Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 9 ಸೌಂದರ್ಯ ಗುಟ್ಟು ತಿಳಿಯದಿರಬೇಡಿ
ಹೆಚ್ಚಿನ ಜನರು ತಮ್ಮ ಕೇಶ ಮತ್ತು ಉಗುರಿನ ಬಗೆಗೆ ಕಾಳಜಿನ ಹೊಂದಿರುತ್ತಾರಾದರೂ ಅದು ಹೇಗಿರಬೇಕೆಂಬ ಬಗ್ಗೆ ಎಷ್ಟೋ ಜನರಿಗೆ ಸರಿಯಾಗಿ ಮಾಹಿತಿಯಿಲ್ಲ. ಈ ಮನೋಭಾವದಿಂದಾಗಿ ಸೌಂದರ್ಯ ಕುರಿತಾಗಿ ತಪ್ಪುಗ್ರಹಿಕೆಗಳಿಗೆ ಕೂಡ ಅವಕಾಶಗಳಿವೆ.
ಉಗುರು ಮತ್ತು ಕೇಶದ ಬಗ್ಗೆ ಕಾಳಜಿಯ ಹೊರತಾಗಿ ಕೂಡ ಕೆಲ ರಕ್ಷಣಾ ಕ್ರಮಗಳ ಮಾಹಿತಿ ಇರುವುದಿಲ್ಲ. ಉಗುರು ಮತ್ತು ಕೇಶಸೌಂದರ್ಯ ವೃದ್ಧಿಗಾಗಿ ಉಪಯುಕ್ತವಾದ ಕೆಲ ಮಾಹಿತಿಗಳು ಇಲ್ಲಿದೆ.

1. ಬ್ಯೂಟಿ ಪ್ರಾಡಕ್ಟ್ ನಿಮಗೆ ಕಿರಿಕಿರಿ ಉಂಟುಮಾಡಬಹುದು
ಕೆಲವೊಂದು ಬ್ಯೂಟಿ ಪ್ರಾಡಕ್ಟ್ ನಿಮ್ಮ ಆರೋಗ್ಯವಂತ ಚರ್ಮಕ್ಕೆ ತೊಂದರೆ ನೀಡಬಹುದು. ಕೆಲವೊಂದು ಕೊಳೆ ಮತ್ತು ಜಿಡ್ಡಿನ ಅಂಶವನ್ನು ಹೊರಹಾಕುವುದರ ಜತೆಗೆ ಚರ್ಮದ ಕಾಂತಿಗೆ ಬೇಕಾದ ಜೈವಿಕ ಅಂಶಗಳನ್ನೂ ತೆಗೆದು, ನಿಮ್ಮ ಚರ್ಮವನ್ನು ಒರಟಾಗಿಸಬಹುದು.

2. ಎಕ್ಸ್ ಫೋಲೆಟ್ ಬಗ್ಗೆ ಎಚ್ಚರ
ತ್ವಚೆ ರಕ್ಷಣೆಗೆ ಬಳಸುವ ಕ್ರೀಮ್ ಗಳು ಮುಖದ ಕಾಂತಿ ಹೆಚ್ಚಿಸುವುದಲ್ಲದೆ ಒಡೆದ ಚರ್ಮದ ರಕ್ಷಣೆಗೆ ನೆರವಾಗುತ್ತವೆ. ಆದರೆ ಈ ಕ್ರೀಮುಗಳಲ್ಲಿರುವ ಕೆಲವು ರಾಸಾಯನಿಕಗಳು ಮುಖದ ಡ್ರೈಯಾಗಿಸಿ ತ್ವಚೆಯ ನೈಜತೆಯನ್ನು ಹಾಳುಮಾಡುವ ಸಾಧ್ಯತೆಯೂ ಇದೆ. ಹಾಗಾಗಿ ಎಚ್ಚರಿಕೆ ವಹಿಸಬೇಕು.

