Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಕಡಿಮೆ ಕ್ಯಾಲೋರಿಯ 15 ಭಾರತೀಯ ಆಹಾರಗಳು!
ಜಾಗತಿಕ ಮಟ್ಟದಲ್ಲಿ ಭಾರತದ ಆಹಾರ ಬಗ್ಗೆ ಬಹಳ ಕಾರ, ಹೆಚ್ಚು ಎಣ್ಣೆ ಬಳಕೆ ಹಾಗೂ ಜೀರ್ಣಿಸಿಕೊಳ್ಳು ಸ್ವಲ್ಪ ಕಷ್ಟ ಎಂಬ ಅಭಿಪ್ರಾಯವಿದೆ. ಇದು ನಿಜಕ್ಕೂ ಸತ್ಯವೇ? ಹಾಗಾದರೆ ಅತ್ಯಂತ ರುಚಿಕರ ಹಾಗೂ ಆರೋಗ್ಯಯುಕ್ತವಾದ ಕೆಲವು ಜನಪ್ರಿಯ ಭಾರತೀಯ ಆಹಾರದ ಬಗ್ಗೆ ತಿಳಿದುಕೊಳ್ಳೋಣ. ಒಂದು ವಿಷಯ ನೆನಪಿಟ್ಟುಕೊಳ್ಳಿ ನೀವು ಎಣ್ಣೆ, ಬೆಣ್ಣೆ, ಹೆಚ್ಚು ಮಸಾಲೆಯುಕ್ತ ಆಹಾರ ಹಾಗೂ ತುಪ್ಪದ ಬಳಕೆ ಕಡಿಮೆ ಮಾಡಲೇ ಬೇಕು.
ಕ್ಯಾಲೋರಿ ಕಡಿಮೆ ಇರುವಂತಹ 15 ಜನಪ್ರಿಯ ಭಾರತೀಯ ಆಹಾರ ಯಾವುದು ಗುರುತಿಸಿ.

ಮಜ್ಜಿಗೆ
ಊಟದ ಅಂತ್ಯದಲ್ಲಿ ಮಜ್ಜಿಗೆಗೆ ಸ್ವಲ್ಪ ಅನ್ನ ಹಾಕಿಕೊಂಡು ತಿಂದಾಗ ಮಾತ್ರ ಊಟ ಮುಗಿತು ಎಂಬ ಸಂಪ್ರದಾಯ ರೂಢಿಸಿಕೊಂಡಿರುವ ಭಾರತೀಯ ಕುಟುಂಬಗಳು ಇಂದಿಗೂ ಇವೆ.
ಕ್ಯಾಲೋರಿ ಅಂಶ - ಒಂದು ಲೋಟ ಮಜ್ಜಿಗೆಯಲ್ಲಿ 30

ರಾಗಿ ದೋಸೆ ಮತ್ತು ರಾಗಿ ಮುದ್ದೆ
ಇದು ದಕ್ಷಿಣ ಭಾರತದಲ್ಲಿ ಜನಪ್ರಿಯ ಡಿಶ್, ಇದನ್ನು ಅಕ್ಕಿಯಿಂದಲ್ಲ ರಾಗಿಯಿಂದ ಸಿದ್ದ ಮಾಡಲಾಗುತ್ತದೆ. ದೋಸೆ ಪ್ರೇಮಿಗಳ ಮನಗೆದ್ದ ಆಹಾರ ಇದಾಗಿದೆ.
ಕ್ಯಾಲೋರಿ ಅಂಶ - 87

ಓಟ್ಸ್ ಇಡ್ಲಿ
ಬೆಳಗಿನ ತಿಂಡಿಗೆ ಇಡ್ಲಿ ಹೇಳಿ ಮಾಡಿಸಿದ್ದು. ಇದೂ ಕೂಡ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಹಾರವಾಗಿದೆ, ಅದರಲ್ಲಿ ಇದರ ಜೊತೆಗ ಸಾಂಬಾರ್ ಇದ್ದರೆ ಅದರ ಮಜವೇ ಬೇರೆ. ಆರೋಗ್ಯದ ಕಡೆಗೆ ನಿಮಗೆ ಹೆಚ್ಚು ಆಸಕ್ತಿ ಇದ್ದರೆ ಓಟ್ಸ್ ಇಡ್ಲಿಗಳನ್ನು ಸಿದ್ದ ಮಾಡಿಕೊಳ್ಳಿ, ಇದು ಆರೋಗ್ಯಕರ ಹಾಗೂ ಬೆಳಗಿನ ಉಪಹಾರಕ್ಕೆ ರುಚಿರುಚಿಯಾಗಿರುತ್ತದೆ.
ಕ್ಯಾಲೋರಿ ಅಂಶ - ಒಂದು ಇಡ್ಲಿಯಲ್ಲಿ 26

