Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಸಾಜ್ ಮಾಡುವಾಗ ಈ ಅಂಶಗಳು ತಿಳಿಯದಿದ್ದರೆ ಜೋಕೆ!

ಈ ಹಿಂದೆ ಮಸಾಜ್ ಗೆ ಸೂಕ್ತವಾದ ಎಣ್ಣೆಯ ಬಗ್ಗೆ ಹೇಳಿದ್ದೆವು. ಎಣ್ಣೆ ಹಚ್ಚುವಾಗ ದೇಹದ ಗುಣವನ್ನು ತಿಳಿದುಕೊಂಡು ಹಚ್ಚಿದರೆ ಉತ್ತಮವಾದ ಪ್ರಯೋಜನ ಪಡೆಯಬಹುದು. ಆರ್ಯುವೇದದಲ್ಲಿ ಶರೀರರವನ್ನು ವಾತ, ಪಿತ್ತ, ಕಫ ಎಂದು 3 ವಿಧಗಳಾಗಿ ಗುರುತಿಸಲಾಗಿದೆ.
ವಾತ ಶರೀರಕ್ಕೆ ಎಳ್ಳೆಣ್ಣೆ ಮಸಾಜ್
ಪಿತ್ತ ಶರೀರಕ್ಕೆ ತೆಂಗಿನೆಣ್ಣೆ
ಕಫ ಶರೀರಕ್ಕೆ ಸಾಸಿವೆ ಎಣ್ಣೆ ಅಥವಾ ಆಲೀವ್ ಎಣ್ಣೆ ಬಳಸುವುದು ಒಳ್ಳೆಯದು.
ಮಸಾಜ್ ಮಾಡುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಬೇಕು.
1. ಮಸಾಜ್ ಮಾಡುವಾಗ ಅಥವಾ ಮಾಡಿಸಿಕೊಳ್ಳುವಾಗ ಖಾಲಿ ಹೊಟ್ಟೆಯಲ್ಲಿರಬೇಕು.
2. ಮುಂಜಾನೆ ಅಥವಾ ಸಂಜೆ ಮಸಾಜ್ ಮಾಡಬಹುದು. ಮಧ್ಯಾಹ್ನ ಹೊತ್ತು ಮಸಾಜ್ ಮಾಡಲು ಹೋಗಬಾರದು.
3. ಮಸಾಜ್ ಮಾಡಿಸುವುದಾದರೆ ಪರಿಣತರಿಂದ ಮಾಡಿಸಿಕೊಳ್ಳಿ. ನೀವೇ ಉಜ್ಜುವುದಾದರೆ ಕೂಡ ಮಸಾಜ್ ಮಾಡುವ ವಿಧಾನ ತಿಳಿದುಕೊಂಡು ಮಾಡಬೇಕು.
ಮಸಾಜ್ ಮಾಡುವವರು ಗಮನಿಸಬೇಕಾದ ಅಂಶ:
1. ಮೊದಲು ಉಗುರುಗಳನ್ನು ಚೆನ್ನಾಗಿ ಕತ್ತರಿಸಬೇಕು. ಏಕೆಂದರೆ ಮಸಾಜ್ ಮಾಡುವಾಗ ಕೈಯಲ್ಲಿ ಉಗುರುಗಳಿದ್ದರೆ ಕೈ ಬೆರಳಿನಿಂದ ಒತ್ತುವಾಗ ಚರ್ಮ ಗೀರುತ್ತದೆ. ಒಂದು ವೇಳೆ ಉಗುರು ಕತ್ತರಿಸಲು ಇಷ್ಟವಿಲ್ಲದ್ದರೆ ಮಸಾಜ್ ಮಾಡುವಾಗ ತುಂಬಾ ಜಾಗೃತಿವಹಿಸಬೇಕು.
2. ಮಸಾಜ್ ಮಾಡಿಸುವ ಮೊದಲು ಒಂದು ಮರದ ಟೇಬಲ್ ಮೇಲೆ ಅಥವಾ ನೆಲದ ಮೇಲೆ ಮಲಗಿಸಬೇಕು. ಹೀಗೆ ಮಲಗಿ 5 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಲು ಹೇಳಬೇಕು. ಮಸಾಜ್ ಗೆ ಬೇಕಾದ ಎಲ್ಲಾ ವಸ್ತುಗಳನ್ನು ಪಕ್ಕದಲ್ಲಿಟ್ಟುಕೊಳ್ಳಬೇಕು.
3. ಸುಮ್ಮನೆ ಎಣ್ಣೆ ಹಾಕಿ ಉಜ್ಜಿದರೆ ಮಸಾಜ್ ನ ಪರಿಣಾಮ ಸಿಗುವುದಿಲ್ಲ. * ಮೊದಲು ಪಾದದಿಂದ ಅಥವಾ ತಲೆಯಿಂದ ಮಸಾಜ್ ಮಾಡಬೇಕು.
* ಮೊದಲು ದೇಹದ ಎಲ್ಲಾ ಭಾಗಗಳಿಗೆ ಎಣ್ಣೆ ಹಚ್ಚಿಕೊಳ್ಳಬೇಕು.
* ನಂತರ ಹಂತಹಂತವಾಗಿ ಮಸಾಜ್ ಮಾಡಿಕೊಳ್ಳಬೇಕು.
*ಆಯುರ್ವೇದಿಕ್ ಮಸಾಜ್ ವಿಧಾನದಲ್ಲಿ ಸ್ನಾಯುಗಳಿಗೂ ತಾಗುವಂತೆ ಮೇಲ್ಮುಖವಾಗಿ ಮಸಾಜ್ ಮಾಡಲಾಗುತ್ತದೆ.
