Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಪುರುಷರು ಹೊಂದಿರಬೇಕಾದ 10 ಕಾಸ್ಮೆಟಿಕ್ಸ್
ಸೌಂದರ್ಯ ಎಂದರೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ.ಪುರುಷರೂ ಕೂಡ ಹ್ಯಾಂಡ್ ಸಮ್ ಆಗಿ ಕಾಣಬೇಕೆಂದು ಬಯಸುತ್ತಾರೆ. ಇತ್ತೀಚಿಗೆ ಸೌಂದರ್ಯ ಸಾಧನಗಳು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗದೆ ಮಾರುಕಟ್ಟೆಯಲ್ಲಿ ಪುರುಷರಿಗಾಗಿ ಬಿಡುಗಡೆಯಾಗುವ ಹೊಸ ಹೊಸ ಸೌಂದರ್ಯ ವರ್ಧಕಗಳನ್ನು ಕಾಣಬಹುದು. ಇನ್ನು ಬ್ಯೂಟಿಪಾರ್ಲರ್ ವಿಷಯಕ್ಕೆ ಬಂದರೆ ಪುರುಷರೂ ಕೂಡ ಮಹಿಳೆಯರನ್ನು ಹಿಂದಿಕ್ಕುವಷ್ಟು ಬ್ಯೂಟಿ ಹೆಚ್ಚಿಸಲು ಮೊರೆ ಹೋಗುವುದು ಎಲ್ಲರಿಗೂ ತಿಳಿದಿರುವ ವಿಷಯವೆ.ನಾವೇನು ಮಹಿಳೆಯರಿಗೆ ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳುತ್ತಾರೆ. ಆಧುನಿಕ ಜಗತ್ತಿನಲ್ಲಿ ಮಹಿಳೆಯರೂ ಕೂಡ ಪುರುಷರಿಂದ ಅದೇ ರೀತಿಯಲ್ಲಿ ಬಯಸುತ್ತಾರೆ.
ಹಾಗೆಯೇ ಪುರುಷರ ಬಳಿಯೂ ಕೂಡ ಹೊರಗೆ ಹೋಗುವಾಗ ಸೌಂದರ್ಯ ಸಾಧನದ ಒಂದು ಬ್ಯಾಗ್ ಕಾಣುವುದು ಹೊಸತೇನಲ್ಲ. ಆದರೆ ಅವುಗಳಲ್ಲಿ ಏನಿರಬೇಕು ಎಂಬುದರ ಬಗ್ಗೆ ಸ್ವಲ್ಪ ಕುತೂಹಲ ಮತ್ತು ಸಂಪೂರ್ಣ ಮಾಹಿತಿ ತಿಳಿಯುವ ಆಸಕ್ತಿ ಎಲ್ಲರಿಗೂ ಇದ್ದೇ ಇರುತ್ತದೆ. ಅವುಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

1.ಮಾಯಿಶ್ಚರೈಸರ್:
ಮಹಿಳೆಯರನ್ನು ಈ ಮಾಯಿಶ್ಚರೈಸರ್ ಏಕೆ ಮತ್ತು ಹೇಗೆ ಉಪಯೋಗಿಸಬೇಕು ಎಂಬುದನ್ನು ಕೇಳಿನೋಡಿ.ಅವರು ಅದರ ಬಗ್ಗೆ ಸಂಶೋಧನಾ ಬರವಣಿಗೆ ಬರೆಯಲು ಪ್ರಾರಂಭಿಸಿಬಿಡಬಹುದು.ಇದಕ್ಕೆ ಉತ್ತರ ಒಂದೇ - ಮಾಯಿಶ್ಚರೈಸರ್ ತ್ವಚೆ ಒಣಗುವುದನ್ನು ತಪ್ಪಿಸಿ ತೇವಾಂಶದಿಂದ ಕೂಡಿರುತ್ತದೆ.ಏಕೆ ಎಂದು ಕೇಳಿದರೆ ಅದಕ್ಕೆ ಉತ್ತರ ಇಲ್ಲಿದೆ - ನಿಮ್ಮ ಮುಖ ಒಂದು ಸ್ವಚ್ಚ ಕಾಗದದಂತೆ ಎಂದಿಟ್ಟುಕೊಳ್ಳಿ,ದಿನಗಳು ಕಳೆದಂತೆ ಆ ಕಾಗದ ಒಣಗಿ ಮುದುಡಿಕೊಂಡಿರುತ್ತದೆ.ತೇವಾಂಶ ಕಾಪಾಡುವುದರಿಂದ ನಿಮ್ಮ ಮುಖ ಕಳೆಗುಂದದಂತೆ,ಒಣಗದಂತೆ ಕಾಪಾಡಬಹುದು.ನಿಮ್ಮ ಮುಖಕ್ಕೆ ಸರಿಹೊಂದುವಂತೆ ನೀರು ಅಥವಾ ಎಣ್ಣೆ ಅಂಶ ಹೆಚ್ಚಿರುವ ಮಾಯಿಶ್ಚರೈಸರ್ ಅನ್ನು ಆರಿಸಿಕೊಳ್ಳಿ.ಮತ್ತು ನಿಮ್ಮ ಮುಖವನ್ನು ಮೃದುವಾಗಿ ಇಟ್ಟುಕೊಳ್ಳಿ.

