Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಸಾಜ್ ಗೆ ಯಾವ ಎಣ್ಣೆ ಸೂಕ್ತ ಗೊತ್ತಾ?

1. ಬಾದಾಮಿ ಎಣ್ಣೆ: ಮಸಾಜ್ ಎಣ್ಣೆಗಳಲ್ಲಿ ಬಾದಾಮಿ ಎಣ್ಣೆಗೆ ವಿಶೇಷ ಸ್ಥಾನವಿದೆ. ಈ ಎಣ್ಣೆಯನ್ನು ಚರ್ಮ ಬೇಗನೆ ಹೀರಿಕೊಳ್ಳುತ್ತದೆ. ವಿಟಮಿನ್ ಇ ಎಣ್ಣೆಯೊಂದಿಗೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿಕೊಂಡರೆ ಚರ್ಮಕ್ಕೆ ಅವಶ್ಯಕವಿರುವ ಪೋಷಕಾಂಶವನ್ನು ಒದಗಿಸಿದಂತೆ.
* ಈ ಎಣ್ಣೆಯನ್ನು ಹಚ್ಚಿ ಅರ್ಧ ಗಂಟೆ ನಂತರ ಸ್ನಾನ ಮಾಡುವುದರಿಂದ ಕೂದಲಿಗಷ್ಟೇ ಅಲ್ಲ , ಮೆದುಳಿನ ಸಾಮರ್ಥ್ಯ ಕೂಡ ಹೆಚ್ಚಿಸುತ್ತದೆ. ಬಾದಾಮಿ ತೈಲವು ಚೈತನ್ಯ ಮತ್ತು ವೀರ್ಯವೃದ್ಧಿ ಮಾಡುತ್ತದೆ.
* ಈ ಎಣ್ಣೆ ಹಚ್ಚಿದರೆ ಎಣ್ಣೆಯು ಮಾನಸಿಕ ಒತ್ತಡ ನಿವಾರಣೆ, ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ, ನರ ಸಂಬಂಧಿತ ನೋವನ್ನು ನಿವಾರಿಸುತ್ತದೆ.
* ಕೂದಲಿನ ಪೋಷಣೆಗೆ, ತಲೆಹೊಟ್ಟಿನ ನಿವಾರಣೆಗೆ ಮತ್ತು ಕೂದಲಿನ ಹೊಳಪನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
2. ಸೂರ್ಯಕಾಂತಿ ಎಣ್ಣೆ: ಇದರಲ್ಲಿನ ಲೀನೊಲೀಕ್ ಆಸಿಡ್, ಪಾಲ್ಮಿಟಿಕ್, ಸ್ಟೀರಿಯಕ್ ಆಸಿಡ್ ಅಂಶವಿರುವುದರಿಂದ ಇದರಿಂದ ಮಸಾಜ್ ಮಾಡಿದರೆ ತ್ವಚೆಯನ್ನು ತಾಜಾತನದಿಂದ ಇರಿಸುತ್ತದೆ. ಇದರ ಜೊತೆ ವಿಟಮಿನ್ ಇ ಮತ್ತು ಅರಿಶಿನ ಬೆರೆಸಿ ಮಸಾಜ್ ಮಾಡಿಕೊಂಡರೆ ಇನ್ನೂ ಉತ್ತಮ ಫಲಿತಾಂಶ ಪಡೆಯಬಹುದು.
3. ಸಾಸಿವೆ ಎಣ್ಣೆ: ಇದರಲ್ಲಿರುವ ಔಷಧೀಯ ಗುಣವಿರುವುದರಿಂದ ಮೂಳೆಗಳಿಗೆ ಒಳ್ಳೆಯದು. ಈ ಎಣ್ಣೆಯಿದ ನಿತ್ಯವೂ ಮಸಾಜ್ ಮಾಡಿಕೊಂಡರೆ ದುರ್ಬಲ ಮೂಳೆ ಸುಧಾರಿಸುತ್ತದೆ ಮತ್ತು ರಕ್ತಸಂಚಲನವೂ ಚೆನ್ನಾಗಿರುತ್ತದೆ.