ಚಿಕನ್ ಟಿಕ್ಕ
ವಿದೇಶಿ ಸ್ಪರ್ಶ ಹೊಂದಿರುವ ಚಿಕನ್ ಟಿಕ್ಕಗೆ ಹೆಚ್ಚಿನ ವಿವರಣೆ ಬೇಕಾಗಿಲ್ಲ ಅನ್ನಿಸುತ್ತದೆ. ಚಿಕನ್ ಟಿಕ್ಕ ಮಸಾಲಗಿಂತಲೂ ಇದು ಹೆಚ್ಚು ಆರೋಗ್ಯಕರವಾದದ್ದು.ಕ್ಯಾಲೋರಿ ಅಂಶ - ಒಂದು ಪ್ಲೇಟ್ ನಲ್ಲಿ 273

ಬೇಳೆ ಸಾರು
ಎಲ್ಲಾ ಭಾರತೀಯರು ಬೇಳೆ ಸಾರು ಹಾಗೂ ಅನ್ನ ಇಷ್ಟಪಡುತ್ತಾರೆ. ಇದು ಹೆಚ್ಚು ಆರೋಗ್ಯಕರ ಹಾಗೂ ಇದು ಬಡವರ ತಿನ್ನುವ ಆಹಾರ ಎಂಬ ಭಾವನೆ ಬೇಡ.
ಕ್ಯಾಲೋರಿ ಅಂಶ - ಒಂದು ಸಣ್ಣ ಕಪ್ ನಲ್ಲಿ 118

ಹಪ್ಪಳ
ಇದನ್ನು ಎಣ್ಣೆಯಲ್ಲಿ ಅಥವಾ ಕೆಂಡದ ಮೇಲೆ ಹಾಗೂ ಗ್ಯಾಸ್ ಸ್ಟೌವ್ ಉರಿಯಲ್ಲೂ , ಮೈಕ್ರೋ ಓವನ್ ನಲ್ಲಿ ಎಣ್ಣೆ ಇಲ್ಲದೆ ಉರಿಯಬಹುದು. ಇದು ತನ್ನಲು ತುಂಬಾ ಕ್ರಿಸ್ಪಿ ಹಾಗೂ ರುಚಿಯಾಗಿರುತ್ತದೆ.
ಕ್ಯಾಲೋರಿ ಅಂಶ - ಒಂದು ಹಪ್ಪಳದಲ್ಲಿ 52

ತಂದೂರಿ ರೋಟಿ
ಇದು ಗೋದಿಯಿಂದ ಸಿದ್ದ ಮಾಡುವಂತದ್ದು, ಮಣ್ಣಿನ ಒಲೆಯಲ್ಲಿ ಇದನ್ನು ತಯಾರು ಮಾಡಲಾಗುವುದರಿಂದ ಇದರ ರುಚಿ ಬಾಯಿ ಚಪ್ಪರಿಸುವಂತಿರುತ್ತದೆ. ಭಾರತೀಯ ಸಾಂಬಾರ್ ಹಾಗೂ ತಂದೂರಿ ಚಿಕನ್ ಜೊತೆಗೆ ಇದು ಬಹಳ ಮಜಬೂತಾದ ಆಹಾರ.
ಕ್ಯಾಲೋರಿ ಅಂಶ - ಒಂದು ತಂದೂರಿ ರೋಟಿಯಲ್ಲಿ 102

ತಂದೂರಿ ಚಿಕನ್
ಭಾರತೀಯ ಆಹಾರದಲ್ಲಿ ತಂದೂರಿ ಚಿಕನ್ ಇಲ್ಲದಿದ್ದರೆ ಅದು ಪರಿಪೂರ್ಣವಾಗುವುದಿಲ್ಲ.ಇದಕ್ಕೆ ವಿಶ್ವದಾದ್ಯಂತ ಪ್ರೇಮಿಗಳಿರುವುದರಿಂದ ಎಲ್ಲರ ಮೆಚ್ಚಿನ ಖಾದ್ಯ ಇದಾಗಿದೆ.
ಕ್ಯಾಲೋರಿ ಅಂಶ - ಒಂದು ತುಂಡಿಗೆ 273

ಮಿಶ್ರ ತರಕಾರಿ ಸಾಂಬಾರ್
ತರಕಾರಿ ಸಾರು ರುಚಿ ಇಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ.ಆದರೆ ಸಿದ್ದ ಮಾಡುವಾಗ ಒಂದು ಟೆಬಲ್ ಸ್ಫೂನ್ ಎಣ್ಣಿಯನ್ನು ಮಾತ್ರ ಬಳಸಿ.
ಕ್ಯಾಲೋರಿ ಅಂಶ - 100 ಗ್ರಾಂ.ಗೆ 95

