Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಗುಲಾಬಿ ಬಣ್ಣದ ತುಟಿಗೆ ಒಂದಿಷ್ಟು ಸರಳೋಪಾಯ
ಅಂದದ ತುಟಿಗಳೂ ಕೂಡ ನಿಮ್ಮ ಸೌಂದರ್ಯದಲ್ಲಿ ಪ್ರಮುಖ ಅಂಗವಾಗಿದ್ದು ಅವುಗಳ ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ತುಟಿ ಒಣಗಿ ಹೊಳಪು ಕಳೆದುಕೊಂಡಿದ್ದರೆ ಮುಖದ ಸೌಂದರ್ಯ ಎಷ್ಟೇ ಆಕರ್ಷಕವಾಗಿದ್ದರೂ ಅದು ಕಳೆಗುಂದುತ್ತದೆ. ತುಟಿಯ ಆರೋಗ್ಯವೆಂದರೆ ಅದನ್ನು ಹೆಚ್ಚಿನ ರಾಸಾಯನಿಕಗಳಿಂದ ಮುಕ್ತಗೊಳಿಸುವುದಾಗಿದೆ. ತುಟಿಗೆ ನೀವು ಬಳಸುವ ಲಿಪ್ಸ್ಟಿಕ್ ಆಗಿರಬಹುದು, ಲಿಪ್ ಗ್ಲೋಸ್
ಮುಂತಾದ ರಾಸಾಯನಿಕಗಳು ಕಳಪೆ ಮಟ್ಟದ್ದಾಗಿದ್ದರೆ ನಿಮ್ಮ ತುಟಿ ಕಳೆಗುಂದುತ್ತದೆ ಇನ್ನು ನೀವು ಧೂಮಪಾನ ಹಾಗೂ ಮದ್ಯಪಾನವನ್ನು ಹೆಚ್ಚು ಮಾಡುವವರಾಗಿದ್ದೀರಿ ಎಂದಾದಲ್ಲಿ ತುಟಿ ಕಪ್ಪು ಬಣ್ಣಕ್ಕೆ ತಿರುಗಿ ನಿಸ್ತೇಜವಾಗುತ್ತದೆ. ಕಪ್ಪು ತುಟಿಯ ಬದಲು ಕೆಂಪು ತುಟಿ ನಿಮ್ಮದಾಗಬೇಕೆ?
ನೈಸರ್ಗಿಕವಾಗಿ ಕೆಲವೊಂದು ಸಲಹೆಗಳನ್ನು ಅನುಸರಿಸುವುದರ ಮೂಲಕ ತುಟಿಯ ಅಂದವನ್ನು ಇನ್ನಷ್ಟು ಸೊಗಸಾಗಿಸುವುದರ ಮೂಲಕ ನೈಸರ್ಗಿಕವಾಗಿ ತುಟಿಯ ಸೌಂದರ್ಯವನ್ನು ವೃದ್ಧಿಸುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ತುಟಿಯ ಸೌಂದರ್ಯಕ್ಕಾಗಿ ಅಗತ್ಯವಾಗಿರುವ ಸಲಹೆಗಳನ್ನು ನೋಡೋಣ.

ದಾಳಿಂಬೆಯ ಜಾದೂ
ತುಟಿಗಳ ಮೇಲೆ ದಾಳಿಂಬೆಯು ಮಾಡಬಹುದಾದ ಜಾದೂವನ್ನು ಸ್ವತಃ ಅದರ ಬಣ್ಣವೇ ಸೂಚಿಸುತ್ತದೆ. ಒಂದು ಬಟ್ಟಲಿನಲ್ಲಿ ದಾಳಿಂಬೆಯ ಬೀಜಗಳನ್ನು ಕಲೆಹಾಕಿ ಅವನ್ನು ಚೆನ್ನಾಗಿ ಜಜ್ಜಿರಿ. ತದನಂತರ ಹಾಲಿನ ಕೆನೆಯೊಂದಿಗೆ ಬೆರೆಸಿ ನಿಮ್ಮ ತುಟಿಗಳಿಗೆ ಲೇಪಿಸಿರಿ. ಸ್ವಲ್ಪ ಸಮಯದ ನಂತರ ಇದನ್ನು ತೆಗೆಯಿರಿ. ಇದರ ಫಲಿತಾಂಶವು ನಿಮಗೆ ಕೂಡಲೇ ತಿಳಿಯುತ್ತದೆ. ನಿಯಮಿತವಾಗಿ ಹೀಗೆ ಮಾಡುವುದರಿಂದ ನಿಮ್ಮ ತುಟಿಗಳು ಹೊಳೆಯುವ ಗುಲಾಬಿವರ್ಣವನ್ನು ಪಡೆಯುತ್ತವೆ.

ಕಿತ್ತಳೆ ಹಣ್ಣಿನ ಸಿಪ್ಪೆಯ ಮ್ಯಾಜಿಕ್
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನಯವಾಗಿ ತುಟಿಗಳ ಮೇಲೆ ಉಜ್ಜುವುದರಿಂದ ತುಟಿಯ ಹೊಳಪು ಹೆಚ್ಚಾಗುವುದರ ಜೊತೆಗೆ ತೇವವಾಗಿರಿಸುತ್ತವೆ, ಹಾಗಾಗಿ ಕಿತ್ತಳೆ ಹಣ್ಣನ್ನು ಸೇವಿಸುವಾಗ ಈ ಅಂಶವನ್ನು ನೆನಪಿಸಿಕೊಳ್ಳಿ. ಅಲ್ಲದೆ ಸೌತೆಕಾಯಿಯ ರಸ, ಕ್ಯಾರೆಟ್ ರಸ, ಅಥವಾ ಬೀಟ್ ರೂಟ್‌ರಸದಲ್ಲಿ ಹತ್ತಿಯನ್ನು ನೆನೆಸಿ ನಿಮ್ಮ ತುಟಿಗಳ ಮೇಲೆ ಲೇಪಿಸಿಕೊಂಡರೆ ಕೆಲವೇ ದಿನಗಳಲ್ಲಿ ನಿಮಗೆ ನಿಖರವಾದ ಫಲಿತಾಂಶವು ಕಾಣುತ್ತದೆ.

