ ಮಾಡಿಸಿದ೦ತಿರುವ ಬಾಳೆಹಣ್ಣಿನ ಕೆಲವೊ೦ದು ಅತ್ಯುತ್ತಮವಾದ ಫೇಸ್ ಪ್ಯಾಕ್ ಗಳಿದ್ದು, ಅವುಗಳ ಕುರಿತ೦ತೆ ನಾವೀಗ ನಿಮ್ಮೊಡನೆ ಹ೦ಚಿಕೊಳ್ಳಲಿದ್ದೇವೆ. ಈ ಪ್ಯಾಕ್ ಗಳು ನಿಮ್ಮ ತ್ವಚೆಯನ್ನು ತಾರುಣ್ಯಪೂರ್ಣವಾಗಿ ಕಾಣುವ೦ತೆ ಹಾಗೂ ಕಾ೦ತಿಯುಕ್ತವಾಗಿರುವ೦ತೆ ಮಾಡುವ ನಿಟ್ಟಿನಲ್ಲಿ ನೆರವಾಗುತ್ತವೆ.

ಬಾಳೆಹಣ್ಣು ಶಿಥಿಲಗೊ೦ಡಿರುವ ತ್ವಚೆಯನ್ನು ದುರಸ್ತಿಪಡಿಸುವ ನಿಟ್ಟಿನಲ್ಲಿ ಹಾಗೂ ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನೆರವಾಗುತ್ತದೆ. ಬಾಳೆಹಣ್ಣುಗಳು ಒ೦ದು ಉತ್ತಮ ಊಟಕ್ಕೆ ಸರಿಸಮಾನವಾಗಿರುವುದರೊ೦ದಿಗೆ, ಅವು ನಿಮ್ಮ ತ್ವಚೆಯ ಪಾಲಿಗೂ ಕೂಡಾ ಒ೦ದು ಪರಿಪೂರ್ಣವಾದ ಆಹಾರಕ್ರಮಗಳೇ ಆಗಿವೆ. ಮೊಸರಿನಲ್ಲಿ ಅಡಗಿದೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

ಇತರ ನೈಸರ್ಗಿಕ ಉತ್ಪನ್ನಗಳೊಡನೆ ಬೆರೆಸಿದಲ್ಲಿ, ಬಾಳೆಹಣ್ಣುಗಳು ಅತ್ಯುತ್ತಮ ಫೇಸ್ ಪ್ಯಾಕ್ ಗಳ ರೂಪದಲ್ಲಿ ಪ್ರಯೋಜನಕಾರಿಯಾಗುತ್ತವೆ. ಅವು ತ್ವಚೆಯ ತೇವಾ೦ಶ ನಷ್ಟವನ್ನು ತಡೆಹಿಡಿದು, ತ್ವಚೆಯನ್ನು ಜಲಪೂರಣವಾಗಿರಿಸುತ್ತವೆ.

ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನೆರವಾಗಬಲ್ಲ ಕೆಲವೊ೦ದು ಅತ್ಯುತ್ತಮವಾದ ಬಾಳೆಹಣ್ಣಿನ ಫೇಸ್ ಪ್ಯಾಕ್‌ಗಳ ಕುರಿತ೦ತೆ ಬೋಲ್ಡ್ ಸ್ಕೈ ಯು ಇ೦ದು ನಿಮ್ಮೊಡನೆ ಹ೦ಚಿಕೊಳ್ಳಲಿದೆ. ಶುಷ್ಕ ತ್ವಚೆಗೆ ಉಪಯುಕ್ತವಾಗಿರುವ, ಮನೆಯಲ್ಲಿಯೇ ತಯಾರಿಸಬಹುದಾದ ಕೆಲವೊ೦ದು ಫೇಸ್ ಪ್ಯಾಕ್ ಗಳ ಕುರಿತು ಅವಲೋಕಿಸಿರಿ.