4. ಕೊಬ್ಬರಿ ಎಣ್ಣೆ: ಈ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ತ್ವಚೆಯ ಹೊಳಪು ಹೆಚ್ಚಾಗುತ್ತದೆ. ಚಿಕ್ಕ ಪುಟ್ಟ ಗಾಯಗಳಿದ್ದರೆ ಬೇಗನೆ ಒಣಗುತ್ತದೆ. ಕೂದಲಿನ ಪೋಷಣೆಗೆ ತೆಂಗಿನ ಎಣ್ಣೆ ಒಳ್ಳೆಯದು.
5. ಜೋಜೋಬಾ ಎಣ್ಣೆ: ಬೆನ್ನು ನೋವಿನಿಂದ ಬಳಲುತ್ತಿದ್ದವರಿಗೆ ಜೋಜೋಬಾ ಎಣ್ಣೆಯ ಮಸಾಜ್ ಮಾಡಿದರೆ ಆರಾಮ ಅನಿಸುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶವಿರುವುದರಿಂದ ಚರ್ಮದ ಅನೇಕ ಕಾಯಿಲೆಗಳನ್ನು ದೂರವಿರಿಸುತ್ತದೆ.
6. ನೀಲಗಿರಿ ಎಣ್ಣೆ: ಚರ್ಮಕ್ಕೆ ಬೇಗ ಸೇರಿಕೊಳ್ಳುವ ವಿಶೇಷ ಗುಣ ಹೊಂದಿರುವ ಈ ತೈಲ ದೇಹಕ್ಕೆ ಉತ್ತಮ ಮಸಾಜ್ ಎಣ್ಣೆ, ಏಕೆಂದರೆ ಇದನ್ನು ಹಚ್ಚಿದರೆ ಚರ್ಮವು ಈ ಎಣ್ಣೆಯನ್ನು ಬೇಗನೆ ಹೀರಿಕೊಳ್ಳುವುದರಿಂದ ಇದನ್ನು ಮೈ ಕೈನೋವು ನಿವಾರಣೆಗೆ ಬಳಸಬಹುದು. ಅಲ್ಲದೆ ಇದನ್ನು ಮೈಗೆ ಹಚ್ಚಿದರೆ ತುರಿಕೆ, ಕಜ್ಜಿ, ಗುಳ್ಳೆ, ಕೀವು ಮುಂತಾದ ಚರ್ಮ ಮತ್ತು ದೇಹ ಸಂಬಂಧಿ ರೋಗಗಳು ಬೇಗನೆ ಗುಣಮುಖವಾಗುತ್ತದೆ. ಮುಲ್ತಾನಿ ಮಿಟ್ಟಿ ಅಥವಾ ಕಡಲೆಹಿಟ್ಟಿನೊಂದಿಗೆ ನೀಲಗಿರಿ ತೈಲ ಬೆರೆಸಿ ಸ್ಕ್ರಬ್ ನಂತೆ ತಯಾರಿಸಿ ದೇಹಕ್ಕೆ ಮಸಾಜ್ ಮಾಡಬಹುದು. ಹೆಚ್ಚು ಅಂಟಿಲ್ಲದ ಈ ಎಣ್ಣೆ ತ್ವಚೆಯ ಕಾಂತಿಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.
7. ಆಲೀವ್ ಎಣ್ಣೆ: ಆಲೀವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಕೂಡ ಉತ್ತಮ ರೀತಿಯ ಪ್ರಯೋಜನವನ್ನು ಪಡೆಯಬಹುದು. ಆಲೀವ್ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಮಿಶ್ರ ಮಾಡಿ ಮಸಾಜ್ ಗೆ ಬಳಸಬಹುದು.



Click it and Unblock the Notifications