2.ಸ್ಕ್ರಬ್
ತೇವಾಂಶ ಎಷ್ಟು ಮುಖ್ಯವೋ ಹಾಗೆಯೇ ಸ್ಕ್ರಬ್ ಕೂಡ ಅಷ್ಟೇ ಮುಖ್ಯವಾದುದು. ಚರ್ಮದ ರಂಧ್ರಗಳು ಟೀ ಜರಡಿ ಹಾಗೆ.ಸರಿಯಾಗಿ ಸ್ವಚ್ಚಗೊಳಿಸದಿದ್ದರೆ ರಂಧ್ರಗಳು ಕಟ್ಟಿಕೊಂಡು ಮೊಡವೆ ಮತ್ತಿತರ ಚರ್ಮದ ಸಮಸ್ಯೆ ಕಾಣಿಸಿಕೊಳ್ಳಬಹುದು.ಸ್ಕ್ರಬ್ ನಲ್ಲಿ ಬ್ಯಾಕ್ಟೀರಿಯ ನಾಶಪಡಿಸುವ ಶಕ್ತಿ ಇರುತ್ತದೆ. ಇದನ್ನು ನಿಧಾನವಾಗಿ ಮುಖಕ್ಕೆ ಹಾಕಿ ತಿಕ್ಕುವುದರಿಂದ ಕೊಳೆ,ಎಣ್ಣೆ ಇವುಗಳು ಮುಖದಲ್ಲಿ ಸೇರಿ ಸೋಂಕು ತಗಲುವುದನ್ನು ತಡೆಯುತ್ತದೆ. ನಿಮ್ಮ ಮುಖಕ್ಕೆ ಸರಿಹೊಂದುವ ಸ್ಕ್ರಬ್ ಅನ್ನು ಆಯ್ಕೆ ಮಾಡಿಕೊಂಡು ವಾರದಲ್ಲಿ ಎರಡು ಬಾರಿ ಉಪಯೋಗಿಸಿ.

3.ಆಫ್ಟರ್ ಶೇವ್
ಅನೇಕ ಪುರುಷರು ಆಫ್ಟರ್ ಶೇವ್ ಬಳಸುವುದರಿಂದ ಪುರುಷತ್ವದ ಕಳೆ ಕಡಿಮೆ ಆಗುತ್ತದೆ ಎಂದು ಭಾವಿಸುತ್ತಾರೆ.ಇದು ಖಂಡಿತ ತಪ್ಪು ಭಾವನೆ. ಆಫ್ಟರ್ ಶೇವ್ ಬಳಸುವುದರಿಂದ ರಂಧ್ರಗಳು ಮುಚ್ಚುತ್ತವೆ,ಚರ್ಮದ ಕೆರೆತ ಆಗುವುದಿಲ್ಲ ಮತ್ತು ಬ್ಯಾಕ್ಟೀರಿಯ ಸೋಂಕು ಹೋಗಲಾಡಿಸುತ್ತದೆ.ಅಲ್ಕೋಹಾಲ್ ಇರದ ಆಫ್ಟರ್ ಶೇವ್ ಅನ್ನು ಬಳಸಿ ಏಕೆಂದರೆ ಅಲ್ಕೋಹಾಲ್ ಚರ್ಮವನ್ನು ಒಣಗಿಸುತ್ತದೆ.

4.ಲಿಪ್ ಬಾಮ್
ಒಡೆದ ತುಟಿಯನ್ನು ಯಾರು ಇಷ್ಟ ಪಡುವುದಿಲ್ಲ.ಸುಂದರವಾದ ತುಟಿಯನ್ನು ಹೊಂದಿದವರು ಸದಾ ತಮ್ಮೊಂದಿಗೆ ಲಿಪ್ ಬಾಮ್ ಇಟ್ಟುಕೊಂಡಿರುತ್ತಾರೆ.ಲಿಪ್ ಬಾಮ್ ಔಷಧೀಯ ಗಿಡಮೂಲಿಕೆ ಜೊತೆಗೆ ಎಣ್ಣೆ ಗುಣವನ್ನು ಹೊಂದಿರುತ್ತದೆ ಇದರಿಂದ ತುಟಿ ಒಡೆಯದಂತೆ ಕಾಪಾಡುತ್ತದೆ.ಬಣ್ಣವಿಲ್ಲದ ಸಾದಾ ಲಿಪ್ ಬಾಮ್ ಅಥವಾ ವ್ಯಾಸಲಿನ್ ಲಿಪ್ ಬಾಮ್ ಅನ್ನು ಬಳಸಿ.

