Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಸಾಲ ಅವಾರ್ಡ್ಸ್ 2013 ರಲ್ಲಿ ಸೆಲಿಬ್ರಿಟಿಗಳು
ಮಸಾಲ ಅವಾರ್ಡ್ಸ್ 2013 ಮದಿನತ್ ಅರೆನ, ಮದಿನತ್ ಜುಮೆರಹದಲ್ಲಿ ನವೆಂಬರ್ 28ರಂದು ನಡೆಯಿತು. ಇದಕ್ಕೆ ಹಲವು ಬಾಲಿವುಡ್ ತಾರೆಗಳು ಆಗಮಿಸಿದ್ದರು. ಇದು ದುಬೈನ ಯುಎಇಯಲ್ಲಿ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷ ಕೂಡ ಹಲವು ತಾರೆಯರನ್ನು ಈ ಸಮಾರಂಭವು ಸೆಳೆದು ತಂದಿತು.
ಚಿತ್ರಾಂಗದ ಸಿಂಗಳಿಂದ ಹಿಡಿದು ಯುಎಇ ಯ ಖ್ಯಾತ ವ್ಯಕ್ತಿ ವಸು ಶರೋಫ್ ವರೆಗೆ ಹಲವರು ಇದರಲ್ಲಿ ಭಾಗವಹಿಸಿದ್ದರು.
ಮಸಾಲ ಅವಾರ್ಡ್ಸ್ 2013 ನ್ನು ಗಮನಿಸಿದಾಗ ಖ್ಯಾತ ತಾರೆಯರು ವಿವಿಧ ಲುಕ್ ಗಳಲ್ಲಿ ಮಿಂಚಿದ್ದನ್ನು ಕಾಣಬಹುದಾಗಿದೆ. ಇಲ್ಲಿ ನಾವು ಸಾಮಾನ್ಯವಾಗಿ ಗಮನಿಸಿದ ಸಂಗತಿಯೆಂದರೆ ಇಲ್ಲಿ ತೊಟ್ಟಿದ್ದ ದೇಸಿ ಶೈಲಿಯ ದಿರಿಸು. ಹಲವು ತಾರೆಯರು ದೇಸಿ ಉಡುಪಿನಲ್ಲಿ ಈ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.
ಈ ಸಮಾರಂಭದಲ್ಲಿ ದೇಸಿ ಮತ್ತು ಸಮಕಾಲೀನ ಟ್ರೆಂಡ್ ಡಿಸೈನ್ ಗಳನ್ನು ಕಾಣಬಹುದಾಗಿತ್ತು. ಉದಾಹರಣೆಗೆ ಆಸಿನ್ ಸ್ಟೈಲಿಶ್ ಆಗಿದ್ದ ಅನಾಮಿಕ ಸನ್ಹಾ ವಿನ್ಯಾಸಗೊಳಿಸಿದ ಉಡುಗೆಯನ್ನು ತೊಟ್ಟಿದ್ದಳು. ಇದು ನೋಡಲು ಸ್ಟೈಲಿಶ್ ಆಗಿದ್ದರೂ ಸಾಂಪ್ರದಾಯಿಕತೆಯ ಸ್ಪರ್ಶವನ್ನು ಹೊಂದಿತ್ತು. ಇದು ಅನಾರ್ಕಲಿ ರೀತಿಯ ಉದ್ದವಾದ ಸ್ಕರ್ಟ್ ಇದಕ್ಕೆ ನಿರಿಗೆಗಳಿದ್ದ ಶೆರಾರ ಪ್ಯಾಂಟ್ ತೊಟ್ಟಿದ್ದಳು.
ಚಿತ್ರಾಂಗದ ಸಿಂಗ್ ಕೂಡ ಮನೀಶ್ ಮಲ್ಹೋತ್ರ ವಿನ್ಯಾಸಗೊಳಿಸಿದ ಲೆಹೆಂಗಾ ದಿರಿಸನ್ನು ತೊಟ್ಟಿದ್ದಳು. ಬಹಳ ಸಮಯದ ನಂತರ ಊರ್ಮಿಳಾ ಮಾತೋಡ್ಕರ್ ಕಾಣಿಸಿಕೊಂಡಿದ್ದಳು. ಈಕೆ ಕೂಡ ಮನೀಶ್ ಮಲ್ಹೋತ್ರಾ ವಿನ್ಯಾಸ ಗೊಳಿಸಿದ ಲೆಹಂಗಾ ದಿರಿಸನ್ನು ತೊಟ್ಟಿದ್ದಳು. ಜೀನತ್ ಅಮಾನ್ ಹೂವಿನ ಚಿತ್ತಾರವಿದ್ದ ಉದ್ದ ಅನಾರ್ಕಲಿ ತೊಟ್ಟು ಬಂದ್ದಿದ್ದಳು. ಮಸಾಲ ಅವಾರ್ಡ್ಸ 2013ರ ತಾರೆಗಳ ಸ್ಟೈಲಿಶ್ ಝಲಕ್ ಇಲ್ಲಿದೆ ನೋಡಿ:
ಮಸಾಲ ಅವಾರ್ಡ್ಸ್ 2013ರಲ್ಲಿ ತಾರೆಗಳು.

