Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ಎಣ್ಣೆಗಳಿರುವಾಗ ಸನ್ ಟ್ಯಾನ್ ಚಿಂತೆ ಏಕೆ?
ಮಾರ್ಚ್ ನಿಂದ ಮೇ ತಿಂಗಳವರೆಗೆ ಹಗಲು 10ರಿಂದ ಸಂಜೆ 3 ಗಂಟೆವರೆಗೆ ಬಳಿಕ ಉರಿ ಬಿಸಿಲಿರುತ್ತದೆ. ಬರೀ ಬಿಸಿಲಿನಲ್ಲಿ ಓಡಾಡಲು ಆಗುವುದಿಲ್ಲ. ಬಿಸಿಲಿನಲ್ಲಿ ಸ್ವಲ್ಪ ನಡೆದರೂ ಮುಖವೆಲ್ಲಾ ಕೆಂಪಾಗಿ ಕಪ್ಪಗಾಗಿ ಹೋಗುತ್ತದೆ. ಸನ್ ಟ್ಯಾನ್ ಉಂಟಾದರೆ ಅದು ಹೋಗಲು ಒಂದು ವಾರ ಕಾಲ ಬೇಕು. ತುಂಬಾ ಟ್ಯಾನ್ ಉಂಟಾದರೆ 1 ತಿಂಗಳಾದರೂ ಬೇಕು.
ಯಾವ ಕ್ರೀಮ್ ಹಚ್ಚಿದರೂ ಸನ್ ಟ್ಯಾನ್ ಬೇಗನೆ ಹೋಗುವುದಿಲ್ಲ. ಆದ್ದರಿಂದ ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಹಚ್ಚಿ. ಟ್ರಕ್ಕಿಂಗ್, ಬೀಚ್, ಟ್ರಿಪ್ ಅಂತ ಹೋದಾಗ ಸನ್ ಟ್ಯಾನ್ ಉಂಟಾಗದಂತೆ ಎಚ್ಚರಿಕೆವಹಿಸಿ. ಈ ಕೆಳಗಿನ ಎಣ್ಣೆಯಲ್ಲಿ ನಿಮಗೆ ಇಷ್ಟವಾದ ಎಣ್ಣೆಯಿಂದ ಮಸಾಜ್ ಮಾಡಿ. ಏಕೆಂದರೆ ಇವು ಸನ್ ಟ್ಯಾನ್ ಉಂಟಾಗದಂತೆ ತಡೆಯುತ್ತದೆ ಹಾಗೂ ಒಂದು ವೇಳೆ ಸನ್ ಟ್ಯಾನ್ ಉಂಟಾಗಿದ್ದರೆ ಬೇಗನೆ ಹೋಗಲಾಡಿಸುತ್ತದೆ.

ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆ ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಸನ್ ಟ್ಯಾನ್ ಉಂಟಾದರೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿದರೆ ತ್ವಚೆ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮಕ್ಕಳಿಗೆ ಮಸಾಜ್ ಮಾಡಲು ಈ ಎಣ್ಣೆಯನ್ನು ಬಳಸಬಹುದು.

ಸೂರ್ಯಕಾಂತಿ ಎಣ್ಣೆ
ಸೂರ್ಯಕಾಂತಿ ಎಣ್ಣೆಯಿಂದ ಮಸಾಜ್ ಮಾಡಿದರೆ ಸನ್ ಟ್ಯಾನ್ ಕಡಿಮೆಯಾಗುವುದು. ಇದರಿಂದ ಮಸಾಜ್ ಮಾಡಿದರೆ ತ್ವಚೆಯ ಹೊಳಪು ಹೆಚ್ಚುವುದು.

ಆಲೀವ್ ಎಣ್ಣೆ
ಆಲೀವ್ ಎಣ್ಣೆಯಲ್ಲಿ ವಿಟಮಿನ್ ಇ ಇರುವುದಿಂದ ತ್ವಚೆಗೆ ತುಂಬಾ ಒಳ್ಳೆಯದು. ಬಿಸಿಲು ತಾಗಿ ಮುಖ ಕಪ್ಪಾಗಿದ್ದರೆ ಈ ಎಣ್ಣೆಯನ್ನು ಹಚ್ಚಿದರೆ ಸಾಕು ಕಪ್ಪು ಕಲೆಗಳು ಕಡಿಮೆಯಾಗಿ ತ್ವಚೆಯ ಸೌಂದರ್ಯ ಹೆಚ್ಚುವುದು.

ತೆಂಗಿನೆಣ್ಣೆ
ತೆಂಗಿನೆಣ್ಣೆ ಕೂಡ ತ್ವಚೆಗೆ ಸೂಕ್ತವಾದ ಎಣ್ಣೆಯಾಗಿದೆ. ಇದರಿಂದ ಮಸಾಜ್ ಮಾಡಿದರೆ ತ್ವಚೆಯನ್ನು ಮಾಯಿಶ್ಚರೈಸರ್ ಆಗಿ ಇಡುವುದರಿಂದ ಬಿಸಿಲಿಗೆ ಹೋದರೆ ಬೇಗನೆ ಸನ್ ಟ್ಯಾನ್ ಉಂಟಾಗುವುದಿಲ್ಲ, ಮುಖ ಕಂದಿದ್ದರೆ ಇದನ್ನು ಹಚ್ಚಿ ಸರಿ ಪಡಿಸಬಹುದು.

ಗೋಧಿ ಎಣ್ಣೆ
ಗೋಧಿ ಎಣ್ಣೆಯಲ್ಲಿ ವಿಟಮಿನ್ ಇ, ಡಿ, ಎ ಇದ್ದು ತ್ವಚೆಗೆ ಅಗತ್ಯವಾದ ಪೋಷಕಾಂಶ ದೊರೆಯುವುದರಿಂದ ತ್ವಚೆ ಸನ್ ಟ್ಯಾನ್ ನಿಂದ ಬೇಗನೆ ಚೇತರಿಸಿಕೊಳ್ಳುತ್ತದೆ.

ಬೆಣ್ಣೆ ಹಣ್ಣಿನ ಎಣ್ಣೆ
ಬೆಣ್ಣೆ ಹಣ್ಣಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಮುಖದ ಕಾಂತಿ ಹೆಚ್ಚುವುದು, ಸನ್ ಟ್ಯಾನ್ ಕಲೆಯನ್ನು ಹೋಗಲಾಡಿಸುತ್ತದೆ, ತ್ವಚೆ ಆಕರ್ಷಕವಾಗಿ ಕಾಣುತ್ತದೆ.



Click it and Unblock the Notifications
