Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡಿ. 8ಕ್ಕೆ ಉತ್ಪನ್ನ ಏಕಾದಶಿ: ಕಾರ್ತಿಕ ಏಕಾದಶಿಯಂದು ಈ ಪರಿಹಾರ ಮಾಡಿದರೆ ನಿಮ್ಮ ಜೀವನದಲ್ಲಿನ ಕಷ್ಟಗಳೆಲ್ಲಾ ದೂರಾಗುವುದು
ಏಕಾದಶಿ ಶ್ರೀವಿಷ್ಣುವನ್ನು ಪೂಜಿಸಲು ಇರುವ ಅತ್ಯಂತ ಶ್ರೇಷ್ಠ ದಿನ. ಸನಾತನ ಧರ್ಮದಲ್ಲಿ ಏಕಾದಶಿ ಉಪವಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಉಪವಾಸವಿದ್ದು ಏಕಾದಶಿ ವ್ರತ ಮಾಡುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುವುದು. ಡಿಸೆಂಬರ್ 8ಕ್ಕೆ ಉತ್ಪನ್ನ ಏಕಾದಶಿ ಆಚರಿಸಲಾಗುವುದು. ಈ ದಿನ ಕೆಲವೊಂದು ಪರಿಹಾರ ಮಾಡಿದರೆ ಜೀವನದ ಅನೇಕ ಸಮಸ್ಯೆಗಳು ತಕ್ಷಣವೇ ಕೊನೆಗೊಳ್ಳುತ್ತವೆ , ಆ ಪರಿಹಾರಗಳೇನು ಎಂದು ನೊಡೋಣ ಬನ್ನಿ:

ಏಕಾದಶಿಯಂದು ದಾನ ಮಾಡಿ
ಉತ್ಪನ್ನ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ದಿನದಂದು ದಾನ ಮಾಡಿದರೆ ಆ ಭಕ್ತರ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಈ ಮಂಗಳಕರ ದಿನದಂದು ಧಾನ್ಯಗಳನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು.
ನಿರ್ಗತಿಕರಿಗೆ ದಾನ ಮಾಡಿ
ಉತ್ಪನ್ನ ಏಕಾದಶಿಯ ದಿನದಂದು ನಿರ್ಗತಿಕರಿಗೆ ಆಹಾರವನ್ನು ನೀಡಿ, ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆಗಳು ನಿವಾರಣೆಯಾಗುವುದು. ಆದುದರಿಂದ ಈ ದಿನ ನಿಮ್ಮ ಕೈಯಲ್ಲಾದ ಸಹಾಯ ಮಾಡಿ.
ಉತ್ಪನ್ನ ಏಕಾದಶಿಯ ದಿನದಂದು ಶ್ರೀ ಹರಿವಿಷ್ಣುವಿಗೆ ದಕ್ಷಿಣಾವ್ರತಿ ಶಂಖದಿಂದ ದೇವಸ್ಥಾನದಲ್ಲಿ ಶ್ರೀವಿಷ್ಣುವಿಗೆ ಅಭಿಷೇಕ ಮಾಡಿದರೆ ಕುಟುಂಬದಲ್ಲಿ ಸದಾ ಸೌಹಾರ್ದತೆ ನೆಲೆಸಿರುತ್ತದೆ.
* ಈ ದಿನ ಕಪ್ಪು ಬಟ್ಟೆ ಧರಿಸಬೇಡಿ
ಉತ್ಪನ್ನ ಏಕಾದಶಿಯಂದು ಕಪ್ಪು ಬಟ್ಟೆಗಳನ್ನು ಧರಿಸಬೇಡಿ.
ಈ ದಿನ ಸುದರ್ಶನ ಹೋಮ ಮಾಡಿ
ಕಾರ್ತಿಕ ಮಾಸದ ಕೊನೆಯ ಏಕಾದಶಿ ಉತ್ಪನ್ನ ಏಕಾದಶಿ, ಈ ಏಕಾದಶಿಯಂದು ಸುದರ್ಶನ ಹೋಮ ಮಾಡಿದರೆ ತುಂಬಾನೇ ಶುಭ.
ಉತ್ಪನ್ನ ಏಕಾದಶಿ
* ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯಾಗಿದೆ
* ಈ ದಿನ ಶ್ರೀ ವಿಷ್ಣುವಿಗೆ ಜಲಾಭಿಷೇಕ ಮಾಡಿದರೆ ತುಂಬಾ ಒಳ್ಳೆಯದು
* ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸಂಕಲ್ಪ ತೆಗೆದುಕೊಳ್ಳಿ, ಆ ಸಂಕಲ್ಪ ನೆರವೇರುವುದು.
* ನಂತರ ಗಣೇಶನನ್ನು ಆರಾಧಿಸಿ. ಗಣೇಶನಿಗೆ ಜೋಡಿ ತೆಂಗಿನಕಾಯೊ ಒಡೆದು ಪೂಜೆ ಮಾಡಿ.
* ನಂತರ ವಿಷ್ಣುವಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ದೇವರಿಗೆ ಬಟ್ಟೆಯಿಂದ ಅಲಂಕರಿಸಿ. ನಂತರ ಆಭರಣಗಳನ್ನು ಹಾಕಿ, ಪವಿತ್ರ ದಾರವನ್ನು ಹಾಕಿ. ನಂತರ ಶ್ರೀವಿಷ್ಣುವಿಗೆ ಹೂಗಳನ್ನು ಅರ್ಪಿಸಿ, ಹಳದಿ ಬಣ್ಣದ ಹೂಗಳನ್ನು ಅರ್ಪಿಸಿ, ಹಣ್ಣುಗಳನ್ನು ಅರ್ಪಿಸಿ.
* ಧೂಪದ್ರವ್ಯ ಮತ್ತು ದೀಪಗಳನ್ನು ಬೆಳಗಿಸಿ ನೀವು ತುಳಸಿದಳವನ್ನು ಅರ್ಪಿಸಿ
* ದೇವರಿಗೆ ತುಪ್ಪದ ದೀಪವನ್ನು ಹಚ್ಚಿ.
* ಶ್ರೀ ವಿಷ್ಣುವಿಗೆ ಹಸಿ ಹಾಲಿಗೆ ಸ್ವಲ್ಪ ಕೇಸರಿ ಹಾಕಿ ಅರ್ಪಿಸಿ.
* ಉಪವಾಸವಿದ್ದು ದೇವರ ಪೂಜೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಉತ್ಪನ್ನ ಏಕಾದಶಿ: ಡಿಸೆಂಬರ್ 8
ಪಾರಣ ಸಮಯ: ಡಿಸೆಂಬರ್ 9 ಮಧ್ಯಾಹ್ನ 1:20ರಿಂದ 3:33ರವರೆಗೆ
ಏಕಾದಶಿ ತಿಥಿ ಪ್ರಾರಂಭ ಡಿಸೆಂಬರ್ 8 ಬೆಳಗ್ಗೆ 07:06ರಿಂದ ಡಿಸೆಂಬರ್ 9 ಬೆಳಗ್ಗೆ 06:31ರವರೆಗೆ ಇರಲಿದೆ.
ವೈಷ್ಣವ ಉತ್ಪನ್ನ ಏಕಾದಶಿಯನ್ನು ಡಿಸೆಂಬರ್ 9ರಂದು ಆಚರಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