ಸಕ್ಕರೆ ಹಾಗೂ ಆಲಿವೆ ಎಣ್ಣೆಯ ಮಿಶ್ರಣ
ಸಕ್ಕರೆಯ ಸ್ಪಟಿಕಗಳು ತುಟಿಗಳಿಗೆ ಅತ್ಯುತ್ತಮ scrubbing agents ಗಳೆಂದು ಸಾಬೀತಾಗಿದೆ. ಸ್ವಲ್ಪ ಸಕ್ಕರೆಯನ್ನು ಆಲಿವ್ ಎಣ್ಣೆ ಅಥವಾ ಹಾಲಿನ ಕೆನೆಯೊಂದಿಗೆ ಬೆರೆಸಿರಿ ಹಾಗೂ ಈ ಮಿಶ್ರಣವನ್ನು ನಿಮ್ಮ ತುಟಿಗಳ ಮೇಲೆ ನಯವಾಗಿ ಲೇಪಿಸಿರಿ. ಇದು ನಿಮ್ಮ ತುಟಿಗಳ ನಿರ್ಜೀವ ತ್ವಚೆಯನ್ನು ನಿವಾರಿಸುತ್ತದೆ ಹಾಗೂ ಅದೇ ಸಮಯಕ್ಕೆ ನಿಮ್ಮ ತುಟಿಗಳನ್ನು ತೇವವಾಗಿರಿಸುತ್ತದೆ. ಈ ಮಿಶ್ರಣವನ್ನು ನಿಮ್ಮ ತುಟಿಗಳ ಮೇಲೆ ಹಾಗೆಯೇ ಸ್ವಲ್ಪ ಕಾಲ ಇರಗೊಡಿರಿ ಹಾಗೂ ಸ್ವಲ್ಪ ಸಮಯದ ಬಳಿಕ ನಯವಾಗಿ ಉಜ್ಜಿ ತೆಗೆಯಿರಿ.

ಲಿಂಬೆ ಹಣ್ಣು ಹಾಗೂ ಗ್ಲಿಸಿರಿನ್‌ನ ಮಿಶ್ರಣ
ಪ್ರತಿದಿನ ರಾತ್ರಿ ಮಲಗುವ ಮೊದಲು, ಲಿಂಬೆ ರಸ ಹಾಗೂ ಗ್ಲಿಸಿರಿನ್‌ನ ಮಿಶ್ರಣವನ್ನು ನಿಮ್ಮ ತುಟಿಗಳಿಗೆ ಲೇಪಿಸಿರಿ. ಇದನ್ನು, ರಾತ್ರಿ ಪೂರ್ತಿ ಹಾಗೆಯೇ ಇರಗೊಟ್ಟು, ಮರುದಿನ ಬೆಳಗ್ಗೆ ತೊಳೆಯಿರಿ. ಇದು ನಿಮ್ಮ ತುಟಿಗಳಿಗೆ ಹೊಳಪು ನೀಡಲು ಸಹಕಾರಿಯಾಗಿದೆ.

ಶುಂಠಿಯ ಸ್ಕ್ರಬ್
*ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆಯಿರಿ.ನಂತರ ಶುಂಠಿಯ ಸಿಪ್ಪೆಯನ್ನು ತೆಗೆದು, ಅದನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.
*ಇನ್ನು ಒಂದು ಸಣ್ಣ ಬಟ್ಟಲನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಕಂದು ಸಕ್ಕರೆಯನ್ನು ಅಗತ್ಯ ಪ್ರಮಾಣದಲ್ಲಿ ಹಾಕಿ. ಈಗ ಅದಕ್ಕೆ ಶುಂಠಿಯ ತುಂಡುಗಳನ್ನು ಹಾಕಿ, ಜೊತೆಗೆ ಜೇನು ತುಪ್ಪವನ್ನು ಬೆರೆಸಿ.
*ಇದಾದ ಮೇಲೆ ಶುಂಠಿ ಜೇನುತುಪ್ಪದ ಮಿಶ್ರಣವನ್ನು ತುಟಿಗಳಿಗೆ ಲೇಪಿಸಿ. ಇದಕ್ಕೆ ಬದಲಿಯಾಗಿ ನೀವು ಟೂಥ್‌ಬ್ರಷ್ ಸಹ ಬಳಸಬಹುದು.
*ಮಿಶ್ರಣವನ್ನು ಲೇಪಿಸುವಾಗ ವೃತ್ತಾಕಾರವಾಗಿ ಲೇಪಿಸಿ.
*ಇದೆಲ್ಲ ಮುಗಿದ ಮೇಲೆ ಒಂದು ಹಳೆ ಟವೆಲ್ ಅಥವಾ ಟಿಶ್ಯೂ ಪೇಪರ್ ತೆಗೆದುಕೊಂಡು, ಮಿಶ್ರಣವನ್ನು ಸ್ವಚ್ಛಗೊಳಿಸಿ.
*ಈ ಟಾನಿಕನ್ನು ವಾರಕ್ಕೊಮ್ಮೆ ಬಳಸಿ, ಹೊಳೆಯುವ ಮೃದುವಾದ ತುಟಿಗಳನ್ನು ನಿಮ್ಮದಾಗಿಸಿಕೊಳ್ಳಿ.



Click it and Unblock the Notifications