ಮೀಮೀನು ಸಾರು
ಭಾರತ ದೇಶ ಭೌಗೋಳಿಕವಾಗಿ ಮೂರು ದಿಕ್ಕಿನಿಂದಲೂ ಸಮುದ್ರದಿಂದ ಆವರಿಸಲ್ಪಟ್ಟಿರುವ ದೇಶವಾಗಿರುವ ಫಲವೇ ವಿಧವಿಧವಾದ ಸಮುದ್ರಾಹಾರಗಳು ನಮ್ಮಲ್ಲಿ ಸಿದ್ದವಾಗುತ್ತವೆ. ಮೀನು ಸಾರನ್ನು ಕಡಿಮೆ ಎಣ್ಣೆ ಬಳಸಿ ಒಳ್ಳೇ ಮಸಾಲೆ ಹಾಕಿ ಮಾಡಿದ್ರೆ ಬಹಳ ರುಚಿಯಾಗಿರುತ್ತದೆ.
ಕ್ಯಾಲೋರಿ ಅಂಶ - ಸಣ್ಣ ಕಪ್ ಸಾರಿನಲ್ಲಿ 323

ಮೊಳಕೆ ಕಾಳಿನ ಸಲಾಡ್
ಮೊಳಕೆ ಬಂದ ಕಾಳುಗಳು ಹೆಚ್ಚು ಆರೋಗ್ಯಕರವಾದದ್ದು,ಈ ಪಲ್ಯ ಅಥವಾ ಸಲಾಡಿಗೆ ಸ್ವಲ್ಪ ನಿಂಬೆ ರಸ ಹಾಗೂ ಚಿಟಕಿ ಉಪ್ಪು ಬೆರೆಸಿದರೆ ಅದ್ಭುತವಾಗಿರುತ್ತದೆ.
ಕ್ಯಾಲೋರಿ ಅಂಶ - 100. ಗ್ರಾಂ.ಗೆ 93

ಮೊಸರು ಬಜ್ಜಿ
ಖಾರದ ಊಟ ಇದ್ದರಂತು ಜೊತೆಗೆ ಸೌತೇಕಾಯಿಯ ಮೊಸರು ಬಜ್ಜಿ ಇದ್ದರೆ ಆ ಕಾಂಬಿನೇಶನ್ ಸಕತ್ ಮಜಾ ಕೊಡುತ್ತೆ. ಖಾರದ ಜೊತೆಗೆ ಮೊಸರು ಮಿಶ್ರಿತ ಸೌತೇಕಾಯಿ ಚಟ್ನಿ ದೇಹಕ್ಕೂ ತಂಪಾಗಿರುತ್ತದೆ.
ಕ್ಯಾಲೋರಿ ಅಂಶ - ಸಣ್ಣ ಕಪ್ ನಲ್ಲಿ 38

ಪಾಲಾಕ್ ಪನ್ನೀರ್
ಪಾಲಾಕಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ ಹಾಗೂ ಪನ್ನೀರ್ ಆರೋಗ್ಯಕರ ಡೈರಿ ಪ್ರಾಡೆಕ್ಟ್ ಆಗಿದೆ. ಇದನ್ನು ಯಾವಾಗ ಬೇಕಾದರೂ ಸಸ್ಯಹಾರ ಹಾಗೂ ಮಾಂಸಹಾರದೊಂದಗೆ ಉಪಯೋಗಿಸಬಹುದು.
ಕ್ಯಾಲೋರಿ ಅಂಶ - ಒಂದು ಕಪ್ ಗೆ 189

ರಸಂ
ಇದು ದಕ್ಷಿಣ ಭಾರತೀಯರ ಮೆಚ್ಚುಗೆಯ ಡಿಶ್ ಆಗಿದೆ. ಅನೇಕ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸಿ ವಿಭಿನ್ನವಾದ ರುಚಿಕರವಾದ ರಸಂ ಮಾಡಬಹುದು.ಇದು ಪಚನ ಕ್ರಿಯೆಗೂ ಉಪಯುಕ್ತವಾದದ್ದು.
ಕ್ಯಾಲೋರಿ ಅಂಶ - ಒಂದು ಸಣ್ಣ ಕಪ್ ಗೆ 60

ದೋಕ್ಲಾ
ಇದು ಗುಜರಾತ್ ರಾಜ್ಯದವರ ಮೆಚ್ಚನ ಆಹಾರ. ಇದನ್ನು ಹುರಿದ ಕಾಳುಗಳ ಹಿಟ್ಟಿನ್ನು ಬಳಸಿ ಸಿದ್ದ ಮಾಡಲಾಗುತ್ತದೆ.
ಕ್ಯಾಲೋರಿ ಅಂಶ - 22

ಚಿತ್ರಾನ್ನ
ಇದೊಂದು ಸಾಧಾರಣವಾದ ಡಿಶ್, ಹೆಚ್ಚು ಖಾರ ಹಾಗೂ ಎಣ್ಣೆ ಬೇಕಾಗಿಲ್ಲ. ಆರೋಗ್ಯಕರವೂ ಆಗಿದೆ.
ಕ್ಯಾಲೋರಿ ಅಂಶ - 185



Click it and Unblock the Notifications