3. ಚರ್ಮದ ಕಾಂತಿ ಹೆಚ್ಚಳಕ್ಕೆ ರೆಟಿನಾಯ್ಡ
ಮೊಡವೆ ನಿವಾರಣೆಗಾಗಿ ಮೊದಲು ತಯಾರಿಸಿದ ರೆಟಿನಾಯ್ದ್ ವಿಟಮಿನ್ ಹೆಚ್ಚಳಕ್ಕೆ ಕಾರಣವಾಗುತ್ತವೆ. ಅಲ್ಲದೆ ಹೊರ ಮತ್ತು ಒಳಚರ್ಮದ ಬೆಳವಣಿಗೆಗೆ ಅವಕಾಶ ಒದಗಿಸುತ್ತದೆ.ಇದು ಕೆರಾಲಿನೊಸ್ಟ್ ಅಭಿವೃದ್ದಿ ಮತ್ತು ಕೊಲಗಾನ್ ಮತ್ತು ಹ್ಯಾಲುರಾನಿಕ್ ಆ್ಯಸಿಡ್ ಚರ್ಮದ ಬೆಳವಣಿಗೆ ಮಾಡುತ್ತದೆ. ಕಾರ್ಬೋಹೈಡ್ರೇಟ್ಸ್ ನೈಸರ್ಗಿಕವಾಗಿ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಅದು ದೇಹದ ಮೂಳೆ ಮತ್ತು ವಿವಿಧ ಭಾಗಳಿಗೆ ಕೀಲೆಣ್ಣೆಯಂತೆ ಕಾರ್ಯನಿರ್ವಹಿಸುತ್ತದೆ. ಸೂರ್ಯನ ಬಿಸಿಲಿನಿಂದ ಚರ್ಮವನ್ನು ರಕ್ಷಿಸುವ ಈ ಕ್ರೀಮನ್ನು ರಾತ್ರಿಯ ವೇಳೆಯೂ ಬಳಸಿ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು.

5. ದೇಹದ ಇತರೆಡೆಯೂ ಇರಲಿ ಗಮನ
ಮುಖದ ಚರ್ಮದ ರಕ್ಷಣೆಗೆ ಕಾಳಜಿ ವಹಿಸಿದಂತೆ ದೇಹದ ಇತರ ಭಾಗಗಳು ಕಾಳಜಿಗೆ ಒಳಗಾಗುವುದಿಲ್ಲ.ತೋಳು,ಕಾಲಿನ ಭಾಗಗಳಿಗೆ ರಕ್ಷಣೆ ಒದಗಿಸುವುದು ಅಗತ್ಯ. ತೆಂಗಿನೆಣ್ಣೆ,ಉಪ್ಪು ಸಕ್ಕರೆ ತುಳಸಿ ಎಲೆಯ ಫೇಸ್ಟ್‌ನಿಂದ ಅದರ ಹಬೆಯಿಂದ ಕಾಂತಿಯ ತ್ವಚೆ ಪಡೆಯಬಹುದು.

5. ದೇಹದ ಇತರೆಡೆಯೂ ಇರಲಿ ಗಮನ
ಮುಖದ ಚರ್ಮದ ರಕ್ಷಣೆಗೆ ಕಾಳಜಿ ವಹಿಸಿದಂತೆ ದೇಹದ ಇತರ ಭಾಗಗಳು ಕಾಳಜಿಗೆ ಒಳಗಾಗುವುದಿಲ್ಲ.ತೋಳು,ಕಾಲಿನ ಭಾಗಗಳಿಗೆ ರಕ್ಷಣೆ ಒದಗಿಸುವುದು ಅಗತ್ಯ. ತೆಂಗಿನೆಣ್ಣೆ,ಉಪ್ಪು ಸಕ್ಕರೆ ತುಳಸಿ ಎಲೆಯ ಫೇಸ್ಟ್‌ನಿಂದ ಅದರ ಹಬೆಯಿಂದ ಕಾಂತಿಯ ತ್ವಚೆ ಪಡೆಯಬಹದು.

6.ಉಗುರಿನ ಸೌಂದರ್ಯಕ್ಕೆ ಹೀಗೆ ಮಾಡಿ
ಉಗುರನ್ನು ಚೆನ್ನಾಗಿ ಅಲಂಕಾರ ಮಾಡಿಕೊಳ್ಳಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಸೂಕ್ತವಾಗಿ ಕತ್ತರಿಸಿ, ಮೃದುವಾಗಿಸಿ, ಬಣ್ಣ ಬಳಿಯುವುದೆಂದರೆ ತುಂಬಾ ಕಷ್ಟವೆಂಬ ಭಾವ. ಹಾಗಾಗಿ ಉಗುರನ್ನು ಶವರ್‌ಜೆಲ್ ಮಿಶ್ರಣ ಮಾಡಿದ ಬಿಸಿನೀರಲ್ಲಿ ಕೆಲಕಾಲ ನೆನೆಸಿಡುವ ಮೂಲಕ ಈ ತಾಜಾತನವನ್ನು ಪಡೆಯಬಹುದಾಗಿದೆ. ಪಾದಗಳ ಬಿರುಕನ್ನು ನಿವಾರಿಸುವ ಸಲುವಾಗಿ ಕೂಡ ಹೀಗೆ ಮಾಡಬಹುದಾಗಿದ್ದು, ಪೆಟ್ರೋಲಿಯಂ ಜೆಲ್ಲಿ ಮಿಶ್ರಣದ ಬಿಸಿನೀರಲ್ಲಿ ಹತ್ತು ನಿಮಿಷದ ಕಾಲ ಕಾಲು ನೆನೆಸಿಡಬಹುದು. ಕಾಲಿನ ಚರ್ಮ ಇದರಿಂದ ಮೆತ್ತಗಾಗಿ ಹೊಸ ತಾಜಾತನದ ಅರಿವು ಮೂಡುತ್ತದೆ.

