Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸ್ತನ ಗಾತ್ರ ನೈಸರ್ಗಿಕವಾಗಿ ಕಮ್ಮಿ ಮಾಡಲು ಟಿಪ್ಸ್
ಸರಿಯಾದ ಸ್ತನದ ಗಾತ್ರ ಹೆಣ್ಣಿನ ದೇಹ ಸೌಂದರ್ಯವನ್ನು ಹೆಚ್ಚಿಸುವುದು. ಸ್ತನ ಗಾತ್ರ ತುಂಬಾ ಚಿಕ್ಕದಿದ್ದರೆ ನೋಡಲು ಎಷ್ಟೇ ಚೆಂದವಿದ್ದರೂ ರೂಪವಂತೆ ಅನಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಕೆಲವು ಸೆಲೆಬ್ರಿಟಿಗಳು ಶಸ್ತ್ರ ಚಿಕಿತ್ಸೆ ಮಾಡಿ ತಮ್ಮ ಸ್ತನ ಗಾತ್ರ ಹೆಚ್ಚಿಸಿಕೊಂಡಿದ್ದಾರೆ.
ಸ್ತನ ಚಿಕ್ಕದಿರುವವರು ಸರ್ಜರಿ ಬದಲು ವ್ಯಾಯಾಮ, ಆಹಾರಗಳಿಂದ ಸ್ತನ ಗಾತ್ರ ಹೆಚ್ಚಿಸಿಕೊಳ್ಳುವುದು ಒಳ್ಳೆಯದು. ಸ್ತನ ಗಾತ್ರ ತುಂಬಾ ದೊಡ್ಡದಿದ್ದರೂ ಕಷ್ಟ. ಬೆನ್ನು ನೋವು ಕಾಣಿಸಿಕೊಳ್ಳುವುದು ಹಾಗೂ ದೇಹದ ಸೌಂದರ್ಯ ಕೂಡ ಹಾಳಾಗಿ ತುಂಬಾ ದಪ್ಪಗಿರುವವರಂತೆ ಕಾಣುತ್ತಾರೆ.
ಕೆಲವರ ದೇಹವೇನು ದಪ್ಪಗಿರುವುದಿಲ್ಲ, ಆದರೆ ಅಧಿಕ ಸ್ತನ ಗಾತ್ರದಿಂದ ತುಂಬಾ ದಪ್ಪಗೆ ಕಾಣುತ್ತಾರೆ, ಇಂತಹವರು ತಮ್ಮ ಸ್ತನ ಗಾತ್ರ ಕಮ್ಮಿ ಮಾಡಿ ಆಕರ್ಷಕವಾದ ಮೈ ಮಾಟವನ್ನು ಪಡೆಯಬಹುದು.
ಈ ಕೆಳಗಿನ ಟಿಪ್ಸ್ ಪಾಲಿಸಿ ಸ್ತನ ಗಾತ್ರ ಕಮ್ಮಿ ಮಾಡಿಕೊಳ್ಳಬಹುದು:

cardiovascular ವ್ಯಾಯಾಮ
cardiovascular ವ್ಯಾಯಾಮ ಮಾಡಿದರೆ ನಿಮ್ಮ ದೇಹದ ತೂಕ ಕಮ್ಮಿಯಾಗಿ ಸ್ತನ ಗಾತ್ರ ಕಮ್ಮಿಯಾಗುವುದು, ಅಲ್ಲದೆ ಈ ವ್ಯಾಯಾಮ ಮಾಡುವವರಿಗೆ ಸ್ತನ ಜೋತು ಬೀಳುವುದಿಲ್ಲ.

ಏರೋಬಿಕ್
ಪ್ರತೀದಿನ ಅರ್ಧಗಂಟೆ ಏರೋಬಿಕ್ ವ್ಯಾಯಾಮ ಮಾಡುವುದರಿಂದ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು.

ಆನ್ ಏರೋಬಿಕ್ ವ್ಯಾಯಾಮ
ಸ್ತನ ಗಾತ್ರ ಕಡಿಮೆ ಮಾಡಲು ದೇಹದ ಮೇಲ್ಭಾಗ ಕರಗುವ ವ್ಯಾಯಾಮ ಮಾಡಬೇಕು. ಈ ವ್ಯಾಯಾಮ ಮಾಡಿದರೆ ಸ್ನಾಯುಗಳು ಬಲವಾಗಿ ಮಸಲ್ ಬೆಳೆಯುತ್ತದೆ. ಆದರೆ ಇದನ್ನು ಏರೋಬಿಕ್ ವ್ಯಾಯಾಮವನ್ನು ಉಳಿದ ದಿನ, ಇದನ್ನು ವಾರದಲ್ಲಿ 2 ದಿನ ಮಾಡಿ. ಇದರಿಂದ ತುಂಬಾ ಮಸಲ್ ಬೆಳೆಯುವುದಿಲ್ಲ, ಸ್ತನ ಗಾತ್ರ ಕಡಿಮೆಯಾಗಿ ದೇಹ ಆಕರ್ಷಕವಾಗಿ ಕಾಣುವುದು.

ದೇಹದ ತೂಕ ಕಮ್ಮಿ ಮಾಡುವುದು
ದೇಹದ ತೂಕ ಕಮ್ಮಿಯಾದರೆ ಸ್ತನ ಗಾತ್ರ ಕೂಡ ಕಡಿಮೆಯಾಗುವುದು. ಅಧಿಕ ತೂಕವಿರುವವರು ವ್ಯಾಯಾಮದ ಮುಖಾಂತರ ಸ್ತನ ಗಾತ್ರ ಕಮ್ಮಿ ಮಾಡಿಕೊಳ್ಳುವುದು ಒಳ್ಳೆಯದು.

ಕೊಬ್ಬಿನಂಶದ ಆಹಾರಗಳಿಂದ ದೂರವಿರಿ
ಕರಿದ ಪದಾರ್ಥಗಳು, ಕೊಬ್ಬಿನಂಶದ ಪದಾರ್ಥಗಳನ್ನು ತಿನ್ನುವುದನ್ನು ಕಮ್ಮಿ ಮಾಡಬೇಕು. ಅದರಲ್ಲೂ ಬಾಯಲರ್ ಚಿಕನ್ ತಿನ್ನುವುದನ್ನು ಬಿಡಬೇಕು.

ಪೋಷಕಾಂಶಗಳು
ಕೊಬ್ಬಿನಂಶ ಕಮ್ಮಿ ಇರುವ ಮಾಂಸಾಹಾರ, ತರಕಾರಿ, ಮೊಳಕೆ ಬರಿಸಿದ ಕಾಳುಗಳು, ದವಸ ಧಾನ್ಯಗಳನ್ನು ತಿನ್ನಿ. ತಿನ್ನುವ ಆಹಾರದಲ್ಲಿ ಕ್ಯಾಲೋರಿ ಬಗ್ಗೆ ಗಮನವಿರಲಿ.



Click it and Unblock the Notifications