4. ಮಸಾಜ್ ಮಾಡುವಾಗ ಗಮನಿಸಬೇಕಾದ ವಿಷಯವೆಂದರೆ ಮೂಳೆಗಳಿಗೆ ಹೆಚ್ಚು ಒತ್ತಡ ಹಾಕಬಾರದು. ಮೂಳೆಗಳ ಎರಡೂ ಬದಿಗಳಿಗೆ ಒತ್ತಡ ಹಾಕಿ ಮಾಡಬೇಕು.
5. ಸೂಕ್ಷ್ಮ ಸ್ಥಳಗಳಾದ ಕಂಕುಳದ ಕೆಳಗ್ಗೆ, ತೊಡೆ, ಕುತ್ತಿಗೆ ಹತ್ತಿರ ಮತ್ತು ಹೊಟ್ಟೆಯ ಮೇಲೆ ಹೆಚ್ಚು ಒತ್ತಡ ಹಾಕಬಾರದು. ಏಕೆಂದರೆ ಈ ಭಾಗಗಲ್ಲಿ ಒತ್ತಡ ಹಾಕಿದರೆ ರಕ್ತನಾಳಗಳಿಗೆ ಆಘಾತ ಉಂಟಾಗುವುದು. ಈ ಭಾಗಗಳಿಗೆ ಗುದ್ದುವುದು, ಬಡೆಯುವುದಾಗಲಿ ಮಾಡಬಾರದು.
6. ದೇಹದ ಎಲ್ಲಾ ಭಾಗಗಳಿಗೆ ಮಸಾಜ್ ಮಾಡಬೇಕು. ಮನೆಯಲ್ಲಿ ಮಾಡುವಾಗ ಇಂತಿಷ್ಟೇ ಸಮಯ ಮಾಡಬೇಕೆಂದಿಲ್ಲ. ಆದರೆ ಮಾಡುವಾಗ ಮಾಡಿಸುವವರಿಗೆ ಆರಾಮ ಅನ್ನಿಸುವ ರೀತಿಯಲ್ಲಿ ಮಾಡಬೇಕು.
ಎಣ್ಣೆಯನ್ನು ದೇಹ ಹೀರಿಕೊಳ್ಳುವವರೆಗೆ ಮಸಾಜ್ ಮಾಡಬೇಕು. ಮಸಾಜ್ ನಂತರ 20-30 ನಿಮಿಷದವರೆಗೆ ದೇಹವನ್ನು ಹಾಗೆಯೇ ಬಿಡಬೇಕು. ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಬಹುದು. ಅನಾರೋಗ್ಯ ಸಮಸ್ಯೆ ಇದ್ದಲ್ಲಿ ಮಸಾಜ್ ಮಾಡಿಸಿಕೊಳ್ಳುವಂತಿಲ್ಲ.
ಪ್ರಯೋಜನಗಳು:
*ವಾರಕ್ಕೊಮ್ಮೆ ಮಸಾಜ್ ಮಾಡಿಸಿಕೊಂಡರೆ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ.
*ದೇಹವು ಚಟುವಟಿಕೆಯಿಂದ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
* ನಿದ್ರಾ ಹೀನತೆ, ನರದೌರ್ಬಲ್ಯ, ಅನಾರೋಗ್ಯ, ಒಣ ಚರ್ಮ, ಮುಂತಾದ ಚರ್ಮ ರೋಗಗಳನ್ನು ತಡೆಗಟ್ಟುತ್ತದೆ.
* ದೇಹದಲ್ಲಿ ರಕ್ತ ಸಂಚಾರ ಹೆಚ್ಚು ಮಾಡುವಂತೆ ಮಾಡುತ್ತದೆ.
* ಮಸಾಜ್ ಮಾಡಿದರೆ ದೇಹದಲ್ಲಿ endorphins ಎಂಬ ಹಾರ್ಮೋನ್ ಬಿಡುಗಡೆ ಬಿಡುತ್ತದೆ. ಇದು ದೇಹದಲ್ಲಿ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
* ಮಸಾಜ್ ಸ್ನಾಯುಗಳನ್ನು ಬಲಪಡಿಸುತ್ತದೆ, ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
* ಮಸಾಜ್ ಗಾಯಗಳನ್ನು ಒಣಗಿಸಲು ಮತ್ತು ಅದರ ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.
* ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಸೌಂದರ್ಯ ಮತ್ತು ಮಸಾಜ್: ವಾರಕ್ಕೊಮ್ಮೆ ಮಸಾಜ್ ಮಾಡಿಸಿದರೆ ತ್ವಚೆ ಕಾಂತಿ ಹೆಚ್ಚುವುದು. ಬೇಗನೆ ಸುಕ್ಕು ಉಂಟಾಗುವುದಿಲ್ಲ.
ಸೂಚನೆ: ಮಸಾಜ್ ಮಾಡುವಾಗ ಆಯಾ ಅಂಗದ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
* ಜ್ವರ ಹಾಗೂ ಇತರ ಅನಾರೋಗ್ಯ ಸಮಸ್ಯೆಯಿದ್ದಲ್ಲಿ ಮಸಾಜ್ ಮಾಡಿಸಿಕೊಳ್ಳಬಾರದು.
* ಸ್ನಾಯುಗಳಿಗೆ ಒತ್ತಡ ಹಾಕಿ ಮಸಾಜ್ ಮಾಡಬಹುದು. ಆದರೆ ಮೂಳೆಗಳಿಗೆ ಒತ್ತಡ ಹಾಕಬಾರದು.



Click it and Unblock the Notifications