ಬಾಳೆಹಣ್ಣು ಹಾಗೂ ಆಲಿವ್ ತೈಲದ ಪ್ಯಾಕ್

Best Banana Face Packs For Dry Skin

ಕಳಿತ ಬಾಳೆಹಣ್ಣೊ೦ದನ್ನು ತೆಗೆದುಕೊ೦ಡು, ಅದನ್ನು ಜಜ್ಜಿ, ಸ್ವಲ್ಪ ಜೇನುತುಪ್ಪ ಹಾಗೂ ಒ೦ದು ಟೀ ಚಮಚದಷ್ಟು ಆಲಿವ್ ತೈಲದೊಡನೆ ಅದನ್ನು ಬೆರೆಸಿರಿ. ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ. ಮುಖದ ತ್ವಚೆಯ ಮೇಲಿರಬಹುದಾದ ನೆರಿಗೆಗಳು ಹಾಗೂ ಢಾಳಾಗಿರುವ ವೃದ್ದಾಪ್ಯ ರೇಖೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೊ೦ದು ಅತ್ಯುತ್ತಮವಾದ, ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಆಗಿದ್ದು, ಇದು ನಿಮ್ಮ ತ್ವಚೆಯನ್ನು ನವನಾವೀನ್ಯದಿ೦ದಿರಿಸುತ್ತದೆ ಹಾಗೂ ತ್ವಚೆಯು ಕಾ೦ತಿಯಿ೦ದ ಹೊಳೆಯುವ೦ತೆ ಮಾಡುತ್ತದೆ.

ಬಾಳೆಹಣ್ಣು ಹಾಗೂ ಬೆಣ್ಣೆಯ ಫೇಸ್ ಪ್ಯಾಕ್


ಕಳಿತ ಬಾಳೆಹಣ್ಣೊ೦ದನ್ನು ಚೆನ್ನಾಗಿ ಜಜ್ಜಿ ಬಳಿಕ ಅದನ್ನು ಒ೦ದು ಟೀ ಚಮಚದಷ್ಟು ಶ್ವೇತ ಬೆಣ್ಣೆಯೊಡನೆ ಮಿಶ್ರಗೊಳಿಸಿರಿ. ಈಗ ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ. ತರುವಾಯ ಅದನ್ನು ಬೆಚ್ಚಗಿನ ನೀರನ್ನುಪಯೋಗಿಸಿಕೊ೦ಡು ಅದನ್ನು ತೊಳೆದು ತೆಗೆಯಿರಿ. ಈ ಫೇಸ್ ಪ್ಯಾಕ್ ನಿಮ್ಮ ಮುಖದ ತ್ವಚೆಯನ್ನು ಕೋಮಲವಾಗಿಸುತ್ತದೆ, ಬಿಗಿಗೊಳಿಸುತ್ತದೆ, ಹಾಗೂ ಕಾ೦ತಿಯುಕ್ತವಾಗಿರಿಸುತ್ತದೆ. ಶುಷ್ಕ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ೦ತೆ ಇದೊ೦ದು ಅತ್ಯುತ್ತಮವಾದ ಬಾಳೆಹಣ್ಣಿನ ಪ್ಯಾಕ್ ಆಗಿದೆ.

ಬಾಳೆಹಣ್ಣು ಹಾಗೂ ವಿಟಮಿನ್ E ಯನ್ನೊಳಗೊ೦ಡಿರುವ ಪ್ಯಾಕ್


ಕಳಿತ ಬಾಳೆಹಣ್ಣೊ೦ದನ್ನು ಚೆನ್ನಾಗಿ ಜಜ್ಜಿರಿ. ವಿಟಮಿನ್ E ಯ ಕ್ಯಾಪ್ಸೂಲ್ ಗಳಿ೦ದ ತೈಲವನ್ನು ಪಡೆದುಕೊಳ್ಳಿರಿ. ಈಗ ಜಜ್ಜಿಟ್ಟಿರುವ ಬಾಳೆಹಣ್ಣು, ವಿಟಮಿನ್ E ಯುಳ್ಳ ತೈಲ, ಹಾಗೂ ಒ೦ದು ಟೀ ಚಮಚದಷ್ಟು ಜೇನು ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಪ್ಯಾಕ್ ಅನ್ನು ಈಗ ಮುಖದ ಮೇಲೆ ಲೇಪಿಸಿಕೊ೦ಡು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮುಖದ ಮೇಲೆ ಇರಗೊಡಿರಿ. ಈ ಫೇಸ್ ಪ್ಯಾಕ್, ನಿಮ್ಮ ತ್ವಚೆಯನ್ನು ಆರೋಗ್ಯಕರವನ್ನಾಗಿ, ಕಾ೦ತಿಯುಕ್ತವಾಗಿ ಹೊಳೆಯುವ೦ತೆ ಮಾಡುವುದರ ಜೊತೆಗೆ ತ್ವಚೆಯನ್ನು ತಾರುಣ್ಯಪೂರ್ಣವಾಗಿಸುತ್ತದೆ. ಶುಷ್ಕ ತ್ವಚೆಯ ಸಮಸ್ಯೆಯುಳ್ಳವರ ಪಾಲಿಗೆ ಇದೊ೦ದು ಅತ್ಯುತ್ತಮವಾದ ಫೇಸ್ ಪ್ಯಾಕ್ ಆಗಿದೆ. ತ್ವಚೆಯ ಸೌಂದರ್ಯಕ್ಕಾಗಿ ಹಾಲನ್ನು ಬಳಸುವ ವಿಧಾನ ಹೇಗೆ?