7. ಕಂಡೀಷನರ್ ಬಳಸಿ
ಡ್ರೈ ಕೂದಲಿನ ಸಮಸ್ಯೆಗೆ ಕಂಡೀಷನರ್ ಬಳಸುವುದು ಮುಖ್ಯ. ಅಲೀವ್ ಎಣ್ಣೆ ಅಥವ ಇನ್ನಿತರೆ ಯಾವುದೇ ಬಗೆಯ ಎಣ್ಣೆಯನ್ನ ಬಳಸಿ ಕಂಡೀಷನಿಂಗ್ ಮಾಡಬಹುದು. (ಈ ಸಮಯದಲ್ಲಿ ಅಲೀವ್ ಎಣ್ಣೆಯನ್ನು ಹಚ್ಚಿಕೊಂಡು ಕೆಲಹೊತ್ತು ಬಿಸಿಲಿಗೆ ಮೈ ಒಡ್ಡುವುದು ಅಗತ್ಯ)ಇದರಿಂದಾಗಿ ಕೂದಲಿಗೆ ತಾಜತನದ ಜತೆಗೆ ಹೊಸ ಹೊಳಪು ಬರುತ್ತದೆ.

8. ತುಂಡಾದ ಕೂದಲು ನಿಮ್ಮನ್ನು ವಯಸ್ಸಾದವರಂತೆ ಕಾಣಲು ಪ್ರೇರಿಪಿಸಬಹುದು:
ತಲೆಗೂದಲನ್ನು ಗಿಡ್ಡವಾಗಿ ಕತ್ತರಿಸುವುದರಿಂದ ನೀವು ಹೆಚ್ಚು ವಯಸ್ಸಾದವರಂತೆ ತೋರುವ ಸಂಭವವಿದೆ. ಸರಿಯಾದ ಕೇಶ ವಿನ್ಯಾಸದಿಂದ ನಿಮ್ಮ ವಯಸ್ಸಿನ ಅಂತರವನ್ನು ಕಡಿಮೆ ಮಾಡಬಹುದು.

9. ನೀವು ಉಪಚರಿಸುತ್ತಿರುವುದು ಕೂದಲಿಗಲ್ಲ
ತಲೆಹೊಟ್ಟಿಗೆ ಸಂಬಂಧಿಸಿದ ಉತ್ಪನ್ನಗಳು ಪರಿಣಾಮಕಾರಿ ಎಂದು ಕೆಲವರು ತಿಳಿದಿರುತ್ತಾರೆ ಆದರೆ ಅಂತಹ ಉತ್ಪನ್ನಗಳು ಪರಿಣಾಮಕಾರಿಯಾಗಿರುವುದಿಲ್ಲ.ಅಲ್ಲದೆ ತಲೆಹೊಟ್ಟು ಎಂಬುದು ನೆತ್ತಿಗೆ ಸಂಬಂಧಿಸಿದೆ ಎಂದೇ ಹಲವುರು ಭಾವಿಸುತ್ತಾರೆ. ಆದರೆ ಈ ಶ್ಯಾಂಪೂಗಳು ಕೂದಲನ್ನು ಡ್ರೈಯಾಗಿಸಿ, ಬೆಳೆಯದಂತೆ ತಡೆಯಬಹುದು. ತಲೆಹೊಟ್ಟನ್ನು ನೈಸರ್ಗಿಕವಾಗಿ ಹೋಗಲಾಡಿಸಲು ಪ್ರಯತ್ನಿಸಿ.



Click it and Unblock the Notifications
