Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಮಳೆಗಾಲದಲ್ಲಿ ಸೌಂದರ್ಯದ ರಕ್ಷಣೆ
ಎಲ್ಲಾ ಕಾಲದಲ್ಲೂ ಒಂದಲ್ಲಾ ಒಂದು ಸೌಂದರ್ಯ ಸಮಸ್ಯೆ ಇದ್ದೇ ಇರುತ್ತದೆ. ಬಿಸಿಲಿನಲ್ಲಿ ಚರ್ಮ ಕಪ್ಪಾದರೆ, ಚಳಿಗಾಲದಲ್ಲಿ ಚರ್ಮ ಒಡೆಯುವ ಸಮಸ್ಯೆ ಕಂಡು ಬರುತ್ತದೆ. ಇನ್ನು ಮಳೆಗಾಲಕ್ಕೆ ಬಂದರೆ ಕೂದಲು ಒಣಗದಿರುವುದು, ಕೆಸರು ಕಜ್ಜಿ, ಚರ್ಮ ತನ್ನ ಕಾಂತಿಯನ್ನು ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ ಮಾತ್ರವಲ್ಲ ಸೌಂದರ್ಯದ ಕಡೆಗೂ ಗಮನವನ್ನು ನೀಡುವುದು ಒಳ್ಳೆಯದು. ಮಳೆಗಾಲದಲ್ಲಿ ಸೌಂದರ್ಯ ಕಾಪಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ಮಳೆಯಲ್ಲಿ ದಿನಾ ತಲೆ ಸ್ನಾನ ಮಾಡುವ ಅವಶ್ಯಕತೆಯಿಲ್ಲ, ವಾರದಲ್ಲಿ 3 ಬಾರಿ ಮಾಡಿದರೆ ಸಾಕು. ತಲೆ ಸ್ನಾನ ಮಾಡಿದ ನಂತರ ಕೂದಲನ್ನು ಚೆನ್ನಾಗಿ ಒಣಗಿಸಬೇಕು. ಆದರೆ ಕೂದಲು ಒಣಗಲು ಪ್ಯಾನ್ ಅಥವಾ ಹೇರ್ ಡ್ರೈಯರ್ ಬಳಸಬೇಡಿ. ಕೂದಲನ್ನು ಹಾಗೇ ಒಣಗಲು ಬಿಡಬೇಕು. ಮಳೆಯಲ್ಲಿ ತಲೆ ನೆನೆದರೆ ತಲೆಯನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು.
2. ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಬೇಕು. ಈ ರೀತಿ ಮಾಡಿದರೆ ಕೂದಲು ಕವಲೊಡೆಯುವುದಿಲ್ಲ. ಕೂದಲಿನ ಬುಡ ಕವಲೊಡೆದಿದ್ದರೆ ಕತ್ತರಿಸಬೇಕು.
3. ಹಾಲಿನ ಕೆನೆ ಚಳಿಗಾಲದಲ್ಲಿ ಮಾತ್ರವಲ್ಲ ಮಳೆಗಾಲದಲ್ಲೂ ಹಚ್ಚಿದರೆ ಕೂಡ ತ್ವಚೆಗೆ ತುಂಬಾ ಒಳ್ಳೆಯದು.
4. ಒಂದು ಚಮಚ ಕಡಲೆ ಹಿಟ್ಟು, ಒಂದು ಚಮಚ ಹೆಸರು ಹಿಟ್ಟು, ಅರ್ಧ ಚಮಚ ಬೇವಿನ ಪುಡಿ, ಕಾಲು ಚಮಚ ಅರಿಶಿಣ ಮತ್ತು ಕುಂಕುಮ ಕೇಸರಿ, ನಾಲ್ಕು ಹನಿ ನಿಂಬೆ ರಸ, ಒಂದು ಚಮಚ ಮೊಸರು ಹಾಕಿ ಮಿಶ್ರ ಮಾಡಿ ಮುಖ, ಕತ್ತು, ಕೈಗಳಿಗೆ ಹಚ್ಚಿ ಕೊಂಡು ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಲ್ಲಿ ತೊಳೆದರೆ ಚರ್ಮದ ಕಾಂತಿ ಹೆಚ್ಚುವುದು.
5. ಹಣ್ಣುಗಳಿಂದ ಕೂಡ ಫೇಶಿಯಲ್ ಮಾಡಬಹುದು, ಅದರಲ್ಲೂ ಪಪ್ಪಾಯಿ ಫೇಶಿಯಲ್ ಮಾಡಿದರೆ ಮುಖದಲ್ಲಿ ಮೊಡವೆ ಬರುವುದು ಕಡಿಮೆಯಾಗುತ್ತದೆ. ದಿನಾ ಅಥವಾ ಎರಡು ದಿನಕ್ಕೆ ಒಮ್ಮೆ ಜೇನು ಹಚ್ಚಿ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ ಮುಖ ತಾಜಾತನದಿಂದ ಹೊಳೆಯುತ್ತದೆ.
6. ಒಂದು ಚಮಚ ಆಲೀವ್ ಎಣ್ಣೆಗೆ ಸ್ವಲ್ಪ ಸಕ್ಕರೆ ಹಾಕಿ ವಾರಕ್ಕೆ ಎರಡು ಬಾರಿ ಸ್ಕ್ರಬ್ ಮಾಡುವುದು ಒಳ್ಳೆಯದು.
5. ಕೂದಲಿಗೆ ಕಂಡೀಷನರ್ ಆಗಿ ಮೆಹಂದಿ ಮತ್ತು ಮೊಸರನ್ನು ಬಳಸಿ, ಇದರಿಂದ ಕೂದಲು ಸೊಂಪಾಗಿ ಬೆಳೆಯುವುದು.
7. ಪ್ರತಿನಿತ್ಯ ಕಾಲುಗಳನ್ನು ಪ್ಯೂಮಿಕ್ ಕಲ್ಲು ಬಳಸಿ ಸ್ವಚ್ಛಗೊಳಿಸಬೇಕು.
8. ಕಾಲಿಗೆ ಎಣ್ಣೆ ಹಚ್ಚಿ ಪ್ರತಿದಿನ ಮಸಾಜ್ ಮಾಡಿದರೆ ಸುಂದರ ಪಾದಗಳನ್ನು ಪಡೆಯಬಹುದು.
9. ಮಳೆಗಾಲದಲ್ಲಿ ತುಂಬಾ ಮೇಕಪ್ ಮಾಡಬಾರದು, ಏಕೆಂದರೆ ಮಳೆ ಹನಿ ತಾಗಿದರೆ ಮೇಕಪ್ ಹರಡಿ ಅಸಹ್ಯವಾಗಿ ಕಾಣುವುದು. ಮೇಕಪ್ ಮಾಡುವುದಾದರೆ ವಾಟರ್ ಫ್ರೂಫ್ ಮೇಕಪ್ ಮಾಡುವುದು ಒಳ್ಳೆಯದು.



Click it and Unblock the Notifications
