Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಲಿಪ್ ಬಾಮ್ ಶೈನಿ ತುಟಿಯಲ್ಲಿ ದೀರ್ಘಕಾಲ ಇರಲು ಟಿಪ್ಸ್
ಪ್ರತಿಯೊಬ್ಬ ಮಹಿಳೆಯರ ಮೇಕಪ್ ಕಿಟ್ ನಲ್ಲಿ ಲಿಪ್ ಬಾಮ್ ಇಲ್ಲದಿದ್ದರೆ ಆಶ್ಚರ್ಯ. ತುಟಿಗೆ ಮೇಕಪ್ ಮಾಡದೆ ತುಟಿ ಶೈನಿಯಾಗಿ, ಆಕರ್ಷಕವಾಗಿ ಕಾಣಬೇಕೆಂದು ಬಯಸುವುದಾದರೆ ಲಿಪ್ ಬಾಮ್ ಹಚ್ಚಲೇಬೇಕು.
ಲಿಪ್ ಬಾಮ್ ಹಚ್ಚಿದಾಗ ತುಟಿ ಮಾಯಿಶ್ಚರೈಸರ್ ನಿಂದ ಕೂಡಿರುತ್ತದೆ. ಇದರಿಂದ ಮುಖಕ್ಕೆ ವಿಶೇಷ ಕಳೆ ದೊರೆಯುತ್ತದೆ. ಆದರೆ ಲಿಪ್ ಬಾಮ್ ಕೆಲವೇ ಗಂಟೆಗಳಷ್ಟೇ ನಮ್ಮ ತುಟಿಯಲ್ಲಿರುತ್ತದೆ. ಆದ್ದರಿಂದ ಆಗಾಗ ಹಚ್ಚಬೇಕಾಗುತ್ತದೆ. ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ, ಈ ಟಿಪ್ಸ್ ಪಾಲಿಸಿದರೆ ತುಟಿಯಲ್ಲಿ ಲಿಪ್ ಬಾಮ್ ಹೆಚ್ಚು ಸಮಯ ಇರುವಂತೆ ಮಾಡಿ, ಆಗಾಗ ಲಿಪ್ ಬಾಮ್ ಹಚ್ಚುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು, ಈ ಟಿಪ್ಸ್ ಪಾಲಿಸಲು ನೀವು ರೆಡಿನಾ?

ಲಿಪ್ ಲೈನರ್
ಲಿಪ್ ಬಾಮ್ ಹಚ್ಚುವ ಮೊದಲು ಲಿಪ್ ಲೈನರ್ ಹಚ್ಚಿ ನಂತರ ಲೈಟ್ ಬಣ್ಣದ ಲಿಪ್ ಗ್ಲೋಸ್ ಹಚ್ಚಿ, ನಂತರ ಲಿಪ್ ಬಾಮ್ ಹಚ್ಚಿದರೆ ಲಿಪ್ ಬಾಮ್ ತುಂಬಾ ಸಮಯದವರೆಗೆ ನಿಮ್ಮ ತುಟಿ ಮಾಯಿಶ್ಚರೈಸರ್ ಆಗಿರುವಂತೆ ಮಾಡುತ್ತದೆ.

ಒಂದು ಕೋಟ್ ಮಾತ್ರ ಹಚ್ಚಿ
ಲಿಪ್ ಬಾಮ್ ಹಚ್ಚಿ ಅಭ್ಯಾಸವಾದರೆ ಪ್ರತೀ ಅರ್ಧ ಗಂಟೆಗೊಮ್ಮೆ ಹಚ್ಚಬೇಕೆನಿಸುತ್ತದೆ. ಆದ್ದರಿಂದ ಪರಿಣಿತರು 'ಕೇವಲ ಒಂದು ಕೋಟ್ ಲಿಪ್ ಬಾಮ್ ಹಚ್ಚಿ, ಹೀಗೆ ಹಚ್ಚಿದರೆ ಲಿಪ್ ಬಾಮ್ ನ ಹೊಳಪು ತುಟಿಯಲ್ಲಿ ದೀರ್ಘಕಾಲವಿರುತ್ತದೆ' ಎಂದು ಹೇಳುತ್ತಾರೆ.

ಲಿಪ್ ಸ್ಟಿಕ್ ಹಚ್ಚಿದಾಗ ಲಿಪ್ ಬಾಮ್ ಬಳಸುವ ರೀತಿ
ಲಿಪ್ ಸ್ಟಿಕ್ ಹಚ್ಚಿ, ಲಿಪ್ ಬಾಮ್ ಬಳಸುವುದಾದರೆ ಲಿಪ್ ಸ್ಟಿಕ್ ಬಣ್ಣ ನ್ಯೂಡ್ ಕಲರ್ ಆಗಿರಲಿ, ಮೊದಲು ಲಿಪ್ ಸ್ಟಿಕ್ ಹಚ್ಚಿ ನಂತರ ಲಿಪ್ ಬಾಮ್ ಹಚ್ಚಿದರೆ ತುಟಿ ಆಕರ್ಷಕವಾಗಿ ಕಾಣುವುದು.

ಪೌಡರ್ ಮ್ಯಾಜಿಕ್
ಲಿಪ್ ಬಾಮ್ ದೀರ್ಘಕಾಲ ತುಟಿಯಲ್ಲಿರುವಂತೆ ಮಾಡಲು ಮತ್ತೊಂದು ಮೇಕಪ್ ಟ್ರಿಕ್ ಎಂದರೆ ಮೊದಲು ತುಟಿಗೆ ಸ್ವಲ್ಪ ಪೌಡರ್ ಹಚ್ಚಿ, ಅದರ ಮೇಲೆ ಲಿಪ್ ಬಾಮ್ ಹಚ್ಚಿದರೆ ಲಿಪ್ ಬಾಮ್ ನ ಎಫೆಕ್ಟ್ ತುಂಬಾ ಸಮಯದವರೆಗೆ ಇರುತ್ತದೆ.

ಬೆಣ್ಣೆಯ ಸಹಾಯ
ಪ್ರತೀದಿನ ಮಲಗುವ ಮುನ್ನ ಸ್ವಲ್ಪ ಬೆಣ್ಣೆ ಅಥವಾ ತುಪ್ಪವನ್ನು ಹಚ್ಚಿ ಮಲಗಿ. ಇದು ನಿಮ್ಮ ತುಟಿಯ ಹೊಳಪನ್ನು ಹೆಚ್ಚಿಸಿ, ನಿಮ್ಮ ಅಂದವನ್ನು ಹೆಚ್ಚಿಸುವುದು.



Click it and Unblock the Notifications