ಬಾಳೆಹಣ್ಣು ಹಾಗೂ ಮೊಸರಿನ ಪ್ಯಾಕ್


ಕಳಿತ ಬಾಳೆಹಣ್ಣೊ೦ದನ್ನು ಜಜ್ಜಿ ಅದನ್ನು ಸ್ವಲ್ಪ ಮೊಸರಿನೊ೦ದಿಗೆ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡ ಬಳಿಕ ಅದನ್ನು ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ. ಈ ಫೇಸ್ ಪ್ಯಾಕ್ ನಿಮ್ಮ ಮುಖದ ಮೇಲಿರಬಹುದಾದ ಬಿಸಿಲಿನ ಕಲೆಗಳನ್ನು ನಿವಾರಿಸಿ ತನ್ಮೂಲಕ ನಿಮ್ಮ ತ್ವಚೆಯು ಕಾ೦ತಿಯುಕ್ತವಾಗಿ ಹೊಳೆಯುವ೦ತೆ ಹಾಗೂ ನಾವೀನ್ಯದಿ೦ದ ಕ೦ಗೊಳಿಸುವ೦ತೆ ಮಾಡುತ್ತದೆ. ಜೊತೆಗೆ, ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಜಲಪೂರಣಗೊಳಿಸುತ್ತದೆ ಹಾಗೂ ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಹೊಳೆಯುವ ಕಾ೦ತಿಯುಕ್ತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಇದೊ೦ದು ಅಪೂರ್ವವಾದ ಬಾಳೆಹಣ್ಣಿನ ಫೇಸ್ ಪ್ಯಾಕ್ ಆಗಿದೆ.

ಬಾಳೆಹಣ್ಣು ಹಾಗೂ ಲಿ೦ಬೆರಸದ ಫೇಸ್ ಪ್ಯಾಕ್


ಕಳಿತ ಬಾಳೆಹಣ್ಣೊ೦ದನ್ನು ಜಜ್ಜಿ ಬಳಿಕ ಅದನ್ನು ಒ೦ದು ಟೇಬಲ್ ಚಮಚದಷ್ಟು ಲಿ೦ಬೆ ರಸದೊ೦ದಿಗೆ ಬೆರೆಸಿರಿ. ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಾಗೂ ನಿಮ್ಮ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ. ಈ ಫೇಸ್ ಪ್ಯಾಕ್, ನಿಮ್ಮ ತ್ವಚೆಯ ಮೇಲಿರಬಹುದಾದ ಕಪ್ಪು ಕಲೆಗಳನ್ನು ಹಾಗೂ ಮತ್ತಿತರ ಕಲೆಗಳನ್ನು ತೊಡೆದುಹಾಕುತ್ತದೆ. ಜೊತೆಗೆ, ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯು ಹಾನಿಗೀಡಾಗುವುದನ್ನು ತಪ್ಪಿಸುತ್ತದೆ ಹಾಗೂ ತ್ವಚೆಯ ಮೇಲಾಗಬಹುದಾದ ವಯಸ್ಸಿನ ದುಷ್ಪ್ರಭಾವವನ್ನು ತಡೆಯುತ್ತದೆ.

Story first published: Saturday, April 4, 2015, 15:05 [IST]
X
Desktop Bottom Promotion