5.ಸನ್ ಸ್ಕ್ರೀನ್
ಸನ್ ಸ್ಕ್ರೀನ್ ಲೋಶನ್ ನ ಮಹತ್ವವನ್ನು ಎಷ್ಟು ಹೊಗಳಿದರು ಸಾಲದು.ಭಾರತೀಯರು ಸೂರ್ಯನ ಶಾಖಕ್ಕೆ ಅತಿ ಹೆಚ್ಚು ಪೀಡಿತರಾಗುತ್ತಾರೆ ಇದಕ್ಕೆ ಪರಿಹಾರವೆಂದರೆ ಹೆಚ್ಚು ಬಿಸಿಲಿಗೆ ಹೊರಹೋಗದಿರುವುದು.ಆದರೆ ವೃತ್ತಿಪರ ಚಟುವಟಿಕೆಗಳನ್ನು ಬಿಟ್ಟು ಶಾಶ್ವತವಾಗಿ ಬಿಸಿಲಿಗೆ ಹೋಗದಿರುವುದು ಅಸಾಧ್ಯವಾದುದರಿಂದ ಸೂರ್ಯನ ಬಿಸಿಲಿನ ಬೇಗೆಗೆ ಹೋಗುವಾಗ ಒಳ್ಳೆಯ ಸನ್ಸ್ಕ್ರೀನ್ ಲೋಶನ್ ಬಳಸುವುದು ಉತ್ತಮ.UVA ಮತ್ತು UVB ಕಿರಣಗಳಿಂದ ರಕ್ಷಿಸುವ ಸನ್ ಸ್ಕ್ರೀನ್ ಲೋಶನ್ ಬಳಸಿ ಅದರಲ್ಲಿ SPF 20 ಪ್ರಮಾಣದಲ್ಲಿರುವುದು ಸೂಕ್ತ.ಸೂರ್ಯನ ಕಿರಣ ಬೀರುವ ಭಾಗಗಳಿಗೆ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಂಡು ಸನ್ ಬರ್ನ್ ನಿಂದ ಮುಕ್ತಿ ಪಡೆಯಿರಿ.

6.ಶ್ಯಾಂಪೂ
ಶ್ಯಾಂಪೂ ಬಳಸುವುದರಿಂದ ಸ್ವಚ್ಚವಾಗಿ ಕಾಣಬಹುದು.ಹದವಾಗಿರುವ ಶ್ಯಾಂಪೂ ನೆತ್ತಿಯ ಕೊಳೆಯನ್ನು ಮತ್ತು ಎಣ್ಣೆಯನ್ನು ಸ್ವಚ್ಚಗೊಳಿಸುತ್ತದೆ.ಆದರೆ ಅಧ್ಯಯನದ ಪ್ರಕಾರ ಅತಿ ಹೆಚ್ಚು ಬಾರಿ ಶ್ಯಾಂಪೂ ಬಳಸುವುದರಿಂದ ಸಂಪೂರ್ಣ ಎಣ್ಣೆಅಂಶ ಹೋಗಿ ನೆತ್ತಿ ಒಣಗುತ್ತದೆ ಎನ್ನಲಾಗುತ್ತದೆ.ಹದವಾದ ಗಿಡಮೂಲಿಕ ಶಾಂಪೂವನ್ನು ವಾರದಲ್ಲಿ ಹೆಚ್ಚೆಂದರೆ 2 ಬಾರಿ ಬಳಸಿ ನೆತ್ತಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ.