ಆಸಿನ್
ಆಸಿನ್ ಮುಂಭಾಗದಲ್ಲಿ ಸ್ಲಿಟ್ ಹೊಂದಿದ್ದ ಹೂವಿನ ಚಿತ್ತಾರದ ಅನಾರ್ಕಲಿಯುಡುಗೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಳು. ಇದಕ್ಕೆ ಬಂದಗಲ ಕಸೂತಿಯಿದ್ದು ಇದಕ್ಕೆ ಹೊಂದುವ ನಿರಿಗೆಗಳಿದ್ದ ಸಹಾರ ಪ್ಯಾಂಟ್ ಧರಿಸಿದ್ದಳು.

ಚಿತ್ರಾಂಗದ ಸಿಂಗ್
ಈ ಸಮಾರಂಭದಲ್ಲಿ ಮೂಕವಿಸ್ಮತರಾಗುವಂತೆ ಕಾಣಿಸಿಕೊಂಡ ಮತ್ತೊಬ್ಬ ಸೆಲೆಬ್ರಿಟಿ ಚಿತ್ರಾಂಗದ ಸಿಂಗ್. ಈಕೆ ನಿರಿಗೆಗಳಿದ್ದ ಉದ್ದವಾದ ಅನಾರ್ಕಲಿ ತೊಟ್ಟಿದ್ದಳು. ಇದನ್ನು ವಿನ್ಯಾಸಗೊಳಿಸಿದ್ದು ಮನೀಷ್ ಮಲ್ಹೋತ್ರ.

ಇಷಾ ಗುಪ್ತ
ಈಕೆ ದೇಸಿ ಶೈಲಿಯಲ್ಲಿ ಕೋರಲ್ ಬಣ್ಣದ ಲೆಹಂಗ ಧರಿಸಿದ್ದಳು. ಇದಕ್ಕೆ ಕೆಳಗೆ ಕಪ್ಪು ಮತ್ತು ಬೆಳ್ಳಿಯ ಬಣ್ಣದಲ್ಲಿ ಕಸೂತಿ ಮಾಡಲಾಗಿತ್ತು.

ಕರಿಷ್ಮಾ ಕೊಟಕ್
ಮಾಡೆಲ್, ನಟಿ ಮತ್ತು ಟಿವಿ ನಿರೂಪಕಿ ಕರಿಷ್ಮಾ ಚಿನ್ನದ ಸೀರೆಯ ಗೌನಿನಲ್ಲಿ ಸುಂದರವಾಗಿದ್ದಳು. ಈಕೆ ಮಸಾಲ ಅವಾರ್ಡ್ಸ್ ನ ನಿರೂಪಕ ಮನೀಷ್ ಪೌಲ್ ನ ಪಕ್ಕದಲ್ಲಿ ನಿಂತಿದ್ದಳು. ಮನೀಷ್ ಕಪ್ಪು ಟ್ಯುಕ್ಸೆಡೊ ಮತ್ತು ವೇಸ್ಟ್ ಕೋಟ್ ತೊಟ್ಟಿದ್ದರು.

ಊರ್ಮಿಳಾ ಮಾತೋಡಕರ್
ಈಕೆ ತನ್ನ ಗೆಳೆಯ ಮನೀಷ್ ಮಲ್ಹೋತ್ರ ವಿನ್ಯಾಸಗೊಳಿಸಿದ ಲೆಹಂಗ ತೊಟ್ಟಿದ್ದಳು. ಲೈಮ್ ಗ್ರೀನ್ ಬಣ್ಣದ ಲೆಹಂಗಾಕ್ಕೆ ತಿಳಿ ಬಣ್ಣದ ನೆಟ್ ದುಪ್ಪಟ ತೊಟ್ಟು ಅಪ್ಸರೆಯ ಹಾಗೆ ಕಾಣುತ್ತಿದ್ದಳು.

ಜೀನತ್ ಅಮಾನ್
ಚಿರಜವ್ವನೆ ಜೀನತ್ ಅಮಾನ್ ಜೀವಮಾನ ಸಾಧನೆಗಾಗಿ (ಬಾಲಿವುಡ್) ಪ್ರಶಸ್ತಿ ಪಡೆದಳು. ಈಕೆ ಕಪ್ಪು ಬಣ್ಣದ ಹೂವಿನ ಚಿತ್ತಾರದ ಅನಾರ್ಕಲಿ ಬಟ್ಟೆ ತೊಟ್ಟಿದ್ದಳು. ಇದರ ಮೇಲೆ ದಾರದ ಕಸೂತಿಯನ್ನು ಕಾಣಬಹುದಿತ್ತು.



Click it and Unblock the Notifications