7.ಕಂಡೀಷನರ್
ಪುರುಷರು ಕೂದಲಿಗೆ ಕಂಡೀಷನರ್ ಬಳಸುವುದರಿಂದ ಕೂದಲು ದುರ್ಬಲವಾಗುತ್ತದೆ ಎಂದು ನಂಬಿದ್ದರೂ ಕೂದಲಿಗೆ ಹೊಳಪು ತರುವುದು ಸುಲಭದ ಕೆಲಸವಲ್ಲ.ಶಾಂಪೂ ಬಳಸುವುದರಿಂದ ಅದರಲ್ಲಿದ್ದ ರಾಸಾಯನಿಕವನ್ನು ಕಂಡಿಷನರ್ ಹೋಗಲಾಡಿಸುತ್ತದೆ.ನಿಮ್ಮ ನೆತ್ತಿ ಯಾವ ರೀತಿ ಇದೆ ಎಂಬುದನ್ನು ಗಮನಿಸಿ ನೆತ್ತಿಗೆ ಸರಿ ಹೊಂದುವ ಒಳ್ಳೆಯ ಗುಣಮಟ್ಟದ ಕಂಡಿಷನರ್ ಬಳಸಿ ಮತ್ತು ಕೂದಲು ಹೊಳೆಯುವಂತೆ ಮಾಡಿ.

8.ತಲೆಗೆ ಬಳಸುವ ಎಣ್ಣೆ
ತಲೆಗೆ ಎಣ್ಣೆ ಹಾಕುವುದು ಸೂಕ್ತವಲ್ಲ ಎಂದು ತಿಳಿದರೆ ಖಂಡಿತ ತಪ್ಪು.ನೆತ್ತಿಗೆ ಎಣ್ಣೆ ಹಾಕುವುದು ಚರ್ಮಕ್ಕೆ ಮಶ್ಚರೈಸರ್ ಹಚ್ಚಿದಷ್ಟೇ ಮುಖ್ಯ.ಚರ್ಮಕ್ಕೆ ಬೇಕಾದಂತೆ ಕುದಲಿಗೂ ಕೂಡ ಪೋಷಕಾಂಶಗಳು ಬೇಕು ಇಲ್ಲದಿದ್ದರೆ ಕೂದಲು ಉದುರಲು ಪ್ರಾರಂಭವಾಗುತ್ತದೆ.ಆಗಾಗ ಆಲಿವ್ ಎಣ್ಣೆ,ಬಾದಾಮಿ ಎಣ್ಣೆ ಮತ್ತು ಕ್ಯಾಸ್ಟರ್ ಎಣ್ಣೆಗಳನ್ನು ಬಳಸಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಿ.

9.ಕನ್ಸೀಲರ್
ಹೌದು ಇದು ಕೇವಲ ಮಹಿಳೆಯರಿಗೆ ಮಾತ್ರವಲ್ಲ.ಪುರುಶರಿಗೆ ಕೂಡ ಇದರ ಅವಶ್ಯಕತೆ ಇದೆ.ಕನ್ಸೀಲರ್ಅನ್ನು ಮೊಡವೆ,ರಂಧ್ರ ಮತ್ತು ಕಪ್ಪು ವೃತ್ತಗಳನ್ನು ಮರೆಮಾಚಲು ಪುರುಷರು ಬಳಸಬಹುದು.ನಿಮ್ಮ ಮುಖದ ಚರ್ಮಕ್ಕೆ ಸರಿಹೊಂದುವ ಕನ್ಸೀಲರ್ ಆರಿಸಿಕೊಳ್ಳಿ.

10.ಹೈಲೈಟರ್
ಇದು ಲೇಖನ ಸಾಮಗ್ರಿಯಲ್ಲ.ನಾವಿಲ್ಲಿ ಹೇಳುತ್ತಿರುವುದು ಸೌಂದರ್ಯ ಸಾಧನ.ಇದನ್ನು ಮುಖದ ಮುಖ್ಯ ಭಾಗಗಳನ್ನು ಅಲಂಕರಿಸಲು ಬಳಸಲಾಗುತ್ತದೆ.ಅಂದರೆ ತುಟಿಯ ಮೇಲ್ಬಾಗ,ಮೂಗಿನ ತುದಿ,ಕೆನ್ನೆ ಬದಿ ಮತ್ತು ಹುಬ್ಬಿನ ಹತ್ತಿರ ಇವುಗಳನ್ನು ಬಳಸಿದರೆ ಆಕರ್ಷಕವಾಗಿ ಕಾಣಿಸುತ್ತೀರಿ.ಇದನ್ನು ಬಳಸಿ ಆರೋಗ್ಯಕರವಾದ ಬಾಹ್ಯರೇಖೆ ನಿಮ್ಮದಾಗಿಸಿಕೊಳ್ಳಿ.
ಇವೆಲ್ಲವುಗಳನ್ನು ಹೊರಹೋಗುವಾಗ ನಿಮ್ಮೊಂದಿಗೆ ಇಟ್ಟುಕೊಂಡಿರಿ ಮತ್ತು ಸುಂದರವಾಗಿ ಕಾಣಿಸಿಕೊಳ್ಳಿ.



Click it and Unblock the Notifications











